Connect with us

Mandya

ಜೀವರ್ಗಿ ಹೆದ್ದಾರಿಯಲ್ಲಿ ಅಪಘಾತ, ದಂಪತಿ ಸಾವು

Published

on

ನಾಗಮಂಗಲ: ಕಾರು ಮತ್ತು ಗೂಡ್ಸ್‌ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ದಂಪತಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಅಂಚೆಚಿಟ್ಟನಹಳ್ಳಿ ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಇಲ್ಲಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದ್ದು, ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಸಿದ್ದಣ್ಣ(65) ಮತ್ತು ಶೀಲ(55) ಎಂಬುವರೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದುರ್ದೈವಿ ದಂಪತಿ.

ಗುಬ್ಬಿಯಿಂದ ನಾಗಮಂಗಲ ಮಾರ್ಗವಾಗಿ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನಕ್ಕೆ ಹೋಗಿಬರುವ ಸಲುವಾಗಿ ಸಿದ್ದಣ್ಣ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮೈಸೂರಿನಿಂದ ಬೆಳ್ಳೂರು ಕಡೆಗೆ ಸರಕು ತುಂಬಿದ ಬೊಲೆರೋ ಗೂಡ್ಸ್ ವಾಹನ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಿದ್ದಣ್ಣ ದಂಪತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಪುತ್ರ ಯಶಸ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಸಿದ್ದಣ್ಣ ಮತ್ತು ಶೀಲ ಅವರ ಮೃತದೇಹನಗಳನ್ನು ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಈ ಸಂಬಂಧ ಪಟ್ಟಣದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Mandya

ಜಾತಿ ಪ್ರಮಾಣ ಪತ್ರಕ್ಕೆ ನ್ಯಾಯಾಲಯದ ಪ್ರಮಾಣ ಪತ್ರ ಲಗತ್ತಿಸಬೇಕೆಂಬ ರಾಜ್ಯ ಸರ್ಕಾರದ ಆದೇಶ ಖಂಡಿಸಿ ದಸಂಸ ಪ್ರತಿಭಟನೆ

Published

on

ಮದ್ದೂರು: ಕಂದಾಯ ಇಲಾಖೆಯಿಂದ ನೀಡುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ನ್ಯಾಯಾಲಯದ ಪ್ರಮಾಣ ಪತ್ರ ಲಗತ್ತಿಸಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮದ್ದೂರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಆಗಮಿಸಿದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸೋಮನಹಳ್ಳಿ ಅಂದಾನಿ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ಪ್ರಮಾಣ ಪತ್ರ ಪಡೆಯಲು ರಾಜ್ಯ ಸರ್ಕಾರ ನ್ಯಾಯಾಲಯದ ಪ್ರಮಾಣ ಪತ್ರ ಲಗತ್ತಿಸಬೇಕೆಂದು ಆದೇಶ ಹೊರಡಿಸಿದೆ. ಆದರೆ, ಈ ಆದೇಶದಿಂದ ಜನಸಾಮಾನ್ಯರಿಗೆ 500 ರೂಪಾಯಿಗೂ ಹೆಚ್ಚು ಖರ್ಚಾಗಲಿದೆ. ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ಆರ್ಥಿಕವಾಗಿ ಹೊರೆಯಾಗಲಿದ್ದು, ಈ ಹಿಂದೆ ಇದ್ದಂತೆ ಕೆಲವು ದಾಖಲೆಗಳನ್ನು ನೀಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದು ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಮರು ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಇನ್ನು ಸೋಮನಹಳ್ಳಿಯ ದಲಿತ ಜನಾಂಗದ ಸ್ಮಶಾನವು ಒತ್ತುವರಿಯಾಗಿದ್ದು, ಈ ಕೂಡಲೇ ತಾಲೂಕು ಆಡಳಿತ ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು. ಅಗರಲಿಂಗನದೊಡ್ಡಿಯಲ್ಲಿ ನಡೆಯುತ್ತಿರುವ 15 ನೇ ಹಣಕಾಸು ಯೋಜನೆಯಡಿ ರಸ್ತೆ ಕಾಮಗಾರಿ ಕಳಪೆ ಕಾಮಗಾರಿಯಾಗಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ನಗರಸಭೆ ಮುಂಭಾಗದ ಡಾ. ಅಂಬೇಡ್ಕರ್ ಪುತ್ತಳಿಗೆ ಭಧ್ರತೆ ಒದಗಿಸಬೇಕು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ನಿಗದಿ ಮಾಡಬೇಕು. ಹಾಗೂ ಸಾರ್ವಜನಿಕ ಸ್ಮಶಾನ ಎಂದು ನಾಮಫಲಕ ಹಾಕಬೇಕು. ಇನ್ನು ಮದ್ದೂರು ತಾಲೂಕಿನಲ್ಲಿ ವಿವಿಧ ಸಮಸ್ಯೆಗಳಿದ್ದು ಅವುಗಳನ್ನು ಬಗೆಹರಿಸುವಂತೆ ಶಿರಸ್ತೆದಾರ್ ಚಲುವರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಬಿ.ಎಂ.ಸತ್ಯ, ಜಿಲ್ಲಾ ಸಂಚಾಲಕ ಶಿವು, ತಾಲೂಕು ಸಂಚಾಲಕ ರಂಗಸ್ವಾಮಿ, ಶ್ರೀನಿವಾಸ್, ಮೆಹಬೂಬ್ ಖಾನ್, ರಾಜೇಶ್, ಶಂಕರ್, ಅಂಬರೀಷ್, ಕುಮಾರ್, ಶ್ರೀನಿವಾಸ್, ಪುಟ್ಟರಾಮು ಮತ್ತಿತರರು ಇದ್ದರು.

