Connect with us

Hassan

ಅಂಬಿಗರ ಚೌಡಯ್ಯರ ಆದರ್ಶ, ಮೌಲ್ಯವು ಎಲ್ಲಾ ಸಮಾಜಕ್ಕೂ ಅನ್ವಯ ಈ. ಕೃಷ್ಣೇಗೌಡ

Published

on

ಹಾಸನ : ೧೨ನೇ ಶತಮಾನದಲ್ಲಿ ಬಂದ ಅಂಬಿಗರ ಚೌಡಯ್ಯ ಅವರ ಆದರ್ಶ ಹಾಗೂ ಮೌಲ್ಯಗಳನ್ನು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ವಯವಲ್ಲ ಇಡೀ ಎಲ್ಲಾ ಸಮಾಜಕ್ಕೂ ಅನ್ವಯಿಸುತ್ತದೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಶಿವ ಶರಣರಲ್ಲಿ ನಿಜವಾದ ಶರಣ ಅರ್ಥ ಹೇಳಿದರೆ ಅದು ಅಂಬಿಗರ ಚೌಡಯ್ಯ. ಅವರ ಆದರ್ಶಗಳು ಮೌಲ್ಯಗಳು ಗುಣಗಳನ್ನು ಗಂಗಾಮತ ಬೆಸ್ತರು ಈ ಸಮಾಜಕ್ಕೆ ಮಾತ್ರವಲ್ಲದೆ ಅಂಬಿಗರು ಎಲ್ಲಾ ಸಮುದಾಯಗಳಿಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮಾತ್ರ ಈ ಸಮಾಜ ಉದ್ದಾರವಾಗುತ್ತದೆ. ನಮ್ಮ ಮಕ್ಕಳಿಗೆ ನಮ್ಮ ಕಸುಬುಗಳನ್ನು ಮನೆಯಲ್ಲಿ ಪರಿಸರದಲ್ಲಿ ಒಳ್ಳೆಯ ಉತ್ತಮವಾದ ಶಿಕ್ಷಣ ಕೊಡುವುದರ ಜೊತೆಗೆ ತಮ್ಮ ಕಸುಬುಗಳನ್ನು ಕಲಿಸಬೇಕು ಎಂದರು.

ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಧ್ಯಾಪಕ ಯೋಗೇಶ್ ಅಗ್ರಹಾರ ಅವರು ಉಪನ್ಯಾಸದಲ್ಲಿ ಮಾತನಾಡಿ ೯೦೪ನೇ ಜಯಂತಿಯನ್ನು ಜನಾಂಗದ ಕುಲಗುರು ಆಚರಿಸುತ್ತಿದ್ದು. ಆರ್ಥಿಕವಾಗಿ, ರಾಜಕೀಯವಾಗಿ ನಮ್ಮ ಜನಾಂಗ ಇನ್ನು ಸಬಲವಾಗಿರುವುದಿಲ್ಲ. ಎರಡು ಪ್ರಮುಖ ಘಟನೆಗಳು ಇವೆ ವಚನಕ್ರಾಂತಿ, ಕಲ್ಯಾಣಕ್ರಾಂತಿ, ಇದಾವೆ. ೨೬೯ ವಚನಗಳನ್ನು ಅಂಬಿಗರ ಚೌಡಯ್ಯ ಅವರು ಬರೆದಿದ್ದಾರೆ. ಅಂಬಿಗರ ಚೌಡಯ್ಯ ನಮ್ಮ ಕುಲ ಗುರು, ಮೂಲಪುರುಷ, ೧೨ ವರ್ಷಗಳ ಹಿಂದೆಯೇ ನಮ್ಮ ಜನಾಂಗವನ್ನು ತಿದ್ದುವ ಕೆಲಸ ಮಾಡಿದರು, ಅನೇಕ ವಚನಗಳನ್ನು ರಚನೆ ಮಾಡಿದರು ಎಂದರು. ವಸ್ತು ಸ್ಥಿತಿಯನ್ನು ಜನರ ಮುಂದೆ ಇಟ್ಟರು. ಬೇರೆ ದೇಶದವರು ಇವರ ವಚನವನ್ನು ಓದುತ್ತಿದ್ದಾರೆ. ನಾವು ಕರ್ನಾಟಕದಲ್ಲಿ ೪೦ ಲಕ್ಷ ಜನಸಂಖ್ಯೆ ಇದ್ದರೂ ಸಂಘಟನೆಯ ಕೊರತೆ ಕಾಣುತ್ತಿದ್ದೇವೆ. ಅವರು ಎಂದು ಜಾತಿ ಬೇದ ಮಾಡಲಿಲ್ಲ. ಇದ್ದ ಜಾತಿ ಬೇದವನ್ನು ಹೋಗಲಾಡಿಸಲು ಮುಂದಾದರು. ಜಾತಿ ಬೇದ ಬಗ್ಗೆ ಕಟುವಾಗಿ ಟೀಕಿಸಿ ವಚನ ಬರೆದಿದ್ದರೇ. ಯಾರು ಕೀಳು, ಮೇಲಲ್ಲ. ಅವರ ಕಾಯಕದಲ್ಲಿ, ನಾವು ಮಾಡುವ ಉತ್ತಮ ಕೆಲಸದಿಂದ ದೊಡ್ಡವರು ಆಗಬೇಕು ಎಂದು ಅಂದು ವಚನ ಕ್ರಾಂತಿ ಮಾಡಿದರು ಎಂದು ಹೇಳಿದರು. ಶಿಕ್ಷಣದಿಂದ ಮಾತ್ರ ಜನಾಂಗವನ್ನು ಮುಂದೆ ತರಬಹುದು, ಅಂಬಿಗರ ಚೌಡಯ್ಯ ಪ್ರಾದೀಕಾರ, ಪೀಠ ಪ್ರಾರಂಭಿಸಿ ಸರಕಾರ ಗಮನ ನೀಡಿದೆ. ಮೊದಲು ನಮ್ಮಲ್ಲಿ ಕೀಳಿರಿಮೆ ಬಿಟ್ಟು ಎದ್ದೇಳಿ ಸಮಾಜದ ಉದ್ಧಾರಕ್ಕೆ ಎಂದು ಕರೆಕೊಡಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿರೆಸ್ತೆದಾರರಾದ ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಡಾ. ತಾರಾನಾಥ್, ರಾಜ್ಯ ಗಂಗಮತಸ್ಥರ ಸಂಘದ ಉಪಾಧ್ಯಕ್ಷ ಹೆಚ್.ಬಿ. ಗೋಪಾಲ್, ಜಿಲ್ಲಾ ಬೆಸ್ತರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಆರ್. ನಾಗರಾಜು, ಗಂಗಾ ಪರಮೇಶ್ವರಿ ಗಂಗಾ ಮಾಸ್ತರವರ ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಇತರರು ಉಪಸ್ಥಿತರಿದ್ದರು. ಸಮಾಜ ಸೇವಕ ಯದೀಶ್ ಅವರು ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಲ್ಲ: ಸಂಸದ ಶ್ರೇಯಸ್‌ ಪಟೇಲ್‌

Published

on

ಹಾಸನ : ನಮ್ಮದು ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಪಕ್ಷ ಹಾಗಾಗಿ ಇದರ ಬಗ್ಗೆ ಜವಾಬ್ದಾರಿಯುತ ತೀರ್ಮಾನವನ್ನು ಸರ್ಕಾರದ ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ. ಎಲ್ಲಾ ಸಮಾಜವನ್ನು ಸಮವಾಗಿ ನೋಡಿ ಜಾತಿಗಣತಿಯಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜಾತಿಗಣತಿ ವರದಿ ಗೊಂದಲ ವಿಚಾರ ಹಾಸನದಲ್ಲಿ ಸಂಸದ ಶ್ರೇಯಸ್‌ಪಟೇಲ್ ಹೇಳಿಕೆ ನೀಡಿದರು.

ಮೊನ್ನೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುಬೇಕೆಂದು ಒತ್ತಾಯಿಸಿದ್ದಾರೆ‌. ಸಚಿವರ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಯಾವುದೇ ಸಮಾಜಕ್ಕೆ ಅನ್ಯಾಯವಾಗುವ ಕೆಲಸವನ್ನು ನಮ್ಮ‌ ಪಕ್ಷ ಮಾಡಲ್ಲ. ಯಾವ ಸಮಾಜವನ್ನು ಒಡೆದಾಡಿಸುವ ಕೆಲಸವನ್ನು ನಮ್ಮ ಸಮಾಜ ಮಾಡಿಲ್ಲ, ಮಾಡುವುದಿಲ್ಲ. ಜನಸ್ನೇಹಿಯಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. 2015 ರಲ್ಲಿ ಜಾತಿಗಣತಿ ನಡೆದಿತ್ತು, ಎಲ್ಲರ ಬೇಡಿಕೆ ಇತ್ತು ಜಾತಿಗಣತಿಗಾಗಿ ಕೋಟ್ಯಾಂತರ ರೂ ವೆಚ್ಚ ಮಾಡಿದ್ದಾರೆ. ಈಗೀನ ವರದಿಯ ನೈಜತೆಯನ್ನು, ಸತ್ಯಾಸತ್ಯತೆಯನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ವರದಿಯನ್ನು ಇನ್ನೂ ಮಂಡಿಸಿಲ್ಲ, ವರದಿ ಹೊರಗೆ ಬಂದ ಮೇಲೆ ಗೊತ್ತಾಗುತ್ತೆ. ಇನ್ನೂ ಯಾರಿಗೂ ವರದಿಯಲ್ಲಿದೆ ಎಂದು ಗೊತ್ತಿಲ್ಲ.

