Connect with us

Mandya

ಯುವ ಸಂಪರ್ಕ ಸಭೆಗಳಿಗೆ ಅನುದಾನ ಮೀಸಲಿಡಿ : ಕಾಸರವಾಡಿ ಮಹದೇವು

Published

on

ಮಂಡ್ಯ: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯ ಯುವಜನರಿಗಾಗಿ ನಡೆಸುತ್ತಿದ್ದ ಯುವಜನ ಮೇಳ, ಯುವ ತರಬೇತಿ ಶಿಬಿರ ಹಾಗೂ ಯುವ ಸಂಪರ್ಕ ಸಭೆಗಳನ್ನು ಸರ್ಕಾರ ನಿಲ್ಲಿಸಿದ್ದು, ಹಾಲಿ ೨೦೨೫ರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಪುನರ್ ಆರಂಭಿಸಲು ಮುಂದಾಗಬೇಕು ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಯುವ ಜನರ ಪ್ರತಿಭೆ ಹೊರ ಚೆಲ್ಲುವಂತಹ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದು, ಗ್ರಾಮೀಣ ಭಾಗದ ಯುವ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವ ಸಬಲೀಕರಣ ಕ್ರೀಡಾ ಇಲಾಖೆ ಆರಂಭವಾದಾಗಿನಿಂದಲೂ ಯುವ ಸಂಪರ್ಕ ಸಭೆ, ಯುವ ಚೇನತ, ಯುವ ಪ್ರೇರಣ ಮತ್ತು ಯುವ ಸಂವಹನ ಎಂಬ ವಿಶಿಷ್ಠ ಕಾಯಾಗಾರ ನಡೆಯುತ್ತಿದ್ದವು. ಇದರಿಂದಾಗಿ ಯುವ ಜನರು ಪ್ರೇರಿತರಾಗಿ ಗ್ರಾಮದ ಅಭಿವೃದ್ಧಿಯ ಜೊತೆಗೆ ಸಾಂಸ್ಕೃತಿಕವಾಗಿ ಹಾಗೂ ನೈತಿಕವಾಗಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಳು ಸಹಕಾರಿಯಾಗಿದ್ದವು ಎಂದರು.

ಈ ಎಲ್ಲಾ ಕಾರ್ಯಕ್ರಮಗಳನ್ನು ಕಳೆದ ಐದು ವರ್ಷಗಳಿಂದ ಸರ್ಕಾರ ಸ್ಥಗಿತಗೊಳಿಸಿರುವುದು ಯುವಜನರ ಬಗೆಗಿನ ಅಸಡ್ಡೆತನವನ್ನು ತೋರುತ್ತದೆ. ಕಲೆ, ಸಂಸ್ಕೃತಿ ಮತ್ತು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನರು ಸರ್ಕಾರದ ನಿರ್ಲಕ್ಷ್ಯತನದಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೂಡಲೇ ಮುಖ್ಯಮಂತ್ರಿಗಳು ರಾಜ್ಯ ಮ್ಟಟದ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿಯನ್ನು ಪುನರ್ ಆರಂಭಿಸಿ ಯುವಜನರಿಗೆ ಉದಯೋನ್ಮುಕ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಯುವ ಪ್ರಶಸ್ತಿ ಪುರಸ್ಕೃತರುಗಳಾದ ಬಿ.ಎಸ್.ಅನುಪಮಾ, ಕೆ.ಜೆ.ಸುರೇಶ್, ಹನಿಯಂಬಾಡಿ ನಾಗರಾಜು ಇದ್ದರು.

Continue Reading

Mandya

ಜಿಲ್ಲೆಯಲ್ಲಿ ರೈತ ಉತ್ಪಾದಕಾ ಸಂಘಗಳು ಹೆಚ್ಚಾಗಬೇಕು: ಡಾ.ಕುಮಾರ

Published

on

ಮಂಡ್ಯ : ರೈತರು ತಾವು ಬೆಳೆದ ಬೆಳೆಗಳಿಗೆ ತಾವೇ ಬೆಲೆ ಕಟ್ಟಿ ಮಾರಾಟ ಮಾಡುವ ರೀತಿ ಬದಲಾವಣೆ ಮಾಡಿಕೊಳ್ಳಲು ರೈತ ಉತ್ಪಾದಕ ಸಂಘಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.