Continue Reading

Mandya

ಮದ್ದೂರಿಗೆ ಆಗಮಿಸಿದ ಕೇಂದ್ರ ಸಚಿವ ಎಚ್‌ಡಿಕೆಗೆ ಅದ್ದೂರಿ ಸ್ವಾಗತ ಕೋರಿದ JDS, BJP ಕಾರ್ಯಕರ್ತರು

Published

on

ಮದ್ದೂರು:  ನಗರಕ್ಕೆ ಆಗಮಿಸಿದ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಜೈಕಾರ ಹಾಕಿ ನೂಕು ನುಗ್ಗಲಿನೊಂದಿಗೆ ಹಾರ-ತುರಾಯಿಗಳನ್ನು ಹಿಡಿದು ಅಭಿನಂದಿಸಿದ್ದು ಕಂಡುಬಂತು.

ಪ್ರವಾಸಿ ಮಂದಿರದಲ್ಲಿ ಪಟ್ಟಣದ ಪುರಾಣ ಪ್ರಸಿದ್ದ ಶ್ರೀ ಉಗ್ರನರಸಿಂಹಸ್ವಾಮಿ ದೇಗುಲದ ಪ್ರಶಾಂತ್, ಶ್ರೀಹೊಳೆಆಂಜನೇಯಸ್ವಾಮಿ ದೇಗುಲದ ಪ್ರದೀಪ್ ಆಚಾರ್ಯ ಹಾಗೂ ಕಾಶಿ ವಿಶ್ವೇಶ್ವರ ಸ್ವಾಮಿ ದೇಗುವಲ ವೇದಬ್ರಹ್ಮ ಡಾ.ರಾಘವೇಂದ್ರ ಪುರೋಹಿತರು ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಶಾಲುಹೊದ್ದಿಸಿ ಹಣ್ಣುಗಳನ್ನು ನೀಡಿ ಶುಭವಾಗಲಿ ಎಂದು ಕುಮಾರಸ್ವಾಮಿ ಅವರಿಗೆ ಹಾರೈಸಿದರು. ಮನ್ಮುಲ್ ಮಾಜಿ ನಿದರ್ೇಶಕಿ ರೂಪ ಬೆಲ್ಲದ ಆರತಿ ಮಾಡುವ ಮೂಲಕ ಕುಮಾರಸ್ವಾಮಿ ಅವರಿಗೆ ಶುಭಕೋರಿದರು.

ನಂತರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಕಾರ್ಯಕರ್ತರು ತಂದಿದ್ದ ಭಾರಿ ಗಾತ್ರದ ಕೇಕ್ ಕತ್ತರಿಸಿ ಎಚ್.ಡಿ.ಕೆ.ಹುಟ್ಟುಹಬ್ಬ ಆಚರಿಸಿಕೊಂಡರು.
ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶ್ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾಯರ್ಾದ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ. ಜೆಡಿಎಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ದಿವ್ಯರಾಮಚಂದ್ರಶೆಟ್ಟಿ, ಸಮಾಜ ಸೇವಕ ಅಪ್ಪುಪಿ.ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ರವಿಚನ್ನಚಂದ್ರ, ನಗರಸಭಾ ಮಾಜಿ ಸದಸ್ಯರಾದ ಪ್ರವೀಣ್, ಮನೋಜ್ ಇತರರಿದ್ದರು.

Continue Reading

Mandya

ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿ ಸ್ಫೂರ್ತಿಯ ದೀಪವಾಗಿ ಬೆಳಗುತ್ತಾರೆ : ರಾಷ್ಟ್ರಪತಿ ದ್ರೌಪದಿ ಮುರ್ಮ

Published

on

ಮಂಡ್ಯ : ಯುಗ ಯುಗಾಂತರಗಳಲ್ಲಿ ಸಂತರು ತಮ್ಮ ಬುದ್ಧಿವಂತಿಕೆ ಮತ್ತು ಕರುಣೆಯ ಮೂಲಕ ಮಾನವೀಯತೆಯನ್ನು ಬೆಳಗಿಸಿದ್ದಾರೆ. ನಿಜವಾದ ಶ್ರೇಷ್ಠತೆ ಅಧಿಕಾರ ಅಥವಾ ಸಂಪತ್ತಿನಲ್ಲಿಲ್ಲ, ಬದಲಿಗೆ ತ್ಯಾಗ, ಸೇವೆ ಮತ್ತು ಆಧ್ಯಾತ್ಮಿಕ ಬಲದಲ್ಲಿದೆ ಎಂಬುದನ್ನು ಅವರ ಜೀವನವು ನಮಗೆ ನೆನಪಿಸುತ್ತದೆ. ಅಂತಹ ಶ್ರೇಷ್ಠ ಸಂತರಲ್ಲಿ, ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿ ಸ್ಫೂರ್ತಿಯ ದೀಪವಾಗಿ ಬೆಳಗುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿಳಿಸಿದರು.

