Connect with us

Mandya

ಭ್ರೂಣ ಹತ್ಯೆ ನಂತರ ಸದ್ದು ಮಾಡುತ್ತಿರುವ ಪ್ರಾಣಿಗಳ ಮೂಳೆಗಳು

Published

on

ಕೊಳೆತ ಸ್ಥಿತಿಯಲ್ಲಿ ದನ, ಎಮ್ಮೆ ತಲೆಗಳು ಮತ್ತು ಮೂಳೆಗಳ ಸಂಗ್ರಹ

ಮಂಡ್ಯ: ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಮಾಸುವ ಮುನ್ನವೇ ಪ್ರಾಣಿಗಳಿಂದ ಸಂಗ್ರಹಿಸಿದ ಮೂಳೆಗಳಿಂದ ಪೌಡರ್‌ ಮಾಡುವ ಜಾಲವು ಆಲೆಮನೆ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪವು ಭಾನುವಾರ ಕೇಳಿಬಂದಿದೆ.

ಹೌದು, ತಾಲ್ಲೂಕಿನ ತೂಬಿನಕೆರೆ ಗ್ರಾಮದ ಹೊರವಲಯದಲ್ಲಿರುವ ಗ್ರಾಮದ ಲಿಂಗರಾಜು ಅವರಿಗೆ ಸೇರಿದ ಜಮೀನಿನಲ್ಲಿ ಒಂದು ಗೋದಾಮುವಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ದನ, ಎಮ್ಮೆ ಮೂಳೆಗಳು ಮತ್ತು ತಲೆಗಳ ಸಂಗ್ರಹಿಸಿರುವ ವಿಡಿಯೋ ಒಂದು ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.

ಕಳೆದ ಒಂದು ವಾರದಿಂದೀಚೆಗೆ ಗಬ್ಬುನಾರುವ ವಾಸನೆ ಊರೆಲ್ಲ ಹಬ್ಬಿದೆ, ಅಲ್ಲಿನ ಕೃಷಿಕರು ತಮ್ಮ ಹೊಲಗಳಿಗೆ ಹೋಗುವುದಕ್ಕೆ ಮತ್ತು ನಿವಾಸದ ಮನೆಗಳಿಗೆ ಹೋಗಲು ಬಾಯಿ ಮತ್ತು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿಯಿಂದ ಜನರು ಎಣಗಾಡುವಂತಾಗಿದೆ.

ಈ ವಾಸನೆಯು ಏನಿರಬಹುದು? ಎಂಬುದನ್ನು ಗ್ರಾಮಸ್ಥರು ಗಮನಿಸಿ ಸ್ಥಳಕ್ಕೆ ಹೋಗಿ ನೋಡಿದಾಗ, ಕೊಳೆತು ನಾರುತ್ತಿರುವ ದನ, ಎಮ್ಮೆಯ ಮೂಳೆಗಳು ಮತ್ತು ಅದರ ತೆಲಗಳು ನಾರುತ್ತಿರುವ ದೃಶ್ಯ ನೋಡಿ ಗ್ರಾಮಸ್ಥರು ಆಶ್ಚರ್ಯ ಪಟ್ಟಿದ್ದಾರೆ, ತಕ್ಷಣವೇ ತನ್ನೂರಿನ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ, ಪಿಡಿಒ ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿ ಕಳುಹಿಸಿದ್ದಾರೆ, ಆದರೆ ಇಷ್ಟು ದಿನಗಳಾದರೂ ಸಹ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತದನಂತರ ಭಾನುವಾರ ಭರ್ಜರಿ ಬಾಯ್ಸ್‌ ಯುವಕರ ತಂಡದವರು ಸ್ಥಳಕ್ಕೆ ಹೋಗಿ ವಿಡಿಯೋ ಮತ್ತು ಫೋಟೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ, ಇದರಿಂದ ಎಚ್ಚೆತ್ತ ಗೋಡೌನ್‌ ಮಾಲೀಕ ಲಿಂಗರಾಜು ಅವರು ಆ ಬಾಡಿಗೆಗೆ ಪಡೆದಿದ್ದ ವ್ಯಕ್ತಿಯನ್ನು ಖಾಲಿ ಮಾಡುವಂತೆಯೂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಗ್ರಾಮಸ್ಥರಿಗೆ ಗಬ್ಬು ನಾರುತ್ತಿರುವ ವಾಸನೆ ಬಡಿದಿದೆ, ಕೃಷಿ ಚಟುವಟಿಕೆಗಳಿಗೆ ರೈತರು ಹಾಗೂ ವಾಸದ ಮನೆಗಳಿಗೆ ಹೋಗುವ ಜನರು ಮೂಗು ಮುಚ್ಚಿಕೊಂಡು ಕೆಟ್ಟ ವಾಸನೆ ಸಹಿಸಲಾರದೇ ಹೋಗುತ್ತಿದ್ದಾರೆ, ಜೊತೆಗೆ ಪ್ರಾಣಿಗಳ ಮೂಳೆಗಳನ್ನು ಇಲ್ಲಿ ಒಣಗಿಸಿ ಗ್ರಾಮದೊಳಗಿರುವ ಆಲಮೆನೆಯಲ್ಲಿ ಪೌಡರ್‌ ಮಾಡಲಾಗುತ್ತಿತ್ತು ಎಂಬ ಆರೋಪವನ್ನು ಗ್ರಾಮದ ಕೆಲವು ಯುವಕು ಹೇಳುತ್ತಾರೆ.