ಅವರು ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಸಂಪನ್ಮೂಲ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ವ್ಯಾಪಾರ ಮತ್ತು ವ್ಯಾವಹಾರಿ ಅಭಿವೃದ್ಧಿಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ, ಕೃಷಿಯಲ್ಲಿ ತನ್ನದೇ ಆದ ವಿಶೇಷ ಮಹತ್ವವವನ್ನು ಹೊಂದಿದೆ. ರೈತರು ಆರ್ಥಿಕವಾಗಿ ಸದೃಢರಾಗಲು ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆಯಾಗಬೇಕು‌ ರೈತ ಉತ್ಪದಕಾ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ರೈತರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು ಎಂದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕೆಂದರೆ, ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಬೇಕು., ರೈತರು ನಿಜವಾಗಿಯೂ ಸ್ವಾವಲಂಬಿಗಳಾಗಬೇಕೆಂದರೆ ರೈತ ಉತ್ಪಾದಕರ ಸಂಸ್ಥೆಗಳ ಅವಶ್ಯಕತೆ ಇದೆ, ಇದರಿಂದ ರೈತರು ಸಹ ಕಂಪನಿಗಳು ಮಾಲೀಕರಾಗಬಹುದು.

ಸರ್ಕಾರದ ಪಿ.ಎಂ.ಎಫ್. ಇ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು, ರೈತರು ಬೆಳೆದ ಬೆಳೆಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಗ್ರಾಹಕರ ಗಮನ ಸೆಳೆಯುವ ರೀತಿ ಬ್ರ್ಯಾಡಿಂಗ್ ಆಗಬೇಕು. ಇದರಿಂದ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾರುಕೊಟ್ಟೆ ದೊರೆಯುತ್ತದೆ ಎಂದರು.

ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ , ಇದು ಜಿಲ್ಲೆಯಲ್ಲಿ ಕೃಷಿಯ ಕುರಿತು ನಡೆಸುತ್ತಿರುವ ನನ್ನ ಮೊದಲ ಕಾರ್ಯಕ್ರಮ, ದೇಶದ ಜಿ.ಡಿ.ಪಿ.ಗೆ ಸೇವಾ ವಲಯದ ಕೊಡುಗೆ ಅತಿ ಹೆಚ್ಚು, ಅದರಲ್ಲಿ ಅತಿ ಹೆಚ್ಚು ಜನ ಕೃಷಿಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ, ಶ್ರಮ ಪಟ್ಟು ದುಡಿಯುತ್ತಿರುವ ರೈತರಿಗಿಂತ ಹೆಚ್ಚು ಕೃಷಿಗೆ ಸಂಬಂಧಿಸಿದ ಕಂಪನಿಗಳು ಆದಾಯವನ್ನು ಗಳಿಸುತ್ತಿವೆ, ರೈತರ ಆದಾಯ ಹೆಚ್ಚಬೇಕು ಎಂದರೆ ಇಂತಹಾ ಕಾರ್ಯಾಗಾರಗಳು ಮುಖ್ಯ ಮುಕ್ತ ಮನಸ್ಸಿನಿಂದ ವಿಚಾರಗಳು ವಿನಿಮಯ ಮಾಡಿಕೊಂಡು ಅದನ್ನು ಕಾರ್ಯ ಪ್ರವೃತ್ತಿಯಲ್ಲಿ ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ , ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ, ರೈತ ಉತ್ಪಾದಕ ಸಂಸ್ಥೆಗಳು ಮುಖ್ಯಸ್ಥರುಗಳಾದ ಕರಸವಾಡಿ ಮಹದೇವ್, ಹರೀಶ್, ಹನುಮಂತೇಗೌಡ, ಸುಬ್ರಹ್ಮಣ್ಯ, ಮಾಯಣ್ಣ, ಚಿಕ್ಕೇಗೌಡ, ಜಗದೀಶ್ ಬಾಬು ಮತ್ತು ಇನ್ನಿತರ ಉಪಸ್ಥಿತರಿದ್ದರು.

Continue Reading

Mandya

ತಮ್ಮನ ಹ*ತ್ಯೆಗೆ ಅಣ್ಣನಿಂದಲೇ ಸುಫಾರಿ : ಪ್ರಕರಣ ಭೇದಿಸಿದ ಪೋಲೀಸರ

Published

on

ಮಂಡ್ಯ :- ಲಕ್ಷ್ಮಿ ಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಕೃಷ್ಣೇಗೌಡ ಎಂಬುವವರ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದು, ತಮ್ಮನ ಕೊಲೆಗೆ ಅಣ್ಣನೇ ಸುಫಾರಿ ನೀಡಿರುವುದು ಬೆಳಕಿಗೆ ಬಂದಿದೆ.

