Connect with us

Cultural

ಗೌರಿ ಹಬ್ಬದ ಪ್ರಯುಕ್ತ ಕಾರ್ಜುವಳ್ಳಿ ಹಿರೇಮಠದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ನೀಡಲಾಗುವುದು

Published

on

ಆಲೂರು: ತಾಲೂಕಿನ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಸೆ.17 ರ ಭಾನುವಾರ ರಂದು ಸ್ವರ್ಣಗೌರಿ ಹಬ್ಬದ ಪರವಾಗಿ ಸ್ವರ್ಣ ಗೌರಿ ವ್ರತವನ್ನು ಆಚರಣೆ ಮಾಡಲಾಗುತ್ತದೆ ಹಾಗೂ ಹೆಣ್ಣುಮಕ್ಕಳಿಗೆ ಮಡಿಲು ತುಂಬಲಾಗುತ್ತದೆ (ಬಾಗಿನ ನೀಡಲಾಗುತ್ತದೆ). ಎಲ್ಲಾ ಹೆಣ್ಣು ಮಕ್ಕಳು. ಶ್ರೀ ಮಠಕ್ಕೆ ಆಗಮಿಸಿ ಶ್ರೀ ಮಠವು ನೀಡುವ ಭಾಗಿನವನ್ನು ಸ್ವೀಕರಿಸಬೇಕೆಂದು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ. ಶ್ರೀಗಳು. ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಭಾದ್ರಪದ ಮಾಸದ ಶುದ್ಧ ತದಿಗೆಯಂದು ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಮಠದ ಆವರಣದಲ್ಲಿ ಸೆ.17 ರ ಬೆಳಿಗ್ಗೆ 9: 30 ರಿಂದ ಶ್ರೀ ಸ್ವರ್ಣಗೌರಿ ಪೂಜೆ ಸಲ್ಲಿಸಲಾಗುವುದು ನಂತರ
10:00 ಗಂಟೆಗೆ ಮಹಾಮಂಗಳಾರತಿ ನಡೆದು,10:30 ರಿಂದ ಮಡಿಲು ತುಂಬುವ ಬಾಗಿನ ನೀಡಲಾಗುವುದು ಎಲ್ಲಾ ಹೆಣ್ಣು ಮಕ್ಕಳು. ಶ್ರೀ ಮಠಕ್ಕೆ ಆಗಮಿಸಿ ಶ್ರೀ ಮಠವು ನೀಡುವ ಭಾಗಿನವನ್ನು ಸ್ವೀಕರಿಸಬೇಕೆಂದು ತಿಳಿಸಿದ್ದಾರೆ.

  • ವರದಿ ಸತೀಶ್ ಚಿಕ್ಕಕಣಗಾಲು
Continue Reading
Click to comment

Leave a Reply

Your email address will not be published. Required fields are marked *

Cultural

ರಾಮಮಂದಿರ ಉದ್ಘಾಟನೆಗೆ ಸೀತಾಮಾತೆಯ ತವರಾದ ನೇಪಾಳದಿಂದ ಉಡುಗೊರೆಗಳ ಸುರಿಮಳೆ!

Published

on

ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಆಗಲಿದೆ. ಭರಿದಿಂದ ಸಿದ್ಧತೆ ಕೂಡ ನಡೆಯುತ್ತಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆ ವಿಶೇಷ ಉಡುಗೊರೆ ನೀಡಿ ವಿಶ್‌ ಮಾಡಲು ನೆರೆ ರಾಷ್ಟ್ರ ನೇಪಾಳ ಸಿದ್ಧತೆ ಮಾಡಿಕೊಂಡಿದೆ ಎಂದು ಎಲ್ಲೆಲ್ಲೂ ವಿಷಯ ಹರಿದಾಡುತ್ತಿದೆ.

ಹೌದು, ನೇಪಾಳದಿಂದ ಅಯೋಧ್ಯೆಗೆ ವಿವಿಧ ರೀತಿಯ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳನ್ನು ಒಳಗೊಂಡ ವಿಶೇಷ ಸ್ಮಾರಕಗಳನ್ನು ಕಳುಹಿಸಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ರಾಷ್ಟ್ಪೀಯ ಮಾಧ್ಯಮಗಳು ವರದಿ ಮಾಡಿದ್ದು, ಸ್ಮರಣಿಕೆಗಳನ್ನು ವಿತರಿಸಲು ಜನಕಪುರಧಾಮ-ಅಯೋಧ್ಯಧಾಮ ಪ್ರಯಾಣವನ್ನು ಕೈಗೊಳ್ಳಲಾಗುವುದು ಎಂದು ಮೈ ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ.

