Mandya
ಅಂಕಿ ಅಂಶ ಬಿಡುಗಡೆ ಮಾಡಿ ನೀರು ಬಿಟ್ಟಿಲ್ಲ ಎನ್ನುವುದನ್ನ ತೋರಿಸಲಿ
ಮಂಡ್ಯ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿಲ್ಲ, ಹೋರಾಟಗಾರರು ಪ್ರಚಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂಬುದನ್ನ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳುತ್ತಾರೆ, ಬಿಳಿಗುಂಡ್ಲು ಜಲ ಮಾಪನದ ಅಂಕಿ ಅಂಶ ವರದಿ ಬಿಡುಗಡೆ ಮಾಡಿಸಿ ನೀರು ಬಿಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲಿ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಸವಾಲು ಹಾಕಿದರು.
ನಗರದ ಸರ್.ಎಂ.ವಿ.ಪ್ರತಿಮೆ ಎದುರು ಕಾವೇರಿಗಾಗಿ ಹೋರಾಟದ ಏಳನೇ ಸೋಮವಾರದ ಚಳವಳಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರನ್ನು ಕಾಪಾಡುವುದು ನಮ್ಮ ಹೊಣೆ ಎಂಬುವ ಮಾತು ಹೇಳಿ ಮರೆತಿದ್ದಾರೆ, ತಕ್ಷಣ ನಾಲೆಗಳಿಗೆ ನೀರು ಹಿರಿಸಿ ಜನಜಾನುವಾರುಗಳ ರಕ್ಷಣೆ ಮಾಡಬೇಕು. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಲಿಲ್ಲ, ಜಲ ಸಂಕಷ್ಟವನ್ನು ಪರಿಹರಿಸಲು ನಿರ್ಲಕ್ಷ್ಯ ತೋರಿದೆ, ಕಾನೂನಿನ ಚೌಕಟ್ಟು ಮುಂದಿಟ್ಟುಕೊಂಡು ಕರ್ನಾಟಕಕ್ಕೆ ದ್ರೋಹ ಮಾಡಿದೆ, ಸರ್ಕಾರ ಒಳ್ಳೆಯದನ್ನು ಮಾಡಿದ್ದೇವೆ ಎಂದು ಹೊಗಳಿಕೆ ಮಾಡುತ್ತಿದ್ದಾರೆ, ಆದರೆ ಇವರು ಏನು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ರೈತರನ್ನು ವಿನಾಕಾರಣ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ನಮಗೆ ಯಾವುದೇ ಗ್ಯಾರಂಟಿಗಿಂತ ನೀರು ಮುಖ್ಯ, ಆ ಕೆಲಸವನ್ನು ಸರ್ಕಾರ ಮಾಡಲಿ, ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿಲ್ಲ, ಹೋರಾಟಗಾರರು ಪ್ರಚಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಕಾವೇರಿ ಚಳವಳಿ ಬಗ್ಗೆ ಹಗುರವಾಗಿ ಮಾತನಾಡಿರುವ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಸಲ್ಲದ ಹೇಳಿಕೆ ಹೇಳುವುದನ್ನು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಜವಾದ ಜನ ಪ್ರತಿನಿಧಿಯಾಗಿ ಬಿಳಿಗುಂಡ್ಲು ಜಲ ಮಾಪನದ ಅಂಕಿ ಅಂಶದ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೂಲಕ ನೀರು ಬಿಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲಿ, ಗ್ಯಾರಂಟಿ ಸಮಾವೇಶದಲ್ಲಿ ಶಾಸಕರು ಜನರ ಮೆಚ್ಚಿಸಲು ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ, ನೀರು ಮಳವಳ್ಳಿ ದಾಟಿಲ್ಲ, ಕಾವೇರಿ ಹೋರಾಟಗಾರರು ಪ್ರಚಾರಕ್ಕಾಗಿ ಚಳವಳಿ ಮಾಡುತ್ತಿದ್ದಾರೆ ಎಂದು ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಕಾವೇರಿ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಹರಿದಿದೆ, ಕಬಿನಿ ಜಲಾಶಯದಿಂದ ನದಿಗೆ 2 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ, ಆ ದಿನಗಳಲ್ಲಿ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿದು ಹೋಗಿದೆ ಎಂಬುದನ್ನು ಬಿಳಿಗುಂಡ್ಲು ಜಲಮಾಪನ ಕೇಂದ್ರದಿಂದ ಮಾಹಿತಿ ಪಡೆಯಲಿ, ಆಡಳಿತರೂಢ ಪಕ್ಷದ ಶಾಸಕರಾಗಿರುವ ನರೇಂದ್ರಸ್ವಾಮಿ ಈ ಬಗ್ಗೆ ಅಧಿಕೃತ ಅಂಕಿಅಂಶ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಕಾವೇರಿ ಹೋರಾಟಗಾರರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಶಾಸಕರು ಮಾತನಾಡಬೇಕು, ಜನರ ಮೆಚ್ಚಿಸಲು ಬಾಯಿ ಹರಿಬಿಡಬಾರದು ಮುಂದಿನ ದಿನಗಳಲ್ಲಿ ಕಾವೇರಿ ಚಳವಳಿ ಬಗ್ಗೆ ಮಾತನಾಡುವಾಗ ಜಾಗರೂಕರಾಗಿ ಮಾತನಾಡಿ, ಇಲ್ಲವಾದರೆ ನಿಮ್ಮ ವಿರುದ್ಧ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜವರಯ್ಯ, ಸುಜಾತ ಸಿದ್ದಯ್ಯ, ಮಲ್ಲೇಶ್, ಪಣಕನಹಳ್ಳಿ ನಾಗೇಂದ್ರ, ತಮ್ಮಣ್ಣಗೌಡ, ಇಂಡುವಾಳು ಬಸವರಾಜ್ ಭಾಗವಹಿಸಿದ್ದರು.
Mandya
ನಾಳೆ ಜೂನಿಯರ್ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್‌ನ ಮಂಡ್ಯ ಶಾಖೆ ಲೋಕಾರ್ಪಣೆ : ಚಿರಾಗ್
ಮಂಡ್ಯ: ಅಶ್ವಿನಿ ಪುನಿತ್ ರಾಜ್‌ಕುಮಾರ್ ಅವರ ಸಂಸ್ಥಾಪಕ ಸಹಭಾಗಿತ್ವದ ಜೂನಿಯರ್ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್‌ನ ಮಂಡ್ಯ ಶಾಖೆಯನ್ನು ಫೆ.5 ರಂದು ಮಧ್ಯಾಹ್ನ 12 ಗಂಟೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ ಶಾಖೆಯ ಪಾಲುದಾರ ಚಿರಾಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜೂನಿಯರ್ ಟೋಸ್ ಪ್ರೀಸ್ಕೂಲ್‌ನ 15ಕ್ಕೂ ಹೆಚ್ಚು ಶಾಖೆಗಳಿವೆ. ಮೈಸೂರಿನ ನಂತರ ಮಂಡ್ಯದಲ್ಲಿ ನೂತನ ಶಾಖೆಯನ್ನು ಆರಂಭಿಸಲಾಗುತ್ತಿದೆ ಎಂದರು.

ನೂತನ ಶಾಖೆಯನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಮಾಜಿ ಮಂತ್ರಿ ಕೆ.ಗೋಪಾಲಯ್ಯ, ಶಾಕರಾದ ಪಿ.ರವಿಕುಮಾರ್ ಗೌಡ, ಮಧು ಜಿ.ಮಾದೇಗೌಡ, ಎಂ.ಜಿ.ದಿನೇಶ್ ಗೂಳೀಗೌಡ, ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಸಿ.ಭಗವಾನ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಎಡಿಸಿಸಿ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಬಿಬಿಎಂಪಿಯ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಡಿಐಜಿ ಎನ್.ವಿಷ್ಣುವರ್ಧನ, ಮಂಡ್ಯ ಎಸ್‌ಪಿ ಡಾ.ವಿ.ಜೆ.ಶೋಭರಾಣಿ, ಬೆಂಗಳೂರು ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ರಘುವೀರ್ ಗೌಡ ಹಾಗೂ ಸಂಸ್ಥೆಯ ಸಹ ಸಂಸ್ಥಾಪಕಿ ಅಶ್ವಿನಿ ಪುನಿತ್ ರಾಜ್‌ಕುಮಾರ್ ಭಾಗವಹಿಸುವರು ಎಂದು ಹೇಳಿದರು.
