Connect with us

Sports

INDvsENG 5th t20: ಗುರುವಿನ ಹಾದಿಯಲ್ಲಿ ಶಿಷ್ಯ: 17 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಅಭಿಷೇಕ್‌ ಶರ್ಮಾ

Published

on

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಎಡಗೈ ಬ್ಯಾಟರ್‌ ವೇಗದ ಅರ್ಧಶತಕ ದಾಖಲಿಸಿದ್ದಾರೆ.

ಅಭಿಷೇಕ್‌ ಶರ್ಮಾ ಕೇವಲ 17 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಭಾರತ ತಂಡದ ಪರವಾಗಿ ವೇಗವಾಗಿ ಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಯುವರಾಜ್‌ ಸಿಂಗ್‌ ಮೊದಲ ಸ್ಥಾನದಲ್ಲಿದ್ದಾರೆ.

Continue Reading

Sports

WPL 2025: ಟೂರ್ನಿಯಲ್ಲಿ ಶುಭಾರಂಭ ಮಾಡಿದ ಡೆಲ್ಲಿ; ಮುಂಬೈ ಮೊದಲ ಸೋಲು

Published

on

ವಡೋದರಾ: ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಬ್ಲ್ಯೂಪಿಎಲ್‌ ಸೀಸನ್‌ 3ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಪಡೆ 19.1 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 164 ರನ್‌ ಬಾರಿಸಿದೆ. ಈ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಮುಂಬೈ ಇನ್ನಿಂಗ್ಸ್‌: ಎಂಐ ಪರ ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂಸ್‌ಗೆ ಶೂನ್ಯ ಸಂಪಾದಿಸಿ ಬಂದ ಹಾದಿಯಲ್ಲೇ ಹಿಂತಿರುಗಿದರು. ಯಶ್ತಿಕಾ ಭಟಿಯಾ ಕೇವಲ 11 ರನ್‌ಗಳಿಗೆ ಸುಸ್ತಾದರು.

ತಂಡ ಆರಂಭಿಕ ಕುಸಿತ ಕಾಣುತ್ತಿದ್ದ ವೇಳೆ ಬ್ರಂಟ್‌ ಹಾಗೂ ಕೌರ್‌ ಭದ್ರ ಇನ್ನಿಂಗ್ಸ್‌ ಕಟ್ಟಿದರು. ನ್ಯಾಟ್‌ ಸ್ಕಿವರ್‌ ಬ್ರಂಟ್‌ ಔಟಾಗದೇ 59 ಎಸೆತ ಎದುರಿಸಿ 13 ಬೌಂಡರಿ ಸಹಿತ 80 ರನ್‌ ಚಚ್ಚಿದರೇ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೇವಲ 22 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 42 ರನ್‌ ಕೆಲಹಾಕಿ ತಂಡಕ್ಕೆ ಆಸರೆಯಾದರು.

ಬಳಿಕ ಬಂದ ಯಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ. ಉಳಿದಂತೆ ಅಮೇಲಿಯಾ 9, ಸಜನಾ 1, ಅಮನ್ಜೋತ್‌ ಕೌರ್‌ 7, ಸಂಸ್ಕೃತಿ ಗುಪ್ತಾ 2, ಕಲಿತಾ 1, ಶಾಬ್ನಿಮ್‌ ಇಸ್ಮಾಯಿಲ್‌ ಹಾಗೂ ಸೈಕಾ ಡಕ್‌ಔಟ್‌ ಆದರು.

ಡೆಲ್ಲಿ ಪರ ಸದರ್ಲ್ಯಾಂಡ್‌ ಮೂರು, ಶಿಕಾ ಪಾಂಡೆ ಎರಡು, ಕ್ಯಾಪ್ಸಿ ಹಾಗೂ ಮಿನ್ನು ಮಣಿ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಡೆಲ್ಲಿ ಇನ್ನಿಂಗ್ಸ್‌: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ನಾಯಕಿ ಲೆನಿನ್‌ 15 ರನ್‌ಗಳಿಸಿ ಔಟಾದರೇ, ಶಫಾಲಿ ವರ್ಮಾ 18 ಎಸೆತಗಳಲ್ಲಿ 43 ರನ್‌ ಗಳಿಸಿ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿ ಔಟಾದರು. ರೋಡ್ರಿಗಸ್‌ 2, ಸದರ್ಲ್ಯಾಂಡ್‌ 13, ಅಲೈಸ್‌ ಕ್ಯಾಪ್ಸಿ 16, ಸಾರಾ ಬ್ರೈಸ್‌ 21, ಶಿಕಾ ಪಾಂಡೆ 2 ರನ್‌ ಗಳಿಸಿದರು.

