Connect with us

State

75 ವರ್ಷ ದಾಟಿದವರ ಮನೆಗೇ ಪಡಿತರ: ಆಹಾರ ಇಲಾಖೆ ಸಿದ್ಧತೆ

Published

on

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯಡಿ ವಿತರಿಸುವ ಪಡಿತರವನ್ನು 75 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.

ಕೋರಿಕೆಯಷ್ಟು ಅಕ್ಕಿಯನ್ನು ಎಫ್‌ಸಿಐ ನಿಗದಿಪಡಿಸಿದ ದರದಲ್ಲಿ (ಪ್ರತಿ ಕೆ.ಜಿಗೆ ₹ 34) ಪೂರೈಸಲು ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿವೆ.

ಇದೇ ತಿಂಗಳಿನಿಂದ ನಗದು ಬದಲು ಪೂರ್ಣ ಪ್ರಮಾಣದಲ್ಲಿ ಅಕ್ಕಿ ಪೂರೈಸಲು ನಿರ್ಧರಿಸಿರುವ ಇಲಾಖೆ, ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಅದಕ್ಕಾಗಿ ಹಿರಿಯ ನಾಗರಿಕಸ್ನೇಹಿ ನೀತಿ ಪರಿಚಯಿಸುತ್ತಿದೆ.

ಇದುವರೆಗೂ ಪಡಿತರ ಕಾರ್ಡ್‌ ಹೊಂದಿರುವ ಕುಟುಂಬದ ಯಾರಾದರೂ ಒಬ್ಬ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಅಥವಾ ಅನ್ನಭಾಗ್ಯ ಪಡಿತರ ವಿತರಣಾ ಕೇಂದ್ರಗಳಿಗೆ ತೆರಳಿ ಬಯೊಮೆಟ್ರಿಕ್‌ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಮತ್ತಿತರ ಪಡಿತರ ಪಡೆಯಬೇಕಿತ್ತು. ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಕೊನೆ ಹಾಡಲು ‘ಮನೆ ಬಾಗಿಲಿಗೆ ಪಡಿತರ’ ಯೋಜನೆ ರೂಪಿಸಲಾಗಿದೆ.

ಒಂಟಿ ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ:

ಮನೆ ಬಾಗಿಲಿಗೆ ಪಡಿತರ ವಿತರಿಸಬೇಕಾದರೆ ಅವರ ಕುಟುಂಬದಲ್ಲಿ (ಪಡಿತರ ಚೀಟಿಯಲ್ಲಿ ನಮೂದಿಸಿದಂತೆ) 75ರ ಒಳಗಿನ ಇತರೆ ಸದಸ್ಯರು ಇರಬಾರದು. ಇದ್ದರೆ, ಅವರು ವಿತರಣಾ ಕೇಂದ್ರಗಳಿಗೆ ಬಂದು ಪಡಿತರ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ. ಒಂಟಿ ವೃದ್ಧರು, 75 ದಾಟಿದ ದಂಪತಿಗಳ ಪ್ರತ್ಯೇಕ ಪಟ್ಟಿಯನ್ನು ಆಹಾರ ಇಲಾಖೆ ಈಗಾಗಲೇ ಸಿದ್ಧಪಡಿಸಿದೆ. ಒಂದು ವೇಳೆ ತಮ್ಮ ಕುಟುಂಬದ ಇತರೆ ಸದಸ್ಯರು ಬೇರೆ ಪ್ರದೇಶಗಳಿಗೆ ತೆರಳಿದ್ದರೆ, ಅಂತಹ ಸಮಯದಲ್ಲಿ ಊರಲ್ಲೇ ಉಳಿದ ವೃದ್ಧರು ಮನೆ ಬಾಗಿಲಿಗೇ ಪಡಿತರ ನೀಡುವಂತೆ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

