Connect with us

Agriculture

ತಾಲೂಕಿನ 2023/24ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಜುಲೈ 24 ಕಡೆಯ ದಿನ

Published

on

ಹೊಳೆನರಸೀಪುರ : ತಾಲೂಕಿನ 2023/24ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಜುಲೈ 24 ಕಡೆಯ ದಿನವಾಗಿದ್ದು. ಕೃಷಿ ಕ್ಷೇತ್ರದಲ್ಲಿ ವಿನೂತನ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ರೈತರು ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಸಪ್ನ ಕೆ.ಎಚ್. ತಿಳಿಸಿದ್ದಾರೆ.
ಪಟ್ಟಣ ಕೃಷಿ ಕಚೇರಿಯಲ್ಲಿ ಬುಧವಾರ ಮಾತನಾಡಿದ ಅವರು ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಯ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡುತ್ತಿದ್ದು, ಕ್ರಮವಾಗಿ 1.25 ಲಕ್ಷ ರೂ., 1 ಲಕ್ಷ ರೂ. ಹಾಗೂ 75 ಸಾವಿರ ರೂ. ಬಹುಮಾನದ ಮೊತ್ತ ಇರುತ್ತದೆ. ಅಲ್ಲದೇ ಕೃಷಿ ಪಂಡಿತ ಉದಯೋನ್ಮುಖ ಪ್ರಶಸ್ತಿಗೆ 50 ಸಾವಿರ ರೂ. ಸಹ ನೀಡಲು ಅವಕಾಶವಿರುತ್ತದೆ. ಕೃಷಿ ಪಂಡಿತ ಪ್ರಶಸ್ತಿ ಈಗಾಗಲೇ ಪಡೆದವರು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸೇವೆಯಲ್ಲಿ ಇರುವವರು, ವಿಶ್ವವಿದ್ಯಾನಿಲಯ, ಸರ್ಕಾರಿ ಸ್ವಯಂ ಸಂಸ್ಥೆಗಳ ನೌಕರರು ಮತ್ತು ಕುಟುಂಬ ಸದಸ್ಯರು, ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳ ನಿವೃತ್ತ ತಾಂತ್ರಿಕ ನೌಕರರು ಹಾಗೂ ಕುಟುಂಬದವರು ಸ್ಪರ್ಧೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ, ಮಾಹಿತಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಸಪ್ನ ಕೆ.ಎಚ್. ತಿಳಿಸಿದರು
ಹಳ್ಳಿಮೈಸೂರು ಹೋಬಳಿಯ ಬಂಟರತಳಲು ಗ್ರಾಮದ ಕವಿತ ಕೋಂ. ಶಿವಣ್ಣ ಅವರು 2022/23ನೇ ಸಾಲಿನ ಕೃಷಿ ಪಂಡಿತ ಉದಯೋನ್ಮುಖ ಪ್ರಶಸ್ತಿ ಪಡೆದಿದ್ದಾರೆ ಎಂಬ ಮಾಹಿತಿ ನೀಡಿದರು.

Continue Reading
Click to comment

Leave a Reply

Your email address will not be published. Required fields are marked *

Agriculture

ಪಿಎಂ ಕಿಸಾನ್ ಸ್ಕೀಮ್; 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?

Published

on

ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್​ನ ಖೂಂಟಿಯಲ್ಲಿ ನಿನ್ನೆ ಹೊಸ ಕಂತಿನ ಹಣ ಬಿಡುಗಡೆಯಾಗಿರುವುದನ್ನು ಪ್ರಕಟಿಸಿದರು. ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ. ಪಿಎಂ ಕಿಸಾನ್ ಸ್ಕೀಮ್​ನಲ್ಲಿ 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಏನು ಕಾರಣಗಳಿರಬಹುದು ಎಂಬ ಡೀಟೇಲ್ಸ್ ಇಲ್ಲಿದೆ…

ನವದೆಹಲಿ, ನವೆಂಬರ್ 16: ಕೃಷಿಕರ ಬೇಸಾಯಕ್ಕೆ ಧನಸಹಾಯವಾಗಿ ಸರ್ಕಾರ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 15ನೇ ಕಂತಿನ ಹಣ ನಿನ್ನೆ ನವೆಂಬರ್ 15ರಂದು ಬಿಡುಗಡೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್​ನ ಖೂಂಟಿಯಲ್ಲಿ (Khunti, Jharkhand) ನಿನ್ನೆ ಹೊಸ ಕಂತಿನ ಹಣ ಬಿಡುಗಡೆಯಾಗಿರುವುದನ್ನು ಪ್ರಕಟಿಸಿದರು. ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ.