ಖಾಲಿ ಮಾಡಲು ತಿಳಿಸಿರುವೆ : ಖಾಲಿ ಬಾಟಲು ಮತ್ತು ಹಳೆಯ ಪೇಪರ್‌ ಸಂಗ್ರಹಕ್ಕೆ ನಮಗೆ ಬಾಡಿಗೆ ಬೇಕು ಎಂಬುದನ್ನು ಬಾಡಿಗೆ ಪಡೆದ ವ್ಯಕ್ತಿಯು ಕೇಳಿಕೊಂಡರು, ಹಾಗಾಗಿ ಸಮ್ಮತಿಸಿದೆ, ಇನ್ನೂ ಕೂಡ ಲಿಖಿತ ಒಪ್ಪಂದ ಮಾಡಿಕೊಂಡಿಲ್ಲ, ಒಂದು ವಾರದಿಂದೀಚೆಗೆ ಬಾಯಿ ಮಾತಲ್ಲಿ ಮಾತನಾಡಲಾಗಿದೆ ಅಷ್ಟೇ? ಗ್ರಾಮಸ್ಥರು ಹಿತದೃಷ್ಟಿಯಿಂದ ಅವರನ್ನು ಖಾಲಿ ಮಾಡುವಂತೆ ಹೇಳಿರುವೆ. – ಲಿಂಗರಾಜು, ಮಾಲೀಕ, ತೂಬಿನಕೆರೆ.

ದೂರು ಬಂದ ಕೂಡಲೇ ನೊಟಿಸ್‌ : ತೂಬಿನಕೆರೆ ಗ್ರಾಮಸ್ಥರು ದೂರು ನೀಡಿದ ತಕ್ಷಣವೇ ಜಮೀನು ಮಾಲೀಕ ಲಿಂಗರಾಜು ಅವರಿಗೆ ನೊಟಿಸ್‌ ನೀಡಿದ್ದೇನೆ, ಜೊತೆಗೆ ತಕ್ಷಣವೇ ಖಾಲಿ ಮಾಡಿಸುವಂತೆಯೂ ಸೂಚಿಸಲಾಗಿದೆ, ಪರವಾನಗಿಯನ್ನು ತೆಗೆದುಕೊಂಡಿಲ್ಲ ಇದು ಅಪರಾಧವಾಗಿದೆ, ತಕ್ಷಣವೇ ಖಾಲಿ ಮಾಡುತ್ತಾರೆ. – ಸಿ.ಸ್ವಾಮಿ, ಪಿಡಿಒ, ತೂಬಿನಕೆರೆ.

Continue Reading
Click to comment

Leave a Reply

Your email address will not be published. Required fields are marked *

Mandya

ಎಚ್ಡಿಕೆ ಮಂಡ್ಯದಲ್ಲಿ ಅಬ್ಬರದ ಪ್ರಚಾರ

Published

on

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ – ಜೆಡಿಎಸ್ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗ ಪ್ರಚಾರದ ಕೊನೆಯ ದಿನ ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿಪ್ರದರ್ಶಿಸಿದರು.

ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ನಡೆಸಿದ ಹೆಚ್‍.ಡಿ ಕುಮಾರಸ್ವಾಮಿಗೆ ಅಪಾರ ಜನಸ್ತೋಮ ಬೆಂಬಲ ಸೂಚಿಸಿತು.

ಮಂಡ್ಯ ವಿಶ್ವವಿದ್ಯಾನಿಲಯ ಆವರಣದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆಗೂಡಿ ರೋಡ್ ಶೋ ಮೂಲಕ ಮತಯಾಚನೆಗೆ ಹೊರಟ ಮೈತ್ರಿ ಪಕ್ಷದ ಅಭ್ಯರ್ಥಿಗೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಜಯ ಘೋಷ ಮೊಳಗಿಸಿ ಹರ್ಷೋದ್ಗಾರದ ನಡುವೆ ಪುಷ್ಪಾರ್ಚನೆ ಮೂಲಕ ಹೆಜ್ಜೆ ಹಾಕಿದರು. ಅಪಾರ ಜನಸ್ತೋಮದ ನಡುವೆ ತೆರೆದ ವಾಹನದಲ್ಲಿ ಕೈ ಮುಗಿದು ನನ್ನ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.


ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಆಳುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಹಿರಂಗ ಪ್ರಚಾರದ ಕೊನೆಯ ದಿನ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ಶಕ್ತಿಪ್ರದರ್ಶಿಸುವ ಮೂಲಕ ಮೈತ್ರಿ ಅಭ್ಯರ್ಥಿ ಗೆಲುವಿಗೆ ಅಣಿಯಾಗಿದ್ದಾರೆ.

Continue Reading

Mandya

ಕಾಂಗ್ರೆಸ್ ಪಕ್ಷದಿಂದ ಬೈಕ್ ರ್‍ಯಾಲಿ

Published

on

ಮಂಡ್ಯ : ಮಂಡ್ಯ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಎರು ಮಂಡ್ಯದಲ್ಲಿ ಬೈಕ್ ರ್‍ಯಾಲಿ ಮೂಲಕ ಮತಯಾಚಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ ಜೊತೆಗೂಡಿ ಕೊನೆಯ ದಿನದ ಪ್ರಚಾರ ಮಾಡಿದರು.

ನಗರದ ಕಾರಿಮನೆ ಗೇಟ್ ನಿಂದ ಬೈಕ್ ರ್‍ಯಾಲಿ ಮೂಲಕ ಪ್ರಚಾರ ಆರಂಭಿಸಿದ ಕಾಂಗ್ರೆಸ್ ನಾಯಕರು, ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಜಯ ಚಾಮರಾಜೇಂದ್ರ ಒಡೆಯರ್ ವೃತ್ತ, ಆರ್ ಪಿ ರಸ್ತೆ, ಅಂಬೇಡ್ಕರ್ ರಸ್ತೆ ಯಲ್ಲಿ ಮತಯಾಚಿಸಿ ಹೊಸಹಳ್ಳಿಯಲ್ಲಿ ಪ್ರಚಾರ ಮಾಡಿದರು.

ಕಾಂಗ್ರೆಸ್ ಪಕ್ಷ ಜನರ ಪರವಾದ ಪಕ್ಷವಾಗಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಜನತೆಗೆ ಸವಲತ್ತು ದೊರಕಿಸಿಕೊಟ್ಟಿದೆ, ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Continue Reading

Mandya

ಕುಮಾರಸ್ವಾಮಿ ಪರ ಮತ ಪ್ರಚಾರ

Published

on

ಭಾರತೀನಗರ :ಕೆ.ಎಂ.ದೊಡ್ಡಿಯಲ್ಲಿನ 1 ಮತ್ತು 2ನೇ ಬ್ಲಾಕ್ನಲ್ಲಿ ಜಾ.ದಳ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಎನ್.ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಪ್ರತೀ ಮನೆಯಲ್ಲಿ ಮತದಾರರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳ ಹಾಗೂ ಅಭಿವೃದಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ರೈತರ ಉದ್ಧಾರಕ್ಕೋಸ್ಕರ ಸಾಲ ಮನ್ನಾ ಮಾಡಿದ್ದರು. ಹಾಗಾಗಿ ಕುಮಾರಸ್ವಾಮಿ ಅವರ ತೆನೆ ಹೊತ್ತ ಮಹಿಳೆ ಗುರುತಿಗೆ ಮತ ನೀಡುವ ಮೂಲಕ ಅತ್ಯಧಿಕ ಮತಗಳಿಂದ ಜಯಗಳಿಸುವಂತೆ ಮಾಡಬೇಕೆಂದು ಮನವಿ ಮಾಡಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ಜನತೆಯ ಹಿತಕಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ರೈತರ ಶ್ರೇಯೋಬಿವೃದ್ಧಿ ಹಿನ್ನೆಯಲ್ಲಿಯೂ ಕೂಡ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಮತದಾರರಿಗೆ ತಿಳಿಸಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಪ್ರದಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರಾದ ವೆಂಕಟೇಶ್, ಮುಖಂಡರಾದ ಮೊಬೈ ವೆಂಕಟೇಶ್, ಕುಮಾರ್ , ರವಿ, ವಿಶ್ವ ಶ್ರೀನಿವಾಸ್, ಪುನೀತ್, ವಿಕಾಸ್ (ಬೋರ), ಪ್ರಶಾಂತ್, ಲಕ್ಷ್ಮಮ್ಮ, ರಂಗಮ್ಮ ಮುಂತಾದವರುಗಳು ಭಾಗವಹಿಸಿದ್ದರು

Continue Reading

Trending

error: Content is protected !!