ಕೆ ಎಂ ದೊಡ್ಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ತಮ್ಮ ಕೃಷ್ಣೇಗೌಡನ ಕೊಲೆಗೆ ಅಣ್ಣ ಗುಡ್ಡಪ್ಪ ಶಿವನಂಜೇಗೌಡ 5 ಲಕ್ಷ ಸುಪಾರಿ ನೀಡಿದ್ದು, ಎಲ್ಲಾ ಸುಪಾರಿ ಹಂತಕರನ್ನು ಬಂದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಳವಳ್ಳಿ ತಾಲೂಕು ನಿಟ್ಟೂರು ಗ್ರಾಮದ ಲೇಟ್ ಸ್ವಾಮಿರ ಪುತ್ರ ಚಂದ್ರಶೇಖರ್ ಎನ್ ಎಸ್, ಮದ್ದೂರು ತಾಲೂಕು ಕೊಪ್ಪದ ಬೋರೇಗೌಡರ ಪುತ್ರ ಆಟೋ ಚಾಲಕ ಸುನಿಲ್ ಬಿ, ಹಾಗೂ ಪ್ರಕಾಶ್ ರವರ ಪುತ್ರ ಮರದ ವ್ಯಾಪಾರಿ ಕೆ ಪಿ ಉಲ್ಲಾಸ್ ಗೌಡ, ಆಬಲವಾಡಿ ಗ್ರಾಮದ ಲೇಟ್ ಮರಿಯಯ್ಯರ ಪುತ್ರ ಪ್ರತಾಪ ಎ ಎಂ,ಹಾಗೂ ಲೇಟ್ ಮರಿಯಪ್ಪರ ಪುತ್ರ ಆಟೋ ಚಾಲಕ ಕೆ ಎಂ ಅಭಿಷೇಕ್ ಮತ್ತು ಲೇಟ್ ಕೃಷ್ಣಪ್ಪ ರ ಪುತ್ರ ಕಾರು ಚಾಲಕ ಕೆ ಶ್ರೀನಿವಾಸ್, ರಾಮನಗರ ಜಿಲ್ಲೆಯ ಜಕ್ಕೇಗೌಡನ ದೊಡ್ಡಿ ಗ್ರಾಮದ ಹನುಮೇಗೌಡರ ಪುತ್ರ ಹರ್ಷ ಹಾಗೂ ಕೊಲೆಯಾದ ಕೃಷ್ಣೆಗೌಡನ ಅಣ್ಣ ಶಿವನಂಜೇಗೌಡನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಕೆ ಎಂ ದೊಡ್ಡಿ ಪೋಲಿಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಗೌಡನದೊಡ್ಡಿ ಗ್ರಾಮದಮಾದನಹಟ್ಟಿ ಅಮ್ಮನ ದೇವಸ್ಥಾನದ ಪಕ್ಕದಲ್ಲಿರುವ ಜಮೀನಿನಲ್ಲಿ ಅಪರಿಚಿತ ಮೂರು ಜನರು ಮಾರಕಾಸ್ತ್ರಗಳಿಂದ ಕೃಷ್ಣಗೌಡನನ್ನು ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು ಈ ಬಗ್ಗೆ ಶಂಕರೇಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ನಿಟ್ಟೂರು ಗ್ರಾಮದ ಚಂದ್ರಶೇಖರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯಾದ ಕೃಷ್ಣೆಗೌಡ ಸಾಲ ಮಾಡಿಕೊಂಡಿದ್ದು ಸಾಲವನ್ನು ಅಣ್ಣನಾದ ಗುಡ್ಡಪ್ಪ ಶಿವನಂಜೇಗೌಡ ತೀರಿಸಿದ್ದನು, ಇದಕ್ಕೆ ಪ್ರತಿಯಾಗಿ ತನ್ನ ಜಮೀನನ್ನು ಅತ್ತಿಗೆ ಹೆಸರಿಗೆ ಮಾಡಿಕೊಡಲಾಗಿತ್ತು, ಆದರೆ ಜಮೀನನ್ನು ಬಿಟ್ಟುಕೊಡದ ಕೃಷ್ಣೇಗೌಡ ಅಕ್ಕತಂಗಿಯರನ್ನು ಪುಸಲಾಯಿಸಿ ಜಮೀನು ವಿಚಾರದಲ್ಲಿ ಶಿವ ನಂಜೇಗೌಡನ ವಿರುದ್ಧ ಕೇಸು ದಾಖಲಿಸಿದ್ದನು, ಅಷ್ಟೇ ಅಲ್ಲದೆ ಶಿವ ನಂಜೇಗೌಡನ ವಿರುದ್ಧ ಮಾತನಾಡುತ್ತಾ ಅವಮಾನ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದನು ಇದರಿಂದ ರೊಚ್ಚಿಗೆದ್ದ ಅಣ್ಣ ತಮ್ಮನನ್ನೆ ಕೊಲೆ ಮಾಡಲು 5 ಲಕ್ಷ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಕೊಲೆ ಪ್ರಕರಣದ ಆರೋಪಿಗಳ ಪತ್ತಗೆ ಜಿಲ್ಲಾ ಅಪರ ಪೋಲೀಸ್ ಅಧೀಕ್ಷಕರುಗಳಾದ .ಸಿ.ಇ ತಿಮ್ಮಯ್ಯ,ಎಸ್.ಇ. ಗಂಗಾಧರಸ್ವಾಮಿ. ಮಾರ್ಗದರ್ಶನದಲ್ಲಿ ಮಳವಳ್ಳಿ ಉಪ-ವಿಭಾಗದ ಡಿವೈಎಸ್.ಪಿ. .ವಿ ಕೃಷ್ಣಪ್ಪ ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಪೊಲೀಸ ಇನ್ ಸ್ಪೆಕ್ಟರ್ ಎಸ್.ಆನಂದ್, ಹೆಡ್ ಕಾನ್ಸ್ ಟೇಬಲ್‌ ಗಳಾದ ನಟರಾಜು, ಮಹೇಶ್, ರಾಜಶೇಖರ್, ರಾಜೇಂದ್ರ, ಶ್ರೀಕಾಂತ್, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ವಿಶ್ವಲ್ ಜೆ. ಕರಿಗಾರ, ಅರುಣ್, ಶ್ರೀಕಾಂತ್.ಅನಿಲ್ ಕುಮಾರ್, ಕೌಶಿಕ್, ಚಿರಂಜೀವಿ, ವಿಷ್ಣುವರ್ಧನ, ಕಿರಣ್ ಕುಮಾರ್, ರವಿಕಿರಣ್, ಲೊಕೇಶ್ ಮತ್ತು ವಾಸುದೇವ ರನ್ನು ಒಳಗೊಂಡ ತಂಡ ರಚನೆ ಮಾಡಲಾಗಿತ್ತು. ಸದರಿ ತಂಡದ ಅಧಿಕಾರಿಗಳು ಮತ್ತು ಸಿಬ್ಬಂಧಿಯವರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

