Connect with us

Chamarajanagar

ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ

Published

on

ಯಳಂದೂರು:  ವಿದ್ಯಾರ್ಥಿಗಳು ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದಲ್ಲಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಶಿಕ್ಷಣ ಎಲ್ಲರಿಗೂ ಬಹಳ ಮುಖ್ಯ. ಹಿಂದೆ ಕೆಲವರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು. ಆದರೆ, ಸಂವಿಧಾನ ಬಂದ ಬಳಿಕ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಯಿತು. ಪ್ರಸ್ತುತ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದಿದ್ದು ಗಂಡು ಮಕ್ಕಳು ಆ ದಿಸೆಯಲ್ಲಿ ಸಾಗಬೇಕು. ದೇಶದ ಪ್ರಗತಿಯಾಗಲು ಪ್ರತಿಯೊಬ್ಬರು ಶಿಕ್ಷಿತರಾಗಬೇಕು. ಗ್ರಾಮೀಣ ಪ್ರದೇಶದ ರೈತರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಪರೀಕ್ಷೆ ವಿಚಾರದಲ್ಲಿ ಓದದೆ ಇರುವವರು ಭಯಪಡುತ್ತಾರೆ. ಇರುವ ೪೫ ದಿನಗಳಲ್ಲಿ ಉತ್ತಮವಾಗಿ ಓದಿ ಪರೀಕ್ಷೆಗೆ ಸಿದ್ಧರಾಗಬೇಕು. ಪಾಠ ಪ್ರವಚನಗಳಲ್ಲಿ ಗೊಂದಲ ಇದ್ದಲ್ಲಿ ಶಿಕ್ಷಕರಲ್ಲಿ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ೨೦೨೧-೨೨, ೨೦೨೨-೨೩ನೇ ಸಾಲಿನಲ್ಲಿ ಯಳಂದೂರು ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ಈ ಸಾಲಿನಲ್ಲಿಯೂ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶೇ.೬೦ ಕ್ಕಿಂತ ಹೆಚ್ಚು ಅಂಕ ಪಡೆದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ೭,೫೦೦ ರೂ., ಶೇ.೭೫ ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ೧೫ ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಅಲ್ಲದೇ ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿದೆ. ಜೊತೆಗೆ ಉತ್ತಮ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಡಯಟ್ ಹಿರಿಯ ಉಪನ್ಯಾಸಕ ಲಿಂಗರಾಜೇ ಅರಸ್ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಓದಿನಲ್ಲಿ ತೊಡಗಬೇಕು. ಇರುವ ೪೫ ದಿನಗಳು ನಿರ್ಣಾಯಕವಾಗಿದೆ. ಹೆಣ್ಣು ಮಕ್ಕಳು ಓದಿನಲ್ಲಿ ಮುಂದಿದ್ದು ಅವರಂತೆ ಗಂಡು ಮಕ್ಕಳು ಕೂಡ ಓದಿನಲ್ಲಿ ತೊಡಬೇಕು. ಗಂಡು ಮಕ್ಕಳು ಮೊಬೈಲ್‌ಗಳನ್ನು ಬದಿಗಿಟ್ಟು ಓದಿನ ಕಡೆ ಗಮನಹರಿಸಬೇಕು.
ಅಲ್ಲದೇ ಪರೀಕ್ಷೆ ಸಮಯದಲ್ಲಿ ವ್ಯಸನಗಳಿಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ, ಪಪಂ ಸದಸ್ಯರಾದ ಮಹೇಶ್, ರವಿ, ರಂಗನಾಥ್, ಮಂಜು, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಶಿಕ್ಷಣ ಇಲಾಖೆಯ ಶಿವಲಂಕಾರ್, ವೀರಭದ್ರಸ್ವಾಮಿ, ಮಲ್ಲಿಕಾರ್ಜುನ್, ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ, ಮುಖಂಡರಾದ ಮಲ್ಲು, ರಾಜಶೇಖರ್, ಕಂದಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಇತರರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಸಾಮಾಜಿಕ ಭದ್ರತಾ ಯೋಜನೆಗಳ ಮೆಗಾ ಲಾಗಿನ್ ಕಾರ್ಯಕ್ರಮ

Published

on

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಲೀಡ್ ಬ್ಯಾಂಕ್ ಚಾಮರಾಜನಗರ ಮತ್ತು ಧಾನ್ ಫೌಂಡೇಶನ್ ಸಂಸ್ಥೆಯು ಹಾಗೂ ಭೀಮನಬೀಡು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಭೀಮನಬೀಡು ಗ್ರಾಮದ
ವಿವಿಧ ಬ್ಯಾಂಕ್ ಖಾತೆದಾರೆರೆಲ್ಲರಿಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆ ಎಂಬ ಎರಡು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮದ ಒಟ್ಟು ಪಿ ಎಮ್ ಎಸ್ ಬಿ ವೈ ಯೋಜನೆಗೆ 271 ಖಾತೆದಾರರು ಹಾಗೂ ಪಿ ಎಂ ಜೆ ಜೆ ಬಿ ವೈ ಯೋಜನೆಗೆ 200 ಬ್ಯಾಂಕ್ ಖಾತೆದಾರರನ್ನು ಸೇರ್ಪಡೆ ಗೊಳಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಪಿಡಿಒ ಭೋಜೇಶ್ ರವರು ತಮ್ಮ ಗ್ರಾಮದ ಜನರಿಗೆ ಅರ್ಜಿಗಳನ್ನು ಬರೆವುದರ ಮೂಲಕ ನೋಂದಣಿ ಮಾಡಿಸಿದರು.
ಈ ಸಂದರ್ಭದಲ್ಲಿ
ಮಹದೇವೇಗೌಡ
ಧಾನ್ ಫೌಂಡೇಶನ್ ಸಿ ಎಫ್ ಎಲ್ ಗೋವಿಂದರಾಜು
ಆರ್ಥಿಕ ಸಹಾಯಕರು ವಸಂತ ಜ್ಯೋತಿ ಮತ್ತು ಮಮತಾ
ಪಂಚಾಯಿತಿ ಸದಸ್ಯರು ಸ್ವಾಮಿ. ಮತ್ತು ಸಿಬ್ಬಂದಿಗಳು ಗ್ರಾಮಸ್ಥರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು

Continue Reading

Chamarajanagar

ಸಾಮಾಜಿಕ ಭದ್ರತಾ ಯೋಜನೆಗಳ ಮೆಗಾ ಲಾಗಿನ್ ಕಾರ್ಯಕ್ರಮ

Published

on

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಲೀಡ್ ಬ್ಯಾಂಕ್ ಚಾಮರಾಜನಗರ ಮತ್ತು ಧಾನ್ ಫೌಂಡೇಶನ್ ಸಂಸ್ಥೆಯು ಹಾಗೂ ಭೀಮನಬೀಡು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಭೀಮನಬೀಡು ಗ್ರಾಮದ
ವಿವಿಧ ಬ್ಯಾಂಕ್ ಖಾತೆದಾರೆರೆಲ್ಲರಿಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆ ಎಂಬ ಎರಡು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮದ ಒಟ್ಟು ಪಿ ಎಮ್ ಎಸ್ ಬಿ ವೈ ಯೋಜನೆಗೆ 271 ಖಾತೆದಾರರು ಹಾಗೂ ಪಿ ಎಂ ಜೆ ಜೆ ಬಿ ವೈ ಯೋಜನೆಗೆ 200 ಬ್ಯಾಂಕ್ ಖಾತೆದಾರರನ್ನು ಸೇರ್ಪಡೆ ಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಿಡಿಒ ಭೋಜೇಶ್ ರವರು ತಮ್ಮ ಗ್ರಾಮದ ಜನರಿಗೆ ಅರ್ಜಿಗಳನ್ನು ಬರೆವುದರ ಮೂಲಕ ನೋಂದಣಿ ಮಾಡಿಸಿದರು.
ಈ ಸಂದರ್ಭದಲ್ಲಿ
ಮಹದೇವೇಗೌಡ
ಧಾನ್ ಫೌಂಡೇಶನ್ ಸಿ ಎಫ್ ಎಲ್ ಗೋವಿಂದರಾಜು
ಆರ್ಥಿಕ ಸಹಾಯಕರು ವಸಂತ ಜ್ಯೋತಿ ಮತ್ತು ಮಮತಾ
ಪಂಚಾಯಿತಿ ಸದಸ್ಯರು ಸ್ವಾಮಿ. ಮತ್ತು ಸಿಬ್ಬಂದಿಗಳು ಗ್ರಾಮಸ್ಥರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು

Continue Reading

Chamarajanagar

ಕಾಂಗ್ರೆಸ್ ಗೆ ಭರ್ಜರಿ ಗೆಲುವು

Published

on

ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ರಲ್ಲಿ ಕಾಂಗ್ರೆಸ್ 11 ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ 1 ರಲ್ಲಿ ಗೆಲುವು ಸಾಧಿಸಿದೆ
ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯೋರ್ವ ಗೆಲುವು ಸಾಧಿಸಿದ್ದಾರೆ. ಸಹಕಾರ ಸಂಘದ ಅಧಿಕಾರ ನಡೆಸಿದ್ದ ಬಿಜೆಪಿಗೆ ಅಧಿಕಾರ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
ಕೊಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾದ ಶೇಖರ ಪುಟ್ಟಸ್ವಾಮಿ ಬಸಪ್ಪ ದೇವರು ಸದಾಶಿವಪ್ಪ ಹಿಂದುಳಿದ ವರ್ಗ (ಎ) ಕ್ಷೇತ್ರದಿಂದ ರಾಮೇಗೌಡ, ಹಿಂದುಳಿದ ವರ್ಗ (ಬಿ) ಕ್ಷೇತ್ರದಿಂದ ಜಿ. ಮಹೇಶ್ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಮಕೃಷ್ಣಯ್ಯ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಹೊಣಕಾರನಾಯಕ, ಮಹಿಳಾ ಮೀಸಲು ಕ್ಷೇತ್ರದಿಂದ ಎಸ್. ರತ್ನಮ್ಮ, ಶಿವಮ್ಮ ಗೆಲುವು ಸಾಧಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎಂ. ಮಹದೇವಸ್ವಾಮಿ 90 ಮತ ಪಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಗುರುಮೂರ್ತಿಯನ್ನು 63 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಕೆಎ ಮಹಾದೇವಸ್ವಾಮಿ ಗೆಲುವು ಸಾಧಿಸಿದ್ದಾರೆ.

