ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತ ಎಂದು ಹೇಳಬೇಡಿ- ತನ್ವೀರ್ ಸೇಠ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ.

ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತ ಎಂದು ಹೇಳಬೇಡಿ- ತನ್ವೀರ್ ಸೇಠ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ.

ಮೈಸೂರು:  ಮೈಸೂರಿನ ದೇವರಾಜ ಅರಸ್ ರಸ್ತೆಯ ದರ್ಗಾ ತೆರವುಗೊಳಸಿದ್ರೆ ಬಳೆ ತೊಟ್ಟು ಕೂರುವುದಿಲ್ಲ ಅಂತ ತನ್ವೀರ್ ಸೇಠ್ ಹೇಳಿದ್ದಾರೆ. ಬಳೆ ತೊಡುವ ಹೆಣ್ಣಿನ ಬಗ್ಗೆ ತಾತ್ಸರ ಏಕೆ. ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತ ಎಂದು ಹೇಳಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತನ್ವೀರ್ ಸೇಠ್ ಇತರ ಅಲ್ಪಸಂಖ್ಯಾತ ನಾಯಕರ ರೀತಿ ಅಲ್ಲ ಅಂದುಕೊಂಡಿದ್ದೆ. ಅವರಿಂದ ನಾನು ಇಂಥ ಮಾತು ನಿರೀಕ್ಷಿಸಿರಲಿಲ್ಲ. ಬಳೆ ಅಂದರೆ ಅಬಲೆ ಸಂಕೇತನಾ.?  ನಿಮಗೆ ನೀವು ಪ್ರೀತಿಸುವ ಹೈದರಾಲಿಯ ಸೈನಿಕರನ್ನು ಹೊಡೆದಿದ್ದು ಓನಕೆ ಒಬವ್ವ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದು ಕಿತ್ತೂರು ಚೆನ್ನಮ್ಮ, ವೀರ ವನಿತೆ ಅಬ್ಬಕ್ಕನ ಸಾಹಸ ನಮಗೆ ಆದರ್ಶ. ಮಹಿಳೆಯನ್ನು ಆರಾಧಿಸುತ್ತೇವೆ. ತಾಯಿ ಚಾಮುಂಡಿ, ಭುವನೇಶ್ವರಿ ಕೂಡ ಹೆಣ್ಣೆ ಎಂದು ಟಾಂಗ್ ನೀಡಿದರು.

ಪೌರುಷ ತೋರಿಸಲು ಹೆಣ್ಣನ್ನು ಬುರ್ಖಾದೊಳಗೆ ಕೂಡಿಟ್ಟು, ಭೋಗಕ್ಕೆ ಬಳಸುವುದು ನಿಮ್ಮ‌ ಧರ್ಮದ ಸಂಸ್ಕೃತಿ ಆಗಿರಬಹುದು. ಆದರೆ ನಮ‌್ಮ ಧರ್ಮದಲ್ಲಿ ಹೆಣ್ಣಿಗೆ ಪೂಜ್ಯನೀಯ ಗೌರವದ ಸ್ಥಾನವಿದೆ. ಅಂತಾ ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತ ಎಂದು ಹೇಳಬೇಡಿ ಎಂದು ಹೇಳಿದರು.

 

 

ತಾಜಾ ಸುದ್ದಿಗಳು