Connect with us

Chikmagalur

ಅಕ್ರಮ ಪಿಸ್ತೂಲ್ ಹೊಂದಿದ ಇಬ್ಬರ ಬಂಧನ

Published

on

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡಿರುವ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮುಹಮ್ಮದ್ ಅಸ್ಗರ್(26), ಅಬ್ದುಲ್ ನಿಸಾರ್.ಕೆ(29) ಬಂಧಿತರು.

ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡು ಯಾವುದೋ ದುಷ್ಕೃತ್ಯವನ್ನು ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಪಿಸ್ತೂಲ್, ಎರಡು ಸಜೀವ ಮದ್ದುಗುಂಡುಗಳು, ಎರಡು ಮೊಬೈಲ್ ಫೋನುಗಳು, ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 7,15,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಯ ಪೈಕಿ ಮುಹಮ್ಮದ್ ಅಸ್ಗರ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಅಪಹರಣ, ಹಲ್ಲೆ ಪ್ರಕರಣ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹಾಗೂ ಬೆಂಗಳೂರು ನಗರದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟದ ಪ್ರಕರಣ ಹೀಗೆ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಜನರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲ

Published

on

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ದಿನ ನಿತ್ಯ ಜೀವನದಲ್ಲಿ ಅಂತರ್ಜಾಲವನ್ನು ಉಪಯೋಗಿಸಿಕೊಂಡೆ ತಮ್ಮ ಎಲ್ಲಾ ಕೆಲಸವನ್ನು ಕುಳಿತ ಜಾಗದಲ್ಲೇ ಮಾಡುತ್ತಿದ್ದಾರೆ. ಆದರೆ ಈ ಅಂತರ್ಜಾಲ ಜನರನ್ನು ಮೋಸದ ಬಲೆಗೆ ಬೀಳಿಸುವ ಮಾಯಜಾಲವಾಗಿ ಪರಿವರ್ತನೆಯಾಗಿದೆ ಎಂದು ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ ಹೇಳಿದರು.

ಇಂದು ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಯುವ ಜನತೆಯಂತೂ ಪ್ರತೀಕ್ಷಣವೆಂಬಂತೆ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು. ಇದೊಂದು ರೀತಿಯ ಮಾಯಾಜಾಲ. ಇಂದು ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಹೊಂದಿದ್ದು, ಇಂಟರ್‌ನೆಟ್ ಕೂಡಾ ಬಳಸುತ್ತಿರುತ್ತಾರೆ. ಆದರೆ ಇಂಟರ್‌ನೆಟ್ ಬಳಸುವ ಪ್ರತಿಯೊಬ್ಬರಿಗೂ ಸುರಕ್ಷತೆಯ ಅಂತರ್ಜಾಲ ಬಳಕೆಯ ಕುರಿತು ತಿಳಿದಿರುವುದಿಲ್ಲ. ಈ ಪ್ರಭಾವಿ ಅಂತರ್ಜಾಲ ಪ್ರಪಂಚ ಮಕ್ಕಳಿಂದ ಹಿಡಿದು ಹಿರಿಯರವರೆಗೂ ವ್ಯಾಪಿಸಿದೆ.

ಸದ್ಯ ಕಚೇರಿ ಕೆಲಸಗಳನ್ನು ಕುಳಿತಲ್ಲಿಂದಲೇ ಮಾಡುವ ಪರಿಣತಿಯನ್ನು ಹೊಂದಿದ ಬಳಕೆದಾರರು ಅನೇಕರಿದ್ದಾರೆ. ಅಷ್ಟರ ಮಟ್ಟಿಗೆ ಇಂಟರ್‌ನೆಟ್ ಬಳಕೆ ಮತ್ತು ಅದರ ಉಪಯೋಗವಾಗುತ್ತಿದೆ. ಆದರೆ ಇಷ್ಟೆಲ್ಲಾ ಪ್ರಯೋಜನ ಒದಗಿಸುವ ಇಂಟರ್‌ನೆಟ್‌ನಿಂದ ತೊಂದರೆಯೂ ಇದೆ ಎಂದು ಹೇಳಿದರು.

ಪೇಜ್‌ಗಳಿಂದ ಯಾವುದೇ ಆಪ್‌ಗಳನ್ನು ಡೌನಲೋಡ್ ಮಾಡಿಕೊಳ್ಳದಿರಿ. ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಅಸುರಕ್ಷಿತ ಆಪ್‌ಗಳಿಂದ ಅಪಾಯ ಸಾಧ್ಯತೆ ಹೆಚ್ಚು. ಆದ್ದರಿಂದ ಇಂಥ ಅಸುರಕ್ಷಿತ ಆಪ್‌ಗಳನ್ನು ದೂರವಿಡಿ ಎಂದರು.

