Location
ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಪರಿಶೀಲನಾ ಮೊದಲನೇ ಸಭೆ — ಶಾಸಕ ದರ್ಶನ್ ಧ್ರುವ ನಾರಾಯಣ್

ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಪರಿಶೀಲನಾ ಮೊದಲನೇ ಸಭೆ — ಶಾಸಕ ದರ್ಶನ್ ಧ್ರುವ ನಾರಾಯಣ್
ನಂಜನಗೂಡು ಜ.24
ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಎಂಪ್ಲಾಯೇಸ್ ಗಳು ಅವರವರ ಕೆಲಸ ಜವಾಬ್ದಾರಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಕೆಲಸ ಮಾಡಿಸಬೇಕೆಂದು ದೇವಸ್ಥಾನದ ಕಾಯ೯ನಿರ್ವಾಹಕ ಅಧಿಕಾರಿ ಜಗದೀಶ್ ರವರಿಗೆ ಕ್ಷೇತ್ರ ಶಾಸಕ ದರ್ಶನ್ ಧ್ರುವನಾರಾಯಣ್ ಸೂಚನೆ ನೀಡಿದರು.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ವಿವಿಧ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಭಾಗವಹಿಸಿ ಮಾತನಾಡಿದರು.
ದೇವಾಲಯದಲ್ಲಿ ಒಳಾಂಗಣ ಮತ್ತು ಹೊರಾಂಗಣ ಖಾಲಿರುವ ಹುದ್ದೆಗಳಲ್ಲಿ ಲೋಕಲ್ ರವರಗೆ ಮೊದಲು ಆದ್ಯತೆ ನೀಡಬೇಕು ಅಧಿಕಾರಿಗೆ ಹೇಳಿದರು.
ಶ್ರೀಕಂಠೇಶ್ವರ ಸ್ವಾಮಿಯ ದೇವಸ್ಥಾನದ ಒಳತಿಗಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಡುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ.ದೇವಸ್ಥಾನದ ಅಭಿವೃದ್ಧಿಯಲ್ಲಿ ಒಂದು ಮಾಡೆಲ್ ಸಿಸ್ಟಮ್ ಯಾಗುತ್ತದೆ ಇದು ನನ್ನ ಅನಿಸಿಕೆ ಎಂದು ಶಾಸಕರು ಹೇಳಿದರು.
ಸೆಕ್ಯೂರಿಟಿಗಳು ದೇವಸ್ಥಾನ ಸುತ್ತ , ದೇವಸ್ಥಾನದ ಆವರಣ, ಕಪಿಲಾ ನದಿಯ ಸ್ನಾನಘಟ್ಟ ಸ್ಥಳಗಳನ್ನು
ದಿನನಿತ್ಯ ಮೂರು ಸಿಫ್ಟ್ ಕೆಲಸ ನಿರ್ವಹಿಸುವವರು
ಸಮಸ್ಯೆ ಬರದ ಹಾಗೆ ನೋಡಿಕೊಳ್ಳ ಜವಾಬ್ದಾರಿ ನಿಮ್ಮದಾಗಿರುತ್ತದೆ ಎಂದು ಸಭೆಯಲ್ಲಿ ಸೆಕ್ಯೂರಿಟಿಗಳನ್ನು ಕರೆಸಿಕೊಂಡು ಮಾಹಿತಿ ತಿಳಿಸಿದರು.
ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ಕಪಿಲಾ ನದಿಗೆ ಹೋಗುವ ಭಕ್ತಾದಿಗಳಿಗೆ ಹೆದ್ದಾರಿ ರಸ್ತೆಯಲ್ಲಿ ಟ್ರಾಫಿಕ್ ಕಡಿಮೆ ಆಗಬೇಕೆಂದು ಚರ್ಚಿಸಿದರು. ಬಳಿಕ ಶಾಸಕರು ಮಾತನಾಡಿ ಅಂಡರ್ ಗ್ರೌಂಡ್ ಮಾಡಿರುವುದು ಭಕ್ತಾದಿಗಳಿಗೆ ಇನ್ನು ಮುಂದೆ ಮೇಲ್ಗಡೆ ಓಡಾಡುವುದು ಟ್ರಾಫಿಕ್ ಬಂದ್ ಮಾಡಿ
ಕೆಳಗಡೆಯಿಂದಲೇ ಭಕ್ತಾದಿಗಳು ಓಡಾಡಬೇಕೆಂದು ಸೂಚಿಸಿದರು.
