Uncategorized
ರಾಜ್ಯ ಸರ್ಕಾರ ಹಾಲು ಉತ್ಪಾಧಕ ರೈತರಿಗೆ 67 ಕೋಟಿ. ರೂ ಬಾಕಿ ಉಳಿಸಿಕೊಂಡಿದೆ – ಮನ್ ಮುಲ್ ಉಪಾಧ್ಯಕ್ಷ ರಘುನಂದನ್ ಆರೋಪ
ಮಂಡ್ಯ : ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಹಾಗೂ ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಆಗ್ರಹ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಿಂದಿನ ಸರ್ಕಾರ ರೈತರಿಗೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ ಪ್ರತಿ ಲೀಟರ್ಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಇತ್ತೀಚೆಗೆ ಕಾಂಗ್ರೆಸ್ ಸರ್ಕಾರ ಹೈನುಗಾರಿಕೆಗೆ ಹೊಡೆತ ಬೀಳುವ ಹಾಗೆ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.

ಹಾಲು ಉತ್ಪಾದಕರಿಗೆ ಸರಿಯಾದ ಸಮಯದಲ್ಲಿ ಪ್ರೋತ್ಸಾಹ ಧನ ನೀಡುತ್ತಿಲ್ಲ. ರಾಜ್ಯದಲ್ಲಿ 600 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ನೀಡಬೇಕಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಗೆ 67 ಕೋಟಿ ರೂಪಾಯಿ ಕೊಡಬೇಕಾಗಿದೆ. ಆದ್ದರಿಂದ ತಕ್ಷಣವೇ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ದನವನ್ನು ವಿತರಿಸಬೇಕು ಎಂದು ಆಗ್ರಹ ಪಡಿಸಿದರು .
ಮಂಡ್ಯ ಜಿಲ್ಲೆಯಲ್ಲಿರುವ ಸಹಕಾರ ಇಲಾಖೆ ಅಧಿಕಾರಿಗಳು ಮಂಡ್ಯ ಉಪ ವಿಭಾಗ ಹಾಗೂ ಪಾಂಡವಪುರ ವಿಭಾಗದ ಅಧಿಕಾರಿಗಳು ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಜಾತ್ಯಾತೀತ ಜನತಾದಳ ಮತ್ತು ಭಾರತೀಯ ಜನತಾಪಕ್ಷದ ಆಡಳಿತವಿರುವ ಸಹಕಾರ ಸಂಘಗಳಲ್ಲಿ ಮನಸ್ಸು ಇಚ್ಛೆ ಬಂದ ಹಾಗೆ ನಿರ್ದೇಶಕರನ್ನು ವಜಾ ಮಾಡಲಾಗುತ್ತಿದೆ ಎಂದು ಆರೋಪಿಸಿದರು .

ಸಹಕಾರ ಸಂಘಗಳನ್ನು ವಜಾ ಮಾಡುವುದರ ಮುಖಾಂತರ ಕಾಂಗ್ರೆಸ್ ಕೈಗೊಂಬೆಗಳಾಗಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ.
ಇದು ಸಹಕಾರ ತತ್ವ ನಿಯಮಗಳು ಮತ್ತು ಕಾಯಿದೆಗೆ ವಿರುದ್ಧವಾಗಿದೆ ಎಂದು ಕಿಡಿ ಕಾರಿದರು .
ಇದೇ ರೀತಿ ಸಂಘಗಳನ್ನು ನಿರ್ದೇಶಕರನ್ನು ವಜಾ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಸಹಕಾರ ಇಲಾಖೆಯಲ್ಲಿ ಅನವಶ್ಯಕ ರಾಜ್ಯ ಸರ್ಕಾರದ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಒಳಗಾಗಿ ಸಹಕಾರ ಸಂಘಗಳ ಇಲ್ಲದಂತಾಗುತ್ತದೆ. ಆದ್ದರಿಂದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು .
