Hassan
ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕ ಹಲ್ಲೆ – ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ
ಆಲೂರು: ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಖಾಜಿಮೊಹಲ್ಲದಲ್ಲಿ ನಡೆದಿದೆ.
ಖಾಜಿಮೊಹಲ್ಲಾ ನಿವಾಸಿ ಕಾರ್ ಡ್ರೈವರ್ ಮಹೇಶ್ ಹಲ್ಲೆಗೆ ಒಳಗಾಗಿರುವ ವ್ಯಕ್ತಿ ಎಂದು ತಿಳಿದು ಬಂದಿದೆ.
ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿರುವ ಯುವಕ ಕೂಡ ಖಾಜಿಮೊಹಲ್ಲಾ ನಿವಾಸಿ ಸಲೀಲ್ ರವರ ಮಗ ಎಂದು ಹೇಳಲಾಗುತ್ತಿದೆ.
ಘಟನೆಯ ವಿವರ: ಪಟ್ಟಣದ ಖಾಜಿಮೊಹಲ್ಲದಲ್ಲಿ ಮಹೇಶ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿಗೆ ಅಡ್ಡ ಬಂದ ಮುಸ್ಲಿಂ ಯುವಕನನ್ನು ದಾರಿ ಬಿಡು ಎಂದು ಹೇಳಿದ್ದಕ್ಕೆ ಈ ಘಟನೆ ನಡೆದಿದೆ.
ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ನಡೆದಿರುವ ಈ ಹಲ್ಲೆಯನ್ನು ಖಂಡಿಸಿ ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದರು.
Hassan
ಗುರುಪೂರ್ಣಿಮ ಅಂಗವಾಗಿ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ವಿಶೇಷ ಪೂಜೆ
ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಭಾನುವಾರದಂದು ಶ್ರೀ ಗುರುಪೂರ್ಣಿಮ ಅಂಗವಾಗಿ ಬೆಳಗಿನಿಂದಲೂ ದೇವರಿಗೆ ವಿವಿಧ ಪೂಜಾ ಕಾರ್ಯಗಳು ನೆರವೇರಿತು. ಬಂದ ಭಕ್ತಾಧಿಗಳಿಗೆಲ್ಲಾ ಪ್ರಸಾದ ರೂಪದಲ್ಲಿ ಅನ್ನದಾನ ನೇರವೇರಿಸಿದರು. ಮದ್ಯಾಹ್ನ ಭಜನೆ ಹಾಗೂ ಸಂಜೆ ೬:೩೦ ರಿಂದ ೮:೩೦ರ ವರೆಗೂ ಆರ್. ಗುರುರಾಜುಲು ನಾಯ್ಡ ಅವರ ಶಿಷ್ಯೆ ಹರಿಕಥಾ ವಿದುಷಿ ಡಾ|| ಮಾಲಿನಿ ಮೈಸೂರು ಇವರಿಂದ ದತ್ತ ಚರಿತ್ರೆ ಕುರಿತು ಹರಿಕಥೆ ನಡೆಸುಕೊಟ್ಟರು.