ಬಿಜೆಪಿ ಸರ್ಕಾರ ಕೆಡವಲು ಯತ್ನಿಸುತ್ತಿದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಯಾವಾಗಲೂ ಆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದೇ ವಿರೋಧ ಪಕ್ಷಗಳ ಗುರಿ ಎಲ್ಲರಿಗೂ ಅಧಿಕಾರದ ಆಸೆ ಇರುತ್ತೆ ನಮಗೂ ಆಸೆ ಇದೆ, ಆದರೆ ಸಿದ್ಧಾಂತ ಇದೆ, ಜನಸೇವೆ ಮಾಡಲು ನಾವು ಬಂದಿದ್ದೇವೆ. ಅಧಿಕಾರದ ದುರಾಸೆಗೋಸ್ಕರ ಈ ಕೆಲಸ ಮಾಡಬಹುದು.ನಾವು ಎಚ್ಚರಿಕೆಯಿಂದ ಇರಬೇಕು. ನಮ್ಮಲ್ಲಿ ಒಗ್ಗಟ್ಟಿದೆ, ಒಗ್ಗಟ್ಟು ಎಂದರೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಸಿಇಟಿ ಪರೀಕ್ಷೆಗೆ ಹೋಗುವ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿ, ಅದನ್ನು ನಾನು ಖಂಡಿತವಾಗಿ ವಿರೋಧಿಸುತ್ತೇನೆ, ಆ ತರ ಮಾಡಬಾರದು. ನಾನು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಒಬ್ಬ ಸಾರ್ವಜನಿಕನಾಗಿ ಹೇಳುತ್ತಿದ್ದೇನೆ. ಅವರವರ ಆಚರಣೆಗಳು, ಅವರವರ ವೈಯುಕ್ತಿಕ. ಜನಿವಾರ ತೆಗೆದು ಹೋಗಿ ಎನ್ನುವುದು ಅಪರಾಧ. ನಾನಂತು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.

Continue Reading

Hassan

ಆಟೋ ಹತ್ತಿಸುವ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿ

Published

on

ಹಾಸನ: ಆಟೋ ಹತ್ತಿಸುವ ನೆಪದಲ್ಲಿ ವೃದ್ಧೆಯ ಗಮನ ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರ ಸುಲಿಗೆ ಮಾಡಿಕೊಂಡು ಅಪರಿಚಿತ ಪರಾರಿಯಾಗಿರುವ ಘಟನೆ
ಸಾಲಗಾಮೆ ಹೋಬಳಿ ಸುಂಕದಕೊಪ್ಪಲು ಗ್ರಾಮದ ಲಕ್ಷ್ಮಮ್ಮ ಎಂಬುವರು ಸಾಲಗಾಮೆ ಗೇಟ್‌ನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಏ.೧೮ ರಂದು ಊರಿನಿಂದ ಬಸ್ಸಿನಲ್ಲಿ ಹಾಸನಕ್ಕೆ ಹೋಗಿದ್ದರು.

ಅಲ್ಲಿಂದ ಹೂವಿನಹಳ್ಳಿ ಕಾವಲು ಹೊಸೂರಿಗೆ ಬಸ್ಸಿನಲ್ಲಿ ಬಂದು ಇಳಿದು ಸರ್ಕಾರಿ ಆಸ್ಪತ್ರೆಗೆ ಹೋದರು. ಆದರೆ ಗುಡ್‌ಫ್ರೈಡೆ ನಿಮಿತ್ತ ರಜೆ ಇದ್ದುದರಿಂದ ವಾಪಸ್ ಊರಿಗೆ ಹೋಗಲೆಂದು ಮಧ್ಯಾಹ್ನ ೧ ಗಂಟೆ ಸಮಯದಲ್ಲಿ ಆಸ್ಪತ್ರೆ ಮುಂದೆ ರಸ್ತೆಯ ಬದಿಯಲ್ಲಿ ನಿಂತಿದ್ದರು.