ಡಿ.ಆರ್ ಮತ್ತು ಎ.ಆರ್ ರಾಜಕೀಯ ಪ್ರೇರಿತವಾಗಿ ಕಾನೂನು ತತ್ವ ಸಿದ್ಧಾಂತ ಪಾಲಿಸದೆ ಜೆಡಿಎಸ್ ಮತ್ತು ಬಿಜೆಪಿ ನಿರ್ದೇಶಕರು ಇರುವ ಸಂಘವನ್ನು ವಜಾ ಮಾಡುತ್ತಿದ್ದಾರೆ. ರಾಮಚಂದ್ರು, ರೂಪ ಸೇರಿದಂತೆ ಇತರರನ್ನು ವಜಾ ಮಾಡಿದ್ದು, ಆದರೆ ನ್ಯಾಯಾಲಯ ಇದಕ್ಕೆ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.

ಕಾಳೇಗೌಡ ಅವರು ಮಾತನಾಡಿ, ಹಿಂದಿನ ಆಡಳಿತ ಮಂಡಳಿಯ ವೈಫಲ್ಯವನ್ನು ಮುಚ್ಚಿಡಲಾಗುತ್ತಿದೆ. ನಮ್ಮ ಕೆಲಸಗಳನ್ನು ಮಾಡಿಕೊಡಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಆದರೆ ಚುನಾವಣೆ ವಿಚಾರದಲ್ಲಿ ಮಾತ್ರ ನಮ್ಮನ್ನು ಗುರಿಯಾಗಿಟ್ಟುಕೊಂಡು ತೊಂದರೆ ನೀಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು .
ಗೋಷ್ಟಿಯಲ್ಲಿ ರಾಮಚಂದ್ರ, ರೂಪ, ನೆಲ್ಲಿಗೆರೆ ಬಾಲು, ವಸಂತ್ ಕುಮಾರ್ ಉಪಸ್ಥಿತರಿದ್ದರು.
Uncategorized
ಮರಳಾಗಾಲ ಗ್ರಾಮದ ಜಗಧೀಶ್(53) ನಿಧನ
ಶ್ರೀರಂಗಪಟ್ಟಣ : ತಾಲ್ಲೂಕಿನ ಮರಳಾಗಾಲ ಗ್ರಾಮದ ದಿ.ಮಹದೇವು ರವರ ಮಗ ಎಂ ಜಗದೀಶ್(53) ರವರು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದು, ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಪ್ರಮಾಣದ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಕ್ರಿಯೆಯನ್ನು ಅವರ ಸ್ವ-ಗ್ರಾಮ ಮರಳಾಗಾಲದಲ್ಲಿ ಮದ್ಯಾಹ್ನ ನೆರವೇರಿಸುವುದಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
Hassan
ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ
50 ಕೆಜಿ ಕಾಫಿಗೆ ಬರೋಬ್ಬರಿ 30000 ದರ ಹೆಚ್ಚಳ ಹಿನ್ನೆಲೆ,
ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದಾರೆ ಕಾಫಿ ಕಳ್ಳರು,
*ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಗಿಡದಲ್ಲಿದ್ದ ಕಾಫಿಯನ್ನು ಕಳ್ಳತನ ಮಾಡುತ್ತಾರೆ ಖದೀಮರು*
ವಾಹನದಲ್ಲಿ ಬರ್ತಾರೆ ಸಿಕ್ಕಸಿಕ್ಕ ಕಡೆ ಕಾಫಿ ದೋಚಿ ಹೊರಡುವ ಕಳ್ಳರು,
ಸುದೀಪ್ ಹಾಗೂ ಮಧು ಎಂಬುವರ ಕಾಫಿ ತೋಟದಲ್ಲಿ ಗಿಡದಲ್ಲಿದ್ದ ಕಾಫಿಯನ್ನೇ ಕಳ್ಳತನ ಮಾಡಿದ ಚಾಲಾಕಿ ಕಳ್ಳರು,
ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಳ್ಳತನ ಮಾಡಿರೋ ಕಾಫಿ ಕಳ್ಳರು,
ಬೇಲೂರು ತಾಲೂಕು, ಚಿನ್ನೇನಹಳ್ಳಿ ಗ್ರಾಮದಲ್ಲಿ ಘಟನೆ,
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿನ್ನೇನಹಳ್ಳಿ ಗ್ರಾಮ,
ಒಂದು ಎಕರೆ ಎರಡು ಎಕರೆ ಇರೋ ತೋಟವನ್ನೇ ಟಾರ್ಗೆಟ್ ಮಾಡಿರುವ ಕಾಫಿ ಕಳ್ಳರು,
ಗಿಡದಲ್ಲಿದ್ದ ಕಾಫಿಯನ್ನು ಬಿಡುತ್ತಿಲ್ಲ ಕದೀಮರು
Kodagu
ಉಡೋತ್ ಮೊಟ್ಟೆ : ಡಿ.6 & 7 ರಂದು ಕೊರಗಜ್ಜ ದೈವದ ನೇಮೋತ್ಸವ
ಮಡಿಕೇರಿ : ಉಡೋತ್‌ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6ಮತ್ತು 7 ರಂದು ಐದನೇ ವರ್ಷದ ನೇಮೋತ್ಸವ ನಡೆಯಲಿದೆ.
