Chamarajanagar
ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹದಿಹರೆಯದ ವಯಸ್ಸಿನ ಸಮಸ್ಯೆಗಳು ಮತ್ತು ಸುಸ್ಥಿರ ಆರೋಗ್ಯ ಎಂಬ ಕಾರ್ಯಕ್ರಮ

ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಳಂದೂರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಾಮರಾಜನಗರ ಮತ್ತು ಯಳಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹದಿಹರೆಯದ ವಯಸ್ಸಿನ ಸಮಸ್ಯೆಗಳು ಮತ್ತು ಸುಸ್ಥಿರ ಆರೋಗ್ಯ ಎಂಬ ಕಾರ್ಯಕ್ರಮ ಮಾಲಿಕೆಯಲ್ಲಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಭಾಗವಹಿಸಿ ಆರೋಗ್ಯವನ್ನು ಕುರಿತ ಹಾಗೆ ವಿದ್ಯಾರ್ಥಿಗಳು ಈ ವಯೋಮಾನದಲ್ಲಿ ಎದುರಿಸುವ ಸಮಸ್ಯೆಗಳು ಯಾವುವು ಹದಿಹರೆಯ ಎಂದರೇನು ?ಈ ಅವಧಿಯಲ್ಲಿ ಭಿನ್ನ ಭಿನ್ನ ಆಕರ್ಷಣೆಗಳು ಏಕೆ ಕಾಡುತ್ತವೆ ಇದರಿಂದ ಈ ವಯೋಮಾನದಲ್ಲಿ ಕಾಣಿಸಿಕೊಳ್ಳುವ ತುಮುಲಗಳಿಗೆ ಹಾರ್ಮೋನ್ ಗಳ ಸಾದ್ಯತೆಗಳೇನು ಎಂಬ ಅನೇಕ ವಿಷಯಗಳನ್ನು ಕುರಿತು ವಿದ್ಯಾರ್ಥಿಗಳ ಸಂಶಯ ಮತ್ತು ಸಂದೇಶಗಳಿಗೆ ಸಂವಾದದ ಮೂಲಕ ವಿಷಯವನ್ನು ಯಶಸ್ವಿಯಾಗಿ ತಿಳಿಸಿ ಅಲ್ಲದೆ ಈ ವಯೋಮಾನವೇ ಹಾಗೆ ಈ ಅವಧಿಯಲ್ಲಿ ನಾವು ಎಚ್ಚರ ತಪ್ಪಬಾರದು ಲೌಕಿಕ ಆಕರ್ಷಣೆಗಳಿಗೆ ಒಳಗಾಗಬಾರದು ಮನಸ್ಸನ್ನು ಸ್ಥಿತಪ್ರಜ್ಞತೆಯಿಂದ ಕಾಯ್ದುಕೊಳ್ಳಬೇಕು ಇಲ್ಲವಾದರೆ ಸಾಕಷ್ಟು ಆರೋಗ್ಯದಲ್ಲಿ ಏರುಪೇರು ಸಂಭವಿಸಿ ಅನಾಹುತಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಮಾಹಿತಿಯನ್ನು ತಿಳಿಸಿದರು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಉಂಟಾದಾಗ ಕೂಡಲೇ ನುರಿತ ವೈದ್ಯರನ್ನು ಸಂಪರ್ಕಿಸಿ ಸೂಚನೆಗಳನ್ನು ಪಡೆದುಕೊಳ್ಳಬೇಕು ಇಲ್ಲದಿದ್ದರೆ ಮುಂದೆ ತೀವ್ರತರವಾದ ಆರೋಗ್ಯದ ಸಮಸ್ಯೆಗಳು ಮತ್ತು ಮಾನಸಿಕ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ ಎಂಬ ಅಂಶವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ವಿಜಯ ವಹಿಸಿದ್ದರು.
