Connect with us

Hassan

ಅರಸೀಕೆರೆ ನಗರ ಸಂಪೂರ್ಣ ಬಂದ್

Published

on

ಅರಸೀಕೆರೆ : ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡರನ್ನ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರವೇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದಲಿತ ಸಂಘರ್ಷ ಸಮಿತಿ, ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು.

ವಕೀಲರ ಸಂಘ ಬೆಂಬಲ ಸೂಚಿಸಿ ಎಲ್ಲಾ ವಕೀಲರು ಕೋರ್ಟ್ ಗೆ ಗೈರು ಹಾಜರಾದರು ಕರವೇ ಹಾಗೂ ರೈತ ಸಂಘದ ನೂರಾರು ಕಾರ್ಯಕರ್ತರು ಹಾಸನ ರಸ್ತೆಯ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಮೆರವಣಿಗೆ ಮುಖಾಂತರ ಟಿ ಎ ನಾರಾಯಣಗೌಡರನ್ನು ಹಾಗೂ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಿ ಎಚ್ ರಸ್ತೆ ಪೇಟೆ ಬೀದಿ ಸಾಯಿನಾಥ ರಸ್ತೆ ರೈಲ್ವೆ ನಿಲ್ದಾಣ ರಸ್ತೆ ಹಾಸನ ರಸ್ತೆ ಸಾಯಿನಾಥ ರಸ್ತೆ ಹಲವಾರು ರಸ್ತೆಗಳಲ್ಲಿ ಘೋಷಣೆ ಕೂಗುತ್ತಾ ಬೈಕ್ ರಾಲಿ ನಡೆಸಿದರು.

ನಗರದ ಅಂಗಡಿಗಳನ್ನು ಬ್ಯಾಂಕ್ ಗಳು ಕಚೇರಿಗಳು ಹೋಟೆಲ್ ಗಳು ಮಂಡಿ ವರ್ತಕರುಗಳು ಸಣ್ಣ ಪುಟ್ಡ ವ್ಯಾಪಾರಸ್ಥರುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರು. ಶಾಲಾ ಕಾಲೇಜುಗಳು ಗಾರ್ಮೆಂಟ್ಸ್ ಗಳು ಮೊದಲೇ ರಜೆ ಘೋಷಿಸಿದರಿಂದ ಜನಸಾಮಾನ್ಯರು ಓಡಾಟ ವಿರಳವಾಗಿತ್ತು, ಪಿಪಿ ವೃತದಲ್ಲಿ ಜಮಾಯಿಸಿದ ಕರವೇಯ ನೂರಾರು ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಕರವೇ ಹಾಸನ ಜಿಲ್ಲಾಧ್ಯಕ್ಷ ಮನು ಕುಮಾರ್ ಕರ್ನಾಟಕದಲ್ಲಿ ಶೇಕಡಾ 65 ರಷ್ಟು ಕನ್ನಡ ನಾಮಪಲಕ ಅಳವಡಿಸಬೇಕೆಂದು ಕಾನೂನು ಇದ್ದರು ಇದನ್ನು ಧಿಕ್ಕರಿಸಿ ಆಂಗ್ಲ ಭಾಷೆಯಲ್ಲಿ ನಾಮಫಲಕ ಅಳವಡಿಸಿರುವುದನ್ನು ಖಂಡಿಸಿ ರಾಜ್ಯದ ಮೂಲೆ ಮೂಲೆಗಳಿಂದ ಕರವೇ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಹೋದಾಗ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡರನ್ನ ಏಕಾಏಕಿ ಬಂಧಿಸಿ ಜೈಲಿಗೆ ಕಳಿಸಿರುವುದು ಸರ್ಕಾರದ ಕನ್ನಡ ವಿರೋಧಿ ನೀತಿಯಾಗಿದೆ. ಈಗಾಗಲೇ ರಾಜ್ಯಾದ್ಯಂತ ವಿವಿಧ ಹಂತದಲ್ಲಿ ಚಳುವಳಿಗಳು ನಡೆಯುತ್ತಿದ್ದು ಅವರ ತವರೂರು ಅರಸೀಕೆರೆ ನಗರ ಬಂದ್ ಮಾಡಲಾಗಿದೆ ನಾರಾಯಣಗೌಡನ ತಕ್ಷಣ ಬಿಡುಗಡೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬಂದ್ ಮಾಡಿ ಕನ್ನಡ ವಿರೋಧಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದರು.

ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ ನಮ್ಮ ತಾಲೂಕಿನ ತಿರುಪತಿ ಗ್ರಾಮದ ಟಿಎ ನಾರಾಯಣಗೌಡರು ಕರವೇ ಸಂಘಟನೆ ಸ್ಥಾಪಿಸಿ ರಾಜ್ಯದ್ಯಂತ ಲಕ್ಷಾಂತರ ಯುವಕರಿಗೆ ಕನ್ನಡದ ದೀಕ್ಷೆಯನ್ನು ನೀಡಿ ಈ ನಾಡು ನುಡಿ ನೆಲ ಜಲಗಳಿಗೆ ಅನ್ಯಾಯವಾದಾಗ ಹೋರಾಟ ಮಾಡುವುದು ಹಾಗೂ ಈ ನೆಲದ ಸಂಸ್ಕೃತಿ ಸಾಹಿತ್ಯವನ್ನು ಬೆಳೆಸುವಂತಹ ಕೆಲಸ ಮಾಡುತ್ತಿದ್ದಾರೆ ಅಧಿಕಾರಕ್ಕೆ ಬಂದ ಸರಕಾರಗಳು ಭಾಷೆಯ ವಿಚಾರವಾಗಿ ಗಡಿಯ ಸಮಸ್ಯೆಗಳನ್ನು ನೀರಾವರಿ ಹಂಚಿಕೆ ವಿಷಯಗಳನ್ನು ಬಗೆಹರಿಸದೆ ಕನ್ನಡಿಗರಿಗೆ ದ್ರೋಹ ಮಾಡುತ್ತಿವೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಹೋರಾಟ ಮಾಡುತ್ತಾ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಅಳವಡಿಸಿ ಎಂದು ಹೋರಾಟ ಮಾಡುತ್ತಿದ್ದ ಟಿಎ ನಾರಾಯಣಗೌಡರನ್ನ ಬಂಧಿಸಿ ಜೈಲಿಗೆ ಕಳಿಸಿರುವುದು ಸರ್ಕಾರದ ಕನ್ನಡ ವಿರೋಧಿ ನಡೆಯಾಗಿದೆ.  ತಕ್ಷಣ ಬಿಡುಗಡೆ ಮಾಡಬೇಕೆಂದು ಬಂದ್ ಗೆ ಕರೆ ನೀಡಿದ್ದೇವೆ. ಬಿಡುಗಡೆ ಮಾಡದಿದ್ದಲ್ಲಿ ಪ್ರತಿದಿನವೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬೋೌರನ ಕೊಪ್ಪಲು ಶಿವಲಿಂಗಪ್ಪ ಮಾತನಾಡಿ ನಾಡಪರ ಪರ ಹೋರಾಟ ಮಾಡುವ ಹೋರಾಟಗಾರರನ್ನ ಬಂಧಿಸಿರುವುದು ಸರ್ಕಾರದ ತಪ್ಪು ನಡೆ, ಭ್ರಷ್ಟಾಚಾರ ಮಾಡಿ ಲಕ್ಷಾಂತರ ಲೂಟಿ ಮಾಡುವ ರಾಜಕಾರಣಿಗಳನ್ನು ಮೊದಲು ಜೈಲಿಗೆ ಹಾಕಿ ಹೋರಾಟಗಾರರನ್ನ ನೀವು ಎಷ್ಟು ಬಾರಿ ಜೈಲಿಗೆ ಕಳಿಸಿದರೆ ನಾವುಗಳು ಹೋರಾಟವನ್ನು ನಿಲ್ಲಿಸುವುದಿಲ್ಲ ಇನ್ನು ಹೆಚ್ಚು ಮಾಡುತ್ತೇವೆ ನಾರಾಯಣಗೌಡರನ್ನ ಬೇಸರತ್ತಾಗಿ ಬಿಡುಗಡೆ ಮಾಡಿ ಇಲ್ಲದಿದ್ದರೆ ಕರವೇ ಹೋರಾಟಕ್ಕೆ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲವಾಗಿ ನಿಂತು ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿಯ ತಾಲೂಕು ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ ಬ್ರಿಟಿಷರು ಭಾರತ ಬಿಟ್ಟು ಹೋದರು ಅವರ ಆಂಗ್ಲ ಭಾಷೆ ನಮ್ಮನ್ನು ಇನ್ನೂ ಆಳುತ್ತಿದೆ ಗುಲಾಮಗಿರಿಯ ಸಂಕೇತವನ್ನು ಆಂಗ್ಲ ಭಾಷೆಯನ್ನು ಬಿಡಬೇಕು ರಾಜ್ಯವಾರು ಹಂಜಿಕೆಯಾಗಿರುವ ಭಾಷಾ ವಿಚಾರಗಳಲ್ಲಿ ಆ ರಾಜ್ಯದ ಭಾಷೆಯನ್ನೇ ಪ್ರಾಮುಖ್ಯತೆ ಕೊಡಬೇಕು ನಾರಾಯಣಗೌಡರು ಬಂಧನ ಸರಿಯಾದ ಕ್ರಮವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ನಾರಾಯಣಗೌಡ ರನ್ನ ಬಿಡುಗಡೆ ಮಾಡಿ ಈ ನೆಲದ ಭಾಷೆಯಾದ ಕನ್ನಡವನ್ನು ಉಳಿಸುವ ಕೆಲಸ ಮಾಡಬೇಕು ದಲಿತ ಸಂಘರ್ಷ ಸಮಿತಿ ದಲಿತಪರ ಹೋರಾಟ ಸಂಘಟನೆಗಳು ಕರವೇ ಹೋರಾಟಕ್ಕೆ ಬೆಂಬಲ ಸೂಚಿಸಿದೆ ಎಂದರು ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಮಾತನಾಡಿ ನಾಡ ಪರ ಹೋರಾಟಗಾರರನ್ನು ಜೈಲಿಗೆ ಕಳಿಸಿರುವ ಸರ್ಕಾರದ ವಿರುದ್ಧ ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೋರಾಟ ಮಾಡಬೇಕಿದೆ ಹೋರಾಟಗಾರರನ್ನ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ತಿಳಿಸಿದರು.

