Connect with us

State

ಬಿಯರ್ ದರ ಏರಿಕೆ ಬೆನ್ನಲ್ಲೇ ವ್ಯಾಪಾರದಲ್ಲಿ ಭಾರಿ ಕುಸಿತ ; ಅಬಕಾರಿ ಇಲಾಖೆಗೆ ಶಾಕ್ ಕೊಟ್ಟ ಮದ್ಯಪ್ರಿಯರು

Published

on

ಬೆಂಗಳೂರು: ಫೆಬ್ರವರಿ ಒಂದರಿಂದ ರಾಜ್ಯ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕ ಹತ್ತರಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಮದ್ಯ ಪ್ರಿಯರು ಅಬಕಾರಿ ಇಲಾಖೆಗೆ ಶಾಕ್ ನೀಡಿದ್ದಾರೆ. ಜನವರಿಯಲ್ಲಿ ಬಾರಿ ಮಾರಾಟವಾಗಿದ್ದ ಬಿಯರ್,ಇದೀಗ ದರ ಏರಿಕೆಯಿಂದ ಮಾರಾಟದಲ್ಲಿ ಬಾರಿ ಕುಸಿತ ಕಂಡಿದೆ. ಕಳೆದ ವರ್ಷ ಫೆಬ್ರವರಿ ಒಂದರಿಂದ 14ರ ವರೆಗೆ 14.35 ಲಕ್ಷ ಕೇಸ್ ಬಿಯರ್ ಸೇಲ್ ಆಗಿತ್ತು. ಆದರೆ ಈ ವರ್ಷ ಕೇವಲ 13.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ ಎಂದು ವರದಿಯಾಗಿದೆ.
ಆದರೂ ಮಾರಾಟ ಕಮ್ಮಿಯಾದ್ರೂ ಆದಾಯದಲ್ಲಿ ಮಾತ್ರ ಏರಿಕೆಯಾಗಿದೆ. ಕಳೆದ ವರ್ಷ 14 ದಿನದಲ್ಲಿ 1200 ಕೋಟಿ ಆದಾಯ ಬಂದಿದ್ದರೆ ಈ ವರ್ಷ 1400 ಕೋಟಿ ಆದಾಯ ಸಂಗ್ರವಾಗಿ, 200 ಕೋಟಿ ಅಧಿಕವಾಗಿದೆ. ಬೆಲೆ ಏರಿಕೆಯಿಂದ ಮಾತ್ರ ಆದಾಯ ಹೆಚ್ಚಳವಾಗಿದೆ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕರುಣಾಕರ ಹೆಗಡೆ ತಿಳಿಸಿದ್ದಾರೆ.


ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದಾಗ ಬಿಯರ್‌ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು. ಮೂರನೇ ಬಾರಿ ಅಂದರೆ ಫೆಬ್ರವರಿ 1 ರಿಂದ ಬಿಯರ್ ಮೇಲಿನ ಅಬಕಾರಿ ಸುಂಕವನ್ನು 10 ರಷ್ಟು ಏರಿಕೆ ಮಾಡಿತ್ತು. ಇದರಿಂದ ಆರೇಳು ತಿಂಗಳ ಅವಧಿಯಲ್ಲಿ ಬಿಯರ್‌ ಬೆಲೆ ಸುಮಾರು ವಿವಿಧ ಬಾಟೆಲ್ ಮೇಲೆ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಐದು ಗ್ಯಾರೆಂಟಿಗಳಿಗಾಗಿ ಪದೇ ಪದೇ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಹಣ ಹೊಂದಿಸಲು ಮುಂದಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ.

Continue Reading
Click to comment

Leave a Reply

Your email address will not be published. Required fields are marked *

State

ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 4 ಸಾವಿರ ರೂ. ಹಣ ಈ ದಿನ ಜಮವಾಗಲಿದೆ : ಸ್ಟೇಟಸ್ ಚೆಕ್ ಮಾಡುವುದು ಹೇಗೆ?

Published

on

Gruhalakshmi Scheme Pending Amount Credit Date – ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ಜಮವಾಗುವ 2000ರೂ. ಹಣವು ಕಳೆದ ಎರಡು ತಿಂಗಳಿನಿಂದ ಪಲಾನುಭವಿಗಳ ಖಾತೆಗೆ ವಿವಿಧ ಕಾರಣಕ್ಕಾಗಿ ಜಮವಾಗಿಲ್ಲ.

ಇದರ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದ ಮುಕಾಂತರ ಪಲಾನುಭವಿಗಳಿಗೆ ಬಾಕಿ ಇರುವ ಎರಡು ಕಂತುಗಳ 4 ಸಾವಿರ ರೂಪಾಯಿ ಹಣವನ್ನು ಶೀಘ್ರದಲ್ಲಿಯೇ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಯಾವಾಗ ಜಮಾವಾಗಲಿದೆ? ಜಮಾವಾದ ಹಣವನ್ನು ಪರಿಶೀಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ..