ದಾಕ್ಷಾಯಿಣಿ. ಕಾಲೇಜಿನ ಎಲ್ಲಾ ಅಧ್ಯಾಪಕರು ಅತಿಥಿ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
Chamarajanagar
ಯಳಂದೂರುಇಂದು ಕಾಲೇಜಿನ ಸಭಾಂಗಣದಲ್ಲಿ ಸಂತ ಕವಿಕನಕದಾಸರ ಜಯಂತಿ ಕಾರ್ಯಕ್ರಮ

ಶ್ರೀ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಳಂದೂರುಇಂದು ಕಾಲೇಜಿನ ಸಭಾಂಗಣದಲ್ಲಿ ಸಂತ ಕವಿಕನಕದಾಸರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು ಸದರಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಅವರು ಅಧ್ಯಕ್ಷತೆ ವಹಿಸಿದ್ದರು ಇಂದಿನ ಕಾರ್ಯಕ್ರಮವನ್ನು ಕುರಿತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಮಹಂತೇಶ್ ಅವರು ಕನಕದಾಸರ ಜೀವನ ಚರಿತ್ರೆ ಅವರ ಸಾಹಿತ್ಯ ಸೇವೆ ಮತ್ತು ಭಾರತೀಯ ಸಂತ ಪರಂಪರೆಯಲ್ಲಿ ಕನಕದಾಸರ ಸ್ಥಾನ ಶ್ರೇಷ್ಠವಾದದ್ದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಅಲ್ಲದೆ ತಿಮ್ಮಪ್ಪನಾಯಕನಾಗಿದ್ದ ಕನಕದಾಸರು ಕನಕ ನಾಯಕರ ಬಗ್ಗೆ ಆನಂತ್ರದ ಅವರ ಜೀವನ ಮತ್ತು ಅವರ ಸಾಧನೆಗಳನ್ನು ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದ ಅವರು
ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಪುರಂದರದಾಸರಿಗೆ ಯಾವ ಮಟ್ಟದ ಶ್ರೇಷ್ಠತೆಯು ಅಷ್ಟೇ ಶ್ರೇಷ್ಠತೆಯು ಕನಕದಾಸರಿಗೂ ಲಭ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ನುಡಿದರು ಸಾಮಾಜಿಕವಾಗಿ ತನ್ನನ್ನೇ ಸಮಾಜಕ್ಕೆ ಒಟ್ಟಿಕೊಂಡ ಕನಕದಾಸರು ಸಾಕಷ್ಟು ತರತಮಗಳಿಗೆ ಒಳಗಾದರೂ ಎದೆಗೊಂದದೆ ವ್ಯಾಸರಾಯರ ಶ್ರೇಷ್ಠ ಶಿಷ್ಯ ಪರಂಪರೆಯಲ್ಲಿ ಅಗ್ರಗಣ್ಯರಾಗಿ ರೂಪಗೊಂಡದ್ದು ನಿಜಕ್ಕೂ ಪ್ರಾಚಸ್ಮರಣೀಯ ಎಂದು ತಿಳಿಸಿದರು
ನಳಚರಿತ್ರೆ ಮೋಹನತರಂಗಿಣಿ ರಾಮಧಾನ್ಯ ಚರಿತೆಕೀರ್ತನೆಗಳು ಊಹಾಭೋಗಗಳು ಮುಂಡಿಗೆಗಳು ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಮಾತ್ರವಲ್ಲ ಇಡೀ ದಾಸ ಸಂತತಿಯಲ್ಲಿ ಅಗ್ರಗಣ್ಯ ದಾಸವರೇಣ್ಯರೆನಿಸಿ ಕೀರ್ತಿಗೆ ಭಾಜನರಾದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಕನಕದಾಸರು ಭಾರತೀಯ ಸಂತ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟವಾದ ದಾಸರಾಗಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಆತ್ಮ ಯಾವ ಕುಲ ಜೀವ ಯಾವ ಕುಲ’ ಜಲವೇ ಸಕಲ ಕುಲಕ್ಕೆ ತಾಯಲ್ಲವೇ
ಜಲದ ನೆಲೆಯ ನೀನಾದರೂ ಬಲ್ಲಿರಾ ‘
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ‘
ಇತ್ಯಾದಿ ಕೀರ್ತನೆಗಳಲ್ಲದೆ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಅವರ ಸಲ್ಲಿಸಿದ ಸೇವೆ ಅನನ್ಯವಾಗುವುದು ಎಂದು ತಿಳಿಸಿದರು ಸಾಮಾನ್ಯ ಪಾಳೇಗಾರನಾಗಿದ್ದನಾಯಕನಾಗಿ ಅನಂತರ ಕನಕದಾಸರಾಗಿ ಪರಿವರ್ತನೆ ಹೊಂದಿದ್ದೆ ಒಂದು ವಿಸ್ಮಯದ ಸಂಗತಿ ಎಂಬ ಅಂಶವನ್ನು ತಿಳಿಸಿದರು.ಎಲ್ಲ ಕಾಲಕ್ಕೂ ಸಲ್ಲಬಹುದಾದ ಅವರ ರಾಮಧಾನ್ಯ ಚರಿತೆ ಅಂದಿನ ಕಾಲದ ಅದ್ಭುತ ಕಲಾಕೃತಿಗಳಲ್ಲಿ ಒಂದು ಎಂದು ತಿಳಿಸಿದರು