Mandya
ಫೆ.7ಕ್ಕೆ ನಾನು ಕಾಫಿರ ಪುಸ್ತಕ ಬಿಡುಗಡೆ : ಡಾ.ಸುಧಾಕರ್ ಹೊಸಳ್ಳಿ
ಮಂಡ್ಯ: ಅಖಿಲ ಭಾರತ ಸಾಹಿತ್ಯ ಪರಿಷದ್ ಮತ್ತು ಸ್ವರಾಷ್ಟ್ರ ಪ್ರಕಾಶನ ಸಹಯೋಗದಲ್ಲಿ ನಾನು ಕಾಫಿರ ಪುಸ್ತಕ ಬಿಡುಗಡೆ ಸಮಾರಮಭವನ್ನು ಫೆ.7ರಂದು ಬೆಳಿಗ್ಗೆ 10.30ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕೃತಿಯ ಕತೃ ಡಾ.ಸುಧಾಕರ್ ಹೊಸಳ್ಳಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತವನ್ನು ವಿಭಜಿಸಲು ಅಂಬೇಡ್ಕರ್‌ರನ್ನು ಹಿಂದೂ ಧರ್ಮದ ವಿರುದ್ಧ ಗುರಾಣೀಯಾಗಿ ಬಳಸಲಾಗುತ್ತಿದೆ. ಈ ಸಂಬಂಧ ಹಿಂದೂ ಸಮಾಜದ ಜಾಗೃತಿ ಭಾಗವಹಿsi `ನಾನೂ ಕಾಫಿರ’ ಕೃತಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್‍ಯದರ್ಶಿ ಬಿ.ಎಲ್.ಸಂತೋಷ್ ಕಾರ್‍ಯಕ್ರಮ ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡುವರು. ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು. ಎಸ್‌ಬಿಇಟಿ ಕಾರ್‍ಯದರ್ಶಿ ಡಾ.ಮೀರಾಶಿವಲಿಂಗಯ್ಯ ಹಾಗೂ ಸ್ವರಾಷ್ಟ್ರ ಪ್ರಕಾಶನದ ಮಹಾಪೋಷಕ ಚಂದ್ರಶೇಖರ್ ದಡದಪುರ ಭಾಗವಹಿಸಲಿದ್ದಾರೆ. ಸಂವಿಧಾನ ತಜ್ಞ, ಲೇಖಕ ಡಾ.ಸುಧಾಕರ ಹೊಸಳ್ಳಿ ಉಪಸ್ಥಿತರಿರುವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಪುಸ್ತಕ ಪ್ರೇಮಿ ಎಂ.ಅಂಕೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷದ್‌ನ ಜಿಲ್ಲಾಧ್ಯಕ್ಷ ಎಚ್.ಪದ್ಮನಾಭ, ವಿಭಾಗ ಪ್ರಭಾರಿ ಬಿ.ಎಸ್.ಅನುಪಮ ಇದ್ದರು.
Mandya
ಅಪ್ರಾಪ್ತ ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗಿ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ: ಎಚ್.ಕೆ.ವೀರಣ್ಣ
ಮದ್ದೂರು: ಹದಿಹರೆಯದ ಯುವಕರುಗಳು ಅರಿವಿನ ಕೊರತೆಯಿಂದ ಮಾದಕ ವಸ್ತುಗಳ ವ್ಯಸನಿಗಳಾಗಿ ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲಗೊಳ್ಳುವ ಮೂಲಕ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ ಎಂದು ಎಚ್. ಕೆ. ವೀರಣ್ಣ ಗೌಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಪ್ಪಿನಕೆರೆ ಶಿವಕುಮಾರ್ ಹೇಳಿದರು.