ಇದೆ ವೇಳೆ ಶ್ರೀ ಶಿರಡಿ ಸಾಯಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಸಾಯಿ ಪ್ರಸಾದ್ ಮತ್ತು ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ,. ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜುಲೈ ೧೫ ರಿಂದ ೨೧ರ ವರೆಗೂ ಪ್ರತಿ ದಿನ ಬೆಳಿಗ್ಗೆ ೧೦ ರಿಂದ ೧೨ರ ವರೆಗೂ ಶ್ರೀ ಸಾಯಿ ಸಚ್ಚರಿತೆ ಪಾರಾಯಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ
ಗುರುಪೂರ್ಣಿಮವನ್ನು ಏರ್ಪಡು ಮಾಡಲಾಗಿದ್ದು, ವಿಶೇಷ ದಿನದ ಅಂಗವಾಗಿ ಮಂದಿರಕ್ಕೆ ಬೆಳಗಿನಿಂದ ರಾತ್ರಿವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಬಾಬಾ ಅವರ ದರ್ಶನ ಪಡೆದು ಪುನಿತರಾಗಿದ್ದಾರೆ. ಭಾನುವಾರ ಬೆಳಿಗ್ಗೆ ೬:೧೫ಕ್ಕೆ ಆರತಿ ನಂತರ ಅಭಿಷೇಕವಾಗಿ ಮದ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು ಎಂದರು. ಬರುವ ಎಲ್ಲಾ ಭಕ್ತರಿಗೂ ಕೂಡ
ಮಹಾಪ್ರಸಾದ ವಿನಿಯೋಗವಾಗಿದೆ. ಮಂದಿರದೊಳಗೆ ಭಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ :೩೦ ರಿಂದ ೮:೩೦ರ ವರೆಗೂ ಆರ್. ಗುರುರಾಜುಲು ನಾಯ್ಡ ಅವರ ಶಿಷ್ಯೆ ಹರಿಕಥಾ ವಿದುಷಿ ಡಾ|| ಮಾಲಿನಿ ಮೈಸೂರು ಇವರಿಂದ ದತ್ತ ಚರಿತ್ರೆ ಕುರಿತು ಹರಿಕಥೆ ಹಮ್ಮಿಕೊಳ್ಳಲಾಗಿದೆ. ಇನ್ನು ಸೋಮವಾರದಂದು ಜುಲೈ ೨೨ರ ಕೊನೆಯ ದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೧೦ ರಿಂದ ೧೨ ಗಂಟೆಯಲ್ಲಿ ನಗರದ ಪ್ರಮುಖ ರಾಜಬೀದಿಗಳಲ್ಲಿ ಶ್ರೀ ಸಾಯಿಬಾಬಾರವರ ಉತ್ಸವ ಜರುಗಲಿದೆ ಎಂದು ದೇವಾಲಯದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
Hassan
ವಿವಿಧ ಹಗರಣಗಳಿಂದಲೇ ಕಾಂಗ್ರೆಸ್ ಸರಕಾರ ಶೀಘ್ರದಲ್ಲೆ ಪಥನ ಕೇಂದ್ರದ ಮಂತ್ರಿಗಳಿಂದ ಬೀಳಿಸುವ ಅವಶ್ಯಕತೆ ಇಲ್ಲ: ಆರ್. ಅಶೋಕ್
