Connect with us

Mysore

ಯಶಸ್ವಿಗೊಂಡ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ

Published

on

ತಿ.ನರಸೀಪುರ: ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪಟ್ಟಣದ ಗುರುಭವನದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು.

 

ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ರೋಗಿಗಳು ಶಿಬಿರದಲ್ಲಿ ತಮ್ಮ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಂಡರು. ಈ ಪೈಕಿ 189 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಯಿತು. ವಿವಿಧ ಕಣ್ಣಿನ ಸಮಸ್ಯೆ ಇರುವ 121 ರೋಗಿಗಳನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ರಕ್ತದಾನ, ಅರೋಗ್ಯ ಮತ್ತು ಕಣ್ಣಿನ ಪರೀಕ್ಷಾ ಶಿಬಿರಗಳನ್ನು ಆಯೋಜನೆ ಮಾಡುವುದು ಅತ್ಯಂತ ಪುಣ್ಯದ ಕಾಯಕ.ಇಂತಹ ಶಿಬಿರಗಳ ಆಯೋಜನೆಯಿಂದ ನೊಂದವರ ಬಳಿಗೆ ಅಲ್ಪ ಸಹಾಯ ನೀಡಿದ ಆತ್ಮತೃಪ್ತಿ ಇರುತ್ತದೆ. ನಮ್ಮ ಸಂಘದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಶಿಬಿರಗಳ ಸಾರ್ಥಕತೆಯ ಆಧಾರ ಮೇಲೆ ಬೇರೆ ಬೇರೆ ಶಿಬಿರಗಳನ್ನು ಆಯೋಜನೆ ಮಾಡಲಾಗುವುದು.ತಾಲೂಕಿನ ಜನರು ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

 

ಶಂಕರ ಆಸ್ಪತ್ರೆಯ ನೇತ್ರತಜ್ಞ ನವೀನ್ ಮಾತನಾಡಿ, ಸರ್ಕಾರಿ ನೌಕರ ಸಂಘದ ವತಿಯಿಂದ ಜನಪರ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಸಾಮಾಜಿಕ ಕಳಕಳಿವುಳ್ಳ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಿ. ಶಿಬಿರದಲ್ಲಿ ಆಯ್ಕೆಯಾದ ಗ್ಲಾಕೋಮಾ, ರೇಟಿನಾ, ಕಣ್ಣಿನಪೊರೆ ಸೇರಿದಂತೆ ಕಣ್ಣಿನ ಹಲವು ಸಮಸ್ಯೆವುಳ್ಳ ರೋಗಿಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದರು.

ಸಂದರ್ಭದಲ್ಲಿ ತಾಲೂಕು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸೋಸ್ಲೆ ನಾಗೇಶ್, ಗೌರವಾಧ್ಯಕ್ಷರು ಸುಬ್ರಮಣ್ಯ, ಖಜಾಂಚಿ ನಾಗರಾಜು, ರಾಜ್ಯ ಪರಿಸರ ಸದಸ್ಯ ನಾರಾಯಣಮೂರ್ತಿ, ಪಶು ಸಂಗೋಪನಾ ಇಲಾಖೆ ಶಿವಸ್ವಾಮಿ, ಪಾಪಣ್ಣ, ಬಿಸಿಎಂ ಇಲಾಖೆ ಈಶ್ವರ್, ಆರೋಗ್ಯ ಇಲಾಖೆ ನಾಗು, ಶಂಕರ್, ಸರ್ವೆಇಲಾಖೆ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆ ಮಂಜುನಾಥ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ರೇವಣ್ಣ, ಖಜಾಂಚಿ ಸಿದ್ದಮಲ್ಲಪ್ಪ ಉಪಾಧ್ಯಕ್ಷ ಸಿ.ಮಹದೇವಸ್ವಾಮಿ, ನಿರ್ದೇಶಕರಾದ ಕಿಕ್ಕೇರಿ ಶೆಟ್ಟಿ, ಎಸ್.ನಂದಿನಿ, ರಘು, ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಂಬಳ್ಳಿ ನಾಗರಾಜು, ನಾಗೇಶ್, ಕುಮಾರ್ ನೇತ್ರಾಧಿಕಾರಿ ಉಮೇಶ್, ಮಹೇಶ ಮೂರ್ತಿಶಂಕರ್ ಆಸ್ಪತ್ರೆ ವೈದ್ಯ ಡಾ. ಮಂಜುನಾಥ್, ನೂರ್,ಶೇಷರಾಜ್,ವೈಷ್ಣವಿ,ದಿವ್ಯಾ,ಶಿಬಿರ ಸಂಯೋಜಕ ಶ್ರೀಕಂಠ ಮೂರ್ತಿ, ಕ್ಷೇತ್ರ ಅಧಿಕಾರಿ ಸುನೀಲ್ ಇತರರು ಹಾಜರಿದ್ದರು.