ನಗರದ ಎಚ್. ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಬುಧವಾರ ಬೆಂಗಳೂರಿನ ಪರಿವರ್ತನಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತು ಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವದಲ್ಲೇ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ಭಾರತದಲ್ಲಿ ತಾತ್ಕಾಲಿಕ ಸುಖ ಮತ್ತು ಮೋಹಕ್ಕೆ ಒಳಗಾಗಿ ಯುವಕ ಯುವತಿಯರು ತಮಗರಿವಿಲ್ಲದೆ ಮಾದಕ ವ್ಯಸನಿಗಳಾಗುವ ಜೊತೆಗೆ ತಮ್ಮ ಉಜ್ವಲ ಭವಿಷ್ಯವನ್ನು ಕರಾಳವಾಗಿಸಿಕೊಂಡು ಪೋಷಕರಿಗೆ ಹಾಗೂ ಸಮಾಜಕ್ಕೆ ಕಂಟಕವಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಕೇವಲ ಕಾನೂನುಗಳ ಮೂಲಕ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ವಿದ್ಯಾವಂತರು ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿಕೊಂಡು ಮಾದಕ ವಸ್ತುಗಳ ಅಪಾಯದ ಬಗ್ಗೆ ಯುವ ಜನರಿಗೆ ಶಿಕ್ಷಣ ನೀಡಲು ಶಾಲೆಗಳು, ಪೋಷಕರು ಮತ್ತು ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಉಪ ಪ್ರಾಂಶುಪಾಲೆ ಜಿ.ಎಸ್. ನಂದಿನಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಭಾರತ ನಿರ್ಮಾಣ ಸಂಬಂಧ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಚ್.ಎಸ್. ಪಂಚಲಿಂಗೇಗೌಡ, ಜಿ. ಸುರೇಂದ್ರ, ಕುಮಾರ್, ಸುಚಿತ್ರ, ಚಾಂದಿನಿ, ಸ್ಪೂರ್ತಿ, ಡಾ. ಸುಧಾ, ಎಂ.ಪಿ. ರಮ್ಯ, ಜಿ .ರಕ್ಷಿತಾ, ಸ್ವಾತಿ,ಟಿ. ಎನ್.ಸುಚಿತ್ರ ಸೇರಿದಂತೆ ಇತರರು ಹಾಜರಿದ್ದರು.
-
Kodagu5 hours agoಕೋಮು ಸಾಮರಸ್ಯ ಮೂಡಿಸುವಲ್ಲಿ ಉರೂಸ್ ಕೊಡುಗೆ ಅಪಾರ
-
Kodagu5 hours agoಕಾರೆಕೆರೆ ಕಾವಲು: 47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರಿಗೆ ಆಗ್ರಹ
-
Hassan21 hours agoಎಸ್ಡಿಪಿಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುನೀರ್ ಹಲ್ಲೆಗೊಳಗಾದ ಎಸ್ಡಿಪಿಐ ಮುಖಂಡ
-
Hassan2 hours ago2027 ರ ಅಂತ್ಯಕ್ಕೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಕೃಷ್ಣ ಬೈರೇಗೌಡ
-
Special21 hours agoಕಲೆ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕಾರದಲ್ಲಿ ಶ್ರೀಮಂತ ದೇಶ ಭಾರತ: ನ್ಯಾ.ಗೋಪಾಲಗೌಡ
-
National1 hour agoಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಭೂಪೇಂದ್ರ ಯಾದವ್ಗೆ ಎಚ್ಡಿಕೆ ಮನವಿ
-
Chamarajanagar1 hour agoಬೆಳಗಿನ ವೇಳೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ
-
State22 hours agoಕಮಿಷನ್ಗಾಗಿ ಡೀಲ್ ಆರೋಪದ ಆಡಿಯೋ ವೈರಲ್: ಗುತ್ತಿಗೆದಾರ ಸಂಘದ ಗೌರವಾಧ್ಯಕ್ಷ ಬಿ.ಜಗನ್ನಾಥ್ ಅಮಾನತು
