Connect with us

Hassan

ಆಲೂರಿನ ಖಾಜಿ ಮೊಹಲ್ಲದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ

Published

on

ಆಲೂರು: ದಶಾವತಾರಗಳಲ್ಲಿ ಶ್ರೀ ರಾಮಚಂದ್ರನ ಅವತಾರ ವಿಶೇಷವಾಗಿದೆ. ಶ್ರೀರಾಮನ ಆದರ್ಶ ಇಂದಿನ ಕಾಲಘಟ್ಟಕ್ಕೂ ಹಾಗೂ ಭೂಮಿ ಇರುವವರೆಗೂ ಪ್ರಸ್ತುತವಾಗಿರುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದರು.

ಅಯೋಧ್ಯೆಯಲ್ಲಿ ಜರುಗಿದ ಶ್ರೀ ಬಾಲರಾಮರ ಪ್ರತಿಷ್ಠಾಪನಾ ಅಂಗವಾಗಿ ಆಲೂರು ಪಟ್ಟಣದ ಖಾಜಿ ಮೊಹಲ್ಲದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಏರ್ಪಡಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು.
ಸುಮಾರು 500 ವರ್ಷಗಳ ಭಾರತೀಯ ಕನಸಾಗಿದ್ದ ಸಾವಿರಾರು ಜನರ ಪ್ರಾಣತ್ಯಾಗವು, ಉಪವಾಸ, ಹೋರಾಟಗಳ ಶ್ರಮದ ಫಲವಾಗಿ ಶ್ರೀ ರಾಮ ಜನ್ಮಭೂಮಿ ಆಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆದಿದ್ದು ಸಂತೋಷದಾಯಕ ವಿಚಾರ ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಇತಿಹಾಸಕಾರರ ಮತ್ತು ಸಾವಿರಾರು ಹೋರಾಟಗಾರರಿಗೆ ಸಾಷ್ಠಾಂಗ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ
ನಿರ್ಮಾಣ ಮಾಡಿರುವ ಕೆಲಸ ಇಡೀ ದೇಶವನ್ನು ಒಗ್ಗೂಡಿಸುವ ಕೆಲಸವಾಗಿದೆ. ಇದರಿಂದ ದೇಶದಲ್ಲಿ ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳಲಿದೆ. ಶ್ರೀರಾಮ ಆದರ್ಶದ ಪ್ರತಿರೂಪ. ಪುತ್ರ, ಸಹೋದರ, ಪತಿಯಾಗಿ ಹೇಗೆ ಬಾಳಬೇಕು ಎಂಬುದನ್ನು ಶ್ರೀರಾಮಚಂದ್ರನನ್ನು ನೋಡಿ ಕಲಿಯಬಹುದು. ಇಂತಹ ಮಹಾನ್ ಪುರುಷನ
ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗ ಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ದೇವೇಂದ್ರ, ಖಜಾಂಚಿ ಹರೀಶ್, ನಿರ್ದೇಶಕರುಗಳಾದ ಲೋಹಿತ್ ಹೇಮಂತ್, ಸುಬ್ರಹ್ಮಣ್ಯ, ಜಗನ್ನಾಥ್, ಯಶ್ವಂತ್, ದರ್ಶನ್, ಸಂದೀಪ್, ಪಾಣಿ, ಮುಕ್ತೇಶ್ ಕುಮಾರ್ ವೆಂಕಟೇಶ್, ತಾಂಡವೇಶ್ವರ್ ಮುಂತಾದವರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ

Published

on

ವರದಿ: ಸತೀಶ್ ಚಿಕ್ಕಕಣಗಾಲು

ಆಲೂರು: ತಾಲ್ಲೂಕಿನ ದೊಡ್ಡಕಣಗಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಎಲ್ಲಾ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕುಮಾರ್‌ ಅವರು ಅವಿರೋಧ ಆಯ್ಕೆ ಘೋಷಿಸಿದರು.

