Connect with us

Hassan

ಆಯುಷ್ಮಾನ್ ಕಾರ್ಡ್ ನೋಂದಣಿ, ಉಚಿತ ಕಣ್ಣಿನ ತಪಾಸಣೆಗೆ ಚಾಲನೆ

Published

on

ಹಾಸನ: ನಗರದ ಹೊಸಲೈನ್ ರಸ್ತೆ ಬಳಿ ಇರುವ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ದೇವಾಂಗ ನೌಕರರ ಸಂಘ ಮತುದ್ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಮಾಜದ ಬಂದುಗಳಿಗೆ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಮತ್ತು ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಹಿಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರು ಹಾಗೂ ಪ್ರಾಧ್ಯಾಫಕರಾದ ಡಾ. ಹಾಲೇಶ್ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಏನಾದರೂ ಖಾಯಿಲೆ ಬಂದರೇ ತೋರಿಸಲು ಖಾಸಗೀ ಆಸ್ಪತ್ರೆಗೆ ಹೋದರೇ ಲಕ್ಷಾಂತರ ರೂಗಳನ್ನು ನೀಡಬೇಕು. ಈ ಕಾರ್ಡ್ ಪಡೆದಿದ್ದರೇ ನಗದು ರಹಿತ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಇದು ಎಲ್ಲಾ ಸರಕಾರಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಲಭ್ಯವಿದೆ. ಆದರೇ ಆಯ್ಧ ಖಾಸಗೀ ಆಸ್ಪತ್ರೆಯಲ್ಲಿ ಈ ಸೌಲಭ್ಯ ಅನ್ವಯಿಸಲಿದೆ. ೧೬೫ ಖಾಯಿಲೆಗಳಿಗೆ ಆಯುಷ್ಮಾನ್ ಕಾರ್ಡ್ ಅನ್ವಯವಾಗುತ್ತಿದ್ದು, ಸರಕಾರದಿಂದ ಉಚಿತವಾಗಿ ಇರವಂತಹ ಯೋಜನೆಯಾಗಿದ್ದು, ಆಧಾರ್ ಕಾರ್ಡ್ ಇದ್ದರೇ ತಮ್ಮ ಮೊಬೈಲ್ಗೆ ಬರಲಿದೆ. ಇದು ಕೇವಲ ಚಿಕಿತ್ಸೆಗೆ ಮಾತ್ರವಲ್ಲ. ಡಿಜಿಟಲ್ ಆಗಿ ಕಾರ್ಯ ನಿರ್ವಹಿಸಲಿದೆ. ಸ್ಮಾರ್ಟ್ ಕಾರ್ಡ್ ಓಪನ್ ಮಾಡಿದರೇ ಎಲ್ಲಾ ವಿವರ ನೀಡಲಿದೆ ಎಂದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಮಮತಾರಾವ್ ಮಾತನಾಡಿ, ಆಯುಷ್ಮಾನ್ ಕಾರ್ಡ್ ಬಗ್ಗೆ ಗೊತ್ತಿಲ್ಲದೆ ಇರುವವರು ಅನೇಕರು ಇದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜನರಿಗೆ ವಿಚಾರ ತಲುಪಲು ಸಹಕಾರಿ ಆಗಲಿದ್ದು, ಪೂಜ್ಯ ಡಾ. ವೀರೇಂದ್ರ ಹೆಗೆಡೆಯವರ ಮಾರ್ಗದರ್ಶನದಲ್ಲಿ ಯಾವುದೇ ಲಾಭವಿಲ್ಲದೇ ಸಮಾಜಕ್ಕೆ ಸೇವೆ ನೀಡುತ್ತಿದ್ದಾರೆ ಎಂದರು. ಅನೇಕ ಸರ್ವೀಸ್ ಕೇಂದ್ರಗಳನ್ನು ಗ್ರಾಮಮಟ್ಟದಲ್ಲಿ ತೆರೆದು ಸರಕಾರದ ಯೋಜನೆಗಳನ್ನು ತಲುಪಿಸಲಾಗಿದೆ. ಇಂದು ಉಚಿತ ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಹೊಳೆನರಸೀಪುರ ತಾಲೂಕು ವೈದ್ಯಾಧಿಕಾರಿ ಬಿ.ಎಂ. ವಿಜಯ್ ಮಾತನಾಡಿ, ಉಚಿತವಾಗಿ ಚಿಕಿತ್ಸೆ ಇರುವಂತಹ ಆರೋಗ್ಯ ವಿಮೆಯ ಸೌಲಭ್ಯವಿದೆ. ನಗದು ರಹಿತ ೫ ಲಕ್ಷದವರೆಗೂ ವಿಮಾ ಸೌಲಭ್ಯಗಳಿದ್ದು, ಸರಕಾರಿ ಮತ್ತು ಖಾಸಗೀ ಆಸ್ಪತ್ರೆಯಲ್ಲಿ ಗಂಭೀರ ಖಾಯಿಲೆಗೆ, ಶಸ್ತ್ರ ಚಿಕಿತ್ಸೆಗೆ ಸಹಾಯ ಸಿಗಲಿದೆ. ಎಲ್ಲಾರೂ ಕಾರ್ಡ್ ಪಡೆದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ದೇವಾಂಗ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಸ್. ಸತೀಶ್, ಅಧ್ಯಕ್ಷರಾದ ಬಿ. ಸೋಮಶೇಖರ್, ಬಿ.ಆರ್. ಮಂಜೇಶ್, ಸಂಘದ ಉಪಾಧ್ಯಕ್ಷ ಡಿ. ನಾಗೇಶ್ ಕುಮಾರ್, ಬನಶಂಕರಿ ಕಲ್ಯಾಣ ಮಂಟಪದ ಅಧ್ಯಕ್ಷ ಆನಂದ್, ನರಸಿಂಹಸ್ವಾಮಿ, ಡಾ. ಸುಹಾಸ್ ಇತರರು ಭಾಗವಹಿಸಿದ್ದರು. ಗೊರೂರು ಶಿವೇಶ್ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

