Chamarajanagar
ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರನ್ನು ಭೇಟಿಯಾದ ಸರ್ಕಾರಿ ನೌಕರರು

ಯಳಂದೂರು: ಈ ತಿಂಗಳು 27 ನೇ ತಾರೀಖು ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾಸಮ್ಮೇಳನಕ್ಕೆ ಯಳಂದೂರು ಮತ್ತು ಕೊಳ್ಳೆಗಾಲ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಕೋಳ್ಳೆಗಾಲ ಪಟ್ಟಣದಲ್ಲಿ ಶಾಸಕರಾದ ಕೃಷ್ಣಮೂರ್ತಿ ರವರಿಗೆ ಸಮ್ಮೇಳನದ ಆಹ್ವಾನ ಪತ್ರಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
ಆಹ್ವಾನ ಪತ್ರಿಕೆ ಸ್ಪೀಕರಿಸಿ ಮಾತನಾಡಿದ ಶಾಸಕರಾದ ಕೃಷ್ಣಮೂರ್ತಿ ಅವರು ತಪ್ಪದೇ ಬೆಂಗಳೂರಿನ ಕಾರ್ಯಕ್ರಮ ಕ್ಕೆ ಆಗಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಮತ್ತು ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿ ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ, ಯಳಂದೂರು ಮತ್ತು ಕೋಳ್ಳೆಗಾಲ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಂಜುನಾಥ್ ಖಜಾಂಚಿ ರಮೇಶ ರಾಜ್ಯ ಪರಿಷತ್ ಸದಸ್ಯ ಗೋವಿಂದ
ಕಾರ್ಯದರ್ಶಿ ಚಿಕ್ಕರಾಜು ಉಮಾಶಂಕರ್ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮಣ್ಣ ಕಾರ್ಯದರ್ಶಿ ನಾಗಾರಾಜು ಮಲ್ಲಿಕ್ ಹಾಜರಿದ್ದರು.
Chamarajanagar
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಏ.19ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ:- ಚಾಮರಾಜನಗರ ವಿಭಾಗ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ವಿವಿಉಧ ಕಾಮಗಾರಿ ನಿರ್ವಹಿಸಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 19ರಂದು (ನಾಳೆ) ಚಾಮರಾಜನಗರ, ಹರದನಹಳ್ಳಿ ಮತ್ತು ಸಂತೇಮರಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ
5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕೋಡಿಮೋಳೆ, ಮಾದಾಪುರ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ಗೂಳಿಪುರ, ಬದನಗುಪ್ಪೆ, ಪಣ್ಯದಹುಂಡಿ, ಬೆಂಡರವಾಡಿ, ಕೆಲ್ಲಂಬಳ್ಳಿ ಎನ್‌ಜೆವೈ, ಇಂಡಸ್ಟಿಯಲ್ ಏರಿಯಾ, ಕೆಇಡಿಪಿ 10 ಮತ್ತು 11, ಮುತ್ತಿಗೆ, ಹೆಗ್ಗೋಠಾರ, ಉಮ್ಮತ್ತೂರು, ಬಾಗಳಿ, ಲಿಂಗಣಾಪುರ, ಜನ್ನೂರು, ಜನ್ನೂರು ಹೊಸೂರು, ಹಳ್ಳಿಕೆರೆಹುಂಡಿ, ಗಣಗನೂರು, ಗಣಗನೂರುಪುರ, ನವಿಲೂರು, ಆಲ್ದೂರು, ಬಿಎಂಕೆ ಹುಂಡಿ, ಗೊದ್ದಲಹುಂಡಿ, ಕೊತ್ತಲವಾಡಿ, ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಬಿಸಿಲವಾಡಿ, ಪುಣಜನೂರು, ಡೊಳ್ಳಿಪುರ, ಚನ್ನಪನಪುರ, ಅಮಚವಾಡಿ, ಮಾದಲವಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಕರೆ ಮಾಡುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
Chamarajanagar
ಅಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ

ಯಳಂದೂರು ತಾಲೂಕಿನ ಅಂಬ್ರೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನವೀನ್ ಅವಿರೋಧವಾಗಿ ಆಯ್ಕೆಯಾದರು,
ಮಾತನಾಡಿ ಬೆಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು,
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಆದ ಚಂದ್ರಶೇಖರ್ ಮೂರ್ತಿ, ಉಪಾಧ್ಯಕ್ಷೆ ಮಾದೇವಮ್ಮ, ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಕಾವ್ಯ ಕಾರ್ಯದರ್ಶಿ ಪುಟ್ಟರಾಜು ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು
Chamarajanagar
ಬೋನಿಗೆ ಬಿದ್ದ 3 ನೇ ಚಿರತೆ

ವರದಿ. ಮಂಜುಕುಮಾರ್ ಪಿ.
ಗುಂಡ್ಲುಪೇಟೆ: ತಾಲೂಕಿನ ಅಕ್ಕಲಪುರ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ
ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಈ ಚಿರತೆ ಅಕ್ಕಲಪುರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿತ್ತು. ಇದನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಅಕ್ಕಲಪುರ ಗ್ರಾಮದ BS ಸ್ವಾಮಿ ಎಂಬುವರ ಜಮೀನಿನಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಬಂಧಿಯಾಗಿದೆ. ಈ ಹಿಂದೆ ಎರಡೂ ಚಿರತೆಗಳು ಬೋನಿಗೆ ಬಿದ್ದಿವೆ. ಈವಾಗ ಮೂರನೇ ಚಿರತೆ ಸೇರಿಯಾಗಿದೆ
ಸುಮಾರು ದಿನಗಳಿಂದ ಅಕ್ಕಲಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಾಣಿಗಳ ಬೇಟೆಗೆ ಸಂಚಾರ ಮಾಡುತ್ತಿದ್ದ ಚಿರತೆ ಬೋನಿಗೆ ಸರೆಯಾಗಿರುವುದರಿಂದ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
-
Mandya21 hours ago
ಪತ್ನಿಯ ಶೀಲ ಶಂಕಿಸಿ ಪತಿಯಿಂದಲೇ ಬರ್ಬರ ಹತ್ಯೆ…!
-
Kodagu17 hours ago
ಹಾತೂರುವಿನಲ್ಲಿ ಮಾರುತಿ ಓಮ್ನಿ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ.
-
Chamarajanagar21 hours ago
ಅಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ
-
Chamarajanagar21 hours ago
ಬೋನಿಗೆ ಬಿದ್ದ 3 ನೇ ಚಿರತೆ
-
Kodagu14 hours ago
ನಾಪೋಕ್ಲು ಬೇತು ಗ್ರಾಮದಲ್ಲಿ ನಿವೃತ ಸೈನಿಕನ ಮನೆಗೆ ಕನ್ನ ಹಾಕಿದ ಚೋರರು -ಕೋವಿ,ಬೆಳ್ಳಿಯಪೀಚೆಕತ್ತಿ ಕದ್ದು ಪರಾರಿ
-
Chamarajanagar12 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Chikmagalur15 hours ago
ಅಕ್ರಮ ಸಂಬಂಧಕ್ಕಾಗಿ ಪತಿಯನ್ನ ಕೊಂದ ಸತಿ
-
Chikmagalur14 hours ago
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.