ರಾಗಿ ಮತ್ತು ಭತ್ತವನ್ನು ಕಾವ್ಯದ ವಸ್ತುವನ್ನಾಗಿಸಿ ಅದರ ಹಿನ್ನೆಲೆಯಲ್ಲಿ ಸಮಾಜದಲ್ಲಿದ್ದ ಮೇಲು-ಕೀಳು ತರತಮ ಭಾವಗಳಿಗೆ ಆ ಕೃತಿಯ ಮೂಲಕ ಅವರು ಕೊಟ್ಟ ಸಂದೇಶ ಅತ್ಯಂತ ವಿಶೇಷವಾದದ್ದು ಎಂಬ ಅಂಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಎಲ್ಲರೂ ಎಲ್ಲ ಕಾಲಕ್ಕೂ ಓದಲೇಬೇಕಾದ ಅವರ ಸಾಹಿತ್ಯದ ಅನನ್ಯತೆಯನ್ನು ನಾವು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳುವ ಮೂಲಕ ಕನಕ ಜಯಂತಿಯ ಶುಭಾಶಯಗಳು
ಕೋರಿದರು.ಐಕ್ಯೂ ಎಸಿ ಸಂಚಾಲಕರಾದ ವಿಕಾಸ್ ರವರು ಕಾರ್ಯಕ್ರಮವನ್ನು
ಅಚ್ಚುಕಟ್ಟಾಗಿ ನಿರೂಪಿಸಿದರು ಮತ್ತು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ
ತೆರೆ ಎಳೆಯಲಾಯಿತು
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ವೇತಾ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಾಕ್ಷಾಯಿಣಿ ಕನ್ನಡ ವಿಭಾಗದ ಮುಖ್ಯಸ್ಥರಾದ
ಶ್ರೀಮತಿ ಪದ್ಮಹಾಗೂ ಅಧ್ಯಾಪಕರಾದ ಪುಷ್ಪ ಕುಮಾರ್ ಕಚೇರಿ ಸಿಬ್ಬಂದಿಗಳು ಎಲ್ಲರೂ ಹಾಜರಿದ್ದರು
Chamarajanagar
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿಗಳನ್ನು ಸದುಪಯೋಗಪಡಿಸಿಕೊಳ್ಳಿ – ನೋಡಲ್ ಅಧಿಕಾರಿ ಮಲ್ಲಿಕಾರ್ಜುನ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ನರೇಗಾ ಕಾಮಗಾರಿಗಳ ಸದುಪಯೋಗಪಡಿಸಿಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿಯನ್ನು ನಿರ್ಮಾಣ ಮಾಡಬೇಕು ಎಂದು ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.
ಅವರು ಹೊನ್ನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು 15ನೇ ಹಣಕಾಸು ಮತ್ತು 2024- 25 ನೇ ಸಾಲಿನ ಕ್ರಿಯಾಯೋಜನೆ ತಯಾರಿಸುವ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ಮಾಹಿತಿಗಳನ್ನು ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ನರೇಗಾ ಸಂಯೋಜಕ ನಾರಾಯಣ ಮಾತನಾಡಿ ಗ್ರಾಮ ಪಂಚಾಯತಿ ವತಿಯಿಂದ ಒಟ್ಟು 233 ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 216 ತೋಟಗಾರಿಕೆ ಇಲಾಖೆ ವತಿಯಿಂದ ಆರು ರೇಷ್ಮೆ ಇಲಾಖೆ ವತಿಯಿಂದ ಒಂದು ಪಿ ಆರ್ ಐ ಡಿ ಇಲಾಖೆ ವತಿಯಿಂದ ಆರು ಕೃಷಿ ಇಲಾಖೆಯಿಂದ 2 ಅರಣ್ಯ ಇಲಾಖೆಯಿಂದ 2 ಕಾಮಗಾರಿಗಳನ್ನು ಮಾಡಲಾಗಿದೆ. ಇದಕ್ಕಾಗಿ ಒಟ್ಟು ಕೂಲಿ ಮೊತ್ತ
78,94,854 ರೂಪಾಯಿಗಳು , ಸಾಮಗ್ರಿ ಮೊತ್ತ 27, 29,412 ರೂಪಾಯಿಗಳು ಸೇರಿದಂತೆ ಒಟ್ಟು 1,06,24,266 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು. ಇದಕ್ಕಾಗಿ 25549 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.