ದೇವಸ್ಥಾನದ ಸುತ್ತಮುತ್ತ ಸಮಸ್ಯೆಗಳು ಬರದೇ ಹಾಗೆ ಭಕ್ತಾದಿಗಳಿಗೆ ಅನುಕೂಲ ದೇವಸ್ಥಾನದ ಆವರಣ ಸ್ವಚ್ಛತೆಯಾಗಿರುವ ಚಿಂತನೆಯಲ್ಲಿ ಮಾಡಬೇಕೆಂದು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ , ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
Chamarajanagar
ಬೈಕ್ ಗಳ ನಡುವೆ ಮುಖಮುಖಿ ಡಿಕ್ಕಿ ಸವಾರಿಗೆ ಗಾಯ

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಹೋಬಳಿಯ ಬೆಟ್ಟದಮಾದಹಳ್ಳಿ ಹಾಗೂ ಭೋಗಯ್ಯನಹುಂಡಿಯ ಮುಖ್ಯ ರಸ್ತೆಯಲ್ಲಿ ಎರಡು ಸ್ಕೋಟರ್ ಗಳ ನಡುವೆ ಮುಖಮುಖಿ ಡಿಕ್ಕಿ ಹೊಡೆದು ಅಪಘಾತವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತು.
ಗಾಯಾಳುಗಳಾದ ಭೋಗಯ್ಯನಹುಂಡಿ ಗ್ರಾಮದ ಸುನಿ ಹಾಗೂ ಬೆಟ್ಟದಮಾದಹಳ್ಳಿ ಗ್ರಾಮದ ರಂಗಸ್ವಾಮಿ ಎಂಬುವರ ಬೈಕ್ ಗಳ ನಡುವಿನ ಡಿಕ್ಕಿಯಾಗಿ ಇಬ್ಬರಿಗೂ ತಲೆ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
Mysore
ಮೇ.04ರಂದು ಭಗೀರಥ ಜಯಂತಿಯನ್ನು ಆಚರಣೆ

ಮಹದೇವಸ್ವಾಮಿ ಪಟೇಲ್
ನಂಜನಗೂಡು : ಮೇ ನಾಲ್ಕರಂದು ಸಾಂಕೇತಿಕವಾಗಿ ಭಗೀರಥ ಜಯಂತಿಯನ್ನು ಆಚರಣೆ ಮಾಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ನಂಜನಗೂಡು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಬಳಿಕ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಅವರನ್ನು ಆಹ್ವಾನ ಮಾಡಿ ಅದ್ದೂರಿಯಾಗಿ ಭಗಿರಥ ಜಯಂತಿಯನ್ನು ನಡೆಸಲು ಸಮಾಜದ ಮುಖಂಡರು ಸಲಹೆ ನೀಡಿದ್ದೀರಿ. ಇಂದು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುತ್ತೇನೆ. ಮುಖ್ಯಮಂತ್ರಿಗಳು ದಿನಾಂಕ ಸೂಚಿಸಿದ ಬಳಿಕ, ಕಾರ್ಯಕ್ರಮ ರೂಪ ರೇಷೆ ಬಗ್ಗೆ ಮತ್ತೊಂದು ಸಭೆಯನ್ನು ಕರೆದು ತೀರ್ಮಾನ ಮಾಡೋಣ. ಕಳೆದ ಬಾರಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಚರ್ಚಾ ಸ್ಪರ್ಧೆ ಮಾಡಿ ಅರ್ಥಪೂರ್ಣ ಜಯಂತಿಯನ್ನು ಆಚರಿಸಲಾಗಿತ್ತು. ಅದೇ ಮಾದರಿಯಲ್ಲಿ ಜಯಂತಿ ನಡೆಸೋಣ ಎಂದರು. ಜಿಲ್ಲಾ ಮಟ್ಟಕ್ಕಿಂತ ತಾಲೂಕು ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಜಯಂತಿ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದ ಮಾಜಿ ತಾಲೂಕು ಅಧ್ಯಕ್ಷ ಮೂಗಶಟ್ಟಿ ಮಾತನಾಡಿ ನಿಮ್ಮ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಕರೆಸಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ಜನರನ್ನು ಸೇರಿಸುವ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ ಎಂದರು
ನಂತರ ಹೆಮ್ಮರಗಾಲ ಸೋಮಣ್ಣ ಮಾತನಾಡಿ, ಭಗೀರಥ ಜಯಂತಿ ಆಚರಣೆ ಮಾಡಿ ಮೂರು ವರ್ಷಗಳಾಗಿವೆ. ಮುಖ್ಯಮಂತ್ರಿ ಅವರನ್ನು ಕರೆಸಿ, ನಂಜನಗೂಡು ಶಾಸಕರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಜಯಂತಿ ಆಚರಿಸಲು ಸಮಾಜದ ಮುಖಂಡರು ತೀರ್ಮಾನಿಸಿದ್ದಾರೆ. ಸಭೆಗೆ ಸಮಾಜದ 10,000ಕ್ಕೂ ಹೆಚ್ಚು ಜನರ ಸೇರುವ ನಿರೀಕ್ಷೆ ಇದೆ ಎಂದರು.
ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೂಗ ಶೆಟ್ಟಿ, ಹೆಮ್ಮರಗಾಲ ಸೋಮಣ್ಣ, ಹಾಡ್ಯ ರಂಗಸ್ವಾಮಿ, ಹೆಡತಲೆ ದೊರೆಸ್ವಾಮಿ ನಾಯಕ, ಲತಾ ಸಿದ್ದಶೆಟ್ಟಿ, ಕರಳಪುರ ನಾಗರಾಜು, ಟಿಪಿ ಶಿವಣ್ಣ, ಗೋವಿಂದರಾಜು, ಮಹದೇವ್, ಮುದ್ದು ಮಾದ ಶೆಟ್ಟಿ, ಸಿದ್ದರಾಜು, ನಾಗಮಣಿ ಶಂಕ್ರಪ್ಪ, ಬಾಲಚಂದ್ರ, ಕಲ್ಲಂಗಡಿ ಮಹದೇವಸ್ವಾಮಿ, ತರದಲೆ ಮಹದೇವು, ಶ್ರೀನಿವಾಸ್, ಸಿದ್ಧ ಶೆಟ್ಟಿ ಸೇರಿದಂತೆ ಇತರರು ಹಾಜರಿದ್ದರು.
Chamarajanagar
ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಹೃದಯಘಾತದಿಂದ ನಿಧನ

ಹನೂರು : ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಹೃದಯಘಾತದಿಂದ ನಿಧನ..
ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ನಿವಾಸಿ ಪರಶುರಾಮ್( 32) ಮೃತಪಟ್ಟ ದುರ್ದೈವಿ.
ಕಳೆದ 9 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ್ ಕಳೆದ 2 ವರ್ಷಗಳಿಂದ ರಾಮಾಪುರ ಪೊಲೀಸ್ ಠಾಣೆಯಲ್ಲಿ ಗುಪ್ತ ಮಾಹಿತಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು, ಶನಿವಾರ ಬೆಳಿಗ್ಗೆ ಕುಸಿದು ಬಿದಿದ್ದು ಸಿಬ್ಬಂದಿಗಳು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ, ಮೃತ ವ್ಯಕ್ತಿಯು ರಾಯಚೂರು ಜಿಲ್ಲೆಯವರಾಗಿದ್ದು ಕುಟುಂಸ್ಥರಿಗೆ ರಾಮಾಪುರ ಪೊಲೀಸರು ಮಾಹಿತಿ ನೀಡಿ ಮೃತ ವ್ಯಕ್ತಿಯ ಶವವನ್ನು ಚಾಮರಾಜನಗರದ ಸೀಮ್ಸ್ ಆಸ್ಪತ್ರೆ ಇರಿಸಲಾಗಿದ್ದು, ಕುಟುಂಬಸ್ಥರು ಬಂದಾಗ ಅವರಿಗೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ..
ಸಂತಾಪ : ಮೃತ ಪರುಶುರಾಮ್ ಅವರಿಗೆ ಸಾವಿನ ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಇನ್ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ, ರಾಮಾಪುರ ಠಾಣೆಯ ಸಿಬ್ಬಂದಿ ಮೃತ ವ್ಯಕ್ತಿಗೆ ಸಂತಾಪ ಸೂಚಿಸಿದ್ದಾರೆ…
-
State10 hours ago
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಆರೋಪಿ ರನ್ಯಾರಾವ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
-
Uncategorized6 hours ago
ಭಾರತ-ಪಾಕ್ ಯುದ್ಧದ ಬಗ್ಗೆ ಸಿಎಂ ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ವಾಗ್ದಾಳಿ
-
Mysore11 hours ago
ಕೇಂದ್ರ ಸರ್ಕಾರ, ಯುದ್ಧದ ಬದಲು ಪಾಕ್ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ: ಸಿಎಂ ಸಿದ್ದರಾಮಯ್ಯ
-
Mysore9 hours ago
ಬಿಜೆಪಿ ದೇವರು, ಧರ್ಮದ ಹೆಸರಲ್ಲಿ ಬರೀ ಸುಳ್ಳು ಹರಡುತ್ತದೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
-
Hassan5 hours ago
ಹಾಸನ| ಪ್ರತಿಯೊಬ್ಬರು ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡುವುದು ಅಗತ್ಯ: ಮಾಜಿ ಶಾಸಕ ಬಿ.ಆರ್. ಗುರುದೇವ್
-
Hassan3 hours ago
ಜಮೀನು ವಿಚಾಕ್ಕೆ ಕೊಲೆ
-
Kodagu6 hours ago
ಪ್ರಧಾನಿ, ಗೃಹ ಸಚಿವರ ರಾಜೀನಾಮೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹ
-
Kodagu6 hours ago
ಮಡಿಕೇರಿಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಉದ್ಘಾಟನೆ