Connect with us

Education

ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ 50,000ರೂ. ವಿದ್ಯಾರ್ಥಿವೇತನ : ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ

Published

on

AICTE Yashasvi Scholarship 2025 – ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಯನ್ನು ಅನುಷ್ಠಾಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನಕ್ಕಾಗಿ ಬೇಕಾಗುವ ಆರ್ಥಿಕ ಸಹಾಯವನ್ನು ನೀಡಿ ಶಿಕ್ಷಣವನ್ನು ಮುಂದುವರೆಸಲು ಸಹಾಯ ಮಾಡುತ್ತದೆ.

AICTE – (All India Council for Technical Education) – ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಯಶಸ್ವಿ ವಿದ್ಯಾರ್ಥಿವೇತನ ಎಂಬ ಹೆಸರಿನಲ್ಲಿ ಆರ್ಥಿಕ ಸಹಾಯ ನೀಡಲಿದೆ.

ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಒಟ್ಟು 5,200 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸಿಗಲಿದೆ. ಅದರಲ್ಲಿ 2,593 ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ 2,607 ಡಿಪ್ಲೋಮ್ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಂಗಡಿಸಲಾಗಿದೆ. ವಿಶೇಷವೇನೆಂದರೆ ಇದರಲ್ಲಿ 276 ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಮಿಸಲಿಡಲಾಗಿದೆ.

ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು?

AICTE ಯಿಂದ ಮಾನ್ಯತೆ ಪಡೆದಿರುವ ಕಾಲೇಜುಗಳಲ್ಲಿ ಯಾವುದೇ ವಿಷಯದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅದೇ ರೀತಿ ಡಿಪ್ಲೊಮೊ ಮುಗಿಸಿ 2ನೇ ವರ್ಷದ ಲ್ಯಾಟರಲ್ ಎಂಟ್ರಿ ಆಗಿ 2ನೇ ವರ್ಷದ ಪದವಿ ಓದುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆಯನ್ನು ಹೊರತುಪಡಿಸಿ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆಧಾಯವು 8 ಲಕ್ಷ ರೂ. ಒಳಗಿರಬೇಕು.

ಯಾರಿಗೆ ಎಷ್ಟು ವಿದ್ಯಾರ್ಥಿವೇತನ?

• ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 50,000ರೂ.
• ಡಿಪ್ಲೋಮ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 30,000ರೂ.

ಅರ್ಜಿ ಸಲ್ಲಿಕೆಗಾಗಿ ಕೊನೆಯ ದಿನಾಂಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ಅಧಿಕೃತ ಜಾಲತಾಣದ ಲಿಂಕ್ – https://yashasvi.aicte.gov.in/login.php

Continue Reading

Education

ಎಚ್ಚರ! ನಿಮ್ಮ ಹೆಸರಿನಲ್ಲಿ ಯಾರಾದರೂ ನಕಲಿ ಸಿಮ್ ಖರೀದಿಸಿದ್ದಾರಾ? ಈಗಲೇ ಪರಿಶೀಲಿಸಿಕೊಳ್ಳಿ

Published

on

ನಿಮಗೆ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ. ಹಲವಾರು ಕದಿಮರು ಅಥವಾ ಇತರೆ ಅಪರಾಧ ಎಸಗುವವರು ನಿಮಗೆ ಗೊತ್ತಿಲ್ಲದೇ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಅನಧಿಕೃತ ಕರ್ತವ್ಯಕ್ಕೆ ಬಳಸುತ್ತಿರಬಹುದು.

ಕೇಂದ್ರ ದೂರ ಸಂಪರ್ಕ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ದೇಶದಲ್ಲಿ 55 ಲಕ್ಷಕ್ಕೂ ಹೆಚ್ಚು ನಕಲಿ ಸಿಮ್ ಕಾರ್ಡ್ ಗಳ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಅದೇ ರೀತಿ ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ದೂರಸಂಪರ್ಕ ಕಾಯ್ದೆಯನ್ನು ಜನವರಿ 01, 2025ರಂದು ಜಾರಿಗೆಗೊಳಿಸಿದ್ದು ನಕಲಿ ಸಿಮ್ ನ ಅಪರಾಧದಲ್ಲಿ ಸಿಕ್ಕಿ ಬಿದ್ದರೆ ಕಾನೂನು ಶಿಕ್ಷೆ ಜೊತೆಗೆ 10 ಲಕ್ಷ ರೂ. ದಂಡ ವಿಧಿಸುತ್ತದೆ.