ಅವರು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಜಿಯವರ 1066ನೇ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮಠದ ಮಾರ್ಗದರ್ಶನ ಮತ್ತು ಪೋಷಣೆಯಡಿಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಪ್ರಪಂಚಾದ್ಯಂತ ಭಾರತದ ವಿಶಿಷ್ಟ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ಆರೋಗ್ಯ ರಕ್ಷಣೆ, ಮಹಿಳೆಯರ ಸಬಲೀಕರಣ, ಗ್ರಾಮೀಣ ಸಮುದಾಯಗಳನ್ನು ಉನ್ನತೀಕರಿಸುವುದು, ಸಂಸ್ಕೃತಿಯನ್ನು ಸಂರಕ್ಷಿಸುವುದು ಮತ್ತು ಸಮಗ್ರ ಸಮಾಜದ ಅಡಿಪಾಯವನ್ನು ಬಲಪಡಿಸುವಲ್ಲಿ ಯುವ ಮನಸ್ಸುಗಳನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿದೆ ಎಂದರು.

ತ್ವರಿತ ಬದಲಾವಣೆ ಮತ್ತು ಅನಿಶ್ಚಿತತೆಯ ಯುಗದಲ್ಲಿ, 2047 ರ ವೇಳೆಗೆ ವೀಕ್ಷಿತ ಭಾರತದ ದೃಷ್ಟಿಕೋನದತ್ತ ಸಾಗುತ್ತಿರುವಾಗ, ಸಾಮಾಜಿಕ ಸಾಮರಸ್ಯ, ನೈತಿಕ ನಾಯಕತ್ವ, ಯುವ ಸಬಲೀಕರಣ ಮತ್ತು ಆಂತರಿಕ ಸ್ಥಿತಿಸ್ಥಾಪಕತ್ವವನ್ನು ಪೋಷಿಸಲು ಆಧ್ಯಾತ್ಮಿಕ ಮಾರ್ಗದರ್ಶನ ಅತ್ಯಗತ್ಯ ಜೊತೆಗೆ ತಂತ್ರಜ್ಞಾನದ ಶಕ್ತಿ ಮತ್ತು ಮೌಲ್ಯಗಳ ಬಲ ಎರಡೂ ನಮಗೆ ಅಗತ್ಯವಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆ ಹೊಂದಲು ಭಾರತಕ್ಕೆ ನೈತಿಕ ಬುದ್ಧಿವಂತಿಕೆಯೊಂದಿಗೆ ಆಧುನಿಕ ಶಿಕ್ಷಣದ ಏಕೀಕರಣ, ಪರಿಸರ ಜವಾಬ್ದಾರಿಯೊಂದಿಗೆ ನಾವೀನ್ಯತೆ, ಸಾಮಾಜಿಕ ಸೇರ್ಪಡೆಯೊಂದಿಗೆ ಆರ್ಥಿಕ ಬೆಳವಣಿಗೆ ಮತ್ತು ಸಹಾನುಭೂತಿಯೊಂದಿಗೆ ಪ್ರಗತಿಯ ಅಗತ್ಯವಿದೆ. ಭಾರತ ಸರ್ಕಾರವು ಈ ಸಮಗ್ರ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸುತ್ತೂರು ಮಠದಂತಹ ಸಂಸ್ಥೆಗಳು ಈ ರಾಷ್ಟ್ರೀಯ ಪ್ರಯತ್ನದಲ್ಲಿ ಗಣನೀಯ ಪಾತ್ರವನ್ನು ವಹಿಸಲಿದೆ.

ಭಾರತದ ಭವಿಷ್ಯವು ಅವರ ಕೌಶಲ್ಯ ಮತ್ತು ಜ್ಞಾನದಿಂದ ಮಾತ್ರವಲ್ಲದೆ ಅವರ ನೈತಿಕತೆಯ ಪ್ರಜ್ಞೆಯಿಂದ ರೂಪುಗೊಳ್ಳುತ್ತದೆ. ಸುತ್ತೂರು ಮಠದಂತಹ ಸಂಸ್ಥೆಗಳು ಯುವ ಮನಸ್ಸುಗಳನ್ನು ಪ್ರೇರೇಪಿಸುವುದನ್ನು, ಜವಾಬ್ದಾರಿಯುತ ನಾಗರಿಕರನ್ನು ಪೋಷಿಸುವುದನ್ನು ಮತ್ತು ನಾಳಿನ ಭಾರತದ ವಾಸ್ತುಶಿಲ್ಪಿಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕೆಂದು ತಿಳಿಸಿದರು.

Continue Reading

Trending

error: Content is protected !!