ಯಾವ ದಿನಾಂಕದಂದು ಜಮವಾಗಲಿದೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಿಳಿಸಿದ ಪ್ರಕಾರ ಬಾಕಿ ಇರುವ ಎರಡು ಕಂತುಗಳ 4,000ರೂ. ಹಣವನ್ನು ಶೀಘ್ರದಲ್ಲಿಯೆ ಅಂದರೆ ಮಾರ್ಚ್ 31 ರನಂತರ ಖಚಿತವಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಜಮವಾದ ಹಣದ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಯ ಬಾಕಿ ಮೊತ್ತ ಜಮವಾದ ಹಣದ ಸ್ಟೇಟಸ್ ನೀವು ನಿಮ್ಮ ಮೊಬೈಲ್ ಮುಕಾಂತರ ಸುಲಭವಾಗಿ DBT ಅಪ್ ಮುಕಾಂತರ ಪರಿಶೀಲಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ DBT ಆಪ್ ಡೌನ್ಲೋಡ್ ಮಾಡಿ, ನೋಂದಣಿಯಾಗಿ ನಿಮ್ಮ ಆಧಾರ್ ಕಾರ್ಡ್ ಮುಕಾಂತರ ನಿಮ್ಮ ಖಾತೆಗೆ ಜಮವಾಗುವುದರ ಕುರಿತು ಪರಿಶೀಲಿಕೊಳ್ಳಿ. DBT ಆಪ್ ನ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ಕೆಳಗಡೆ ನೀಡಲಾಗಿದೆ.

DBT ಆಪ್ ಲಿಂಕ್ – https://play.google.com/store/apps/details?id=com.dbtkarnataka

Continue Reading

State

ಮುನಿರತ್ನನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು: ಕೆ.ಎನ್‌ ರಾಜಣ್ಣ

Published

on

ತುಮಕೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಚರ್ಚೆಯಲ್ಲಿರುವ ಹನಿಟ್ರ್ಯಾಪ್‌ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುನಿರತ್ನ ಅವರು ಡಿಸಿಎಂ ಡಿಕೆಶಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.

ಇದಕ್ಕೆಲ್ಲಾ ಡಿ.ಕೆ.ಶಿವಕುಮಾರ್‌ ಕಾರಣವೇ ಹೊರತು ಬೇರೆ ಯಾರೂ ಅಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪದ ಕುರಿತು ತುಮಕೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ ಅವರು, ಮುನಿರತ್ನನನ್ನೇ ಮೊದಲು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಯಾಕೆಂದರೆ ಮುನಿರತ್ನ ಮೊದಲೆಲ್ಲಾ ಡಿಕೆಶಿ ಜೊತೆಯಲ್ಲೇ ಇದ್ದರು. ಆದ್ದರಿಂದ ಅವರನ್ನು ಮಂಪರು ಪರೀಕ್ಷೆ ಮಾಡಿಸಿ ಎಂದರು.

Continue Reading

State

ಫೋನ್‌ ಕದ್ದಾಲಿಕೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್‌ ಹೇಳಿದ್ದಿಷ್ಟು?

Published

on

ಬೆಂಗಳೂರು: ಫೋನ್ ಕದ್ದಾಲಿಕೆ ಮಾಡುತ್ತಿರುವುದು ನೂರಕ್ಕೆ ನೂರರಷ್ಟು ನಿಜ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರ ಫೋನ್ ಕದ್ದಾಲಿಕೆಯಾಗಿದೆ. ಇದೇ ರೀತಿ ಹಲವು ಶಾಸಕರ ಫೋನ್ ಕದ್ದಾಲಿಕೆಯಾಗಿದೆ. ರಾಜಣ್ಣ ಮತ್ತು ರಾಜೇಂದ್ರ ಅವರನ್ನು ಟ್ರ್ಯಾಪ್ ಮಾಡಲು ಕದ್ದಾಲಿಕೆ ಮಾಡಿಸಿದ್ದಾರೆ. ಈ ಬಗ್ಗೆ ನಾನು ಮತ್ತು ಕುಮಾರಸ್ವಾಮಿ ಮೊದಲಿನಿಂದಲೂ ಹೇಳುತ್ತಿದ್ದೇವೆ. ಸುಮಾರು 2 ವರ್ಷಗಳಿಂದಲೂ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಆರೋಪಿಸಿದರು.

ಇನ್ನು ನಾವು ಧರ್ಮಾಧಾರಿತ ಮೀಸಲಾತಿ ವಿಚಾರಕ್ಕೆ ಹೋರಾಟ ಮಾಡುತ್ತಿದ್ದೇವೆ. ಮೀಸಲಾತಿ ಭೂತವನ್ನು ರಾಜ್ಯದ ಹಿಂದೂಗಳ ಮೇಲೆ ಹೇರುತ್ತಿದ್ದಾರೆ. ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಮುಂದಾಗಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಶೇ.5ರಷ್ಟು ಮುಸ್ಲಿಮರು ಗುತ್ತಿಗೆದಾರರಾಗಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ಬೇಡ ಎಂದಿದ್ದಾರೆ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

Continue Reading

Trending

error: Content is protected !!