ಡಿ.6ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೈವದ ಭಂಡಾರ ಇಳಿಯುವುದು. ರಾತ್ರಿ 9 ಗಂಟೆಯಿಂದ ಡಿ.7ರ ಮಧ್ಯಾಹ್ನದ ವರೆಗೆ ಪರಿವಾರ ಸತ್ಯ ದೈವಗಳಾದ ಶ್ರೀ ಧರ್ಮದೈವ, ಪಂಜುರ್ಲಿ, ಶ್ರೀ ಸತ್ಯ ದೈವ ಕಲ್ಲುರ್ಟಿ, ಶ್ರೀ ಮಂತ್ರವಾದಿ ಗುಳಿಗ ಹಾಗೂ ಶ್ರೀ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ.

ಎರಡು ದಿನವೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9900931278 , 9591304757೯೫೯೧೩೦೪೭೫೭, ೯೪೮೩೩೯೯೦೭೭ ಸಂಪರ್ಕಿಸಬಹುದಾಗಿದೆ.
-
Mandya10 hours agoಜಿಲ್ಲಾಧಿಕಾರಿಗಳಿಂದ ಗುತ್ತಲು ಕೆರೆಗೆ ಭೇಟಿ ಮತ್ತು ಪರಿಶೀಲನೆ
-
State7 hours agoIPL, ಟಿ-20 ವಿಶ್ವಕಪ್ ಕ್ರಿಕೆಟ್ ಸಂಬಂಧ ಸಿಎಂ, ಡಿಸಿಎಂರನ್ನು ಭೇಟಿ ಮಾಡಿದ ವೆಂಕಟೇಶ್ ಪ್ರಸಾದ್
-
Chamarajanagar2 hours agoಮ.ಮ.ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ: 28 ದಿನಗಳ ಅವಧಿಯಲ್ಲಿ 2.53 ಕೋಟಿ ರೂ. ಸಂಗ್ರಹ
-
Mandya8 hours agoಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಡಿಸಿ ಭೇಟಿ
-
Sports24 hours agoInd v/s SA 1st T-20: ಸೌತ್ ಆಫ್ರಿಕಾ ಆಲೌಟ್, ಟೀಂ ಇಂಡಿಯಾಗೆ 101 ರನ್ಗಳ ಭರ್ಜರಿ ಜಯ
-
State2 hours agoದ್ವೇಷ ಭಾಷಣ, ದ್ವೇಷ ಅಪರಾಧಗಳ ವಿಧೇಯಕ ಮಂಡಿಸಿದ ಡಾ.ಜಿ.ಪರಮೇಶ್ವರ್
-
Chamarajanagar3 hours agoರಾಗಿ ಒಕ್ಕಣೆ ಮಿಷನ್ ನಿಂದ ಕೂಲಿ ಕಾರ್ಮಿಕಳೊಬ್ಬಳ ಕೈ ತುಂಡು
-
Hassan4 hours agoಗಾಂಜಾ ಅಮಲಿನಲ್ಲಿ ಯುವಕನೋರ್ವನ ಹ*ತ್ಯೆ: ಆರೋಪಿಯನ್ನು ಬಂಧಿಸಿದ ಪೊಲೀಸರು