ಕರವೇ ನಗರಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಸರ್ಕಾರದ ನೀತಿಯಂತೆ ಶೇಕಡ 65 ರಷ್ಟು ಕನ್ನಡ ನಾಮಪಲಕ ಅಳವಡಿಸಿದ್ದರೆ ನಾವೇಕೆ ಹೋರಾಟ ಮಾಡುತ್ತಿದ್ದೆವು ನಾಮಪಲಕಗಳನ್ನು ಬೇರೆ ಭಾಷೆಯಲ್ಲಿ ಅಳವಡಿಸಿದ್ದರಿಂದ ನಾರಾಯಣಗೌಡರು ಹೋರಾಟಕ್ಕೆ ಕರೆ ನೀಡಿದ್ದರು ಆದರೆ ಅವರನ್ನು ಬಂಧಿಸಿರುವುದು ತಪ್ಪು ನಿರ್ಧಾರ ತಕ್ಷಣ ಬಿಡುಗಡೆ ಮಾಡಿ ಎಂದರು ಕೇಂದ್ರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಂಜುನಾಥ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಬಾಬು ತಿರುಪತಿ ವೆಂಕಟರಮಣ ಸ್ವಾಮಿ ಕಮಿಟಿಯ ಅಧ್ಯಕ್ಷ ಅರುಣ್ ಕುಮಾರ್ ಕರವೇ ಮುಖಂಡ ಪರ್ವೀಜ್ ಗೌರವಧ್ಯಕ್ಷ ಬಾಣಾವರ ಲಕ್ಷ್ಮಿಶ್ ಮಾದಿಗ ದಂಡೋರ ಸಮಿತಿಯ ರಂಗನಾಥ್ ಎಬಿಎಸ್ ಸಂಘಟನೆಯ ಅಧ್ಯಕ್ಷ ಸುನಿಲ್ ನಾಯ್ಕ ರೈತ ಸಂಘದ ತಾಲೂಕು ಅಧ್ಯಕ್ಷ ಅಣ್ಣನಾಯಕನಹಳ್ಳಿ ಶಿವಮೂರ್ತಿ ಉಪಾಧ್ಯಕ್ಷ ಗಂಗಾಧರ್ ನಾಯಕ್ ಮುಂತಾದವರು ಮಾತನಾಡಿದರು.

