Hassan
ಅಗಿಲೆ ಗ್ರಾಮದ ಶ್ರೀ ಶಕ್ತಿ ಶನೈಶ್ವರಸ್ವಾಮಿ ಜಾತ್ರಾಮಹೋತ್ಸವ
ಹಾಸನ: ತಾಲೂಕಿನ ಗೊರೂರು ರಸ್ತೆ ಬಳಿ ಇರುವ ಅಗಿಲೆ ಗ್ರಾಮದಲ್ಲಿ ಶನಿವಾರದಂದು ಶ್ರೀ ಶಕ್ತಿ ಶನೈಶ್ವರಸ್ವಾಮಿ ಜಾತ್ರಾಮಹೋತ್ಸವವು ವಿಜೃಂಭಣೆಯಿಂದ ಜರುಗಿತು.

ಬೆಳಗಿನಿಂದಲೇ ದೇವರಿಗೆ ವಿಶೇಷ ಅಭಿಷೇಕ, ಪೂಜೆ ಕಾರ್ಯಗಳು ಹಾಗೂ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಬಿಸಿಲನ್ನು ಲೆಕ್ಕಿಸದೇ ಸಾವಿರಾರು ಜನರು ಶ್ರೀ ಶಕ್ತಿ ಶನೈಶ್ವರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬಂದ ಭಕ್ತರಿಗೆ ಅನ್ನದ ರೂಪದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ಹೆಳ್ಳು ದೀಪವನ್ನು ಹಚ್ಚಿ ಭಕ್ತಿ ಸಮರ್ಪಿಸಿದರು. ಅನೇಕರು ದೇವರಲ್ಲಿ ಪ್ರಾರ್ಥಿಸಿದರು.

ಶ್ರೀ ಶಕ್ತಿ ಶನೈಶ್ವರಸ್ವಾಮಿ ದೇವಸ್ಥಾನದ ಅರ್ಚಕ ಕಿರಣ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ತಾಲೂಕಿನ ಅಗಿಲೆ ಗ್ರಾಮದಲ್ಲಿ ಪ್ರತಿ ವರ್ಷವೂ ಕೂಡ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವು ನಡೆಯುತ್ತದೆ ಎಂದರು. ಶನಿವಾರ ಬೆಳಗಿನಿಂದಲೇ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಕೂಡ ನಡೆಯುತ್ತದೆ. ಸಂಜೆ ಬೆಳ್ಳಿ ಪಲ್ಲಕ್ಕಿಯಲ್ಲಿ ಸ್ವಾಮಿ ಅವರ ಉತ್ಸವ ಜರುಗಲಿದೆ. ೩೫ ವರ್ಷ ಇತಿಹಾಸ ಇರುವ ಈ ದೇವಾಲಯದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನು ಸಾರ್ವಜನಿಕರ ಸಹಕಾರದಿಂದ ಪ್ರತಿ ದೇವಸ್ಥಾನ ಅಭಿವೃದ್ಧಿ ಹೊಂದಿ ಅನ್ನದಾನ ಮಾಡುತ್ತಿರುವುದಾಗಿ ಹೇಳಿದರು.
Hassan
ಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ
ಆಲೂರು: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನ ಬೇಲೂರು, ಕೊಡ್ಲಿಪೇಟೆ ರಾಜ್ಯ ಹೆದ್ದಾರಿ ಚನ್ನಾಪುರದ ಬಳಿ ತಡೆಗೋಡೆ ಕುಸಿದಿದ್ದು, ಕಾಮಗಾರಿ ನಡೆಯುತ್ತಿರುವುದರಿಂದ ಬೈರಾಪುರ-ಚನ್ನಪುರ- ಮಗ್ಗೆ ಸಂಪರ್ಕಿಸಿ ರಸ್ತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮುರುಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇಲೂರು ಕೊಡ್ಲಿಪೇಟೆ 49.2 km ಉದ್ದದ ರಾಜ್ಯ ಹೆದ್ದಾರಿಯು ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರದ ಬಳಿ ತಡೆಗೋಡೆ ಕುಸಿತ ಉಂಟಾಗಿತ್ತು. SDMF/NDRF ಅಡಿಯಲ್ಲಿ ₹ 33 ಲಕ್ಷ ವೆಚ್ಚದಲ್ಲಿ ನೂತನ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸದರಿ ಪ್ರದೇಶ ಶೀತವಾಗಿದ್ದು, ಕಾಮಗಾರಿ ನಡೆಸುವ ವೇಳೆ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು, ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ 75 ರ ಪಾಳ್ಯ ಬಳಿಯ ಕಣದಹಳ್ಳಿ ವೃತ್ತ ಬಲ್ಲೂರು, ಬೆಟ್ಟಳ್ಳಿ ಕ್ರಾಸ್ ಮಾರ್ಗದ ಮೂಲಕ ಮಗ್ಗೆ ಗ್ರಾಮವನ್ನು ತಲುಪುವಂತೆ ಸೂಚಿಸಲಾಗಿದೆ.
Hassan
ಸಕಲೇಶಪುರದಲ್ಲಿ ಗೋವಾ ಮದ್ಯ ಸಾಗಣೆ ಪತ್ತೆ: 5.24 ಲಕ್ಷ ರೂ. ಮೌಲ್ಯದ ಮದ್ಯ–ವಾಹನ ಜಪ್ತಿ
ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ, ಸಕಲೇಶಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ 12.15 ಗಂಟೆಯ ವೇಳೆಗೆ ರಸ್ತೆಗಾವಲು ನಡೆಸಲಾಯಿತು. ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳಿ ಗ್ರಾಮದ ರಸ್ತೆಯಲ್ಲಿ KA-18-N-5253 ಸಂಖ್ಯೆಯ ಟಾಟಾ ಸಫಾರಿ ವಾಹನವನ್ನು ಶೋಧಿಸಿದಾಗ “FOR SALE IN GOA ONLY” ಎಂದು ನಮೂದಿರುವ ಮದ್ಯ ಪತ್ತೆಯಾಗಿದೆ.

