Hassan
ಆಲೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಪರಿಗಣಿಸಿ – ತಾ.ಪಂ ಮಾಜಿ ಸದಸ್ಯ ನಟರಾಜ್ ನಾಕಲಗೂಡು

ಆಲೂರು : ರಾಜ್ಯ ಸರ್ಕಾರ ಆಲೂರು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ ಕೈ ಬಿಟ್ಟಿರುವುದು ಸರಿಯಲ್ಲ. ಕೂಡಲೇ ತಾಲೂಕುನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಆಲೂರು ತಾಲೂಕು ಅರೆಮಲೆನಾಡು ಪ್ರದೇಶವಾಗಿದ್ದು, ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ, ಆಲೂಗಡ್ಡೆ , ರಾಗಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಶೇ 90 ರಷ್ಟು ಒಣಗಿಹೋಗಿವೆ ಎಂದು ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಈ ಬಾರಿ ಮಳೆ ಬೆಳೆಯಿಲ್ಲದೆ ರೈತರು ಕಂಗಲಾಗಿದ್ದಾರೆ. ಸರ್ಕಾರ ನಮ್ಮ ತಾಲ್ಲೂಕುನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು,
ಆಲೂರು ತಾಲೂಕಿನ ಮಳೆ ಇಲ್ಲದೆ ರೈತ ಒಂದು ಕಡೆ ಚಿಂತೆ ನಡೆಸಿದರೆ ಮತ್ತೊಂದು ಕಡೆ ರೈತರು ಕಷ್ಟಪಟ್ಟು ಕೆರೆಕಟ್ಟೆ, ಬೋರ್ವೆಲ್ ಬಳಸಿಕೊಂಡು ಬೆಳೆಸಿದ ಬೆಳೆಗಳು ಇಂದು ಕಾಡನೆಗಳ ಪಾಲಾಗುತ್ತಿವೆ. ಅಷ್ಟು ಮಾತ್ರವಲ್ಲ ಆನೆ ಗದ್ದೆ ಸಸಿಗಳನ್ನು ಕೂಡ ಬಿಡುತ್ತಿಲ್ಲ. ಗದ್ದೆ ಬಿಟ್ಟು ತೋಟದ ಕೆಲಸದಲ್ಲಿ ತೊಡಗಿಕೊಳ್ಳೋಣ ಎಂದರೆ ತೋಟವನ್ನು ಕೂಡ ಕಾಡಾನೆ ಬಿಟ್ಟಿಲ್ಲ. ತೋಟದಲ್ಲಿನ ಬೆಳೆಗಳಾದ ತೆಂಗು, ಮಾವು, ಅಡಕೆ ಎಲ್ಲಕ್ಕೂ ಆನೆಗಳು ಕಣ್ಣಿಟ್ಟಿವೆ. ಇಷ್ಟೂ ಸಾಲದೆಂಬಂತೆ ಕಾಫಿ ಬೆಳೆದು ಜೀವನ ಕಂಡುಕೊಳ್ಳುತ್ತಿದ್ದ ಸಣ್ಣ ಬೆಳೆಗಾರ ರೈತರು ಕಂಗಾಲಾಗಿದ್ದಾರೆ.
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಅಣೆಪಟ್ಟಿ ಹೊಂದಿರುವ ಆಲೂರು ತಾಲೂಕನ್ನು ಸರ್ಕಾರ ಕೂಡಲೇ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ರೈತರ ಜಮೀನುಗಳಿಗೆ ತೆರಳಿ ಒಣಗಿದ ಬೆಳೆ ಸಮೀಕ್ಷೆ ನಡೆಸಿ. ಸರ್ಕಾರಕ್ಕೆ ಈ ಬಾಗದ ಬೆಳೆಗಳ ಸ್ಥಿತಿಗತಿಗಳ ಬಗ್ಗೆ ಪ್ರಸ್ತಾನೆ ನೀಡಿ ನೊಂದ ರೈತರ ನೆರವಿಗೆ ಧಾವಿಸಬೇಕು ಇಲ್ಲವಾದರೆ ರೈತರೊಂದಿಗೆ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ, ಸಂಘಟನೆಗಳ ಮುಖಂಡರೆಲ್ಲ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ವರದಿ : ಸತೀಶ್ ಚಿಕ್ಕಕಣಗಾಲು
Hassan
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ

ಹಾಸನ : ಕಾಡಾನೆ ಸೆರೆ, ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ ಭಾರೀ ದುರಂತ
ಕಾಡಾನೆ ದಾಳಿಗೆ ಪಳಗಿದ ಆನೆ ಅರ್ಜುನ ಬಲಿ
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಯಸಳೂರು ಬಾಳೆಕೆರೆ ಫಾರೆಸ್ಟ್ ನಲ್ಲಿ ಘಟನೆ
ಅರ್ಜುನ ಸೇರಿ ನಾಲ್ಕು ಪಳಗಿದ ಆನೆಗಳೊಂದಿಗೆ ಇಂದೂ ಕಾರ್ಯಾ ಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ
ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಅರ್ಜುನನ ಮೇಲೆ ಅಟ್ಯಾಕ್ ಮಾಡಿದ ಒಂಟಿ ಸಲಗ
ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಹಿಮ್ಮೆಟ್ಟಿದ ಉಳಿದ ಮೂರು ಸಾಕಾನೆಗಳು
ಒಂಟಿ ಸಲಗದ ಜೊತೆ ಕಾಳಗಕ್ಕಿಳಿದ ಅರ್ಜುನ
ಮದಗಜಗಳ ಕಾಳಗದಲ್ಲಿ ವೀರ ಮರಣ ಹೊಂದಿದ ಅರ್ಜುನ
ಎರಡು ಸಲಗ ಕಾಳಗಕ್ಕೆ ಇಳಿಯುತ್ತಿದ್ದಂತೆಯೇ ಅರ್ಜುನನ ಮೇಲಿನಿಂದ ಇಳಿದು ಓಡಿದ ಮಾವುತರು
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ
ಅರ್ಜುನ ಆನೆ ಸಾವಿನಿಂದ ಪ್ರಾಣಿಪ್ರಿಯರಿಗೆ ಶಾಕ್
ಹೊಟ್ಟೆ ಭಾಗಕ್ಕೆ ತಿವಿತಕ್ಕೆ ಒಳಗಾಗಿ ಕಣ್ಮುಚ್ಚಿದ ಅರ್ಜುನ
ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಜನಮನಗೆದ್ದಿದ್ದ ಅರ್ಜುನ
ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ
2012 ರಿಂದ 19 ರವರೆಗೆ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಅರ್ಜುನ.
ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಪಾತ್ರನಾಗಿದ್ದ ಕ್ಯಾಪ್ಟನ್
ಅರ್ಜುನನ ಹಠಾತ್ ಸಾವು ಕಂಡು ಮಾವುತರು ಕಣ್ಣೀರು
ನ. 24 ರಿಂದ ಆರಂಭವಾಗಿದ್ದ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಕಾಡಾನೆ ಸೆರೆ, ಸ್ಥಳಾಂತರ ಕಾರ್ಯಾಚರಣೆ
Hassan
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

ಹಾಸನ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ
ಬೈಕ್ ಸವಾರ ಸ್ಥಳದಲ್ಲೇ ಸಾವು
ಮತ್ತಿಘಟ್ಟ ಗ್ರಾಮದ ವೇಣುಗೋಪಾಲ್ (38) ಮೃತ ವ್ಯಕ್ತಿ
ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಳೇಬೀಡು-ಜಾವಗಲ್ ರಸ್ತೆಯಲ್ಲಿ ಘಟನೆ
ಸ್ವಗ್ರಾಮ ಮತ್ತಿಘಟ್ಟಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಣುಗೋಪಾಲ್
ಈ ವೇಳೆ ಡಿಕ್ಕಿ ಹೊಡೆದಿರುವ ಅಪರಿಚಿತ ವಾಹನ
ಅಪಘಾತದ ನಂತರ ವಾಹನ ನಿಲ್ಲಿಸದೆ ಎಸ್ಕೇಪ್ ಆಗಿರುವ ಚಾಲಕ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Hassan
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಯಸಳೂರು ಆರ್‌ಎಫ್‌ಓ ಜಗದೀಶ್ ಅಮಾನತು

ಹಾಸನ : ಯಸಳೂರು ಆರ್‌ಎಫ್‌ಓ ಜಗದೀಶ್ ಅಮಾನತು
ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರಚ ದಿಕ್ಷಿತ್‌ರಿಂದ ಆದೇಶ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಯಸಳೂರು ಆರ್‌ಎಫ್‌ಓ ಜಗದೀಶ್
ಹಾಸನ ಜಿಲ್ಲೆ, ಸಕಲೇಸಪುರ ತಾಲ್ಲೂಕು ಯಸಳೂರು ಆರ್‌ಎಫ್‌ಓ ಜಗದೀಶ್
ಸೀಜ್ ಮಾಡಿದ್ದ ಜೆಸಿಬಿ ಬಿಡುಗಡೆಗಾಗಿ 1.20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಜಗದೀಶ್
ಬಾಚೀಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ-ಚರಂಡಿ ನಿರ್ಮಾಣ ಮಾಡುವ ವೇಳೆ ಸೀಜ್ ಆಗಿದ್ದ ಜೆಸಿಬಿ
ಜೆಸಿಬಿ ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದ ಆರ್‌ಎಫ್ಒ ಜಗದೀಶ್
ಆರ್‌ಎಫ್‌ಓಯಿಂದ ಜೆಸಿಬಿ ದುರ್ಬಳಕೆ ಸಾಬೀತಾದ ಹಿನ್ನಲೆ
ಜಗದೀಶ್ ಅಮಾನತುಗೊಳಿಸಿ ಆದೇಶ
-
Hassan1 month ago
ಮಲಗಿದಲ್ಲಿಯೇ ವ್ಯಕ್ತಿ ಸಾವು
-
Mysore1 month ago
KSRTC BUS – ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತ
-
Crime3 weeks ago
ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
Hassan3 months ago
ಹಾಸನ-ಅರ್ಧ ಗಂಟೆಯಲ್ಲಿ 1 ಲೀಟರ್ ಮದ್ಯ ಕುಡಿಯುವ ಚಾಲೆಂಜ್- ಓರ್ವ ಸಾವು
-
Hassan1 week ago
ಜಿಲ್ಲಾಧಿಕಾರಿ ಕಛೇರಿ ಎಸ್ಡಿಎ ಆತ್ಮಹತ್ಯೆ
-
Hassan3 hours ago
ಕಾಡಾನೆ ದಾಳಿಗೆ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತು ಆನೆ ಅರ್ಜುನ ಬಲಿ
-
Mysore2 months ago
ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ
-
Mysore3 days ago
ಮುಖ್ಯ ಶಿಕ್ಷಕ ಮತ್ತು ಡಿ ದರ್ಜೆ ನೌಕರ, ಶಾಲಾ ಪ್ರವಾಸದ ಸಂದರ್ಭ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ – ಆರೋಪ