ಸುರಕ್ಷತೆಯ ಕುರಿತು ಪೋಷಕರು ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸಿ. ಸೈಬರ್ ವಂಚಕರು ತಮ್ಮ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲು ಮಕ್ಕಳನ್ನು ಪ್ರಚೋದಿಸಬಹುದು. ಹುಟ್ಟಿದ ದಿನಾಂಕ ಅಥವಾ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ವಿಶೇಷವಾಗಿ ಅಪರಿಚಿತರಿಗೆ ಬಹಿರಂಗಪಡಿಸದಂತೆ ಮಕ್ಕಳಿಗೆ ತಿಳಿಸಿ. ನಿಮ್ಮ ಮಕ್ಕಳಿಗೆ ಅನುಮಾನಾಸ್ಪದ ಚಟುವಟಿಕೆ ಬಗ್ಗೆ ತಿಳಿದರೆ , ತಕ್ಷಣವೇ ನಿಮಗೆ ಹೇಳಲು ತಿಳಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್‌ಗೆ ಪಾಸ್‌ವರ್ಡ್ ಸ್ಟ್ರಾಂಗ್ ಇರಲಿ,. ಫೇಸ್‌ಬುಕ್, ಯೂಟ್ಯೂಬ್, ಜೀಮೇಲ್, ಗೂಗಲ್ ಮ್ಯಾಪ್ ಮತ್ತು ಗೂಗಲ್ ಅಕೌಂಟ್ ಸೇರಿದಂತೆ ನೀವು ಬಳಸುವ ಎಲ್ಲ ಸಾಮಾಜಿಕ ತಾಣಗಳಲ್ಲಿ ನಿಮ್ಮ ಮಾಹಿತಿ ಇರುತ್ತದೆ. ಹೀಗಾಗಿ ಈ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಕಠಿಣ ಪಾರ್ಸ್‌ವರ್ಡ್ ಇಡಬೇಕು. ಇದರಿಂದ ನಿಮ್ಮ ಅಂತರ್ಜಾಲ ಮಾಹಿತಿ ಸೋರಿಕೆ ತಡೆಯಬಹುದು ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಎನ್.ಐ.ಸಿಯ ಸೂಚನಾಧಿಕಾರಿ ಚಂದ್ರುಪ್ರಕಾಶ ಮಾತನಾಡಿ ಆನ್‌ಲೈನ್ ಮತ್ತು ವಿಡಿಯೋ ಕರೆ ಮಾಡಿ. ಪೋಷಕರಿಗೆ ಅಥವಾ ಮಕ್ಕಳಿಗೆ ಡಿಜಿಟಲ್ ಬಂಧನವೆಂದು ನಿಮ್ಮನ್ನು ಭಯಪಡಿಸಬಹುದು ಅದರಿಂದ ಅಪರಿಚಿತ ಸಂಖ್ಯೆಯಿಂದ ಕರೆಗಳು ಬಂದರೆ ನಿರ್ಲಕ್ಷಿಸಿ ಯಾವುದಾದರು ಆಪ್ ಅಥವಾ ವೆಬ್‌ಸೈಟ್ ಬಳಸಬೇಕಾದರೇ ಅವರು ನಿಮ್ಮ ಕಡೆಯಿಂದ ನಿಮ್ಮ ಕಾಂಟ್ಯಾಕ್ಟ್ಸ್, ಲೊಕೇಷನ್, ಕ್ಯಾಲೆಂಡರ್, ಕ್ಯಾಮೆರಾ ಹೀಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲು ಅನುಮತಿ ಕೋರುತ್ತಾರೆ. ಆಗ ಅನಗತ್ಯವಾಗಿ ಎಲ್ಲ ಡಾಟಾ ಮಾಹಿತಿ ಹಂಚಿಕೆಗೆ ಅನುಮತಿ ನೀಡಬೇಡಿ. ಇದರಿಂದ ನಿಮ್ಮ ವೈಯಕ್ತಿಕ ದಾಖಲೆಗಳು ಸೋರಿಕೆಯಾಗುತ್ತದೆ ಹಾಗೂ ವ್ಯಕ್ತಿಯ ಖಾಸಗಿ ಮಾಹಿತಿ, ಬ್ಯಾಂಕ್ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಕಾರ್ಯಗಾರದಲ್ಲಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಜಿಲ್ಲಾ ಸಹಾಯಕ ಕಾರ್ಯದರ್ಶಿ ನಯನ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Continue Reading

Chikmagalur

ಮರಕ್ಕೆ ಬೈಕ್ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾ*ವು

Published

on

ಚಿಕ್ಕಮಗಳೂರು :