ಪಿಎಂ ಕಿಸಾನ್ ಸ್ಕೀಮ್ ರೈತರಿಗಾಗಿ ವಿಶ್ವದಲ್ಲೇ ಇರುವ ಅತಿದೊಡ್ಡ ಡಿಬಿಟಿ ಸ್ಕೀಮ್ (DBT- direct beneficiary transfer) ಆಗಿದೆ. 2019ರ ಫೆಬ್ರುವರಿಯಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ವರ್ಷಕ್ಕೆ ತಲಾ 2,000 ರೂಗಳ 3 ಕಂತುಗಳಂತೆ 6,000 ರೂ ಹಣವನ್ನು ಅರ್ಹ ರೈತರ ಖಾತೆಗಳಿಗೆ ಸರ್ಕಾರ ನೇರವಾಗಿ ವರ್ಗಾವಣೆ ಮಾಡುತ್ತದೆ. ಈ 15ನೇ ಕಂತಿನ ಹಣ ಇನ್ನೂ ಬಂದಿಲ್ಲ ಎಂದು ಬಹಳಷ್ಟು ಮಂದಿ ಹೇಳುತ್ತಿರುವುದುಂಟು.

ಪಿಎಂ ಕಿಸಾನ್ ಸ್ಕೀಮ್​ನಲ್ಲಿ 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಅದಕ್ಕೆ ಕಾರಣಗಳಿವು…
ಯೋಜನೆಗೆ ಇನ್ನೂ ನೊಂದಾವಣಿ ಆಗಿಲ್ಲದೇ ಇರಬಹುದು.
ಇಕೆವೈಸಿ ಆಗಿಲ್ಲದೇ ಇರಬಹುದು, ಅಥವಾ ಸರಿಯಾಗಿ ಮಾಡಿಲ್ಲದೇ ಇರಬಹುದು.
ಯೋಜನೆಯ ಅರ್ಹತಾ ಮಾನದಂಡ ಒದಗಿಸಲು ವಿಫಲವಾಗಿರಬಹುದು
ನೀವು ಪಿಎಂ ಕಿಸಾನ್ ಸ್ಕೀಮ್​ನ ಅಧಿಕೃತ ಪೋರ್ಟಲ್​ಗೆ (ಲಿಂಕ್ ಇಲ್ಲಿದೆ: https://pmkisan.gov.in/) ಹೋದರೆ ಮುಖ್ಯಪುಟದಲ್ಲೇ ಆರಂಭದಲ್ಲಿ ಒಂದು ಪಾಪ್ ಅಪ್ ಬರುತ್ತದೆ. ಅದರಲ್ಲಿ ಇಕೆವೈಸಿ, ನಿಮ್ಮ ಸ್ಟೇಟಸ್ ತಿಳಿಯಲು ಹಾಗೂ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಡೌನ್​ಲೋಡ್ ಮಾಡಲು ಕ್ಯುಆರ್ ಕೋಡ್​ಗಳು ಕಾಣುತ್ತವೆ. ನಿಮಗೆ ಬೇಕಾದರೆ ಅದನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು.

ಹಾಗೆಯೇ, ಪಾಪ್ ಅಪ್ ಮುಚ್ಚಿ, ಪಿಎಂ ಕಿಸಾನ್ ವೆಬ್​ಸೈಟ್​ನ ಮುಖ್ಯಪುಟದಲ್ಲಿ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್​ನಲ್ಲಿ ವಿವಿಧ ಸೇವೆಗಳ ಟ್ಯಾಬ್​​ಗಳನ್ನು ನೋಡಬಹುದು. ಅದರಲ್ಲಿ ಇಕೆವೈಸಿ ಮಾಡುವುದು, ಫಲಾನುಭವಿಗಳ ಪಟ್ಟಿ ವೀಕ್ಷಿಸುವುದು, ನೊಂದಣಿ ಸ್ಟೇಟಸ್ ನೋಡುವುದು ಹೀಗೆ ಹಲವು ಆಯ್ಕೆಗಳಿವೆ.

ನಿಮಗೆ ಯಾವುದಾದರೂ ಅನುಮಾನ ಇದ್ದಲ್ಲಿ ಹೆಲ್ಪ್​ಡೆಸ್ಕ್ ಟ್ಯಾಬ್ ಕ್ಲಿಕ್ ಮಾಡಬಹುದು. ಅದರಲ್ಲಿ ನಿಮ್ಮ ನೊಂದಣಿ ನಂಬರ್ ಮೂಲಕ ನಿಮ್ಮ ದೂರು ಅಥವಾ ಅನುಮಾನವನ್ನು ವ್ಯಕ್ತಪಡಿಸಬಹುದು. ಅದಕ್ಕೆ ಸೂಕ್ತ ಸಮಜಾಯಿಷಿ ಅಥವಾ ಉತ್ತರ ಅಥವಾ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ.