ಶೋಧನೆಯಲ್ಲಿ 750 ಮಿಲಿ ಮ್ಯಾನ್‌ಷನ್ ಹೌಸ್ ಫ್ರೆಂಚ್ ಬ್ರಾಂಡಿ 179 ಬಾಟಲ್, 2 ಲೀಟರ್ ಸಾಮರ್ಥ್ಯದ 5 ಪ್ಲಾಸ್ಟಿಕ್ ಬಾಟಲ್ ಹಾಗೂ 750 ಮಿಲಿ ಇಂಪೀರಿಯಲ್ ಬ್ಲ್ಯೂ ಹ್ಯಾಂಡ್ ಪಿಕ್ ಗ್ರೀನ್ ವಿಸ್ಕಿ 180 ಬಾಟಲ್ ಸೇರಿ ಒಟ್ಟು 279.250 ಲೀಟರ್ (364 ಬಾಟಲ್) ಮದ್ಯ ಜಪ್ತುಪಡಿಸಲಾಗಿದೆ.
ಮದ್ಯದ ಮೌಲ್ಯ ರೂ.1,24,395 ಮತ್ತು ವಾಹನ ಮೌಲ್ಯ ರೂ.4 ಲಕ್ಷ ಸೇರಿ ಒಟ್ಟು ಅಂದಾಜು ಮೌಲ್ಯ ರೂ.5,24,395 ಆಗಿದೆ. ಈ ಸಂಬಂಧ ಅಬಕಾರಿ ನಿರೀಕ್ಷಕ ವಿ.ಜಿ. ಜಯಕುಮಾರ ಅವರು ಅಬಕಾರಿ ನಿಯಮಾನುಸಾರ ಪ್ರಕರಣ ದಾಖಲಿಸಿದ್ದಾರೆ.
Hassan
ನಾಳೆ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅವರಿಂದ ಸದ್ಯೋಧನ ಪಾದಯಾತ್ರೆ
ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ಶ್ರೀಮದ್ ರಂಭಾಪುರಿ ವೀರಾ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ (ನಾಳೆ) ಡಿ.14ರಂದು ಸದ್ಯೋಧನ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ ಎಂದು ಶ್ರೀಮಠದಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಡಿ.14ರ ಭಾನುವಾರ ಬೆಳಿಗ್ಗೆ 09.30 ಗಂಟೆಗೆ ಕಾರ್ಜುವಳ್ಳಿ ಕುಡಿಗೆಯಲ್ಲಿ ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಿ ನಂತರ ಶಿವಾಚಾರ್ಯರ ಪಾದಯಾತ್ರೆ ಪ್ರಾರಂಭಿಸಲಾಗುವುದು. ಪಾದಯಾತ್ರೆಯ ಮಾರ್ಗಮಧ್ಯೆ ಭಕ್ತರಿಗೆ ರುದ್ರಾಕ್ಷ, ವಿಭೂತಿ ಧಾರಣೆ, ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ವಿತರಣೆ ಮಾಡಲಾಗುವುದು.

ನಂತರ 11.00 ಗಂಟೆಗೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಪಾದಯಾತ್ರೆ ಮಂಗಲವಾಗುವುದು. ಆನಂತರ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ಬಳಿ ಪ್ರಸಾದ ವಿನಿಯೋಗವಿರುತ್ತದೆ. ಶ್ರೀ ಮಠವನ್ನು ತಲುಪಲು ಸಹಾಯಕ್ಕಾಗಿ ಗೂಗಲ್ ಮ್ಯಾಪ್ ಅನ್ನು ಹಾಗೂ ಲೊಕೇಶನ್ ಸಹ ಕಳುಹಿಸಲಾಗಿದೆ. ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ನೆರವೇರಿಸಿ ಕೊಡುವುದರ ಜೊತೆಗೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಲಾಗಿದೆ.
-
Hassan40 minutes agoಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ
-
Special2 hours agoಕರ್ನಾಟಕ ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಉಚಿತ ಕೋಳಿ ಮರಿ, ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ
-
Hassan20 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
Hassan18 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
Mandya19 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
-
Kodagu20 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
-
State20 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
State16 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