‘ಮನೆಬಾಗಲಿಗೆ ಪಡಿತರ ನೀಡುವುದು ಅತ್ಯಂತ ಪ್ರಯೋಜನಕಾರಿ. ಸಂಚಾರ ದಟ್ಟಣೆ ಅಥವಾ ವಯಸ್ಸಿನ ಕಾರಣಕ್ಕೆ ನ್ಯಾಯಬೆಲೆ ಅಂಗಡಿಗೆ ಹೋಗಲು ಸಾಧ್ಯವಾಗದೆ, ಕೆಲವೊಮ್ಮೆ ಸರದಿಯಲ್ಲಿ ನಿಲ್ಲಲು ಆಗದೇ ಕೆಲ ತಿಂಗಳು ಪಡಿತರವನ್ನೇ ಪಡೆಯಲಿಲ್ಲ. ಸರ್ಕಾರದ ಈ ನಿರ್ಧಾರ ತುಂಬಾ ಉಪಕಾರಿಯಾಗಿದೆ’ ಎನ್ನುತ್ತಾರೆ ಬೆಂಗಳೂರು ಎಂ.ಸಿ. ಲೇಔಟ್‌ನ 90 ವರ್ಷದ ನಾಗರಿಕ ರತ್ನಾಕರ ಶೆಣೈ.

State

ರಾಜಕಾರಣಿಗಳು ಮಾಡಿದ ಕರ್ಮಕ್ಕೆ ತಕ್ಕ ಪಾಠ ಕಲಿಯುವ ದಿನ ಬಂದಿದೆ: ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ

Published

on

ಬೆಂಗಳೂರು: ಕಲಿಯುಗ- ಸತ್ಯಯುಗದ ಸಂಧಿಕಾಲ ಆರಂಭವಾಗಿದ್ದು, ರಾಜಕಾರಣಿಗಳು ಅವರು ಮಾಡಿದ ಕರ್ಮಕ್ಕೆ ತಕ್ಕ ಫಲ ಅನುಭವಿಸುತ್ತಿದ್ದಾರೆ ಎಂದು ಓಡಿಶಾದ ಖ್ಯಾತ ಕಾಲಜ್ಞಾನಿ, ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯವಾಗಿರುವ ಭವಿಷ್ಯ ಮಾಲಿಕಾದ ಅದ್ಭುತ ಜ್ಞಾನವನ್ನು ಸಿದ್ದಿಕೊಂಡಿರುವ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಅವರು ತಿಳಿಸಿದ್ದಾರೆ.

ನಗರದ ಬಸವನಗುಡಿಯ ಶಂಕರಮಠದ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ತೆರನಾದ ಬೆಳವಣಿಗೆ ಎಲ್ಲಾ ರಾಜಕಾರಣಿಗಳ ಬದುಕಿನಲ್ಲಿ ಕಂಡು ಬರಲಿದೆ ಎಂದು ತಿಳಿಸಿದರು.

‘ಎಲ್ಲ ರಾಜಕಾರಣಿಗಳು ತಮ್ಮ ಕರ್ಮಕ್ಕೆ ಫಲ ಪಡೆಯುವ ದಿನ ಬಂದಿದೆ. ಅದು ಒಂದಿಬ್ಬರು ರಾಜಕಾರಣಿಗಳಲ್ಲ,” ಎಂದು ಅವರು ತಿಳಿಸಿದರು.

ಮಾರ್ಚ್ ೨೯ ೨೦೨೫ರಿಂದ ೨೦೩೪ರ ವರೆಗೆ ವಿಶ್ವ ಸಂಕಷ್ಟದ ದಿನ ಎದುರಿಸಲಿದೆ. ಭಾರತದ ಮೇಲೆ ೧೩ ರಾಷ್ಟ್ರಗಳು ಧಾಳಿ ಮಾಡಲಿವೆ. ಇದರಲ್ಲಿ ಕೆಲವು ಮಿತ್ರ ದೇಶಗಳು ಕೂಡಾ ಸೇರಿವೆ. ಈ ಯುದ್ಧದಲ್ಲಿ ಉತ್ತರ ಭಾರತ ಅಪಾರ ಕಷ್ಟ ಎದುರಿಸಲಿದೆ ಎಂದು ತಿಳಿಸಿದ ಅವರು ಪುರಿ ಜಗನ್ನಾಥ ದೇಗುಲ ಸಮುದ್ರದಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ವಿಶ್ವದಲ್ಲಿ ಈ ಅವಧಿಯಲ್ಲಿ ಹೊಸ ಸಾಂಕ್ರಾಮಿಕ ಮಹಾಮಾರಿ, ಯುದ್ಧ ನಡೆಯಲಿದೆ. ೨೦೨೪ರ ಬಳಿಕ ಸತ್ಯಯುಗ ಆರಂಭ ಬಳಿಕ ಎಲ್ಲವು ಬದಲಾಗಲಿದೆ ಎಂದು ಅವರು ತಿಳಿಸಿದರು.

ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ನಮ್ಮ ಬೆಂಗಳೂರಿನಲ್ಲಿ ಶ್ರೀ ಮದ್ಭಾಗವತ ಮಹಾ ಪುರಾಣ ಕಥಾಮೃತ
ಮತ್ತು ಭವಿಷ್ಯ ಮಾಲಿಕಾ ಪುರಾಣ ಕಾಯಕ್ರಮ ನಡೆಸಿಕೊಡಲು ಆಗಮಿಸಿದ್ದಾರೆ. ಇದೆ ಮೊದಲ ಬಾರಿಗೆ ಅವರು ನಮ್ಮ ಬೆಂಗಳೂರಿನಲ್ಲಿ ಆಸ್ತಿಕ ಮಹಾಶಯರನ್ನು ಹರಸಲಿದ್ದಾರೆ.

ಜೂನ್ 24ರಿಂದ ಜೂನ್ 30ರವರೆಗೆ ಪ್ರತಿದಿನ ಸಂಜೆ 4ರಿಂದ 7ರವರೆಗೆ, ನಗರದ ಬಸವನಗುಡಿಯ ಶಂಕರಪುರಂನ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಅವರು ಈ ಕಾಲಜ್ಞಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಗ್ರಂಥದ ಪ್ರಕಾರ ಈಗಿರುವ 795 ಕೋಟಿ ಜನರ ಪೈಕಿ ಕೇವಲ 64 ಕೋಟಿ ಜನರು ಮಾತ್ರ ಕಲಿಯುಗದಿಂದ ಸತ್ಯಯುಗಕ್ಕೆ ತೆರಳುತ್ತಾರೆ. ಮುಂದಿನ 8 ವರ್ಷಗಳಲ್ಲಿ ಜಗತ್ತು ಮೂರನೇ ಜಾಗತಿಕ ಮಹಾ ಯು ದ್ಧ, ಆಹಾ ರ ಧಾನ್ಯಗಳ ಕೊರತೆ,
ಬಿರುಗಾಳಿಗಳು ಮತ್ತು ಸುಂಟರ ಗಾಳಿಗಳು, ಪ್ರವಾಹಗಳು ಮತ್ತು ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು
ಮತ್ತು ಬೆಂಕಿಯಿಂದ ನಾಶ, ಭೂಕಂಪಗಳು, ಬರ ಮತ್ತು ಹಸಿವು, ಸಾಂಕ್ರಾಮಿಕ ರೋಗಗಳಿಂದ ಈ ಜಗತ್ತು ನಡುಗಲಿದೆ. ಈ ಪೈಕಿ ಈಗಾಗಲೇ ಕೆಲವು ಸತ್ಯವಾಗುತ್ತಿದ್ದು, ಹೀಗಾಗಿ, ಪಂ. ಶ್ರೀ ಕಾಶಿನಾಥ್ ಮಿಶ್ರ ಅವರ ಭವಿಷ್ಯ ದರ್ಪಣ ಎಲ್ಲೆಡೆ ಪ್ರಖ್ಯಾತಿ ಹೊಂದುತ್ತಿದೆ.

ಶ್ರೀ ಪುರಿಯ ಶ್ರೀ ಜಗನ್ನಾಥನ ಪರಮ ಭಕ್ತರಾದ ಪಂ. ಶ್ರೀ ಕಾಶಿನಾಥ್ ಮಿಶ್ರ ತ್ರಿಸಂಧ್ಯಾಧಾರ ಶ್ಲೋಕದ ಮೂಲಕ ಜಗತ್ತನ್ನು ರಕ್ಷಿಸಲು ತಮ್ಮ ಭಕ್ತರೊಂದಿಗೆ ಶ್ರಮಿಸುತ್ತಿದ್ದಾರೆ.