Continue Reading

Agriculture

ಕಡಿಮೆ ಬೆಲೆಗೆ ತಂಬಾಕು ಕೊಳ್ಳುತ್ತಿರುವ ತಂಬಾಕು ಮಂಡಳಿ ವಿರುದ್ಧ ತಂಬಾಕು ಬೆಳೆಗಾರರ ಪ್ರತಿಭಟನೆ

Published

on

ಎಚ್.ಡಿ. ಕೋಟೆ ತಾಲೂಕಿನ ಹೆಬ್ಬಳ್ಳ ಗ್ರಾಮದಲ್ಲಿರುವ ತಂಬಾಕು ಮಾರುಕಟ್ಟೆಯಲ್ಲಿ ಉತ್ತಮ ತಂಬಾಕಿಗೆ ಸರಿಯಾದ ಬೆಲೆಯನ್ನ ನೀಡುತ್ತಿಲ್ಲ ಎಂದು ತಂಬಾಕು ಬೆಳೆಗಾರರು ಆರೋಪಿಸಿ ತಂಬಾಕು ಮಾರುಕಟ್ಟೆಯಲ್ಲಿ ಹರಾಜನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ನಡೆಸಿದರು.
ಆಂಧ್ರಪ್ರದೇಶ ತಂಬಾಕು ಮಂಡಳಿಯಲ್ಲಿ 290 ರೂಗಳ ಗರಿಷ್ಠ ಬೆಲೆಯನ್ನು ನೀಡಲಾಗುತ್ತಿದೆ. ಆದರೆ ಕರ್ನಾಟಕ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ತಂಬಾಕಿಗೆ ಕೇವಲ ರೂ 230 ಗರಿಷ್ಠ ಬೆಲೆಯನ್ನ ನೀಡಲಾಗುತ್ತಿದೆ, ಕರ್ನಾಟಕದಲ್ಲಿ ಆಂಧ್ರಕ್ಕಿಂತ ಉತ್ತಮ ದರ್ಜೆಯ ತಂಬಾಕು ಇದ್ದರೂ ಸಹ ಉತ್ತಮ ಬೆಲೆಯನ್ನು ನೀಡದೆ ತಾರತಮ್ಯವನ್ನು ಮಾಡುತ್ತಿದ್ದಾರೆ, ಇದನ್ನ ಪ್ರಶ್ನಿಸಿದರೆ ಪ್ರಾಯೋಗಿಕವಾಗಿ 300 ಕೆಜಿಯನ್ನು ರೈತರಿಂದ ಕೊಳ್ಳಲಾಗಿದೆ, ಮುಂದಿನ ದಿನಗಳಲ್ಲಿ ಬೆಲೆಯನ್ನ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುವುದು ಎಂದು ಸಬೂಬು ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ. ಬಸವರಾಜು ಮಾತನಾಡಿ ಆಂಧ್ರಪ್ರದೇಶದಲ್ಲಿ ಬೆಳೆಯುವ ತಂಬಾಕಿಗಿಂತ ಕರ್ನಾಟಕದಲ್ಲಿ ಬೆಳೆಯುವ ತಂಬಾಕಿಗೆ ಉತ್ತಮ ಮಾರುಕಟ್ಟೆ ಇದೆ, ಅಲ್ಲದೆ ಉತ್ತಮ ರೀತಿ ಗ್ರೇಡ್ ಅನ್ನು ಸಹ ಹೊಂದಿರುತ್ತದೆ.
ಆದರೆ ತಂಬಾಕನ್ನು ಕೊಂಡುಕೊಳ್ಳಲು ಬಂದಿರುವ ವಿವಿಧ ಕಂಪನಿಗಳು ನಮ್ಮ ರೈತರ ತಂಬಾಕನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿರುವುದು ತುಂಬಾ ಬೇಸರವನ್ನುಂಟು ಮಾಡಿದೆ, ಆದ್ದರಿಂದ ಇಂದು ನಾವು ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ನಮ್ಮ ರೈತರ ತಂಬಾಕಿಗೆ ಹೆಚ್ಚು ಬೆಲೆ ನೀಡುವಂತೆ ತಂಬಾಕು ಮಂಡಳಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಈ ವೇಳೆ ರೈತ ಮುಖಂಡರಾದ ಲೋಕೇಶ್ ಪೃಥ್ವಿ ಸೇರಿದಂತೆ ಅನೇಕ ರೈತರು ಹಾಜರಿದ್ದರು

Continue Reading

Trending

error: Content is protected !!