ಮರಕ್ಕೆ ಬೈಕ್ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು

ಅಜ್ಜಂಪುರ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ಘಟನೆ

ಪ್ರತಾಪ್ (28) ಗೋವಿಂದ (30) ಮೃತ ದುರ್ದೈವಿಗಳು

ಅಜ್ಜಂಪುರದ ಐತಿಹಾಸಿಕ ಅಂತರಘಟ್ಟೆ ಜಾತ್ರೆಗೆ ಹೋಗುವಾಗ ಘಟನೆ

11 ದಿನದ ಅಂತರಘಟ್ಟೆ ಜಾತ್ರೆಯಲ್ಲಿ ಇಂದು ಕಡೇ ದಿನ

ಮೃತರು ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಮೂಲದವರು

ಓವರ್‌ ಸ್ಪೀಡ್ ನಲ್ಲಿ ಹೋಗಿ ಮರಕ್ಕೆ ಡಿಕ್ಕಿಯೊಡೆದ ಬೈಕ್

ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು

Continue Reading

Chikmagalur

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಹೆಚ್.ಡಿ. ತಮ್ಮಯ್ಯ

Published

on

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ನಾಗರೀಕರಿಗೂ ತಲುಪಿಸಿ ಅವರ ಜೀವನ ಸುಧಾರಣೆಗೆ ಸಹಕರಿಸುವುದರೊಂದಿಗೆ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿಗೊಳಿಸುವುದೇ ನನ್ನ ಗುರಿ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಸಖರಾಯಪಟ್ಟಣ ಆಟೋ ನಿಲ್ದಾಣ ನಿರ್ಮಾಣ ಕಾಮಗಾರಿ ಸೇರಿದಂತೆ ಸಖರಾಯಪಟ್ಟಣ ವ್ಯಾಪ್ತಿಯ ರಸ್ತೆ, ದೇವಸ್ಥಾನ, ಸಮುದಾಯ ಭವನ, ಕಾಂಪೌಂಡ್ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸುವುದರ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮಾಂತರ ಭಾಗವನ್ನು ಒಳಗೊಂಡಂತೆ ಕ್ಷೇತ್ರಕ್ಕೆ ಒಟ್ಟು ೨೫ ಕೋಟಿ ರೂ.ಗಳ ವಿಶೇಷ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಸಖರಾಯಪಟ್ಟಣ ವ್ಯಾಪ್ತಿಯಲ್ಲಿ ದೇವಸ್ಥಾನ, ಆಟೋ ನಿಲ್ದಾಣ ಹಾಗೂ ರಸ್ತೆ ಸೇರಿದಂತೆ ಸುಮಾರು ೨ ಕೋಟಿಗೂ ಹೆಚ್ಚಿನ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ೪ ತಿಂಗಳೊಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಗುಬ್ಬಿಹಳ್ಳಿ ಗೇಟ್‌ನಿಂದ ದೇವನೂರುವರೆಗೂ ಒಟ್ಟು ೨೯ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಂಡು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದ ಅವರು ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರವು ಸಮಾಜದ ಎಲ್ಲಾ ಬಡವರು, ಹಿಂದುಳಿದ ವರ್ಗ ಹಾಗೂ ಶೋಷಿತ ವರ್ಗದವರ ಪರವಾದ ಯೋಜನೆಗಳನ್ನು ರೂಪಿಸಿ ಅವರ ಏಳಿಗೆಗಾಗಿ ದುಡಿಯುವುದಲ್ಲದೇ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಎತ್ತಿನ ಹೊಳೆ ಯೋಜನೆ ಮೂಲಕ ಯೋಜನಾ ವ್ಯಾಪ್ತಿಯಲ್ಲಿ ನಮ್ಮ ಕ್ಷೇತ್ರ ಇಲ್ಲದಿದ್ದರು ಸಹ ಮನವಿ ಮೇರೆಗೆ ಹಳೇಬೀಡು, ದೇವನೂರು, ಬೆಳವಾಡಿ ಕೆರೆಗಳನ್ನು ಭರ್ತಿಗೊಳಿಸಿರುವುದು ಇಲ್ಲಿನ ರೈತರ ಸಂತಸಕ್ಕೆ ಕಾರಣವಾಗಿದೆ ಹೇಳಿದರು.

ಈ ಸಂದರ್ಭದಲ್ಲಿ ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿ ಮನೆ ಸತೀಶ್, ಗಣೇಶ್, ರಾಜಣ್ಣ, ಕಿರಣ್, ಲೋಕೇಶ್, ಸಚಿನ್‌ಎತ್ತಿನ ಮನೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Trending

error: Content is protected !!