3ನೇ ನಾಗರಾಜ ರಾವ್ ಜಗದಾಲೆ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ -2026: ಬಿ.ಎಂ.ರವಿಕೀರ್ತಿಗೆ ಚಿನ್ನದ ಪದಕ

Published

on

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮದ ಬಿ.ಎಂ.ರವಿಕೀರ್ತಿ S / O ಮಲ್ಲೇಶ್ ಅವರು, ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ  3ನೇ ನಾಗರಾಜ ರಾವ್ ಜಗದಾಲೆ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ -2026ನಲ್ಲಿ 10 ಮೀಟರ್ ಓಪನ್ ಸೈಟ್ ಏರ್ ರೈಫಲ್ ಟೀಮ್ ಇವೆಂಟ್ ನಲ್ಲಿ ಚಿನ್ನದ ಪದಕ   ಗೆದ್ದಿದ್ದಾರೆ.

ಬಿ.ಎಂ.ರವಿಕೀರ್ತಿ ಅವರು 10 ಮೀ. ಓಪನ್ ಸೈಟ್ ಏರ್ ರೈಫಲ್ ನಲ್ಲಿ ಕಂಚಿನ ಪದಕ, 50 ಮೀಟರ್ ಸ್ಮಾಲ್ ಬೋರ್ ರೈಫಲ್ ಓಪನ್ ಸೈಟ್ ನಲ್ಲಿ ಕಂಚಿನ ಪದಕ,  50 ಮೀಟರ್ ಸ್ಮಾಲ್ ಬೋರ್ ರೈಫಲ್ ಓಪನ್ ಸೈಟ್ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಇನ್ನೂ ಬೇಲೂರು ತಾಲೂಕಿನ ಮಡೇನಹಳ್ಳಿ ಎಸ್ಟೇಟ್ನ  ಎಂ.ಯುಗೇಂದ್ರ S / O ಸುಧೀರ್ ಕುಮಾರ್  ಅವರು,10 ಮೀಟರ್ ಓಪನ್ ಸೈಟ್ ಏರ್ ರೈಫಲ್ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಪಡೆದು ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Continue Reading