ಜನವರಿ 18 ರಂದು ಪ್ರಾರಂಭವಾಗುವ ಪ್ರಯಾಣವು ಜನವರಿ 20 ರಂದು ಅಯೋಧ್ಯೆಯಲ್ಲಿ ಮುಕ್ತಾಯಗೊಳ್ಳಲಿದೆ ಮತ್ತು ಅದೇ ದಿನ ಸ್ಮಾರಕಗಳನ್ನು ಶ್ರೀ ರಾಮ ಜನ್ಮಭೂಮಿ ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಸ್ಥಾನದ ಜಂಟಿ ಮಹಾಂತ ರಾಮರೋಷನ್ ದಾಸ್ ವೈಷ್ಣವ್ ತಿಳಿಸಿದ್ದಾರೆ.

ಜನವರಿ 22 ರಂದು ಪ್ರತಿಷ್ಠಾಪನೆ ಸಮಾರಂಭ ನಡೆಯಲಿದ್ದು, ಜನಕ್‌ಪುರಧಾಮ್‌ನಿಂದ ಜಲೇಶ್ವರ ನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್‌ಗುಂಜ್ ಮೂಲಕ ಬೇಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮಾರ್ಗವಾಗಿ ಉತ್ತರ ಪ್ರದೇಶದ ಅಯೋಧ್ಯೆ ತಲುಪಲಿದೆ.

ಇದಕ್ಕೂ ಮುನ್ನ ನೇಪಾಳದ ಕಾಳಿಗಂಡಕಿ ನದಿ ದಡದಿಂದ ಸಂಗ್ರಹಿಸಿದ ಶಾಲಿಗ್ರಾಮ ಕಲ್ಲುಗಳನ್ನು ಶ್ರೀರಾಮನ ಪ್ರತಿಮೆ ಮಾಡಲು ಅಯೋಧ್ಯೆಗೆ ಕಳುಹಿಸಲಾಗಿದ್ದು, ಉದ್ಘಾಟನಾ ದಿನದಂದು ಅದನ್ನು ದೇವಾಲಯದಲ್ಲಿ ಸ್ಥಾಪಿಸಲಾಗುವುದು ಎಂದು ಪತ್ರಿಕೆ ತಿಳಿಸಿದೆ.

ಇದರ ಜೊತೆಗೆ ಜನವರಿ 22 ರಂದು ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಮಂದಿರಕ್ಕೆ ಹಲವಾರು ಸೆಲೆಬ್ರಿಟೀಸ್​ಗಳಿಗೂ ಇನ್ವಿಟೇಷನ್​ ಬಂದಿದೆ ಅಂತೆ. ಯಶ್​, ರಿಶಭ್​ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಇಲ್ಲಿಗೆ ಭೇಟಿ ನೀಡಲಿದ್ದಾರೆ.

Continue Reading

Cultural

ಶಬರಿಮಲೆ: ದರ್ಶನ ಅವಧಿ 1 ತಾಸು ವಿಸ್ತರಣೆ

Published

on

ಪಟ್ಟನಂತಿಟ್ಟ: ಶ್ರೀ ಕ್ಷೇತ್ರ ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ದರ್ಶನದ ಅವಧಿಯನ್ನು ಒಂದು ತಾಸು ಹೆಚ್ಚಿಸುವ ತೀರ್ಮಾನವನ್ನು ಟ್ರಾವಂಕೂರು ದೇವಸ್ವಂ ಬೋರ್ಡ್‌ ರವಿವಾರ ತೆಗೆದುಕೊಂಡಿದೆ. ಇದುವರೆಗೆ ಅಪರಾಹ್ನ 4ರಿಂದ ರಾತ್ರಿ 11 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ಇತ್ತು, ಇದನ್ನು ಅಪರಾಹ್ನ 3ರಿಂದಲೇ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪಟ್ಟನಂತಿಟ್ಟ ಜಿಲ್ಲಾಡಳಿತ ತಿಳಿಸಿದೆ. ದರ್ಶನಕ್ಕಾಗಿ ಸರತಿಯಲ್ಲಿ ನಿಂತಿರುವ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು ಮತ್ತು ಬಿಸ್ಕತ್ತುಗಳನ್ನು ವಿತರಿಸಲಾಗುತ್ತಿದೆ ಎಂದೂ ಅದು ಹೇಳಿದೆ.