ಹಾಸನ : ರಾಜ್ಯ ಸರಕಾರವನ್ನು ಬೀಳಿಸಲು ಕೇಂದ್ರದಿಂದ ಐದು ಜನ ಮಂತ್ರಿಗಳು ಬಂದಿದ್ದಾರೆ ಎಂದು ಹೇಳಲಾಗುತ್ತಿದು, ಆದರೇ ಎಲ್ಲಾ ಹಗರಣಗಳಿಂದಲೇ ಕಾಂಗ್ರೆಸ್ ಸರಕಾರವು ಬಿದ್ದು ಹೋಗುವಾಗ ಕೇಂದ್ರದ ಸಚಿವರು ಬೀಳಿಸುವ ಅವಶ್ಯಕತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾನುವಾರದಂದು ಮಾಧ್ಯಮದೊಂದಿಗೆ ಮಾತನಾಡಿ, ಸಕಲೇಶಪುರ ಭಾಗದಲ್ಲಿ ಹೆಚ್ಚಾಗಿ ಭೂಕುಸಿತವಾಗಿದ್ದು, ಮನೆ ಬಿದ್ದ ಕಡೆ ಭೇಟಿ ಮಾಡಿದ್ದೀನಿ. ಕಾಫಿ ಕೊಳೆಯುತ್ತಿರುವುದನ್ನು ನೋಡಿದ್ದೀನಿ. ಹಾನಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಭೇಟಿ ಮಾಡಿ ಪರಿಹಾರ ಕೊಟ್ಟಿರಿವುದು ಕಂಡಿಲ್ಲ. ಮುಖ್ಯಮಂತ್ರಗಳಂತೂ ಹೋಗಿಲ್ಲ, ಇವತ್ತು ಹೋಗಿದ್ದಾರೆ. ನಾನು ಕಂದಾಯ ಮಂತ್ರಿಯಾಗಿದ್ದಾಗ ೨೪ ಗಂಟೆಯೊಳಗೆ ಪರಿಹಾರ ಕೊಟ್ಟಿದ್ದೇವೆ. ಮನೆಗೆ ಒಳಗೆ ನೀರು ನುಗ್ಗಿದವರಿಗೆ ಸ್ಥಳದಲ್ಲೆ ಹತ್ತು ಸಾವಿರ ಪರಿಹಾರ ಕೊಟ್ಟಿದ್ದೇವೆ. ನಾಲ್ಕು ವರ್ಷವೂ ಬಾರಿ ಮಳೆಯಾಗಿದ್ದು, ಆದರೆ ಇವರು ಐದು ಸಾವಿರ ಮಾತ್ರ ಕೊಡುತ್ತಿದ್ದಾರೆ. ಎನ್‌ಡಿಆರ್‌ಎಫ್ ಹಣ ಮಾತ್ರ ಕೊಡುತ್ತಿದ್ದಾರೆ. ಹತ್ತು ಸಾವಿರ ರೂ ಕೊಡಲೇಬೇಕು. ಮನೆ ಬಿದ್ದವರಿಗೆ
ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಪ್ರಕಾರ ೯೫ ಸಾವಿರ ಕೊಡುತ್ತಾರೆ. ನಾವು ೯೫ ಸಾವಿರಕ್ಕೆ ಸೇರಿಸಿ ಐದು ಲಕ್ಷ ಕೊಟ್ಟಿದ್ದೇವೆ. ಈ ಸರ್ಕಾರದಲ್ಲಿ ಇದುವರೆಗೂ ಯಾವ ಪರಿಹಾರ ಕೊಟ್ಟಿಲ್ಲ. ಈ ಸರ್ಕಾರ ಐದು ಲಕ್ಷ ರೂ ಪರಿಹಾರ ಕೊಡಬೇಕು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಅಸಮಧಾನವ್ಯಕ್ತಪಡಿಸಿದರು. ಈಗ ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ಹಗರಣ ಪ್ರಸ್ತಾಪ ಮಾಡಿದ್ದೇವೆ. ಈಗ ಏಕಾಏಕಿ ಮಳೆ ವಿಚಾರ ಪ್ರಸ್ತಾಪ ಬಂದಿದೆ. ಸೋಮವಾರ ಮನೆಹಾನಿ ಬಗ್ಗೆ ನಿಲುವಳಿ ಸೂಚನೆ ತರುತ್ತೇವೆ. ಸರ್ಕಾರ ಮಳೆ ಹಾನಿ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ. ಸರ್ಕಾರ ಪಾಪರ್ ಆಗಿದೆ, ಹಾಲಿನ ಸಬ್ಸಿಡಿ ಇನ್ನು ಕೊಟ್ಟಿರುವುದಿಲ್ಲ. ಸಂಬಳ ಕೊಡಲು ಯೋಚನೆ ಮಾಡುತ್ತಿದ್ದಾರೆ. ಹುಡುಕಿ, ಹುಡುಕಿ ಟ್ಯಾಕ್ಸ್ ಹಾಕುತ್ತಿದ್ದಾರೆ. ಓಟಿಟಿಯಲ್ಲಿ ಸಿನಿಮಾ ನೋಡುವವರ ಮೇಲೂ ಟ್ಯಾಕ್ಸ್ ಹಾಕಲು ಹೊರಟಿದ್ದಾರೆ. ಎಕರೆಗೆ ಹದಿಮೂರು ಸಾವಿರದಿಂದ ಮೂವತ್ತು ಸಾವಿರದವರೆಗೂ ನಾವು ಪರಿಹಾರ ಕೊಟ್ಟಿದ್ದೇವು. ಈ ಸರ್ಕಾರ ಇನ್ನೂ ಏನು