Chamarajanagar
ಒಂದು ತಿಂಗಳಲ್ಲಿ 9 ಲಕ್ಷ ಕಾಣಿಕೆ ಪಡೆದ ಬಿಳಿಗಿರಿರಂಗನಾಥ ಸ್ವಾಮಿ

ಯಳಂದೂರು ತಾಲೂಕಿನ ಪುರಾಣ ಪ್ರಸಿದ್ಧ ಬಿಳಿಗಿರಂಗನ ಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದಲ್ಲಿ
ಒಂದು ತಿಂಗಳ ಅವಧಿಯಲ್ಲಿನ 9.74.822 ರೂಪಾಯಿಗಳು ಹಾಗೂ 1 ಯುರೋ ಕರೆನ್ಸಿ
ಸಂಗ್ರಹವಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿದರು.
ಅಲಮೇಲಮ್ಮ ದೇಗುಲ ಮುಂಭಾಗ ಹುಂಡಿ ಹಣ ಎಣಿಕೆ ಕಾರ್ಯಕ್ಕೆ ಚಾಲನೆ ದೊರೆಯಿತು, ದೇಗುಲದ ಸಿಬ್ಬಂದಿ ಕಂದಾಯ ಇಲಾಖೆಯ ಸಿಬ್ಬಂದಿ ಬ್ಯಾಂಕ್ ನೌಕರರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಹಸಲ್ದಾರ್ ಬಸವರಾಜು ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್, , ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಹಾಜರಿದ್ದರು.
Chamarajanagar
ಬಿಆರ್‌ಟಿ ಗ್ರಾಮಸ್ಥರಿಗೆ ಅರಣ್ಯ ಅಧಿಕಾರಿಗಳಿಂದ ಕಿರುಕುಳ: ಪ್ರದೀಪ್ ಕುಮಾರ್ ಆರೋಪ

ಯಳಂದೂರು: ಅರಣ್ಯ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ಮತ್ತು ತೊಂದರೆಗಳನ್ನು ವಿರೋಧಿಸಿ ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಿಳಿಗಿರಿರಂಗನ ಬೆಟ್ಟದ ಗ್ರಾಮಸ್ಥರಿಂದ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ ನೂರಾರು ವರ್ಷಗಳಿಂದ ಬಿಳಿಗಿರಂಗನ ಬೆಟ್ಟದಲ್ಲಿ ವಾಸ ಮಾಡುತ್ತಿದ್ದು ಅರಣ್ಯ ಇಲಾಖೆಯವರು ಇಲ್ಲಸಲ್ಲದ ದಾಖಲಾತಿಗಳನ್ನು ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಬೆಟ್ಟದಲ್ಲಿ ಇಲ್ಲಿಯವರೆಗೆ ಅರಣ್ಯ ಇಲಾಖೆಯಿಂದ ಯಾವುದೇ ಅರಣ್ಯ ಪ್ರದೇಶವನ್ನ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಹಾಗೂ ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ಬಗ್ಗೆ ಯಾವುದೇ ವ್ಯಾಜ್ಯ ನಮ್ಮ ಮತ್ತು ಅರಣ್ಯ ಇಲಾಖೆ ಮಧ್ಯ ಇರುವುದಿಲ್ಲ. ಇಲ್ಲಿಯವರೆಗೆ ಯಾವುದೇ ಸರ್ವೆ ಕಾರ್ಯ ಅಕ್ರಮ ಒತ್ತುವರಿಯಾಗಿರುವ ಬಗ್ಗೆ ಇಲಾಖೆ ವತಿಯಿಂದ ಯಾವುದನ್ನು ನೋಟಿಸ್ ನೀಡಿರುವುದಿಲ್ಲ ಪ್ರಸ್ತುತವಾಗಿಯೂ ತೃಪ್ತಿಕರ ಜೀವನ ಸಾಗಿಸುತ್ತಾ ಬಂದಿರುತ್ತೇನೆ, ನಿಯಮಾನುಸಾರ ಸರ್ವ ಕಾರ್ಯ ನಡೆಸುವ ಸಂಬಂಧ ಅಕ್ಕಪಕ್ಕದವರಿಗೆ ತಿಳುವಳಿಕೆ ಪತ್ರ ನೀಡುವುದು ಇಲಾಖೆಯ ಕರ್ತವ್ಯವಾಗಿರುತ್ತದೆ ಆದರೆ ಅರಣ್ಯ ಇಲಾಖೆ ನಮಗೆ ಯಾವುದೇ ನೋಟಿಸ್ ನೀಡದೆ ನಮ್ಮ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವುದಾಗಿ ನೋಟಿಸ್ ನೀಡಲಾಗಿರುತ್ತದೆ. ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕವಾಗಿ ನಮ್ಮ ಭೂಮಿಯನ್ನು ಕಿತ್ತುಕೊಂಡು ನಮಗೆ ತೊಂದರೆ ನೀಡುವಂತಿರುತ್ತದೆ ಎಂದು ಹೇಳಿದರು. ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಿರುವ ಆನೆ ಕಂದಕ ಪ್ರಾಣಿಗಳು ಪ್ರವೇಶಿಸಿದಂತೆ ನಿರ್ಮಿಸಲಾಗಿರುತ್ತದೆ ಸದರಿ ಕಂದಕದಿಂದ ಯಾವುದೇ ಒತ್ತುವರಿ ಮಾಡಿರುವುದಿಲ್ಲ ಆದರೂ ನೀವು ಓತ್ತುವರಿ ಮಾಡಿರುವುದಾಗಿ ತಿಳಿಸಿರುತ್ತೀರಿ ಎಂದು ಆರೋಪಿಸಿದರು.
ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸರ್ವೇ ನಂಬರ್ 4 ರಲ್ಲಿ ಹಂತ ಹಂತವಾಗಿ 130 ಎಕರೆ ಭೂಮಿ ಮಂಜೂರು ಮಾಡಲಾಗಿರುತ್ತದೆ ಉಳಿದ ಭೂಮಿಯನ್ನು ಶರತ್ತುಗಳ ಪಟ್ಟು ಅರಣ್ಯ ಇಲಾಖೆಗೆ ನೀಡಲಾಗಿರುತ್ತದೆ ಇತ್ತೀಚಿನ ದಿನಗಳಲ್ಲಿ ತುಳಸಮ್ಮ ಕೊಂ ಮುತ್ತಯ್ಯನ ರಂಗ ಮತ್ತು ಶಕುಂತಲಮ್ಮ ಕೋಂ ಮಲ್ಲರಾಜು ವಿಜಯಲಕ್ಷ್ಮಿ ರವರುಗಳ ಜಮೀನುಗಳಿಗೆ ಸರ್ವೆ ನಂಬರ್ ಎರಡರಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವ ಬಗ್ಗೆ ಜಂಟಿ ಸರ್ವೆಯಲ್ಲಿ ಕಂಡುಬಂದಿರುವ ಬಗ್ಗೆ ಮತ್ತು ಸರ್ವೆ ನಂಬರ್ ಎರಡಕ್ಕೆ ಸಂಬಂಧಿಸಿದ ಮಾಲೀಕತ್ವದ ಹಕ್ಕನ್ನು ಸಾಬೀತು ಪಡಿಸಲು ದಾಖಲಾತಿಗಳನ್ನು ಕೋರಿ ಸಲ್ಲಿಸದಿದ್ದಲ್ಲಿ ಮೇಲ್ಕಂಡವರ ಒತ್ತುವರಿ ಜಮೀನನ್ನು ಕಾನೂನು ಪ್ರಕಾರ ಕ್ರಮವಹಿಸಲಾಗುವುದೆಂದು ನೋಟಿಸ್ ನಲ್ಲಿ ತಿಳಿಸಿರುತ್ತೀರಿ. ಆದರೆ 2018 ರವರೆಗೂ ಬಿಳಿಗಿರಂಗನ ಬೆಟ್ಟದಲ್ಲಿ ಯಾವುದೇ ಸರ್ವೇ ನಂಬರ್ ಎರಡು ಮೂರರ ಒತ್ತುವರಿ ಬಗ್ಗೆ ಎಲ್ಲಿಯೂ ತಿಳಿಸಿರುವುದಿಲ್ಲ ಮತ್ತು ಈ ಹಿಂದೆ ಸರ್ವೇ ಮಾಡಿದ ಜಮೀನುಗಳೆಲ್ಲವೂ ಸರ್ವೇ ನಂಬರ್ 4 ರಲ್ಲಿ ಇದೆ ಎಂದು ಜಂಟಿ ಸರ್ವೆಯಲ್ಲಿ ತಿಳಿಸುತ್ತೀರಿ ಆದರೆ ಹಾಲಿ ಸರ್ವೇ ನಂಬರ್ 2 ಒತ್ತುವರಿ ಎಂದು ನೋಟಿಸ್ ನೀಡಿರುವುದು ನಮಗೆ ಆತಂಕ ಉಂಟು ಮಾಡಿರುತ್ತದೆ ಎಂದು ಹೇಳಿದರು.