 

ಅಲ್ಲಿಗೆ ಬಂದ ಸುಮಾರು ೩೦-೩೫ ವರ್ಷ ವಯಸ್ಸಿನ ವ್ಯಕ್ತಿ, ಅಜ್ಜಿ ನಿಂತಿದ್ದಲ್ಲಿಗೆ ಬಂದು ಯಾವೂರವ್ವ ಎಂದು ಕೇಳಿ, ನನ್ನ ಬೈಕಿಗೆ ಬನ್ನಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾನೆ.

ಮಗಳ ಊರಾದ ಅರೇಕಲ್ ಹೊಸಳ್ಳಿ ಗ್ರಾಮದ ಮನೆಗೆ ಹೋಗುತ್ತೇನೆಂದು ಹೇಳಿದಾಗ ಆಟೋದಲ್ಲಿ ಹೋಗಿ ಎಂದು ಅಜ್ಜಿಯ ಕೈ ಹಿಡಿದು ರಸ್ತೆ ದಾಟಿಸಿದ ಆಸಾಮಿ, ರಸ್ತೆಯಲ್ಲಿ ಹೋಗುತ್ತಿದ್ದ ಆಟೋವನ್ನು ಅಡ್ಡಹಾಕಿ ನಿಲ್ಲಿಸಿ, ಅಜ್ಜಿ ಆಟೋದ ಒಳಕ್ಕೆ ಕಾಲಿಟ್ಟು ಹತ್ತುವಾಗ ಅವರ ಕೊರಳಿನಲ್ಲಿದ್ದ ಸುಮಾರು ೪೦ ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಮಾಂಗಲ್ಯ ಸರದ ಅಂದಾಜು ಬೆಲೆ ೩ ಲಕ್ಷ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Hassan

ಎಸ್‌ಡಿಎಂ ಜನಮಂಗಳ ಯೋಜನೆಯಡಿ ಉಚಿತ ಕಮೋಡಾ ವೀಲ್ ಚೇರ್ ವಿತರಣೆ

Published

on

ವರದಿ: ಸತೀಶ್ ಚಿಕ್ಕಕಣಗಾಲು

ಆಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗೆ ಉಚಿತವಾಗಿ ಕಮೋಡಾ ವೀಲ್ ಚೇರ್ ವಿತರಣೆ ಮಾಡಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲೂರು ತಾಲೂಕಿನ ಯೋಜನಾಧಿಕಾರಿ ರತ್ನಾಕರ್ ಕೊಠಾರಿ ಮಾತನಾಡಿ, ತಾಲೂಕಿನಲ್ಲಿ ಇದುವರೆಗೂ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಅಂಗವಿಕಲರಿಗೆ ಅವಶ್ಯಕತೆ ಸಲಕರಣೆಗಳಾದ ವೀಲ್ ಚೇರ್, ಸೇಫ್ ವಾಕ‌ರ್, ವಾಟರ್ ಬೆಡ್, ವಾಕಿಂಗ್ ಸ್ಟಿಕ್ ಸೇರಿದಂತೆ ಒಟ್ಟು ಉಪಕರಣಗಳನ್ನು ನೀಡಲಾಗಿದೆ. ಅಲ್ಲದೆ 105 ಮಂದಿ ಸದಸ್ಯರಿಗೆ ಪ್ರತಿ ತಿಂಗಳು ತಲಾ ಒಂದೊಂದು ಸಾವಿರ ಮಾಸಾಸನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಾಳ್ಯ ಹೋಬಳಿಯ ಮೇಲ್ವಿಚಾರಕಿ ಯಶೋಧ ಮಾತನಾಡಿ, ತಾಲೂಕಿನ ಪಾಳ್ಯ ಹೋಬಳಿ ನಲ್ಲೂರು ಗ್ರಾಮದ ನಿವಾಸಿಯಾದ ಬೈರಯ್ಯರ ಎಂಬುವವರು ಅನಾರೋಗ್ಯಕ್ಕೆ ತುತ್ತಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೇರ್ ಉಚಿತವಾಗಿ ನೀಡಲಾಯಿತು‌ ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಸದಸ್ಯ ಮಲ್ಲಿಕಾರ್ಜುನ್, ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ಗೀತಾ ಸೇರಿದಂತೆ ಫಲಾನುಭವಿಯ ಮನೆಯ ಸದಸ್ಯರು ಉಪಸ್ಥಿತರಿದ್ದರು.

Continue Reading

Trending

error: Content is protected !!