Hassan
ಸ್ಯಾಂಟ್ರೊ ಕಾರು ಹಾಗೂ ಮಾರುತಿ ಶಿಫ್ಟ್ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ
ಬೇಲೂರು.
ಪಟ್ಟಣದ ಹೊಸನಗರ ತಿರುವಿನಲ್ಲಿ ಸ್ಯಾಂಟ್ರೊ ಕಾರು ಹಾಗೂ ಮಾರುತಿ ಶಿಫ್ಟ್ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ತೀವ್ರತರವಾದ ಪೆಟ್ಟು ಬಿದ್ದಿದ್ದು .ಅದರಲ್ಲಿ ಒಬ್ಬ ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗಮದ್ಯದಲ್ಲೆ ಅಸುನೀಗಿದ್ದಾರೆ
ಸ್ಯಾಂಟ್ರೋ ಕಾರ್ ಹಾಸನಕ್ಕೆ ಹೋಗುತ್ತಿದ್ದು ಶಿಪ್ಟ್ ಕಾರ್ ಹಾಸನದಿಂದ ಬೇಲೂರಿಗೆ ಬರುವಾಗ ಪಟ್ಟಣದ ಹೊಸನಗರ ತಿರುವಿನಲ್ಲಿ ಚಾಲಕರ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ.ಗಂಭೀರವಾಗಿ ಗಾಯಗೊಂಡಿದ್ದ ಬೇಲೂರು ತಾಲೂಕು ಐರವಳ್ಳಿ ಗ್ರಾಮದ ಮಲ್ಲೇಶ್ ಎಂಬುವ ಮಗ ಮನೋಜ್( ೨೬) ವರ್ಷ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮದ್ಯದಲ್ಲೆ ಅಸುನೀಗಿದ್ದು ಮತ್ತೊಂದು ಕಾರಿನ ಚಾಲಕ ಕಿಶನ್
ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು
ಬೇಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿ ತಿಂಗಳು ಈ ರಸ್ತೆಯಲ್ಲಿ ವಾಹನ ಅಪಘಾತಗಳು ಸಂಭವಿಸಿ ಸಾವನೋವುಗಳು ಹೆಚ್ಚಾಗುತ್ತಿದ್ದು ಕೂಡಲೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು

Hassan
ಫೆ.28ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ, ಗುರುವಂದನಾ ಸಮಾರಂಭ
ಹಾಸನ: “ಎಮಗೆ ಉಪಕರಿಸಿದವರನ್ನು ಸ್ಮರಿಸುವುದು–ಆದರಿಸುವುದು ನಮ್ಮ ಸಂಸ್ಕಾರ, ಎಮಗೆ ಉಪಕಾರ ಮಾಡುವವರನ್ನು ಸತ್ಕರಿಸುವುದು ನಮ್ಮ ಶಿಷ್ಟಾಚಾರ” ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಫೆಬ್ರವರಿ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ, ಧನ್ಯತಾ ಸಮಾರಂಭ, ಸಂಘದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭವನ್ನು ಭವ್ಯವಾಗಿ ಆಯೋಜಿಸಲಾಗಿದೆ ಎಂದು ಚೈತ್ರ ನಾಯಕರಹಳ್ಳಿ ಅವರು ತಿಳಿಸಿದರು.
