Crime
ವಿಚಾರಣೆಗೆ ಹಾಜರಾದ ಐಕಾನ್ ಸ್ಟಾರ್ ಅಲ್ಲು ಅರ್ಜುನ್: ಯಾಕೆ ಗೊತ್ತಾ?

ಹೈದರಾಬಾದ್: ಜಾಮೀನಿನ ಷರತ್ತಿನಂತೆ ಭಾನುವಾರ ಚಿತ್ರನಟ ಅಲ್ಲು ಅರ್ಜುನ್ ಅವರು ಪೊಲೀಸರ ಮುಂದೆ ಹಾಜರಾಗಿದ್ದರು.
ಪುಷ್ಪ 2 ಚಿತ್ರ ರಿಲೀಸ್ ಆದ ದಿನ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಅಲ್ಲು ಅವರು ಹೈದರಾಬಾದ್‍ನ ಪೊಲೀಸರ ಮುಂದೆ ಜಾಮೀನು ವಿಚಾರವಾಗಿ ಹಾಜರಾಗಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿದ್ದ ಅಲ್ಲು ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯ ಪ್ರತಿ ಭಾನುವಾರ ಆರೋಪಿ ಪೊಲೀಸರ ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು. ಇದರ ಜೊತೆಗೆ ಅಲ್ಲು ಅರ್ಜುನ್ ತಮ ವಿಳಾಸ ಬದಲಿಸಬಾರದು ಎಂದು ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶದ ಪ್ರಕಾರ ಇಂದು ಅಲ್ಲು ಅರ್ಜುನ್ ಪೊಲೀಸರ ಮುಂದೆ ಹಾಜರಾಗಿ ಸಹಿ ಹಾಕಿದ್ದಾರೆ.
ಡಿಸೆಂಬರ್ 4 ರಂದು ಹೈದರಾಬಾದ್‍ನ ಸಂಧ್ಯಾ ಥಿಯೇಟರ್‍ನಲ್ಲಿ ಪುಷ್ಪ 2 ಪ್ರೀಮಿಯರ್‍ನಲ್ಲಿ ನಟನನ್ನು ನೋಡಲು ಅಭಿಮಾನಿಗಳು ಜಮಾಯಿಸಿದಾಗ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಯಿತು. 35 ವರ್ಷದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರ ಎಂಟು ವರ್ಷದ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ.
ದುರಂತದ ನಂತರ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಮೃತ ಮಹಿಳೆಯ ಕುಟುಂಬದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‍ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಆದಾಗ್ಯೂ, ತೆಲಂಗಾಣ ಹೈಕೋರ್ಟ್ ಡಿಸೆಂಬರ್ 14 ರಂದು ಅವರಿಗೆ ಮಧ್ಯಂತರ ಜಾಮೀನು ನೀಡಿತು, ಅಲ್ಲು ಅರ್ಜುನ್‌ಗೆ ನೀಡಿರುವ ಜಾಮೀನು ಅವಧಿ ಜನವರಿ 10 ರಂದು ಮುಗಿಯಲಿದೆ.
Crime
ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು : ಶವಕ್ಕಾಗಿ ಮುಂದುವರೆದ ಶೋಧಾಕಾರ್ಯ

ಶ್ರೀರಂಗಪಟ್ಟಣ : ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಹದೇವಪುರದ ಬಳಿ ಸಂಭವಿಸಿದ್ದು, ಶವಕ್ಕಾಗಿ ಶೋಧಾಕಾರ್ಯ ಮುಂದುವರೆದಿದೆ.
ಮಹೇಶ ಕೊಂ ವೀರಜಪ್ಪ(35) ಮೃತ ವ್ಯಕ್ತಿಯಾಗಿದ್ದು, ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾಗೇನಹಳ್ಳಿ ಗ್ರಾಮದವರು ಎನ್ನಲಾಗಿದೆ.
ಆತ ಮೈಸೂರು ವಿಕ್ರಾಂತ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದು, ಮಹದೇವಪುರ ಬಳಿಯ ತರಿಪುರ ಗ್ರಾಮದ ಸ್ನೇಹಿತನ ಮನೆಯ ಗೃಹಪ್ರವೇಶಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಹದೇವಪುರ ಗ್ರಾಮದಲ್ಲಿರುವ ರಾಜ ಪರಮೇಶ್ವರಿ ನಾಲೆ ಅಣೆಕಟ್ಟೆ ಬಳಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮೃತನ ಶವ ಪತ್ತೆಯಾಗದ ಕಾರಣ ಶೋಧಾಕಾರ್ಯ ಮುಂದುವರೆದಿದೆ.
ಅರಕೆರೆ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Crime
ಚೌಕಬರೆ(ಕಟ್ಟೆಮನೆ) ಆಡುತ್ತಿದ್ದ ವೇಳೆ ಗಲಾಟೆ: ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊ*ಲೆ