ಆದ್ದರಿಂದ ನಿಮ್ಮ ಹೆಸರಿನಲ್ಲಿ ಯಾರಾದರೂ ಸಿಮ್ ಖರೀದಿಸಿದ್ದರೆ ಅದನ್ನು ನೀವು ನಿಮ್ಮ ಮೊಬೈಲ್ ನಲ್ಲಿಯೇ ಸರ್ಕಾರದ ಅಧಿಕೃತ ಜಾಲತಾಣದ ಮುಖಾಂತರ ಪರಿಶೀಲಿಸಿ ಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ನಕಲಿ ಸಿಮ್ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸುವುದು ಹೇಗೆ?

ಇದನ್ನು ನೀವು ಪರಿಶೀಲಿಸಲು ಸರ್ಕಾರದ ಅಧಿಕೃತ ಜಾಲತಾಣವಾಗಿರುವಂತಹ “ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರೊಡ್ ಮ್ಯಾನೇಜ್ಮೆಂಟ್ ಆಂಡ್ ಕಂಜುಮರ್ ಪ್ರೊಟೆಕ್ಷನ್ ” (TAFCOP) ಕ್ಕೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ನಿಮ್ಮ ನಂಬರಗೆ ಬರುವ ಓಟಿಪಿ ಎಂದು ನಮೂದಿಸಿ ಲಾಗಿನ್ ಆಗಿರಿ. ಲಾಗಿನ್ ಆದ ಬಳಿಕ ನಿಮ್ಮ ಹೆಸರಿನಲ್ಲಿ ಒಟ್ಟು ಎಷ್ಟು ಸಿಮ್ ಖರೀದಿಸಲಾಗಿದೆ ಎಂಬ ಮಾಹಿತಿ ಮತ್ತು ಅದರ ನಂಬರ್ ಕೂಡ ಅಲ್ಲಿ ತೋರಿಸುತ್ತದೆ. ಅವು ನಿಮ್ಮದಾಗಿರದೆ ಇದ್ದರೆ ನೀವು ರಿಪೋರ್ಟ್ ಮಾಡಿ ವಂಚನೆಯಿಂದ ಪಾರಾಗಿರಿ.

TAFCOP ಅಧಿಕೃತ ಜಾಲತಾಣ – https://tafcop.sancharsaathi.gov.in/telecomUser/

Continue Reading

Education

Free Coaching : ಮಾಸಿಕ 5,000ರೂ. ಜೊತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಸರ್ಕಾರದಿಂದ ಉಚಿತ ತರಬೇತಿ

Published

on

Free Coaching for KAS, Banking, SSC 2025 – ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಕಾರಿ ನೌಕರಿಗಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

2024-25ನೇ ಸಾಲಿಗೆ ಸಂಪೂರ್ಣ ಉಚಿತ ತರಬೇತಿಯನ್ನು ಅರ್ಹ ಅಭ್ಯರ್ಥಿಗಳಿಗೆ ನೀಡುತ್ತಿದ್ದು, ಅರ್ಜಿ ಸಲ್ಲಿಸುವ ಹಾಗೂ ಉಚಿತ ತರಬೇತಿಗೆ ಆಯ್ಕೆ ಮಾಡಿಕೊಳ್ಳುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಯಾವ ಯಾವ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು?

ಈ ಯೋಜನೆಯ ಅಡಿಯಲ್ಲಿ KAS, SSC, Banking, ರೈಲ್ವೆ, ನ್ಯಾಯಾಂಗ ಸೇವೆ ಸೇರಿದಂತೆ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲಾಖೆಯಿಂದ ಉಚಿತ ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಮಾಸಿಕ 5,000ರೂ. ಆರ್ಥಿಕ ಸಹಾಯ ನೀಡಲಾಗುವುದು.

ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು?

SC ಹಾಗೂ ST ವರ್ಗಕ್ಕೆ ಸೇರಿದವರಾಗಿದ್ದು, ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆಧಾಯವು 5 ಲಕ್ಷ ರೂ. ಒಳಗೆ ಇರಬೇಕು ಹಾಗೂ ಅಭ್ಯರ್ಥಿಯ ವಯಸ್ಸು 21 ರಿಂದ 37 ವರ್ಷದ ಒಳಗಿರಬೇಕು.