Hassan

ಫೆ.8 ರಂದು ಶ್ರೀ ಉದ್ಭವ ಶನೈಶ್ಚರಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ 42ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ

Published

on

ಹಾಸನ: ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಉದ್ಭವ ಶನೈಶ್ಚರಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ 42ನೇ ವರ್ಷದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವನ್ನು ಫೆಬ್ರವರಿ 8 ರಂದು ಭಾನುವಾರ ಶ್ರದ್ಧಾಭಕ್ತಿಯಿಂದ ಆಯೋಜಿಸಲಾಗಿದೆ ಎಂದು ಅನಿಲ್ ಅವರು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಧ್ವಜ ಪ್ರತಿಷ್ಠಾನ (ರಿ) ವತಿಯಿಂದ ಆಯೋಜಿಸಲಾದ ಈ ಧಾರ್ಮಿಕ ಕಾರ್ಯಕ್ರಮವು ಜಗದ್ಗುರು ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಕೃಪಾಶೀರ್ವಾದ ಹಾಗೂ ಜಗದ್ಗುರು  ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅನುಗ್ರಹದೊಂದಿಗೆ ನಡೆಯಲಿದೆ. ಪರಮಪೂಜ್ಯ ಶ್ರೀ ವಿದ್ಯಾನಂದ ಮಹಾಸ್ವಾಮೀಜಿಯವರ ಆಶೀರ್ವಾದವೂ ಕಾರ್ಯಕ್ರಮಕ್ಕೆ ಲಭಿಸಲಿದೆ ಎಂದರು.


ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ದೇವಾಲಯದಿಂದ ಗಂಗೆ ತರುವ ಸ್ಥಳಕ್ಕೆ ತೆರಳಿ, ಸುಮಂಗಲಿಯರಿಂದ ಗಂಗಾಪೂಜೆ, ಬಾಗಿನ ಅರ್ಪಣೆ ಹಾಗೂ ಮಹಾ ಪ್ರಾರ್ಥನೆ ಸಲ್ಲಿಸಲಾಗುವುದು. ನಂತರ 108 ಅಗೋಧಕ ಕಳಶಗಳೊಂದಿಗೆ ಗ್ರಾಮ ಪ್ರದಕ್ಷಿಣೆ ಮಾಡಿ ದೇವಾಲಯಕ್ಕೆ ತರಲಾಗುವುದು. ಆ ಬಳಿಕ ಶ್ರೀ ಸ್ವಾಮಿಗೆ ಮಹಾ ರುದ್ರಾಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಶನೈಶ್ಚರಸ್ವಾಮಿ ಹೋಮ ಸೇರಿದಂತೆ ವಿವಿಧ ವೈದಿಕ ಹೋಮ-ಹವನಗಳು ಜರುಗಲಿವೆ ಎಂದರು.

ಸಮಸ್ತ ಭಕ್ತರ ಸಮ್ಮುಖದಲ್ಲಿ ಕುಂಭಾಭಿಷೇಕ ಮಹಾಪೂರ್ಣಾಹುತಿ, ಕದಳಿ ಛೇದನ, ರಾಜೋಪಚಾರ, ಮಹಾ ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಇದೇ ಸಂದರ್ಭದಲ್ಲಿ ಶ್ರೀ ಸ್ವಾಮಿಗೆ ನೂತನ ರಜತ ಕಿರೀಟ ಧಾರಣೆ ಕಾರ್ಯಕ್ರಮವೂ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದ ಲಭಿಸಲಿದೆ.


ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಮಾರಂಭ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ವೆಲ್ಲೂರು (ತಮಿಳುನಾಡು) ಮೂಲದ ಸರ್ವಸಾಧಕಂ ಶ್ರೀ ವಿಶ್ವೇಶ್ ಶಿವಂ ಸ್ವಾಮೀಜಿಯವರು ಹಾಗೂ ತಂಡದವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷರು, ಕರ್ನಾಟಕ ಗೃಹ ಮಂಡಳಿ ಹಾಗೂ ಶಾಸಕರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ ಅವರಿಗೆ “ಬರನಾಡಿನ ಭಗೀರಥ” ಎಂಬ ನಾಮಾಂಕಿತ ಬಿರುದು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠ, ಹಂಗರಹಳ್ಳಿ ಬಸವಣ್ಣನವರು ಸೇರಿದಂತೆ ವಿವಿಧ ದೇವತೆಗಳು ಆಗಮಿಸಲಿವೆ ಎಂದರು.


ಎಲ್ಲಾ ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಉದ್ಭವ ಶನೈಶ್ಚರಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಮಳೆಯಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರ ಧರ್ಮಧ್ವಜ ಪ್ರತಿಷ್ಠಾನ (ರಿ)ಯ ಅಧ್ಯಕ್ಷರು, ಸದಸ್ಯರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಉದಯ್ ಕುಮಾರ್, ರಾಜೇಶ್, ಪೃಥ್ವಿ ರಾಜ್, ಬಸವರಾಜ್, ದೇವರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

Continue Reading

Hassan

ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ

Published

on

ಬೆಂಗಳೂರು/ಹಾಸನ: ಹಾಸನ ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಎರಡು ಪ್ರಮುಖ ನೀರಾವರಿ ಯೋಜನೆಗಳಿಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಎರಡೂ ಯೋಜನೆಗಳು ನೀರಾವರಿ ಇಲಾಖೆಯಡಿ ಕೈಗೆತ್ತಿಕೊಳ್ಳಲಾಗಲಿದ್ದು, ಜಿಲ್ಲೆಯ ಬರಪೀಡಿತ ಪ್ರದೇಶಗಳ ನೀರಿನ ಅಗತ್ಯವನ್ನು ಪೂರೈಸುವ ಉದ್ದೇಶ ಹೊಂದಿವೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಕೆಂಕೆರೆ ಸೇರಿ 20ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ನದಿಯಿಂದ ಲಿಫ್ಟ್ ನೀರಾವರಿ ಮೂಲಕ ನೀರು ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಸಂಬಂಧ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ವಿಷಯವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಸೂಚನೆ ನೀಡಿದ್ದರು. ಅದರಂತೆ, ಬರಪ್ರದೇಶದ ನೀರಿನ ಸಮಸ್ಯೆ ನಿವಾರಣೆಗೆ 32 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

 

ಇನ್ನೊಂದೆಡೆ, ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಲಿಫ್ಟ್ ನೀರಾವರಿ ಯೋಜನೆಯ ಪುನಶ್ಚೇತನಕ್ಕೂ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಈಗಿರುವ ಈ ಯೋಜನೆ ನಿರಂತರ ತಾಂತ್ರಿಕ ದೋಷ, ಪಂಪುಗಳ ವೈಫಲ್ಯ, ರೈಜಿಂಗ್ ಮೇನ್ ಹಾಗೂ ಕಾಲುವೆಗಳ ಹಾನಿಯಿಂದ ಬಳಲುತ್ತಿತ್ತು. ಹೀಗಾಗಿ ಹೊಸ ಪಂಪುಗಳು, ಮೋಟಾರ್‌ಗಳು, ಪೈಪ್‌ಲೈನ್‌ಗಳ ಅಳವಡಿಕೆ ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 11.50 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಈ ಮೂಲಕ ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಒಟ್ಟಾರೆ 43.50 ಕೋಟಿ ರೂ.  ವೆಚ್ಚದ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದಂತಾಗಿದೆ.

ಹಾಸನ ಜಿಲ್ಲೆಯ ಪರವಾಗಿ, ಜಿಲ್ಲೆಯ ಜನತೆಯ ಅಗತ್ಯಗಳಿಗೆ ಸ್ಪಂದಿಸಿ ಈ ಮಹತ್ವದ ಯೋಜನೆಗಳನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಕೃತಜ್ಞತೆ
ಸಲ್ಲಿಸಿದ್ದಾರೆ.

Continue Reading

Trending

error: Content is protected !!