Chamarajanagar
ಅಗರ ಹಿಂಡಿ ಮಾರಮ್ಮನ ಕೊಂಡೋತ್ಸವ

ತಾಲ್ಲೂಕಿನ ಐತಿಹಾಸಿಕ ಅಗರ-ಮಾಂಬಳ್ಳಿ ಗ್ರಾಮಗಳ ಹಿಂಡಿ ಮಾರಮ್ಮ ದೇವಾಲಯದಲ್ಲಿ ದೀಪಾವಳಿ ಕೊಂಡೋತ್ಸವ ಜರುಗಿತು.
ದೇವಳದಲ್ಲಿ ಸೋಮವಾರದಿಂದ ಪ್ರಥಮ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿದ್ದು, ತಳಿರು ತೋರಣ ಅಲಂಕರಿಸಲಾಗಿತ್ತು.
ದೇವಾಲಯದ ಸುತ್ತಮುತ್ತಲ ನಾಡ ದೇಶಗಳ ಹಲವು ಗ್ರಾಮಸ್ಥರು, ಭಕ್ತರು ಹಾಗೂ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಪೂಜೆಗೆ ಬಂದಿದ್ದರಿಂದ ವಿವಿಧ ಸೇವೆಗಳು ನಡೆಯಿತು.
ದೇಗುಲದಲ್ಲಿ ಸಪ್ತ ಮಾತೃಕೆಯರಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ, ಚಾಮುಂಡಾಂಬೆಗೆ ಪೂಜೆ ಸಲ್ಲಿಸಲಾಗುತ್ತದೆ. ಒಂದೇ ಗುಡಿಯಲ್ಲಿ ಏಳು ದೇವತೆಗಳ ಮೂರ್ತಿಗಳು ಒಟ್ಟಾಗಿರುವುದೇ ಇಲ್ಲಿನ ವಿಶೇಷ. ದೇವಿಯರ ಕಪ್ಪು ಶಿಲೆಗಳ ಸುಂದರ ವಿಗ್ರಹಗಳು ಬಹು ಆಕರ್ಷಕವಾಗಿದ್ದು, ಈ ಏಳು ಮಾರಿಯರು ಏಳು ಗ್ರಾಮಗಳನ್ನು ಪೊರೆಯುತ್ತಾರೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಸೋಮವಾರದಿಂದ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಮೂಲ ಮೂರ್ತಿಗಳಿಗೆ ಹೊಸ ವಸ್ತ್ರ, ಅಡಕೆ ಸಿಂಗಾರ ಹಾಗೂ ಪುಷ್ಪಗಳ ಹೂ ಹಾರಗಳ ಹಾಕಿ, ದೈವಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರಾತ್ರಿ ಮೆರವಣಿಗೆ ನಡೆಯುತ್ತದೆ. ಮುಂಜಾನೆ ದೈವಿಕ ಕಾರ್ಯಗಳು ಪೂರ್ಣಗುಳ್ಳುತ್ತದೆ. ಕೊಂಡೋತ್ಸವಕ್ಕೂ ಮೊದಲು ಭಕ್ತರು ಬಾಯಿಗೆ ಕಬ್ಬಿಣದ ಸನಿಕೆಯಿಂದ ಚುಚ್ಚಿಕೊಂಡು ಹರಕೆ ಒಪ್ಪಿಸಿದರು.
ಕೊಂಡೋತ್ಸವಕ್ಕೆ ಹಳದಿವಸ್ತ್ರ ಧರಿಸಿದ ಭಕ್ತರು ಅರಿಸಿನ ಲೇಪಿಸಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಾರೆ. ಸಂಜೆ ಮಾರಮ್ಮನ ಸತ್ತಿಗೆ, ಛತ್ರಿ ಚಾಮರ ಹೊತ್ತ ಭಕ್ತರು, ಮಂಗಳ ವಾದ್ಯ ಸಮೇತ ಕೊಂಡ ನಡೆಯುವ ಸ್ಥಳಕ್ಕೆ ತೆರಳುತ್ತಾರೆ. ಅಪಾರ ಭಕ್ತರ ಸಡಗರ ಸಂಭ್ರಮಗಳ ನಡುವೆ ನೂರಾರು ಭಕ್ತರು ಕೊಂಡ ಆಯ್ದರು.
Chamarajanagar
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ

ಚಾಮರಾಜನಗರ: ತಲೆಯಲ್ಲಿ ಕೂದಲು ಇಲ್ಲದ ಕಾರಣಕ್ಕೆ ಪತ್ನಿ ಕಿರುಕುಳ ನೀಡಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಉಡಿಗಾಲ ಗ್ರಾಮದ ನಿವಾಸಿ ಪರಶಿವಮೂರ್ತಿ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಪರಶಿವಮೂರ್ತಿಗೆ ತಲೆಯಲ್ಲಿ ಕೂದಲು ಕಡಿಮೆ ಇದ್ದು, ಕೂದಲು ನಾಟಿ ಮಾಡಿಸಿಕೊಳ್ಳುವಂತೆ ಪತ್ನಿ ಒತ್ತಾಯಿಸುತ್ತಿದ್ದಳು ಬೋಳು ತಲೆ ಎಂದು ಪದೇಪದೇ ನಿಂದಿಸುತ್ತಿದ್ದಳು. ಇದರಿಂದ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಮಾಹಿತಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Chamarajanagar
ಸಾಮಾಜಿಕ ಭದ್ರತಾ ಯೋಜನೆಗಳ ಮೆಗಾ ಲಾಗಿನ್ ಕಾರ್ಯಕ್ರಮ

ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಲೀಡ್ ಬ್ಯಾಂಕ್ ಚಾಮರಾಜನಗರ ಮತ್ತು ಧಾನ್ ಫೌಂಡೇಶನ್ ಸಂಸ್ಥೆಯು ಹಾಗೂ ಭೀಮನಬೀಡು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಭೀಮನಬೀಡು ಗ್ರಾಮದ
ವಿವಿಧ ಬ್ಯಾಂಕ್ ಖಾತೆದಾರೆರೆಲ್ಲರಿಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆ ಎಂಬ ಎರಡು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಗ್ರಾಮದ ಒಟ್ಟು ಪಿ ಎಮ್ ಎಸ್ ಬಿ ವೈ ಯೋಜನೆಗೆ 271 ಖಾತೆದಾರರು ಹಾಗೂ ಪಿ ಎಂ ಜೆ ಜೆ ಬಿ ವೈ ಯೋಜನೆಗೆ 200 ಬ್ಯಾಂಕ್ ಖಾತೆದಾರರನ್ನು ಸೇರ್ಪಡೆ ಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಿಡಿಒ ಭೋಜೇಶ್ ರವರು ತಮ್ಮ ಗ್ರಾಮದ ಜನರಿಗೆ ಅರ್ಜಿಗಳನ್ನು ಬರೆವುದರ ಮೂಲಕ ನೋಂದಣಿ ಮಾಡಿಸಿದರು.
ಈ ಸಂದರ್ಭದಲ್ಲಿ
ಮಹದೇವೇಗೌಡ
ಧಾನ್ ಫೌಂಡೇಶನ್ ಸಿ ಎಫ್ ಎಲ್ ಗೋವಿಂದರಾಜು
ಆರ್ಥಿಕ ಸಹಾಯಕರು ವಸಂತ ಜ್ಯೋತಿ ಮತ್ತು ಮಮತಾ
ಪಂಚಾಯಿತಿ ಸದಸ್ಯರು ಸ್ವಾಮಿ. ಮತ್ತು ಸಿಬ್ಬಂದಿಗಳು ಗ್ರಾಮಸ್ಥರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು

-
Chamarajanagar20 hours ago
ಕಾಂಗ್ರೆಸ್ ಗೆ ಭರ್ಜರಿ ಗೆಲುವು
-
Uncategorized19 hours ago
ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ: ಪುಂಡಾನೆ ಸೆರೆ ಹಿಡಿದ ಕ್ಯಾಪ್ಟನ್ ಪ್ರಶಾಂತ್ ಅಂಡ್ ಟೀಮ್
-
Chamarajanagar21 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ
-
Chikmagalur23 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
National - International12 hours ago
ಪಾಕ್ನ 90 ಮಂದಿ ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದ ಬಲೂಚ್ ಲಿಬರೇಶನ್ ಆರ್ಮಿ
-
Kodagu14 hours ago
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ
-
Chamarajanagar15 hours ago
ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ
-
Mandya17 hours ago
ಮಳವಳ್ಳಿ ವಸತಿ ಶಾಲೆಯ ದುರ್ಘಟನೆ : ಎಚ್ಡಿಕೆ ಕಳವಳ