*ಬಿಜೆಪಿಯ ಅಭ್ಯರ್ಥಿ ಗೆಲುವು*

ಕೋಟೆಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭೋಗಯ್ಯನ ಹುಂಡಿಯ ಬಿಎನ್ ಗಣೇಶ್ ರವರು ಜಯಶೀಲರಾಗಿದ್ದಾರೆ

*.*ತಮ್ಮ ಮತ ಹಾಕದೆ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿ ***

ಚುನಾವಣೆಯಲ್ಲಿ ಒಂದು ಮತಕ್ಕೆ ಅದರದೇ ಆದ ಮಹತ್ವವಿದೆ. ವಿಧಾನಸಭೆ ಚುನಾವಣೆಯಲ್ಲಿ 1 ಮತದಿಂದ ಸೋತ ಸಾಕಷ್ಟು ಉದಾಹರಣೆಗಳಿವೆ ಆದರೆ, ಶುಕ್ರವಾರ ನಡೆದ ಕೋಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸದಾಶಿವಪ್ಪ ಶಬರಿ ಮಲೆಗೆ ಯಾತ್ರೆಗೆ ಹೋಗಿದ್ದರು. ಶುಕ್ರವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆದಿದೆ. ತನ್ನ ಮತ ಹಾಕಿಕೊಳ್ಳದ ಸದಾಶಿವಪ್ಪ 165 ಮತ ಪಡೆದು ಗೆಲುವು ಸಾಧಿಸಿದ್ದರೆ

ಈ ಸಂದರ್ಭದಲ್ಲಿ
ಬೆಟ್ಟದಮಾದಹಳ್ಳಿ ಮಹದೇವಸ್ವಾಮಿ, ಎಪಿಎಂಸಿ ಆರ್.ಎಸ್.ನಾಗರಾಜು, ಸಾಹುಕಾರ್ ಬಿ.ಪಿ. ನಂದೀಶ್, ಮಲ್ಲೇಶ್, ಗೌಡಿಕೆ ಬಸವರಾಜಪ್ಪ, ಗೌಡಿಕೆ ಕೆಪಿ ಕುಮಾರ್ ಕುರುಬರಹುಂಡಿ ಕೋಟೆ ಕೆರೆಯ ರಂಗನಾಥ, ಶಂಕರನಾಯಕ ಸಿದ್ದು ಶಿವಲಿಂಗನಾಯಕ, ಬೆಟ್ಟದಮಾದಹಳ್ಳಿ ಮಲ್ಲು ಕುರುಬರಹುಂಡಿ ಚೇರ್ಮನ್ ಮಹೇಶ್, ಶಿವಲಿಂಗಪ್ಪ ಕೆಂಚಪ್ಪ,
ಚಿಕ್ಕಮಾದಪ್ಪ ಮಾದಪ್ಪ ಬೇಗೂರು ಜಗದೀಶ್ ನೂತನ ನಿರ್ದೇಶಕರು ಹಾಗೂ ಕೋಟೆಕೆರೆ, ಭೋಗಯ್ಯನಹುಂಡಿ, ಕುರುಬರಹುಂಡಿ, ಬೆಟ್ಟದಮಾದಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು…

ಗೆದ್ದ ಅಭ್ಯರ್ಥಿಗಳಿಗೆ ಶಾಸಕರಿಂದ ಶುಭ ಹಾರೈಕೆ**

ಕೋಟೆಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಗುಂಡ್ಲುಪೇಟೆ ತಾಲೂಕಿನ ಶಾಸಕರಾದ ಎಚ್ ಎಂ ಗಣೇಶ್ ಪ್ರಸಾದ್ ಅವರು ಹಾಗೂ ಜಿಲ್ಲಾ ಸಹಕಾರ ಸಂಘದ ಒಕ್ಕೂಟದ ಅಧ್ಯಕ್ಷರಾದ ಎಚ್ ಎಸ್ ನಂಜುಂಡ ಪ್ರಸಾದ್ ರವರು ಶುಭಾಶಯ ಕೋರಿದರು..
*ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ **
ಕೋಟೆಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಹಾಗೂ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮವನ್ನು ಆಚರಣೆ ಮಾಡಿದರು…
*ಕುರುಬರಹುಂಡಿ ಬಿಜೆಪಿಗರಿಗೆ ತೀವ್ರ ಮುಖಭಂಗ ***
ಕುರಬರಹುಂಡಿ ಗ್ರಾಮದ ಕೆಪಿ ಶಿವರಾಜ್ ಹಾಗೂ ಸಂಗಡಿಗರಿಗೆ ಕೊಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಸೋಲು ತೀವ್ರ ಮುಜುಗರ ಕೀಡಾಗಿದೆಮಾಡಿದೆ

Continue Reading

Trending

error: Content is protected !!