HSN… ಚೌಕಬರೆ(ಕಟ್ಟೆಮನೆ) ಆಡುತ್ತಿದ್ದ ವೇಳೆ ಗಲಾಟೆ
ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ
ಲಕ್ಕಪ್ಪ( 48) ,ಕೊಲೆಯಾದ ವ್ಯಕ್ತಿ
ಬಸವರಾಜ, ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ
ಅರಸೀಕೆರೆ ತಾಲ್ಲೂಕಿನ ದೋಣನಕಟ್ಟೆ ಗ್ರಾಮದಲ್ಲಿ ಘಟನೆ
ಮೂವರ ಮೇಲೆ ಚಾಕುವಿನಿಂದ ಹಲ್ಲೆ
ವಸಂತ್, ಶಶಿ, ಲಕ್ಕಪ್ಪ ಎಂಬ ಮೂವರ ಮೇಲೆ ಚಾಕುವಿನಿಂದ ಹಲ್ಲೆ
ಎದೆ ಭಾಗಕ್ಕೆ ಲಕ್ಕಪ್ಪನಿಗೆ ಚಾಕುವಿನಿಂದ ಇರಿತ
ಲಕ್ಕಪ್ಪ ಸ್ಥಳದಲ್ಲೆ ಸಾವು
ಶಶಿ,ವಸಂತ ಎಂಬುವರಿಗೆ ಬೆನ್ನು, ಕೈಗೆ ಚಾಕುವಿನಿಂದ ಹಲ್ಲೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಶಶಿ, ವಸಂತ
ಶಶಿ,ವಸಂತ ಚೌಕಬರೆ ಆಡುತ್ತಿದ್ದಾಗ ಜಗಳ ತೆಗೆದ ಬಸವರಾಜ
ಶಶಿ, ವಸಂತ ಮೇಲೆ ಹಲ್ಲೆ ಮಾಡುತ್ತಿದ್ದ ಬಸವರಾಜ
ಜಗಳ ಬಿಡಿಸಲು ಎಂಟ್ರಿಯಾದ ಲಕ್ಕಪ್ಪಗೆ ಚಾಕುವಿನಿಂದ ಎದೆ ಭಾಗಕ್ಕೆ ಇರಿದ ಬಸವರಾಜ
ಬಸವರಾಜ ಜೊತೆಗಿದ್ದ ನಂಜುಂಡಿ ಹಲ್ಲೆಗೆ ಬೆಂಬಲ
ತಲೆಮರೆಸಿಕೊಂಡಿರೋ ಬಸವರಾಜ, ನಂಜುಂಡಿ ಬಂಧಿಸಲು ಶೋಧ ನೆಯ ನಡೆಸುತ್ತಿರೋ ಪೊಲೀಸರು
ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
Crime
ಕಟ್ಟಡದ ಸಜ್ಜಾ ಕುಸಿತ ಪ್ರಕರಣ: ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ (45) ಚಿಕಿತ್ಸೆ ಫಲಕಾರಿಯಾಗದೆ ಸಾ*ವು

ಬೇಲೂರು: ಹಳೇಯ ಕಟ್ಟಡದ ಸಜ್ಜಾ ಕುಸಿತ ಪ್ರಕರಣ
ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ (45) ಸಾವು
ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ
ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ ಜ್ಯೋತಿ
ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ
ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಜ್ಯೋತಿ
ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ ಜ್ಯೋತಿ ಪತಿ ಗೋಪಿ
ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಜ್ಯೋತಿ
ಅನಾಥವಾದ ಇಬ್ಬರು ಹೆಣ್ಣುಮಕ್ಕಳು
ಮಾ.9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ನಡೆದಿದ್ದ ದುರಂತ
ಕಳೆದ ಭಾನುವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ
-
Mysore13 hours ago
ಅರಣ್ಯ ಇಲಾಖೆಯ ವಾಚರ್ ಆತ್ಮಹ*ತ್ಯೆ
-
Mysore15 hours ago
ನಂಜನಗೂಡಿನ ಸಬ್ ರಿಜಿಸ್ಟರ್ ಕಛೇರಿಗೆ ಬೀಗ: ಲೋಕಾಯುಕ್ತ ದಾಳಿ
-
National - International8 hours ago
ಪಹಲ್ಗಾಮ್ ದಾಳಿ; ಉಗ್ರರ ಜೊತೆ ಗುಂಡಿನ ಕಾಳಗದಲ್ಲಿ ವೀರ ಯೋಧ ಹುತಾತ್ಮ
-
State11 hours ago
ಕಾಶ್ಮೀರದ ಪೆಹಲ್ಗಾಮನಲ್ಲಿ ನಡೆದ ಉಗ್ರರ ದಾಳಿ ಖಂಡನೀಯ – ಮುಖ್ಯಮಂತ್ರಿ ಸಿದ್ದರಾಮಯ್ಯ
-
National - International8 hours ago
ದಾಳಿ ನಡೆಸಿದ ಉಗ್ರರಿಗೆ ಊಹೆಗೂ ಮೀರಿದ ಶಿಕ್ಷೆ ನೀಡಲಾಗುವುದು: ಪ್ರಧಾನಿ ನರೇಂದ್ರ ಮೋದಿ
-
Kodagu23 hours ago
ಕೊಂಗಾಣದಲ್ಲಿ ಕಣ್ಣನೂರಿನ ಕೋಲಿಯಾ ಆಸ್ಪತ್ರೆಯ ಮಾಲೀಕನ ಕೊ*ಲೆ
-
Kodagu13 hours ago
ಜಿಲ್ಲಾ ಮಟ್ಟದ ಜ್ಞಾನಜ್ಯೋತಿ ಕಾರುಣ್ಯ ಕಾರ್ಯಕ್ರಮ
-
Chamarajanagar11 hours ago
ಚಾಮರಾಜನಗರ: ಮಲೆ ಮಹದೇಶ್ವರ ಸ್ವಾಮಿ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್