ಈ ಭವಿಷ್ಯ ಮಾಲಿಕಾ ಗ್ರಂಥಗಳನ್ನು 600 ವರ್ಷಗಳ ಹಿಂದೆ ಪಂಚ ಸಖರು ಅಂದರೆ ದ್ವಾಪರ ಯುಗದ ಭಗವಾನ್
ಶ್ರೀ ಕೃಷ್ಣನ ಪರಮ ಮಿತ್ರರು ಕಲಿಯಗದಲ್ಲಿ ಪುನರ್ಜನ್ಮ ಪಡೆದು ಬರೆದು, ಮನುಕುಲದ ಭವಿಷ್ಯ ಬರೆದಿದ್ದಾರೆ. ಈ ಕೃಷ್ಣನ ಸ್ನೇಹಿತರೆಂದರೆ ಅಚ್ಯುತಾನಂದ ದಾಸ, ಬಲರಾಮ ದಾಸ, ಶಿಶು ಅನಂತ ದಾಸ, ಯಶವಂತ ದಾಸ, ಮತ್ತು ಜಗನ್ನಾಥ ದಾಸ (ಧಾಮ, ಸುಧಾಮ, ಸುಭಾಲ, ಸುಭಾವು, ಹಾಗು ಸುಭಾಕ್ಷ.) ಈ ಗ್ರಂಥದ ಜ್ಞಾನವನ್ನು ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಭಕ್ತರಿಗೆ ಅನುಗ್ರಹಿಸಲಿದ್ದಾರೆ.

Continue Reading

State

ಸಾಮಾಜಿಕ ಮಾಧ್ಯಮಗಳಿಂದ ಮೂಲ ಪತ್ರಿಕೋದ್ಯಮ ವಿಶ್ವಾಸಾರ್ಹತೆಗೆ ಧಕ್ಕೆ

Published

on

ಬೆಂಗಳೂರು: ಇಂದಿನ ಸಾಮಾಜಿಕ ಮಾಧ್ಯಮಗಳು ಮೂಲ ಪತ್ರಿಕೋದ್ಯಮ ವಿಶ್ವಾಸಾರ್ಹತೆಗೆ ಧಕ್ಕೆ ಬರುವಂತಹ ರೀತಿಯಲ್ಲಿ ಬಳಕೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಬಿ.ಎಸ್.ಅರುಣ್ ತಿಳಿಸಿದರು.


ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡಿದ್ದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಬಹುದಾದ ಸುದ್ದಿ, ಕೆಲ ಅಂಶಗಳಲ್ಲಿ ನಿಖರತೆ, ಸ್ಪಷ್ಟತೆ ಇಲ್ಲದೆ ನಂಬಬೇಕೋ ನಂಬಬಾರದೋ ಎಂಬ ಗೊಂದಲದಲ್ಲಿ ಜನ ಸಾಮಾನ್ಯರು ಸಿಲುಕಿಕೊಳ್ಳುವಂತಾಗಿದೆ ಎಂದು ಹೇಳಿದರು.


ಸಾಮಾಜಿಕ ಜಾಲತಾಣಗಳಿಂದಾಗುವ ಸಾಕಷ್ಟು ಪರಿಣಾಮಗಳ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ನಕಲಿ ಸುದ್ದಿಗಳನ್ನು ಹರಿಬಿಡುವುದು ಸಾಮಾನ್ಯ ಸಂಗತಿಯಾಗಿದೆ. ಈ ಪರಿಣಾಮವಾಗಿ ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ವಾಹಿನಿಗಳಿಂದ ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೆ ಹೆಚ್ಚಿನ ತೊಂದರೆ ಕೂಡ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ಪತ್ರಕರ್ತನಿಗಾಗಲಿ, ಸುದ್ದಿ ಸಂಸ್ಥೆಗಾಗಲಿ ವಿಶ್ವಾಸಾರ್ಹತೆ ಅನ್ನುವುದು ಬಹುಮುಖ್ಯ ಎಂದು ತಿಳಿಸಿದರು.


ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ಯನ್ನು ಹಂತ ಹಂತವಾಗಿ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದೇ ಆದಲ್ಲಿ ಮೂಲ ಆಶಯಗಳಿಗೆ ಕುಂದುಂಟಾಗುತ್ತದೆ. ಪತ್ರಿಕೋದ್ಯಮದ ವಿಶ್ವಾಸಾರ್ಹತೆಯೂ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೊರೊನಾದಿಂದ ಹಲವು ಕ್ಷೇತ್ರಗಳಿಗೂ ಹೆಚ್ಚಿನ ಪರಿಣಾಮ ಬೀರಿತು. ಆದರೆ ಪತ್ರಿಕೋದ್ಯಮ ಕ್ಷೇತ್ರಕ್ಕಾದ ನಷ್ಟ ಹೆಚ್ಚು, ಇಂದಿಗೂ ಅದನ್ನು ಸರಿದೂಗಿಸುವಂತಹದ್ದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.
ಮಿಝೋರಾಂ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ವಿ.ನಾಗರಾಜ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಖಾದ್ರಿ ಶಾಮಣ್ಣ ಅವರು ತೊಡಗಿಸಿಕೊಂಡ ವೈಖರಿಯೇ ವಿಭಿನ್ನತೆಯಿಂದ ಕೂಡಿದೆ. ಅವರ ಕಾರ್ಯತತ್ಪರತೆಯು ಇಂದಿನ ಪತ್ರಕರ್ತರಿಗೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ರಿಕೋದ್ಯಮದ ಮೌಲ್ಯಗಳು ಮತ್ತು ತತ್ವಾದರ್ಶಗಳಿಗೆ ಬದ್ಧರಾಗಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.


ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಖಾದ್ರಿ ಶಾಮಣ್ಣ ಅವರು ಗಾಂಧಿ ಚಿಂತಕ ಹಾಗೂ ಅನುಯಾಯಿಯಾಗಿದ್ದರು. ಗಾಂಧೀಜಿ ಅವರಿಂದ ಹೆಚ್ಚಿನ ಪ್ರೇರಣೆ ಪಡೆದಿದ್ದಾರೆ. ಖಾದ್ರಿ ಅವರ ಲೇಖನಗಳನ್ನು ಓದಿ ನಾನು ಸ್ಫೂರ್ತಿ ಪಡೆದಿರುವೆ. ಅವರ ಹೆಸರಿನಲ್ಲಿ ಪತ್ರಕರ್ತರಿಗಾಗಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಜಾವಾಣಿ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ, ಹಲವರ ಸಹಕಾರದಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ವಿಶೇಷವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ನಮಗೆ ಸಂದಿರುವ ಪ್ರಶಸ್ತಿ ಮೊತ್ತವನ್ನು ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ಗೆ ನೀಡುವೆ. ಟ್ರಸ್ಟ್ ಗಟ್ಟಿಯಾಗಿ ಬೆಳೆದು ನಿಲ್ಲಲಿ ಎಂದು ಆಶಿಸಿದರು. ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಟ್ರಸ್ಟ್ ಮುಖ್ಯಸ್ಥರಾದ ಎಚ್. ಆರ್. ಶ್ರೀಶ, ಸ್ಮಿತಾ ಅಚ್ಯುತನ್ ಇತರರಿದ್ದರು.

Continue Reading

State

ಖ್ಯಾತ ಸಾಹಿತಿ ನಾಡೋಜ ಕಮಲಾ ಹಂಪನಾ ನಿಧನ: ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ

Published

on

ಬೆಂಗಳೂರು: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (89) ಅವರು ಇಂದು ನಿಧನ ಹೊಂದಿದರು.

ಪತಿ, ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅನೇಕ ಬಂದು ಮಿತ್ರರು, ಅಪಾರ ಸಾಹಿತ್ಯಾಭಿಮಾನಿಗಳನ್ನು ಅವರು ಅಗಲಿದ್ದಾರೆ.

ಸಂಜೆಯ ತನಕ ರಾಜಾಜಿನಗರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ.

ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಕರ್ನಾಟಕ ಸರ್ಕಾರ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ ಲಭಿಸಿದೆ.

ಸುಮಾರು 60ಕ್ಕೂ ಹೆಚ್ಚು ಕೃತಿಗಳು ಇದುವರೆಗೆ ಪ್ರಕಟವಾಗಿದ್ದು, ಇದರಲ್ಲಿ ಸೃಜನಕೃತಿಗಳೂ ಇವೆ. ʼಬಿಂದಲಿʼ, ʼಬುಗುಡಿʼ ಹಾಗೂ ʼಬಯಲುʼ ಇವು ಕಮಲಾ ಹಂಪನಾ ಅವರ ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ಬರೆದಿದ್ದಾರೆ.

Continue Reading

Trending

error: Content is protected !!