Continue Reading

Cultural

ಕ್ರೀಡೆ ಸ್ಪೂರ್ತಿದಾಯಕ ಕ್ಷೇತ್ರ : ಸಚಿವ ಡಾ.ಹೆಚ್.ಸಿ.ಮಹದೇವಪ್ಪ

Published

on

ಮೈಸೂರು,ಅ.21:- ಪ್ರಪಂಚದಲ್ಲಿ ಕ್ರೀಡೆಯು ಮಹತ್ವದ ಸ್ಥಾನ ಪಡೆದಿದ್ದು, ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಕ್ಷೇತ್ರವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ದಸರಾ ಕ್ರೀಡಾ ಉಪಸಮಿತಿ ವತಿಯಿಂದ ಶನಿವಾರ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಡ ಮತ್ತು ಸಿಎಂ ಕಪ್-2023 ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಿ ಸಚಿವರು ಮಾತನಾಡಿದರು.

ಕ್ರೀಡೆಯು ಮನುಷ್ಯನ ಭಾವನೆಗಳನ್ನು ಕ್ಷಣಾರ್ಧದಲ್ಲಿ ಬದಲಿಸುವ ಶಕ್ತಿ ಹೊಂದಿದೆ. ಬಹುಮುಖ್ಯವಾಗಿ ಕ್ರೀಡೆಗೆ ಕಠಿಣವಾದ ಪರಿಶ್ರಮ ಅಗತ್ಯ. ಅದಕ್ಕೆ ಉತ್ತೇಜನ ಮತ್ತು ಪ್ರೋತ್ಸಾಹ ಹಾಗೂ ಅಗತ್ಯ ಸವಲತ್ತುಗಳನ್ನು ನೀಡಿದಾಗ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ. ಈ ಎಲ್ಲಾ ಸೌಕರ್ಯವನ್ನು ಸರ್ಕಾರ ಒದಗಿಸಿಕೊಡಲಿದೆ ಎಂದು ಭರವಸೆ ನೀಡಿದರು.

ಮೈಸೂರು ದಸರಾ ಮಹೋತ್ಸವಲ್ಲಿ ಪ್ರಮುಖವಾಗಿ ಕಳೆಗಟ್ಟುವ ವೇದಿಕೆ ದಸರಾ ಕ್ರೀಡಾಕೂಟವಾಗಿದೆ. ಈ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಸರ್ಕಾರ ಅಭಿನಂದಿಸುತ್ತದೆ. ಈ ಎಲ್ಲರೂ ಕೂಡ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸೌಹರ್ದತೆ, ಅಖಂಡತೆ ಮತ್ತು ಬಹುತ್ವವನ್ನು ರಕ್ಷಣೆ ಮಾಡುವುದು ನಿಮ್ಮ ಜವಬ್ದಾರಿ ಎಂದು ತಿಳಿಸಿದರು.

ದಸರಾ ಕ್ರೀಡಾಕೂಟದಲ್ಲಿ ಹತ್ತು ಸಾವಿರ ಕ್ರೀಡಾಪಟುಗಳು ಭಾಗವಹಿಸಿ, ಕ್ರೀಡಾಂಗದಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ. ಸೋಲು, ಗೆಲುವಿನ ಲೆಕ್ಕಚಾರ ಹಾಕದೆ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಸಾಧನೆ ಮಾಡಿದಂತಹ ಸಾಧಕರ ಗುರಿ ನಿಮ್ಮದಾಗಬೇಕು. ಸೋಲೇ ಗೆಲುವಿನ ಸೋಪಾನ ಎಂದು ಭಾವಿಸಿ ಮರಳಿ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಭಾರತದ ಭೂಪಟದಲ್ಲಿ ಅಚ್ಚಳಿಯದೆ ಮೈಸೂರು ಸಾಂಸ್ಕೃತಿಕ ನಗರದ ಎಂಬ ಹೆಗ್ಗಳಿಕೆ ಉಳಿಯಬೇಕಾದರೆ ನಾಲ್ವಡಿ ಕೃಷ್ಣರಾಜ ಒಡೆಯರ ಮುತ್ಸದ್ಧಿತನ, ಸೂಕ್ಷ್ಮತೆ, ದೂರದೃಷ್ಟಿ ಮುಖ್ಯಕಾರಣ. ಅವರು ಬೆಂಬಲಿಸದ ಯಾವುದೇ ಕ್ಷೇತ್ರ ಉಳಿದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ, ಶಾಸಕ ತನ್ವೀರ್ ಸೇಠ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ಒಲಂಪಿಕ್ ಸಂಸ್ಥೆಯ ಕಾರ್ಯದರ್ಶಿ ಆನಂತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್.ಶಶಿಕುಮಾರ್, ಉಪಸಮಿತಿ ಅಧ್ಯಕ್ಷ ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Trending

error: Content is protected !!