55 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಸಮತ್ವ, ಸಮನ್ವಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನೊಳಗೊಂಡ ಸಂಸ್ಥೆಯಾಗಿ ರಾಜ್ಯದ ಸಮಸ್ತ ಶಿಕ್ಷಕರ ಸೇವಾ ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ದಲಿತ ನಾಯಕರಿಂದ ಜನ್ಮ ತಳೆದು, ಧೀಮಂತ ನಾಯಕರಿಂದ ಮುನ್ನಡೆಸಲ್ಪಟ್ಟು, ಪ್ರಸ್ತುತ ಯುವ ನಾಯಕತ್ವದ ಮೂಲಕ “ಶಿಕ್ಷಕರೇ ನನ್ನ ಕುಟುಂಬ ಮತ್ತು ಸರ್ವಸ್ವ” ಎಂಬ ಭಾವನೆಯೊಂದಿಗೆ ಸಂಘಟನೆ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಕರ ಸೇವಾ ಹಿತಾಸಕ್ತಿಯ ರಕ್ಷಣೆಯೊಂದಿಗೆ, ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಶಿಕ್ಷಣದ ಪ್ರಗತಿಗೆ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ. “ಸರ್ಕಾರಿ ಶಾಲೆಗಳ ಉಳಿವು ಎಂದರೆ ಬಡಜನರ ಶಿಕ್ಷಣದ ಉಳಿವು” ಎಂಬ ನಂಬಿಕೆಯಿಂದ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಶಿಕ್ಷಕರ ನೂರಾರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಹಾಗೂ ಇಲಾಖೆಗಳ ಗಮನ ಸೆಳೆಯುವ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ ಎಂದು ಹೇಳಿದರು.
ಫೆಬ್ರವರಿ 28ರಂದು ನಡೆಯಲಿರುವ ಈ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ನುಗ್ಗಲಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಚೇತನ್ ಹಾಗೂ ಗೌರವಾಧ್ಯಕ್ಷರಾದ ಕೆ. ನಾಗೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯದ 1 ಲಕ್ಷ 65 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು, ಎಲ್ಲಾ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿತೈಷಿಗಳು ಈ ಶೈಕ್ಷಣಿಕ ಮಹಾಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಸನ ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ, ಜಿಲ್ಲಾ ಗೌರವಾಧ್ಯಕ್ಷರಾದ ಅಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಗುಡುಗನಹಳ್ಳಿ ಮಂಜುನಾಥ್, ರಾಜ್ಯ ಉಪಾಧ್ಯಕ್ಷ ವಿ.ಜಿ. ದ್ಯಾವೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಹಾಸನ ತಾಲ್ಲೂಕು ಅಧ್ಯಕ್ಷ ಸಿ.ಹೆಚ್. ಅಣ್ಣೆಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಬಿ.ಕೆ. ರವೀಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಕಾರ್ಯಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Hassan
ಹೊಳೆನರಸೀಪುರ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡರ ಹೇಳಿಕೆ ಖಂಡನೆ : ಜಿಲ್ಲಾ ಬಿಜೆಪಿ ತೀವ್ರ ಆಕ್ಷೇಪ
ಹಾಸನ : ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡರು ಇತ್ತೀಚೆಗೆ ಪತ್ರಿಕಾ ಗೋಷ್ಟಿ ನಡೆಸಿ ಬಿಜೆಪಿ ನಾಯಕರುಗಳ ವಿರುದ್ಧ ಬಹಿರಂಗ ಆರೋಪಗಳನ್ನು ಮಾಡಿರುವುದು ಪಕ್ಷದ ಶಿಸ್ತು ಹಾಗೂ ಘನತೆಗೆ ಧಕ್ಕೆಯಾಗುವಂತಹ ನಡೆ ಎಂದು ನಂಬಿಹಳ್ಳಿಗಿರೀಶ್ ಅವರು ತೀವ್ರವಾಗಿ ಖಂಡಿಸಿದರು.