ಕೊನೆಯಲ್ಲಿ ಅಬ್ಬರಿಸಿ ನಿಕಿ ಶರ್ಮಾ ಹಾಗೂ ರಾಧಾ ಯಾದವ್‌ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಿಕಿ ಪ್ರಸಾದ್‌ 35, ರಾಧಾ ಯಾದವ್‌ 9 ಹಾಗೂ ಅರುಂಧತಿ ರೆಡ್ಡಿ 2 ರನ್‌ ಗಳಿಸಿದರು.

ಅಮೇಲಿಯಾ ಕೌರ್‌, ಮ್ಯಾಥ್ಯೂಸ್‌ ತಲಾ ಎರಡು, ಬ್ರಂಟ್‌, ಇಸ್ಮಾಯಿಲ್‌ ಹಾಗೂ ಸಜನಾ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

Continue Reading

Sports

WPL 2025: ನ್ಯಾಟ್‌ ಸ್ಕಿವರ್‌ ಬ್ರಂಟ್‌ ಅರ್ಧಶಕತ; ಮುಂಬೈ 164ಕ್ಕೆ ಆಲ್‌ಔಟ್‌

Published

on

ವಡೋದರಾ: ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಬ್ಲ್ಯೂಪಿಎಲ್‌ ಸೀಸನ್‌ 3ರ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 164ಕ್ಕೆ ಆಲ್‌ಔಟ್‌ ಆಗಿದೆ. ಇತ್ತ ಡೆಲ್ಲಿ ಗೆಲ್ಲಲ್ಲು 165ರನ್‌ಗಳ ಅವಶ್ಯಕತೆಯಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಪಡೆ 19.1 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 164 ರನ್‌ ಬಾರಿಸಿದೆ.

ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂಸ್‌ಗೆ ಶೂನ್ಯ ಸಂಪಾದಿಸಿ ಬಂದ ಹಾದಿಯಲ್ಲೇ ಹಿಂತಿರುಗಿದರು. ಯಶ್ತಿಕಾ ಭಟಿಯಾ ಕೇವಲ 11 ರನ್‌ಗಳಿಗೆ ಸುಸ್ತಾದರು.

ತಂಡ ಆರಂಭಿಕ ಕುಸಿತ ಕಾಣುತ್ತಿದ್ದ ವೇಳೆ ಬ್ರಂಟ್‌ ಹಾಗೂ ಕೌರ್‌ ಭದ್ರ ಇನ್ನಿಂಗ್ಸ್‌ ಕಟ್ಟಿದರು. ನ್ಯಾಟ್‌ ಸ್ಕಿವರ್‌ ಬ್ರಂಟ್‌ ಔಟಾಗದೇ 59 ಎಸೆತ ಎದುರಿಸಿ 13 ಬೌಂಡರಿ ಸಹಿತ 80 ರನ್‌ ಚಚ್ಚಿದರೇ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೇವಲ 22 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 42 ರನ್‌ ಕೆಲಹಾಕಿ ತಂಡಕ್ಕೆ ಆಸರೆಯಾದರು.

ಬಳಿಕ ಬಂದ ಯಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ. ಉಳಿದಂತೆ ಅಮೇಲಿಯಾ 9, ಸಂಜನಾ 1, ಅಮನ್ಜೋತ್‌ ಕೌರ್‌ 7, ಸಂಸ್ಕೃತಿ ಗುಪ್ತಾ 2, ಕಲಿತಾ 1, ಶಾಬ್ನಿಮ್‌ ಇಸ್ಮಾಯಿಲ್‌ ಹಾಗೂ ಸೈಕಾ ಡಕ್‌ಔಟ್‌ ಆದರು.