ಯುವ ಘಟಕದ ಅಧ್ಯಕ್ಷ ರಕ್ಷಿತ್ ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ತುಳಸಿದಾಸ್ ಕಾರ್ಯದರ್ಶಿ ರಘು ಪಾಳ್ಯ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಮಧು ಕರಡೆವು ಗ್ರಾಮಾಂತರ ಘಟಕದ ನವೀನ್ ತುಂಬಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಶಂಕರ್ ಮಹಿಳಾ ಘಟಕದ ಅಧ್ಯಕ್ಷ ಕಮಲಮ್ಮ ನಗರಾಧ್ಯಕ್ಷೆ ರುಕ್ಮಿಣಿ ಜಯ ಕುಮಾರ್ ವಾಹನ ಮಾಲೀಕರ ಚಾಲಕರ ಸಂಘದ ಅಧ್ಯಕ್ಷ ಲೋಕೇಶ್ ಕಾರ್ಮಿಕ ಘಟಕದ ಮಂಜು ಕೆಕೆ ಗಿರೀಶ್ ಜೇಸೀಪುರ ಯತೀಶ್ ಕಲ್ಗುಂಡಿ ನವಾಜ್ ರೋಷನ್ ರಾಘು ಲೋಕೇಶ್ ಅಜ್ಜಯ್ಯ ಮುಂತಾದವರಿದ್ದರು

Continue Reading
Click to comment

Leave a Reply

Your email address will not be published. Required fields are marked *

Hassan

ಸತ್ಯಮಂಗಲದಲ್ಲಿ ನಮ್ಮ ಕ್ಲಿನಿಕ್ ಗೆ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ

Published

on

ಹಾಸನ: ಹಾಸನ ನಗರದ ಹೋರ ವಲಯದ ಸತ್ಯ ಮಂಗಲ ಬಡಾವಣೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು ನಮ್ಮ ಕ್ಲಿನಿಕ್ ಉದ್ಘಾಟಿಸಿದರು.

ಅದಕ್ಕೂ ಮುನ್ನ ಕ್ಲಿನಿಕ್ ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಆವರಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಅವರು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕ್ಲಿನಿಕ್ ಗೆ ಚಾಲನೆ ನೀಡಿದ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಗ್ರಾಮಸ್ಥರು ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಹಾಸನ ನಗರಸಭೆ ನಗರಪಾಲಿಕೆಯಾಗಿ ಬೆಳೆಯುತ್ತಿವ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳಿಗೆ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಸನಕ್ಕೆ ತರಲಾಗುತ್ತಿದೆ ಎಂದರು.

ಅದರಂತೆ ಸತ್ಯಮಂಗಲಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರು ಒದಗಿಸುವ ಬಹುಮುಖ್ಯ ಕೆಲಸಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಯು ಮುಗಿಯುವ ಹಂತದಲ್ಲಿದೆ. ಅಲ್ಲದೆ ಮನುಷ್ಯನ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಬಹಳ ಮುಖ್ಯ ಇದನ್ನು ಮನಗಂಡು ಅವರ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆಸ್ಪತ್ರೆಗೆ ಅಗತ್ಯ ಇರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತಂದು ಬಡಾವಣೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು .

ಈ ವೇಳೆ ನಗರಸಭೆ ಅಧ್ಯಕ್ಷರು ಸದಸ್ಯರುಗಳು, ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಗ್ರಾಮದ ಮುಖಂಡರು, ಕಾರ್ಯಕರ್ತರು, ಯುವಕರು,ಹಿರಿಯರು, ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು…

Continue Reading

Hassan

ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದಂದು ಮುಸ್ಲಿಂ ಕಾಜಿಯವರಿಂದ ಕುರಾನ್ ಪಟಿಸದಂತೆ ಮನವಿ

Published

on

ಬೇಲೂರು : ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಅಂಗವಾಗಿ ಯಾವುದೇ ರೀತಿಯ ಹಿಂದು ಧರ್ಮಿಯರಿಗೆ ಅವರ ಭಾವನೆಗೆ ದಕ್ಕೆ ಬಾರದಂತೆ ಮುಸ್ಲಿಂ ಕಾಜಿಯವರಿಂದ ಕುರಾನ್ ಪಟ್ಟಣವನ್ನು ನಡೆಸದಂತೆ ಹಿಂದೂ ಸಮಾಜದ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಪೊಲೀಸ್ ಇಲಾಖೆಗೆ ಮತ್ತು ದೇಗುಲದ ಕಾರ್ಯನಿರ್ವಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮುಸ್ಲಿಂ ಕಾಜಿಯವರಿಗೆ ದೇವಾಲಯದ ವತಿಯಿಂದ ಸಂಪ್ರದಾಯದಂತೆ ನೀಡುವ ಕಾಣಿಕೆಯನ್ನು ನೀಡಲಿ ಮತ್ತು ಅವರು ಹಿಂದೆ ನಡೆಯುತ್ತಿದ್ದ ಸಂಪ್ರದಾಯದಂತೆ ದೇವರಿಗೆ ಒಂದನೇ ತಿಳಿಸಿ ಹೋಗಲಿ ಅದನ್ನು ಬಿಟ್ಟು ಕುರಾನ್ ಪಟ್ಟಣವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಹಿಂದೂ ಮುಖಂಡರಾದ ರಘು ಸಕಲೇಶಪುರ ಒತ್ತಾಯಿಸಿದ್ದಾರೆ ಕುರಾನ್ ಪಟ್ಟಣಕ್ಕೆ ಅವಕಾಶ ನೀಡಿದ್ದಾರೆ ಇದಕ್ಕೆ ಸಂಪೂರ್ಣ ಹೊಣೆಯನ್ನ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