ಸಾಮಾನ್ಯ ಕ್ಷೇತ್ರದಿಂದ ಕೆ.ಕೆ. ಜಯರಾಮ, ಹೆಚ್‌.ಎಂ. ನಾರಾಯಣ, ಕೆ.ಟಿ. ಬೋರೇಗೌಡ, ಸುಬ್ಬೇಗೌಡ, ವೆಂಕಟೇಗೌಡ, ಮಹಿಳಾ ಕ್ಷೇತ್ರದಿಂದ ಶಕುಂತಲ, ಪ್ರತಿಮ, ನಂಜಶೆಟ್ಟಿ (ಹಿಂದುಳಿದ ವರ್ಗ ಎ), ಕೆ. ಜಗದೀಶ್‌ (ಹಿಂದುಳಿದ ವರ್ಗ ಬಿ), ರಂಗಸ್ವಾಮಿ (ಪ.ಜಾ.) ಹಾಗು ಪರಿಶಿಷ್ಟ ಪಂಗಡದ ಒಂದು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸದ ಹಿನ್ನಲೆಯಲ್ಲಿ ಸ್ಥಾನ ಖಾಲಿಯಿದೆ. ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಸಿ. ಸಂತೋಷ್‌ ಅವರು ಆಯ್ಕೆಯಾದರು. 2030ರ ಫೆ. 9ರ ವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ.

ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾರ್‌, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್‌, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕುಮಾರಸ್ವಾಮಿ, ನಂಜೇಶ್‌ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.

Continue Reading

Hassan

ಫೆ.11 ರಿಂದ 13 ವರೆಗೆ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ

Published

on

ಬೇಲೂರು: ಬೇಲೂರಿನ ಚನ್ನಾಪುರ ರಸ್ತೆಯಲ್ಲಿರುವ ಕೋವಿಪೇಟೆಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 18ನೇ ವರ್ಷದ ಜಾತ್ರಾ ಮಹೋತ್ಸವ ಫೆ. 11 ರಿಂದ ಫೆ.13ರ ವರೆಗೂ ನಡೆಯಲಿದೆ, ಪ್ರತಿಯೊಬ್ಬ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇಗುಲದ ಪ್ರಧಾನ ಅರ್ಚಕ ರವಿಸ್ವಾಮಿ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಫೆ.11 ಮಂಗಳವಾರ ಸಂಜೆ 6.00 ಗಂಟೆಗೆ ಗಂಗಪೂಜೆ ಮತ್ತು ಕಳಸ ಸ್ಥಾಪನೆ, ಪಂಚಾಮೃತ, ಅಭಿಷೇಕ, ಗಣ ಹೋಮ, ನವಗ್ರಹ ಹೋಮ ಚಂಡಿ ಹೋಮ, ದುರ್ಗಾ ಹೋಮ, ಜಯಾವಿ ಹೋಮಗಳು ನಡೆಯುತ್ತದೆ.

ಫೆ.12 ರ ಬುಧವಾರ ಬೆಳಗ್ಗೆ 8.00 ಗಂಟೆಗೆ 12.30 ವರೆಗೂ ಬೇಲೂರಿನ ವಿಷ್ಣು ಸಮುದ್ರದಲ್ಲಿ (ಅಷ್ಟಮ್ಮನಕೆರೆ) “ಗಂಗಾ ಪೂಜೆ’ ನಂತರ ನಗರದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ನಂದಿ ಧ್ವಜ ಮತ್ತು ಚೌಡಿಕೆ ಪದಗಳೊಂದಿಗೆ ಹಲವು ವಾದ್ಯ ಗೋಷ್ಠಿಯೊಂದಿಗೆ 101 ಕುಂಭಾಷೇಕಗಳೊಂದಿಗೆ ಪ್ರಷಾಲಂಕಾರಗೊಂಡ ಶ್ರೀ ರೇಣುಕಾ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಮತ್ತು ಬೆಳಗ್ಗೆ 11.30 ಕ್ಕೆ “ಶ್ರೀ ರೇಣುಕಾ ಯಲ್ಲಮ್ಮನವರ ಕೆಂಡೋತ್ಸವ” ನಡೆಯುತ್ತದೆ. ನಂತರ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ಇರುತ್ತದೆ. “ಮದ್ಯಾಹ್ನ 1-00 ಗಂಟೆಗೆ ಅನ್ನ ಸಂತರ್ಪಣೆ” ನಡೆಯುತ್ತದೆ.