ಆಯ್ಕೆ ಮಾಡಿಕೊಳ್ಳುವ ವಿಧಾನ – ಸಾಮಾನ್ಯ ಪ್ರವೇಶ ಪರೀಕ್ಷೆ ಮುಕಾಂತರ

2024-25ನೇ ಸಾಲಿಗೆ ಸಮಾಜ ಕಲ್ಯಾಣ ವತಿಯಿಂದ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20 ಫೆಬ್ರವರಿ 2025:

ಅರ್ಜಿ ಸಲ್ಲಿಸಲು ಜಾಲತಾಣದ ವಿಳಾಸ : https://swdservices.karnataka.gov.in/IGCCD

Continue Reading

Education

ದ್ವಿಚಕ್ರ ವಾಹನ ಖರೀದಿಸಲು ಕೇಂದ್ರದಿಂದ 32,500ರೂ. ತನಕ ಸಹಾಯಧನ : ಅರ್ಜಿ ಸಲ್ಲಿಸೋದು ಹೇಗೆ?

Published

on

PM E Drive Scheme : ದೇಶದಲ್ಲಿ ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಾನ್ಯ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟವು ಸೆಪ್ಟೆಂಬರ್ 11, 2024ರಂದು PM ಎಲೆಕ್ಟ್ರಿಕ್ ಡ್ರೈವ್ ಎಂಬ ಯೋಜನೆಗೆ ಅನುಮೋದನೆ ನೀಡಿತು. ಈ ಯೋಜನೆಯು ಎರಡು ವರ್ಷದ ಅವಧಿಯಲ್ಲಿ ಒಟ್ಟು ₹10,900 ಕೋಟಿ ಆರ್ಥಿಕ ವೆಚ್ಚವನ್ನು ಹೊಂದಿದೆ.

ಪಿ. ಎಂ. ಇ ಡ್ರೈವ್ ಯೋಜನೆಯ ಉದ್ದೇಶ :

ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳಿಂದ ಪರಿಸರದ ಮಾಲಿನ್ಯದ ಹೆಚ್ಚಾಗುತ್ತಿದ್ದೂ, ಇದನ್ನು ಹತೋಟಿಗೆ ತರಲು ಮತ್ತು ವಿದ್ಯುತ್ ಚಾಲಿತ ವಾಹನ ಉಪಯೋಗವನ್ನು ಹೆಚ್ಚಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಈ ಯೋಜನೆಯ ಅಡಿಯಲ್ಲಿ ವಿವಿಧ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲು ಕೇಂದ್ರ ಸರ್ಕಾರವು 32,500ರೂ. ವರೆಗೆ ಸಬ್ಸಿಡಿ ನೀಡುತ್ತಿದೆ.

ಯಾವ ವಾಹನಗಳಿಗೆ ಎಷ್ಟು ಸಬ್ಸಿಡಿ ?

• ಎಲೆಕ್ಟ್ರಿಕ್ ದ್ವಿ-ಚಕ್ರ ವಾಹನ ಖರೀದಿಸುವವರಿಗೆ ಮೊದಲ ವರ್ಷದಲ್ಲಿ 10,000ರೂ. ಹಾಗೂ ಎರಡನೇ ವರ್ಷ 5,000ರೂ. ನೀಡಲಾಗುವುದು.
• ತ್ರಿ-ಚಕ್ರ ವಾಹನಗಳಿಗೆ ಮೊದಲ ವರ್ಷ 25,000ರೂ. ಹಾಗೂ ಎರಡನೇ ವರ್ಷ 12,500ರೂ. ನೀಡಲಾಗುತ್ತದೆ.

ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಯ ಅಡಿಯಲ್ಲಿ ಲಾಭ ಪಡೆಯಲು ಮೊದಲು ನಿಮ್ಮ ವಿದ್ಯುತ್ ವಾಹನವನ್ನು ನಿಮ್ಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಿಸಿರಿ. ನಂತರದಲ್ಲಿ ನಿಮ್ಮ ವಾಹನದ ಡಿಲರ್ ನಿಮ್ಮ ಆಧಾರ್ ಸಂಖ್ಯೆ ಬಳಸಿ ನಿಮಗೆ e-Voucher ನೀಡುತ್ತಾರೆ.

ಇದರ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ – https://pmedrive.heavyindustries.gov.in/

Continue Reading

Trending

error: Content is protected !!