Continue Reading

Hassan

ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು 12ಜನ ನೂತನ ನಿರ್ದೇಶಕರುಗಳು ಆಯ್ಕೆಯಾದರು.

ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12ಜನ ನಿರ್ದೇಶಕ ಸದಸ್ಯ ಬಲ ಹೊಂದಿದ್ದು ನೂತನ ನಿರ್ದೇಶಕ 23 ಜನ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಚುನಾವಣೆ ಮೂಲಕ ನೂತನ ನಿರ್ದೇಶಕರನ್ನ ಆಯ್ಕೆ ಮಾಡಲಾಯಿತು.

ಸಾಮಾನ್ಯ ಕ್ಷೇತ್ರದಿಂದ ಅವಿನಾಶ್, ವಿ.ಎಸ್ ಆನಂದ್, ಚಂದ್ರು, ಕುಬೇರಪ್ಪ, ಯೋಗೇಶ್, ಮಹಿಳಾ ಕ್ಷೇತ್ರದಿಂದ ಮಂಜುಳಾ, ಗಿರಿಜಾ, ಹಿಂದುಳಿದ ವರ್ಗ ‘ಎ’ ನಿಂದ ರವಿ ಕುಮಾರ್, ಹಿಂದುಳಿದ ವರ್ಗ ‘ಬಿ‌’ ನಿಂದ ಮೋಹನ್ ಕುಮಾರ್, ಪರಿಶಿಷ್ಟ ಜಾತಿಯಿಂದ ಪುಟ್ಟಸ್ವಾಮಿ ಆಯ್ಕೆಯಾದರೆ ಪರಿಶಿಷ್ಟ ಪಂಗಡದಿಂದ ಶಾಂತಪ್ಪ ನಾಯಕ ಅವಿರೋಧವಾಗಿ ಆಯ್ಕೆಯಾದರು, ಇನ್ನೂ ಸಾಲಗಾರರಲ್ಲದ ಕ್ಷೇತ್ರದಿಂದ ಕಿಶೋರ್ ಕುಮಾರ್ ಆಯ್ಕೆಯಾದರು 2030ರವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾ‌ರ್ ತಿಳಿಸಿದರು.

ಚುನಾವಣೆ ಮೂಲಕ ನೂತನ ನಿರ್ದೇಶಕರುಗಳ ಆಯ್ಕೆ ಘೋಷಣೆ ಹೊರಬಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ಎಸ್ ನಟರಾಜ್, ಪಾಳ್ಯ ಸೊಸೈಟಿ ನಿರ್ದೇಶಕ ಕಟ್ಟೆಗದ್ದೆ ನಾಗರಾಜ್, ಬಿಜೆಪಿ ಮುಖಂಡ ಕೆ.ಕೆ ಪ್ರಸಾದ್, ರುದ್ರೇಶ್ ಕಾಡ್ಲೂರು, ನಂದನ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿವೇಕ್ ವೈದ್ಯನಾಥ್ ಸೇರಿದಂತೆ ಮುಂತಾದವರು ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪೋಟೋ ಕ್ಯಾಪ್ಶನ್: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾಯಿತನಾದ ನೂತನ ನಿರ್ದೇಶಕರನ್ನ ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್, ಆರ್.ಎಸ್ ನಟರಾಜ್ ಕೆ.ಕೆ ಪ್ರಸಾದ್ ಸೇರಿದಂತೆ ಇತರರು ಅಭಿನಂದಿಸಿದರು.

Continue Reading

Trending

error: Content is protected !!