ಮುಖಂಡ ಶ್ರೀನಿವಾಸ್ ನಾಯಕ ಮಾತನಾಡಿ ಬಿಳಿಗಿರಂಗನಬೆಟ್ಟ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವು ಆಗಿರುತ್ತದೆ ದೇಶ ವಿದೇಶಗಳಿಂದ ಭಕ್ತಾದಿಗಳ ಪ್ರವಾಸಿಗರು ದಿನಮೃತಿ ಬರುತ್ತಿದ್ದು ಇದನ್ನೇ ಅವಲಂಬಿಸಿ ಹತ್ತಾರು ಕುಟುಂಬಗಳು ಜೀವನ ಸಾಗಿಸಲಾಗುತ್ತಿದೆ ಆದರೆ ಕುಡಿಯುವ ನೀರು ಪಾನೀಯಗಳನ್ನು ನಿಷೇಧಿಸಿದ್ದು ಇದರಿಂದಾಗಿ ತುಂಬಾ ತೊಂದರೆ ಆಗಿರುತ್ತದೆ ಮತ್ತು ಸ್ಥಳೀಯವಾಗಿ ಮೂಲ ನಿವಾಸಿಗಳಾಗಿರುವ ನಮ್ಮಗಳಿಗೆ ಮನೆಗಳನ್ನು ನಿರ್ಮಿಸಲು ಇತರೆ ಕೆಲಸ ಕಾರ್ಯಗಳನ್ನು ನಡೆಸಲು ಪದೇ ಪದೇ ತೊಂದರೆ ನೀಡುತ್ತಿದ್ದಾರೆ ಆದ್ದರಿಂದ ಮೇಲಿನ ಎಲ್ಲಾ ಅಂಶಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಈ ಬಗ್ಗೆ ಸ್ಥಳೀಯವಾಗಿ ಅಧಿಕಾರಿಗಳ ಸಭೆಯನ್ನು ಕರೆದು ತೀರ್ಮಾನಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಮುಖಂಡರಾದ ಪುಟ್ಟಮ್ಮ ಮೀನಾಕ್ಷಿ ಲಕ್ಷ್ಮಿ ಪುಷ್ಪ ಗಾಯತ್ರಿ ನಾಗರಾಜು ರಂಗಮ್ಮ ಸಾಕಮ್ಮ ಜಯಮ್ಮ ಶಾಂತಮ್ಮ ಮಹಾದೇವಮ್ಮ ಸೇರಿದಂತೆ ಗ್ರಾಮಸ್ಥರುಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇತರರು ಹಾಜರಿದ್ದರು
Chamarajanagar
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಏ.19ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಚಾಮರಾಜನಗರ:- ಚಾಮರಾಜನಗರ ವಿಭಾಗ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ವಿವಿಉಧ ಕಾಮಗಾರಿ ನಿರ್ವಹಿಸಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 19ರಂದು (ನಾಳೆ) ಚಾಮರಾಜನಗರ, ಹರದನಹಳ್ಳಿ ಮತ್ತು ಸಂತೇಮರಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ
5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕೋಡಿಮೋಳೆ, ಮಾದಾಪುರ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ಗೂಳಿಪುರ, ಬದನಗುಪ್ಪೆ, ಪಣ್ಯದಹುಂಡಿ, ಬೆಂಡರವಾಡಿ, ಕೆಲ್ಲಂಬಳ್ಳಿ ಎನ್‌ಜೆವೈ, ಇಂಡಸ್ಟಿಯಲ್ ಏರಿಯಾ, ಕೆಇಡಿಪಿ 10 ಮತ್ತು 11, ಮುತ್ತಿಗೆ, ಹೆಗ್ಗೋಠಾರ, ಉಮ್ಮತ್ತೂರು, ಬಾಗಳಿ, ಲಿಂಗಣಾಪುರ, ಜನ್ನೂರು, ಜನ್ನೂರು ಹೊಸೂರು, ಹಳ್ಳಿಕೆರೆಹುಂಡಿ, ಗಣಗನೂರು, ಗಣಗನೂರುಪುರ, ನವಿಲೂರು, ಆಲ್ದೂರು, ಬಿಎಂಕೆ ಹುಂಡಿ, ಗೊದ್ದಲಹುಂಡಿ, ಕೊತ್ತಲವಾಡಿ, ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಬಿಸಿಲವಾಡಿ, ಪುಣಜನೂರು, ಡೊಳ್ಳಿಪುರ, ಚನ್ನಪನಪುರ, ಅಮಚವಾಡಿ, ಮಾದಲವಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಕರೆ ಮಾಡುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
Chamarajanagar
ಅಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ

ಯಳಂದೂರು ತಾಲೂಕಿನ ಅಂಬ್ರೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನವೀನ್ ಅವಿರೋಧವಾಗಿ ಆಯ್ಕೆಯಾದರು,
ಮಾತನಾಡಿ ಬೆಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ. ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು,
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಆದ ಚಂದ್ರಶೇಖರ್ ಮೂರ್ತಿ, ಉಪಾಧ್ಯಕ್ಷೆ ಮಾದೇವಮ್ಮ, ಸೇರಿದಂತೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಕಾವ್ಯ ಕಾರ್ಯದರ್ಶಿ ಪುಟ್ಟರಾಜು ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು
-
Chamarajanagar22 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore20 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan24 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu20 hours ago
ಹುಲಿ ದಾಳಿಗೆ ಕರು ಬಲಿ
-
Kodagu23 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ
-
Hassan6 hours ago
ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾ*ವು
-
Kodagu6 hours ago
ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬೆಂಗಳೂರು ಕೊಡವ ಸಮಾಜ ಸಿಎಂಗೆ ಮನವಿ