ಫೆ.13 ರ ಬೆಳಿಗ್ಗೆ 8.00 ರಿಂದ ಶ್ರೀ ಹುಚ್ಚಂಗಿ ಅಮ್ಮನವರ ಜಾತ್ರಾ ಮಹೋತ್ಸವ ಉತ್ಸವ” ಬೆಳಗ್ಗೆ 10.30 ರಿಂದ ಸಂಜೆ 6.00 ರವರೆಗೆ ದೇವಿಗೆ ಹರಕೆ ಸೇವೆ ಇರುತ್ತದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ತನು, ಮನ, ಧನ ಸಹಾಯದೊಂದಿಗೆ ಸಹಕರಿಸಿ ಶ್ರೀ ದೇವಿಯವರ ಕೃಪೆಗೆ ಪಾತ್ರರಾಗಬೇಕಾಗಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Continue Reading

Hassan

ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ ಕಂಪನಿಗೆ ಒಂದು ಲಕ್ಷ ರೂ. ದಂಡ

Published

on

ಚಾಮರಾಜನಗರ, ಫೆ.06:- ಕಳಪೆ ಗುಣಮಟ್ಟದ ಉಪ್ಪು ತಯಾರಿಸಿದ್ದ ತಮಿಳುನಾಡಿನ ಕಂಪನಿಯೊಂದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ನ್ಯಾಯನಿರ್ಣಾಯಕ ಅಧಿಕಾರಿ ಗೀತ ಹುಡೇದ ಅವರು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಹನೂರು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಸ್ಟೋರ್ ಗೆ ಕಳೆದ 2024ರ ಜುಲೈ 29ರಂದು ಕೊಳ್ಳೇಗಾಲ ತಾಲ್ಲೂಕಿನ ಆಹಾರ ಸುರಕ್ಷತಾಧಿಕಾರಿ ಶ್ರೀನಿವಾಸ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅಂಗಡಿಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ವಿ.ಕೆ.ಎಸ್.ಟ್ರೂ ಸಾಲ್ಟ್ (VKS TRUE SALT) ಎಂಬ ಹೆಸರಿನ ಉಪ್ಪಿನ ಆಹಾರ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಸದರಿ ಉಪ್ಪಿನ ಮಾದರಿಯು ವಿಶ್ಲೇಷಣಾ ವರದಿಯಿಂದ ಕಳಪೆ ಗುಣಮಟ್ಟ (ಸಬ್ ಸ್ಟ್ಯಾಂಡರ್ಡ್) ಎಂದು ದೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಮೊಕದ್ದಮೆ ಹೂಡಲಾಗಿತ್ತು.

ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯನಿರ್ಣಾಯಕ ಅಧಿಕಾರಿಗಳಾದ ಗೀತಾ ಹುಡೇದ ಅವರು ಪ್ರಕರಣದ ವಿಚಾರಣೆ ನಡೆಸಿ ತಯಾರಕರಾದ ತಮಿಳುನಾಡಿನ ತೂತುಕುಡಿಯ ವಿ.ಕೆ.ಎಸ್. ಪುಡ್ ಪ್ರಾಡಕ್ಟ್ಸ್ ಕಂಪನಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮ ನಿಬಂಧನೆ 2011ರ ರಿತ್ಯಾ ಸೆಕ್ಷನ್ 51 ರಡಿಯಲ್ಲಿ ಒಂದು ಲಕ್ಷ ರೂ. ದಂಡ ವಿಧಿಸಿ ಫೆಬ್ರವರಿ 3 ರಂದು ಆದೇಶಿಸಿದ್ದಾರೆ.

Continue Reading

Trending

error: Content is protected !!