Continue Reading

Mandya

ಮಂಡ್ಯ ತಾಲ್ಲೂಕು ಕಚೇರಿಗೆ ಡಿಸಿ ಅನಿರೀಕ್ಷಿತ ಭೇಟಿ: ಪರಿಶೀಲನೆ

Published

on

ಮಂಡ್ಯ : ತಾಲ್ಲೂಕು ಕಚೇರಿಗೆ ಡಿಸಿ ಅನಿರೀಕ್ಷಿತ ಭೇಟಿ ನೀಡು ಪರಿಶೀಲನೆ ನಡೆಸಿದರು.

ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿಗಳನ್ನು ಸ್ವೀಕರಿಸಿ ಕಾನೂನು ರೀತ್ಯ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ತಾಲ್ಲೂಕು ಕಚೇರಿಗೆ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಡತ ವಿಲೇವಾರಿ ಕುರಿತು ಮಾಹಿತಿ ಪಡೆದುಕೊಂಡು, ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿಯಾಗಬೇಕು ಎಂದರು. ವಿನಾಕರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು ಎಂದು ಸೂಚನೆ ನೀಡಿದರು.

ಸಹಾಯವಾಣಿ: ಗ್ರಾಮ ಆಡಳಿತಾಧಿಕಾರಿಗಳ ಕೆಲಸ ಪ್ರಮುಖವಾಗಿದ್ದು, ಅವರು ಅನಿರ್ಧಿಷ್ಟ ಅವಧಿ ಮುಷ್ಕರ ಕೈಗೊಂಡಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ತೊಂದರೆಯಾಗುತ್ತಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯನ್ನು ಕಂದಾಯ ನಿರೀಕ್ಷಕರ ಲಾಗ್ ಇನ್ ಗೆ ವರ್ಗಾಯಿಸಲಾಗಿದೆ.

ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುರ್ತಾಗಿ ಆದಾಯ ಅಥವಾ ಜಾತಿ ಪ್ರಮಾಣ ಪತ್ರ ಬೇಕಿದ್ದಲ್ಲಿ ನೀಡಲು ಸಹಾಯವಾಣಿ ಸಹ ತೆರೆಯಲಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಕಡತಗಳ ಗಣಕೀಕರಣ ಕೆಲಸಗಳನ್ನು ಸಹ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಮುಷ್ಕರ ನಿರತ ಗ್ರಾಮ ಆಡಳಿತಾಧಿಕಾರಿಗಳಿಂದ ಮನವಿ ಸ್ವೀಕರಿಸಿದರು.

Continue Reading

Trending

error: Content is protected !!