ನಿರ್ಧಾರ ಮಾಡಿಲ್ಲ. ಬೆಳೆ ಪರಿಹಾರ ತುರ್ತಾಗಿ ಕೊಡಬೇಕು. ನಾನು, ಕುಮಾರಸ್ವಾಮಿ ಒಟ್ಟಿಗೆ ಭೇಟಿ ನೀಡಿದ್ದು, ವಿಜಯೇಂದ್ರ ಎಲ್ಲರೂ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಈ ಸರ್ಕಾರದಲ್ಲಿ ಬರೀ ಹಗರಣಗಳು ಬೆಳಕಿಗೆ ಬರುತ್ತಿದೆ. ಎಲ್ಲಾ ಹಗರಣಗಳು ದಲಿತರಿಗೆ ಸೇರಬೇಕಿದ್ದ ಹಣ ಆಗಿದೆ. ವಾಲ್ಮೀಕಿ, ಎಸ್‌ಟಿಪಿ, ಟಿಎಸ್‌ಪಿ ಹಣ ಉಪಯೋಗ, ಮುಡಾ ಹಗರಣ ಸೇರಿ ಎಲ್ಲಾ ಹಗರಣಗಳು ದಲಿತರಿಗೆ ಮಾಡಿರುವ ಮೋಸಗಳೇ ಆಗಿದ್ದು, ಹಗರಣಗಳು ಹೊರ ಬಂದ ಮೇಲೆ ಸಿದ್ದರಾಮಯ್ಯ ಅವರು ಮೌನವಾಗಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಶಾಪ ತಟ್ಟಿದೆ! ಈ ಸರ್ಕಾರ ದಲಿತ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಈ ಸರ್ಕಾರವು ಕೋಮಾ ಸ್ಟೇಜ್‌ನಲ್ಲಿದೆ. ಕೆಲಸನೂ ಮಾಡುತ್ತಿಲ್ಲ, ಸುಮ್ಮನೇನೂ ಇರುತ್ತಿಲ್ಲ. ವಾಲ್ಮೀಕ ಅಭಿವೃದ್ಧಿ ನಿಗಮದ ಹಣ ತೆಲಂಗಾಣ ಎಲೆಕ್ಷನ್ ಹೋಗಿದೆ. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಸುಳ್ಳು ಜಾಹೀರಾತು ಕೊಟ್ಟಿದ್ದಕ್ಕೆ ನಾವು ಕೇಸ್ ಹಾಕಿದ್ವಿ. ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಡಿ.ಕೆ.
ಶಿವಕುಮಾರ್ ಮೂರು ಜನ ಬೇಲ್‌ನಲ್ಲಿದ್ದಾರೆ. ಸರ್ಕಾರ ಇನ್ನಷ್ಟು ದಿನ ಇರುತ್ತದೆ. ಈ ಹಗರಣಗಳೆಲ್ಲ ನೋಡಿದರೆ ಸರ್ಕಾರ ಇರುವುದಿಲ್ಲ ಎಂದು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಕೇಂದ್ರದಿಂದ ಐದು ಮಂತ್ರಿಗಳು ಸರ್ಕಾರ ಬೀಳಿಸಲು ಬಂದಿದ್ದಾರೆ ಅಂತಾರೆ. ಮುಂದೆ ಆಗುವುದಕ್ಕೆ ಮೊದಲೇ ಕೇವಿಯಟ್ ಹಾಕಿದ್ದಾರೆ. ಈ ಎಲ್ಲಾ ಹಗರಣಗಳಿಂದ ಸರ್ಕಾರ ಹೋಗುತ್ತದೆ. ಕೇಂದ್ರ ಮಂತ್ರಿಗಳು ಬೀಳಿಸಬೇಕಿಲ್ಲ. ಹದಿನೈದು ತಿಂಗಳಾಯ್ತು ಅವರು ಮಾಡಿರುವ ಆರೋಪಗಳ ಬಗ್ಗೆ ಏಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್‌ನವರದ್ದು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದು, ಐವತ್ತು ವರ್ಷ ಕಾಂಗ್ರೆಸ್‌ನವರು ದೇಶದಲ್ಲಿ ಲೂಟಿ ಹೊಡೆದಿದ್ದಾರೆ. ಕಾಂಗ್ರೆಸ್‌ನವರೇ ಭ್ರಷ್ಟಾಚಾರದ ಪಿತಾಮಹ ಎಂದ ಅವರು, ೧೮೭ ಕೋಟಿ ಹಗರಣ ನುಂಗಲಾರದ ತುತ್ತಾಗಿದ್ದು, ಅದರಿಂದ
ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿ ಸಿಡಿಮಿಡಿಗೊಂಡರು. ಇನ್ನು ನಡೆಯುತ್ತಿರುವ ಅದಿವೇಶದ ಮುಂದುವರೆದ ಭಾಗದಲ್ಲಿ ನಾವುಗಳು ಕಾಂಗ್ರೆಸ್ ನ ಎಲ್ಲಾ ಭ್ರಷ್ಟಾಚಾರ ಹಾಗೂ ಮಳೆಯಿಂದ ನಷ್ಟವಾಗಿರುವ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದೇಶ್ ನಾಗೇಂದ್ರ, ಶಾಸಕ ಸಿಮೆಂಟ್ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹರ್ಷಿತ್, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ದಿವಂಗತ ಅಪರ್ಣಾರಿಗೆ ಶ್ರದ್ಧಾಂಜಲಿ
ಹಾಸನ: ನಗರದ ಸಿಟಿ ಬಸ್ ನಿಲ್ದಾಣ ಹಿಂಬಾಗದ ಕಟ್ಟಡವೊಂದರಲ್ಲಿ ಎ ಅಂಡ್ ಕೆ ಮ್ಯೂಸಿಕಲ್ ವತಿಯಿಂದ ಗಾನಕೋಗಿಲೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಭಿಮಾನಿ ಬಳಗ ಇವರ ಸಂಯುಕ್ತಾಕ್ಷರದಲ್ಲಿ ಅಪ್ಪಟ ಕನ್ನಡತಿ ಹಾಗೂ ಚಿತ್ರನಟಿ ಖ್ಯಾತ ನಿರುಪಕಿಯಾದಂತಹ ಶ್ರೀಮತಿ ಅಪರ್ಣಾ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕಲಾವಿದರ ಸಂಘದ ಜಿಲ್ಲಾಧ್ಯಕ್ಷರಾದ ಕುಮಾರ್ ನೇತೃತ್ವದಲ್ಲಿ ಭಾನುವಾರದಂದು ಕಾರ್ಯಕ್ರಮ ಆಯೋಜಿಸಲಾಗಿತ್ತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕುಮಾರ್ ಮಾತನಾಡಿ ಅಪ್ಪಟ ಕನ್ನಡತಿ ಅಪರ್ಣಾ ರವರ ಸಾಧನೆ ಬಗ್ಗೆ ಮಾತನಾಡಿ, ಸಾಹಿತಿ ಕುವೆಂಪು, ಕಲಾವಿದ ಡಾ. ರಾಜಕುಮಾರ್, ಪುನಿತ್ ರಾಜಕುಮಾರ್ ನಂತರ ಅತ್ಯುತ್ತಮವಾಗಿ ನಿರ್ಗಳವಾಗಿ ಮಾತನಾಡುವ ಏಕೈಕ ಮಹಿಳೆ ಎಂದರೆ ಅದು ಅಪರ್ಣ ಎಂದು ನಾಡಿನ ಜನ ಮಾತನಾಡುತ್ತಾರೆ ಎಂದರು. ಮೆಟ್ರೋ ಯಾವುದಾದರೂ ನಿಲ್ದಾಣಕ್ಕೆ ಶ್ರೀಮತಿ ಅಪೂರ್ಣ ರವರ ಹೆಸರನ್ನು ನಾಮಕರಣ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ರಾಜೇಶ್, ಹಣ್ಣಿನ ವ್ಯಾಪಾರಿಗಳಾದ ಮೈಲಾರಣ್ಣ, ಅಲ್ಪಸಂಖ್ಯಾತ ಮುಖಂಡರಾದ ಸೈಯದ್, ಸಮಾಜ ಸೇವಕರಾದ ವಿಜಯಕುಮಾರ್, ಮಾಜಿ ನಗರಸಭಾ ಸದಸ್ಯರಾದ ಅರುಣ್ ಕುಮಾರ್, ಗಾಯಕಿ ಅಂಜಲಿ ಸೇರಿದಂತೆ ಹಲವಾರು ಕಲಾವಿದರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.