ಭಾರತೀಯ ಜನತಾ ಪಾರ್ಟಿ ದೇಶ ಮೊದಲು, ವ್ಯಕ್ತಿ ನಂತರ, ಸಿದ್ಧಾಂತಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರ ಪಕ್ಷವಾಗಿದ್ದು, ಪ್ರಾಥಃಸ್ಮರಣೀಯರಾದ ದೀನದಯಾಳ್ ಉಪಾಧ್ಯಾಯರು ಹಾಗೂ ಡಾ. ಶ್ಯಾಮ ಪ್ರಸಾದ ಮುಖರ್ಜಿಯವರಿಂದ ಸ್ಥಾಪಿತವಾದ ಈ ಪಕ್ಷವು, ಪೂರ್ವ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶಿಸ್ತುಬದ್ಧ ನಾಯಕತ್ವದಲ್ಲಿ ದೇಶವ್ಯಾಪಿ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ನಂಬಿಹಳ್ಳಿ ಗಿರೀಶ್ ಅವರು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ತನ್ನದೇ ಆದ ನೀತಿ-ನಿಯಮಗಳು ಹಾಗೂ ದೂರು ಪರಿಹಾರ ವ್ಯವಸ್ಥೆ ಹೊಂದಿದೆ. ಪಕ್ಷದ ಒಳಗೆ ಯಾವುದೇ ಅಸಮಾಧಾನ ಅಥವಾ ದೂರುಗಳಿದ್ದಲ್ಲಿ, ಅದನ್ನು ಪಕ್ಷದ ವೇದಿಕೆಯಲ್ಲಿ ಮಂಡಿಸಿ ಪರಿಶೀಲನೆಗೆ ಅವಕಾಶವಿದೆ. ಆದರೆ ಅವುಗಳನ್ನು ಬಿಟ್ಟು ಮಾಧ್ಯಮಗಳ ಮುಂದೆ ಬಹಿರಂಗ ಆರೋಪಗಳನ್ನು ಮಾಡುವುದು ಪಕ್ಷವಿರೋಧಿ ನಡೆಯಾಗಿದೆ ಎಂದು ಜಿಲ್ಲಾ ನಾಯಕರು ಅಭಿಪ್ರಾಯಪಟ್ಟರು.
ಒಂದು ಪಟ್ಟಣ ಪಂಚಾಯ್ತಿ ಚುನಾವಣಾ ಟಿಕೆಟ್ ನೀಡುವಾಗಲೂ ಸೂಕ್ತ ಚರ್ಚೆ ನಡೆಸುವ ಪಕ್ಷವು, ದೇವರಾಜೇಗೌಡರನ್ನು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಮಾಡಿ ಗೌರವಿಸಿದೆ. ಇಂತಹ ಸಂದರ್ಭದಲ್ಲಿ ಅವರಿಂದಲೇ ಪಕ್ಷದ ವಿರುದ್ಧ ಆರೋಪಗಳು ಹೊರಬಂದಿರುವುದು ಅಸಮಂಜಸ ಹಾಗೂ ಖಂಡನೀಯ ಎಂದು ತಿಳಿಸಿದರು.

ದೇವರಾಜೇಗೌಡರ ಬಹಿರಂಗ ಹೇಳಿಕೆಗಳಿಂದ ಪಕ್ಷದ ವರ್ಚಸ್ಸು ಮತ್ತು ಘನತೆಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಅವರ ಪಕ್ಷವಿರೋಧಿ ಹೇಳಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ ದೂರು ಸಲ್ಲಿಸಲಾಗುವುದು ಮತ್ತು ಪಕ್ಷದಿಂದ ಉಚ್ಛಟನೆ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್, ಗಿರೀಶ್ ನಂಬಿಹಳ್ಳಿ, ವಿದ್ಯಾಪ್ರಸಾದ್, ಮೋಹನ್, ನಾರಾಯಣ್ ಗೌಡ, ಹೇಮಂತ್ ಕುಮಾರ್, ವಿದ್ಯಾಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Hassan
ಚಿರತೆ ದಾಳಿ: ಗೌತವಳ್ಳಿಯಲ್ಲಿ ಇಬ್ಬರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ
ಬೇಲೂರು : ತಾಲೂಕಿನ ಗಡಿ ಗ್ರಾಮವಾದ ಗೌತಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ದಾಳಿ ಸಂಭವಿಸಿ ಇಬ್ಬರು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗೌತವಳ್ಳಿ ಗ್ರಾಮವು ಬೇಲೂರು ತಾಲೂಕಿನ ಮಾಡ್ ಗೋಡು–ಚುಂಗನಹಳ್ಳಿ ಬಾರ್ಡರ್ ವ್ಯಾಪ್ತಿಗೆ ಸೇರಿದ್ದು, ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿರುವುದರಿಂದ ಚಿರತೆಗಳ ಸಂಚಾರ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇಲೂರು ತಾಲೂಕಿನ ಗೌತವಳ್ಳಿ ಗ್ರಾಮದ ಎಬಿಸಿ ಚಂದ್ರೇಗೌಡರವರ ಕಾಫಿ ತೋಟದಲ್ಲಿ ಬೆಳಿಗ್ಗೆ ಕೂಲಿ ಕಾರ್ಮಿಕರು ಸುಣ್ಣ ಚೆಲ್ಲುವ ಕೆಲಸದಲ್ಲಿ ತೊಡಗಿದ್ದಾಗ, ತೋಟದೊಳಗಿನಿಂದ ಏಕಾಏಕಿ ಎರಡು ಚಿರತೆಗಳು ದಾಳಿ ನಡೆಸಿವೆ. ಈ ದಾಳಿಯಲ್ಲಿ ಸುಲ್ತಾನ ಹಾಗೂ ಸಬೀನಾ ಎಂಬ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿರತೆಗಳ ದಾಳಿಯಿಂದ ಕಾರ್ಮಿಕರು ನೆಲಕ್ಕೆ ಬಿದ್ದಿದ್ದು, ಅವರ ಕೂಗು ಕೇಳಿ ಇತರ ಕಾರ್ಮಿಕರು ಧಾವಿಸಿ ಬಂದು ಚಿರತೆಗಳನ್ನು ಓಡಿಸಿದ್ದಾರೆ ಎನ್ನಲಾಗಿದೆ.

ಗಾಯಗೊಂಡ ಇಬ್ಬರನ್ನೂ ತಕ್ಷಣವೇ ಸ್ಥಳೀಯರ ಸಹಕಾರದಿಂದ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ವೈದ್ಯರು ಹೆಚ್ಚಿನ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆಗಳ ಸಂಚಾರ ಇರುವುದರಿಂದ ತೋಟ ಪ್ರದೇಶಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ, ಚಿರತೆಗಳನ್ನು ಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಈ ಚಿರತೆ ದಾಳಿಯಿಂದ ಗೌತವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ಆವರಿಸಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ತೋಟದ ಕೆಲಸಕ್ಕೆ ತೆರಳಲು ಜನರು ಹಿಂಜರಿಯುತ್ತಿದ್ದಾರೆ. ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
-
Mysore3 hours agoಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್
-
Chamarajanagar5 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Hassan23 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Mandya23 hours ago1.89 ಕೋಟಿ ರೂ.ವೆಚ್ಚದಲ್ಲಿ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸುವ ಯೋಜನೆಗೆ ರಮೇಶ್ ಬಂಡಿಸಿದ್ದೇಗೌಡ ಚಾಲನೆ
-
Hassan47 minutes agoಫೆ.28ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಶಿಕ್ಷಕರ ಸಂಘದ ಸುವರ್ಣ ಮಹೋತ್ಸವ, ಗುರುವಂದನಾ ಸಮಾರಂಭ
-
Hassan1 hour agoಹೊಳೆನರಸೀಪುರ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡರ ಹೇಳಿಕೆ ಖಂಡನೆ : ಜಿಲ್ಲಾ ಬಿಜೆಪಿ ತೀವ್ರ ಆಕ್ಷೇಪ
-
Manglore1 hour agoಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ…?- ಆರೋಪ
-
Kodagu2 hours ago“ಅಂದು ದೂರದ ಆಲೋಚನೆ ಇಂದು ದುರಾಲೋಚನೆ”