Continue Reading

Mysore

ದೈವ ನಿಂದನೆ ಪ್ರಕರಣ: ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಕ್ಷಮೆ ಕೇಳಿದ ಬಾಲಿವುಡ್ ನಟ ರಣವೀರ್ ಸಿಂಗ್

Published

on

ಮೈಸೂರು : ಚಾಮುಂಡಿ ಬೆಟ್ಟಗೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ ನೀಡಿ, ಚಾಮುಂಡಿ ತಾಯಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೈವ ನರ್ತನ ಕುರಿತ ಅವಹೇಳನಕಾರಿ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಮೇರೆಗೆ ಅವರು ದೇವಿಯ ಮುಂದೆ ಕ್ಷಮೆ ಯಾಚಿಸಿದರೆಂದು ತಿಳಿದುಬಂದಿದೆ.

ಸಾಮಾನ್ಯ ಭಕ್ತರಂತೆ ಕ್ಯೂನಲ್ಲಿ ನಿಂತು ದೇವಿಯ ದರ್ಶನ ಪಡೆದ ನಟ, ಗರ್ಭಗುಡಿ ವರೆಗೆ ಮಾಸ್ಕ್ ಧರಿಸಿಕೊಂಡೇ ಬಂದರು. ಬಳಿಕ ಗರ್ಭಗುಡಿಗೆ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ವಿಶೇಷ ಆರ್ಭಟವಿಲ್ಲದೆ ಖಾಲಿ ಕೈಯಲ್ಲಿ ಆಗಮಿಸಿದ ಅವರು, ಮೂಲ ವಿಗ್ರಹ ಹಾಗೂ ಉತ್ಸವಮೂರ್ತಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದರು.

ಯಾರಿಗೂ ಪೂರ್ವ ಮಾಹಿತಿ ನೀಡದೇ ಸಾಮಾನ್ಯರಂತೆ ದೇವಸ್ಥಾನಕ್ಕೆ ಬಂದಿದ್ದ ರಣವೀರ್ ಸಿಂಗ್, ಪೂಜೆ ಹಾಗೂ ದರ್ಶನದ ಬಳಿಕ ಮೌನವಾಗಿ ದೇವಸ್ಥಾನದಿಂದ ನಿರ್ಗಮಿಸಿದರು.

Continue Reading

Mysore

ದೇವೇಗೌಡರ ಕುಟುಂಬದ ವಿರುದ್ಧ ದ್ವೇಷ ರಾಜಕಾರಣ: ಕಾಂಗ್ರೆಸ್ ವಿರುದ್ಧ ಸಾ.ರಾ ಮಹೇಶ್ ವಾಗ್ದಾಳಿ

Published

on

ಮೈಸೂರು: ಮೇ 26, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ ಮಹೇಶ್ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಎಸ್ಐಟಿ ತನಿಖೆ, ಭೂ ಅತಿಕ್ರಮಣ ಪ್ರಕರಣ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರ ಕೇತಗಾನಹಳ್ಳಿ ತೋಟದ ಭೂ ವಿವಾದ ಕುರಿತು ಕಾಂಗ್ರೆಸ್ ನಾಯಕರು ಚರ್ಚೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, “40 ವರ್ಷಗಳ ಹಿಂದೆ ಖರೀದಿಸಿದ ಜಮೀನಿನ ವಿಚಾರವನ್ನು ಈಗ ಎಸ್ಐಟಿಗೆ ನೀಡಿರುವುದು ಉದ್ದೇಶಪೂರ್ವಕ. ರಾಜ್ಯದ ಇತಿಹಾಸದಲ್ಲಿ ಅನೇಕ ರಾಜಕಾರಣಿಗಳ ವಿರುದ್ಧ ಭೂ ಒತ್ತುವರಿ ಆರೋಪಗಳಿದ್ದರೂ, ಒಂದೇ ಒಂದು ಪ್ರಕರಣವನ್ನೂ ಎಸ್ಐಟಿಗೆ ನೀಡಲಾಗಿಲ್ಲ. ಆದರೆ ಕುಮಾರಸ್ವಾಮಿ ಅವರ ಪ್ರಕರಣವನ್ನು ಮಾತ್ರ ಎಸ್ಐಟಿಗೆ ಒಪ್ಪಿಸಿರುವುದು ದ್ವೇಷ ರಾಜಕಾರಣದ ಭಾಗ,” ಎಂದು ಆರೋಪಿಸಿದರು.

ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ ಸಾ.ರಾ ಮಹೇಶ್, “ಕಾಂಗ್ರೆಸ್ ನಾಯಕರಲ್ಲಿ ಭೂ ಅತಿಕ್ರಮಣ ಪ್ರಕರಣಗಳೇ ಇಲ್ಲವೇ? ಅವುಗಳನ್ನು ಯಾಕೆ ತನಿಖೆಗೆ ಕೊಡಲಿಲ್ಲ?” ಎಂದು ಪ್ರಶ್ನಿಸಿದರು.ನಿಖಿಲ್ ಕುಮಾರಸ್ವಾಮಿ ಸೋಲಿನ ಕುರಿತು ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ನೀಡಿದ ಅವರು, “ರಾಜಕಾರಣದಲ್ಲಿ ಎಲ್ಲರೂ ಯಾವಾಗಲಾದರೂ ಸೋಲುತ್ತಾರೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಐದುವರೆ ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಅಷ್ಟು ಮತಗಳನ್ನು ಕಾಂಗ್ರೆಸ್ ನಾಯಕರು ಪಡೆದಿದ್ರಾ?” ಎಂದು ಪ್ರಶ್ನಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾದರೆ ಕಾಂಗ್ರೆಸ್‌ಗೆ ಭಯ ಏಕೆ?” ಎಂದು ಪ್ರಶ್ನಿಸಿದರು.ಕುಮಾರಸ್ವಾಮಿ ಅವರ ಆಸ್ತಿ ವಿಚಾರವಾಗಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವುದನ್ನು ಖಂಡಿಸಿದ ಸಾ.ರಾ ಮಹೇಶ್, “ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರಾಗಿದ್ದರು. ನಿಖಿಲ್ ನಟನಾಗಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಿಮ್ಮ ಸಮಾಜವಾದಿ ನಾಯಕರು ಭತ್ತ ಬೆಳೆದಿದ್ರಾ, ರಾಗಿ ಬೆಳೆದಿದ್ರಾ?” ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

“ರಾಜಕಾರಣದಲ್ಲಿ ಎಲ್ಲರೂ ಪ್ರಾಮಾಣಿಕರಲ್ಲ. ಕೆಲವರು ಮಾತ್ರ ಪ್ರಾಮಾಣಿಕರಾಗಿರಬಹುದು. ಇಂದಿನ ವ್ಯವಸ್ಥೆಯಲ್ಲಿ ಹಣವಿಲ್ಲದೆ ರಾಜಕಾರಣ ಸಾಧ್ಯವಿಲ್ಲ,” ಎಂದು ಹೇಳಿದ ಅವರು, “ಜೆಡಿಎಸ್‌ಗಿಂತ ಹೆಚ್ಚು ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದಲ್ಲಿದೆ. ಜನರು ಮುಂದಿನ ಚುನಾವಣೆಗೆ ಕಾಯುತ್ತಿದ್ದಾರೆ. ಕಾಂಗ್ರೆಸ್‌ಗೆ ಜನ ಬುದ್ದಿ ಕಲಿಸಲಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.ಮೈಸೂರು ನಗರ ಪಾಲಿಕೆ ಮತ್ತು ಮುಡಾ ಕಚೇರಿಗಳಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ಇಬ್ಬರನ್ನು ಬಿಟ್ಟು ಎಲ್ಲರನ್ನೂ ವರ್ಗಾವಣೆ ಮಾಡಲಾಗಿದೆ. ಆದರೆ ಹೊಸ ನೇಮಕಾತಿಗಳು ಆಗಿಲ್ಲ,” ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕರ ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, “ಲೀಡರ್‌ಶಿಪ್ ಬದಲಾವಣೆ ಅಥವಾ ರಿನಿವಲ್ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ನೋಡಿಕೊಂಡೇ ತಿಳಿದುಕೊಂಡಿದ್ದೇವೆ. ರಿನಿವಲ್‌ಗಾಗಿ ಕರೆದಿರಬಹುದು ಎಂಬುದು ನಮ್ಮ ಭಾವನೆ,” ಎಂದು ಹೇಳಿದರು

Continue Reading

Mysore

ಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .

Published

on

ಮೈಸೂರು: ಮಡಿಕೇರಿಯ ಹೊಸೊಕ್ಲು ನಿವಾಸಿ ರೋಷನ್ ಬಾಲಕೃಷ್ಣ (43) ಅವರು ಮೈಸೂರುದಲ್ಲಿ ಸಿಡಿಲು ಬಡಿದು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಮುನೇಶ್ವರ ದೇವಾಲಯದ ಸಮೀಪ ವಾಸವಾಗಿದ್ದ ರೋಷನ್, ಎಕ್ಸೈಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ದಿವಂಗತ ಬಾಲಕೃಷ್ಣ ಅವರ ಪುತ್ರರಾಗಿದ್ದರು. ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದ ಅವರು ವರ್ಕ್ ಫ್ರಮ್ ಹೋಮ್ ಮೂಲಕ ಕೆಲಸ ನಿರ್ವಹಿಸುತ್ತಿದ್ದರು.

ಇಂದು ಮೈಸೂರುದಲ್ಲಿದ್ದ ತಮ್ಮ ಜಮೀನು ವೀಕ್ಷಣೆಗೆ ತೆರಳಿದ್ದ ವೇಳೆ, ಜಮೀನಿನಲ್ಲಿ ನಿಂತಿದ್ದ ಸಂದರ್ಭ ಏಕಾಏಕಿ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.

ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಿಸಿದೆ.

Continue Reading

Trending

error: Content is protected !!