ಡೆಲ್ಲಿ ಪರ ಸದರ್ಲ್ಯಾಂಡ್‌ ಮೂರು, ಶಿಕಾ ಪಾಂಡೆ ಎರಡು, ಕ್ಯಾಪ್ಸಿ ಹಾಗೂ ಮಿನ್ನು ಮಣಿ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

 

Continue Reading

Sports

WPL-2025ರ ಸಂಪೂರ್ಣ ವೇಳಾಪಟ್ಟಿ, ಆಡಲಿರುವ ತಂಡಗಳ ವಿವಿರ ಇಲ್ಲಿದೆ

Published

on

ವಡೋದರಾ: ಇದೇ ಫೆ.14 ರಂದು ಪ್ರೇಮಿಗಳ ದಿನಾಚರಣೆ ದಿನದಂದೇ ಡಬ್ಲ್ಯೂಪಿಎಲ್‌ (ವುಮೆನ್ಸ್‌ ಪ್ರೀಮಿಯರ್‌ ಲೀಗ್‌)ನ ಮೂರನೇ ಆವೃತ್ತಿ ಆರಂಭವಾಗಲಿದೆ.

ಈ ಟೂರ್ನಿಯ ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳ ನಡುವೆ ನಡೆಯಲಿದೆ. ಉದ್ಘಾಟನಾ ಪಂದ್ಯ ವಡೋದರಾದಲ್ಲಿ ನಡೆದರೇ, ಮೂರನೇ ಆವೃತ್ತಿಯ ಫೈನಲ್ಸ್‌ ಪಂದ್ಯಾವಳಿಯ ಆತಿಥ್ಯವನ್ನು ಮುಂಬೈನ ವಾಂಖೆಡೆ ವಹಿಸಿಕೊಂಡಿದೆ.

ಫೆ.14 ರಿಂದ ಮಾ.15 ವರೆಗೆ WPL-2025ರ ಮೂರನೇ ಆವೃತ್ತಿ ನಡೆಯಲಿದ್ದು, ಈ ಬಾರಿಯೂ ಐದು ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿವೆ. ಹಾಗೂ ಮೊದಲ ಬಾರಿಗೆ ನಾಲ್ಕು ಪ್ರಮುಖ ನಗರಗಳಲ್ಲಿ ಈ ಟೂರ್ನಿ ನಡೆಯಲಿದೆ.

WPL-2025ನಲ್ಲಿ ಭಾಗವಹಿಸಲಿರುವ ತಂಡಗಳಿವು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಲಕ್ನೋ ಸೂಪರ್‌ಜೈಂಟ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌.

ಯಾವೆಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ: ಕಳೆಡೆರೆಡು ಸೀಸನ್‌ಗಳಲ್ಲಿ ಕೇವಲ ಒಂದೇ ಒಂದು ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಪ್ರಮುಖ ನಾಲ್ಕು ನಗರಗಳ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲಾಗಿದೆ. ಅವುಗಳೆಂದರೇ ಬೆಂಗಳೂರು (ಚಿನ್ನಸ್ವಾಮಿ ಕ್ರೀಡಾಂಗಣ), ಮುಂಬೈ (ವಾಂಖೆಡೆ ಕ್ರೀಡಾಂಗಣ), ವಡೋದರ (ಬಿಸಿಎ ಕ್ರೀಡಾಂಗಣ), ಲಕ್ನೋ (ಏಕನಾ ಕ್ರೀಡಾಂಗಣ).

ಉದ್ಘಾಟನಾ ಸಮಾರಂಭದಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ: ಈ ಬಾರಿಯ ಟೂರ್ನಿ ಉದ್ಘಾಟನೆಗೆ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಐಸಿಸಿ ಅಧ್ಯಕ್ಷ ಜೈ ಶಾ, ಬಿಸಿಸಿಐ ಆಡಳಿತ ಮಂಡಳಿ ಪಾಲ್ಗೊಳ್ಳಲಿದೆ.

ಇನ್ನು ಸೆಲೆಬ್ರೆಟಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ಆಲ್ಬಂ ಸಿಂಗರ್‌ ಆಯುಷ್ಮಾನ್‌ ಖುರಾನಾ ಅವರು ಮಹಿಳಾ ಪ್ರೀಮಿಯರ್‌ನಲ್ಲಿ ಕಾಣಿಸಿಕೊಳ್ಳಲಿರುವ ಏಕೈಕ ಪ್ರದರ್ಶಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಲೈವ್‌ ಸ್ಟ್ರೀಮಿಂಗ್‌ ಮಾಹಿತಿ: ಡಬ್ಲ್ಯೂಪಿಎಲ್‌ನ ಎಲ್ಲಾ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸ್ಪೋರ್ಟ್ಸ್‌ 18 ಪಡೆದುಕೊಂಡಿದ್ದು, ಅಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಜಿಯೋ ಸಿನಿಮಾ ಹಾಗೂ ಜಿಯೋ ಸಿನಿಮಾ ವೆಬ್‌ಸೈಟ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಲಭ್ಯವಿರಲಿದೆ.