ಕಡತ ನೀಡದೆ ಇರುವುದು, ಅಧಿಕೃತ ವೋಚರ್ಸ್ ಒದಗಿಸದೆ ಇರುವುದು ,ಮಾಸ್ಟರ್ ರೋಲ್ ಇಲ್ಲದಿರುವುದು ,ರಾಜಧನ ಜಮೆ ಮಾಡದೆ ಇರುವುದು ಮತ್ತು ನಾಮಫಲಕ ಇಲ್ಲದಿರುವುದು ಸೇರಿದಂತೆ ಒಟ್ಟು 38 ಪ್ರಕರಣಗಳಿಗೆ ವಸುಲಾತಿ ಮತ್ತು 127 ಪ್ರಕರಣಗಳಿಗೆ ಆಕ್ಷೇಪಣೆ ಸೇರಿದಂತೆ ಒಟ್ಟು 37,43,825 ರೂಪಾಯಿಗಳನ್ನು ಆಕ್ಷೇಪಣ ಮೊತ್ತದಲ್ಲಿ ಇರಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ರೂಪೇಶ್, ಉಪಾಧ್ಯಕ್ಷ ಎಚ್ ಬಿ ನಾಗರಾಜು, ಸದಸ್ಯರಾದ ರಾಧಾ, ಇಂದಿರಾ, ಆರ್ ಪುಟ್ಟ ಬಸವಯ್ಯ, ನೇತ್ರ, ಭಾಗ್ಯಮ್ಮ, ಕುಮಾರಸ್ವಾಮಿ, ಪಿಡಿಒ ನಿರಂಜನ್, ಸಾಮಾಜಿಕ ಅರಣ್ಯ ಇಲಾಖೆಯ ಸಂಪತ್, ರೇಷ್ಮೆ ಇಲಾಖೆಯ ಸತ್ಯಪಾಲ್, ತೋಟಗಾರಿಕೆ ಇಲಾಖೆಯ ಶಿವರಂಜಿನಿ, ಗ್ರಾಪಂ ಸಿಬ್ಬಂದಿ ಮಹಾದೇವಸ್ವಾಮಿ ,ಮಹದೇವಮ್ಮ ಸೇರಿದಂತೆ ಆಶಾ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು
ವರದಿ : ಸೈಯದ್ ಮುಷರಫ್
Chamarajanagar
ಯಳಂದೂರು ಎ ಆರ್ ಕೆ ಶಾಸಕರ ಆಪ್ತ ಸಹಾಯಕ ಹೂಗನೂರು ಚೇತನ್ ಆಯ್ಕೆ

ಯಳಂದೂರು ಎ ಆರ್ ಕೆ ಶಾಸಕರಾ ಆಪ್ತ ಸಹಾಯಕ ಯಾಗಿ ಹೂಗನೂರು ಚೇತನ್ ರವರು ಆಯ್ಕೆ
ಕೊಳ್ಳೇಗಾಲ ಶಾಸಕರಾದ ಎಆರ್ ಕೃಷ್ಣಮೂರ್ತಿ ಅವರು ಆಪ್ತ ಸಹಾಯಕ ಯಾಗಿ ಹೂಗನೂರು ಚೇತನ್ ರವರನ್ನು ನೇಮಕ ಮಾಡಿ . ಕರ್ನಾಟಕ ವಿಧಾನಸಭೆ ಸಚಿವಾಲಯ ಜಂಟಿ ಕಾರ್ಯದರ್ಶಿ ಎಸ್. ಸರಸ್ವತಿ ಬಾಯಿ ಆದೇಶ ಹೊರಡಿಸಿದ್ದಾರೆ.
ಹಲವು ವರ್ಷಗಳಿಂದ ಎಆರ್ ಕೃಷ್ಣಮೂರ್ತಿ ರವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದರು.
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime2 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan2 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan6 days ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Mysore1 month ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Crime1 month ago
ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ
-
State1 month ago
ರೇಷನ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಸಿದ ಸರಕಾರ