ವೇಳಾಪಟ್ಟಿ ವಿವಿರ ಇಂತಿದೆ:

ಫೆ.14: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್‌ ಜೈಂಟ್ಸ್‌ (ವಡೋದರಾ)
ಫೆ.15: ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ (ವಡೋದರಾ)
ಫೆ.16: ಗುಜರಾತ್‌ ಜೈಂಟ್ಸ್‌ vs ಯುಪಿ ವಾರಿಯರ್ಸ್‌ (ವಡೋದರಾ)
ಫೆ.17: ಡೆಲ್ಲಿ ಕ್ಯಾಪಿಟಲ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ವಡೋದರಾ)
ಫೆ.18: ಗುಜರಾತ್‌ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌ (ವಡೋದರಾ)
ಫೆ.19: ಯುಪಿ ವಾರಿಯರ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ (ವಡೋದರಾ)
ಫೆ.21: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಮುಂಬೈ ಇಂಡಿಯನ್ಸ್‌ (ಬೆಂಗಳೂರು)
ಫೆ.22: ಡೆಲ್ಲಿ ಕ್ಯಾಪಿಟಲ್ಸ್‌ vs ಯುಪಿ ವಾರಿಯರ್ಸ್‌ (ಬೆಂಗಳೂರು)
ಫೆ.24: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಯುಪಿ ವಾರಿಯರ್ಸ್‌ (ಬೆಂಗಳೂರು)
ಫೆ.25: ಡೆಲ್ಲಿ ಕ್ಯಾಪಿಟಲ್ಸ್‌ vs ಗುಜರಾತ್‌ ಜೈಂಟ್ಸ್‌ (ಬೆಂಗಳೂರು)
ಫೆ.26: ಮುಂಬೈ ಇಂಡಿಯನ್ಸ್‌ vs ಯುಪಿ ವಾರಿಯರ್ಸ್‌ (ಬೆಂಗಳೂರು)
ಫೆ.27: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್‌ ಜೈಂಟ್ಸ್‌ (ಬೆಂಗಳೂರು)
ಫೆ.28: ಡೆಲ್ಲಿ ಕ್ಯಾಪಿಟಲ್ಸ್‌ vs ಮುಂಬೈ ಇಂಡಿಯನ್ಸ್‌ (ಬೆಂಗಳೂರು)
ಮಾ.1: ಡೆಲ್ಲಿ ಕ್ಯಾಪಿಟಲ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಬೆಂಗಳೂರು)
ಮಾ.3: ಗುಜರಾತ್‌ ಜೈಂಟ್ಸ್‌ vs ಯುಪಿ ವಾರಿಯರ್ಸ್‌ (ಲಕ್ನೋ)
ಮಾ.6: ಗುಜರಾತ್‌ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌ (ಲಕ್ನೋ)
ಮಾ.7: ಗುಜರಾತ್‌ ಜೈಂಟ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ (ಲಕ್ನೋ)
ಮಾ.8: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಯುಪಿ ವಾರಿಯರ್ಸ್‌ (ಲಕ್ನೋ)
ಮಾ.10: ಗುಜರಾತ್‌ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌ (ಮುಂಬೈ)
ಮಾ.11: ಮುಂಬೈ ಇಂಡಿಯನ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಮುಂಬೈ)
ಮಾ.13: ಎಲಿಮಿನೇಟರ್‌ (ಮುಂಬೈ)
ಮಾ.15: ಫೈನಲ್ಸ್‌ (ಮುಂಬೈ)

ಡಬ್ಲ್ಯೂಪಿಎಲ್‌ನ ಮೂರನೇ ಆವೃತ್ತಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30 ಗಂಟೆಗೆ ಆರಂಭವಾಗಲಿವೆ.

Continue Reading

Trending

error: Content is protected !!