ಕೇರಳದಿಂದಲೇ ದಕ್ಷಿಣ ಕನ್ನಡಕ್ಕೆ ಕೊರೊನಾ ಕಂಟಕ

ಕೇರಳದಿಂದಲೇ ದಕ್ಷಿಣ ಕನ್ನಡಕ್ಕೆ ಕೊರೊನಾ ಕಂಟಕ

ಮಂಗಳೂರು: ದೇವರು ನಾಡು ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕಂಟಕ ಶುರುವಾಗಿದೆ. ಜಿಲ್ಲೆಯಲ್ಲಿ ಹೆಚ್ಚು ತೀವ್ರತೆ ಪಡೆದುಕೊಂಡ ಕಿಲ್ಲರ್ ಕೊರೊನಾ ಇಂದು ರಾಜ್ಯದಲ್ಲೇ ಹೆಚ್ಚು ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಜನರಲ್ಲಿ ನಡುಕ ಉಂಟು ಮಾಡಿದೆ.

ದೇಶದಲ್ಲಿ ಪ್ರತಿದಿನ ಪತ್ತೆಯಾಗುವ ಅರ್ಧದಷ್ಟು ಸೋಂಕು ಕೇರಳದಲ್ಲೇ ವರದಿಯಾಗುತ್ತಿವೆ. ಹೀಗಾಗಿ ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ದ.ಕ.ಜಿಲ್ಲೆಯ ಜನರಲ್ಲಿ ನಡುಕ ಶುರುವಾಗಿದೆ. ಇಂದು ಒಂದೇ ದಿನ 438 ಜನರಲ್ಲಿ ಕೊರೊನಾ ಸೊಂಕು ಪತ್ತೆಯಾಗುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕು ಪತ್ತೆಯಾದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾಗೆ ಇಂದು 6 ಮಂದಿ ಬಲಿಯಾದರೆ. ಕೇವಲ 311 ಮಂದಿ ಕೊರೊನಾದಿಂದ ಗುಣಮುಖರಾಗುವ ಮೂಲಕ ಜಿಲ್ಲೆಯ ಪಾಸಿಟಿವ್ ರೇಟ್ 4.57%ಕಂಡಿದೆ.

ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟಿರುವ ಜಿಲ್ಲಾಡಳಿತ ಹೊಸ ರೂಲ್ಸ್ ಜಾರಿಮಾಡಿದೆ. ಕೊರೋನಾ ಸೊಂಕು ಪತ್ತೆಯಾದ ವ್ಯಕ್ತಿಯ ಸಂಪರ್ಕದಲ್ಲಿರುವ ಸುಮಾರು 50ಮಂದಿಯನ್ನ ಟೆಸ್ಟ್ಗೆ ಒಳಪಡಿಸುತ್ತಿದೆ.ನಗರ ಭಾಗದ ಅಪಾರ್ಟ್‍ಮೆಂಟ್ ನಿವಾಸಿಗಳಲ್ಲಿ ಸೋಂಕು ಕಂಡುಬಂದರೆ. ಪ್ಲ್ಯಾಟ್‍ನ ಮೇಲಿನ ಮಹಡಿ ಮತ್ತು ಕೆಳ ಮಹಡಿಯ ಎಲ್ಲರ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಒಂದೇ ಕಡೆಯಲ್ಲಿ ಎರಡಕ್ಕಿಂತ ಹೆಚ್ಚು ಜನ ಪಾಸಿಟಿವ್ ಆದರೆ ಅಲ್ಲಿ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡುತ್ತೆ. ದಿನನಿತ್ಯ ನಗರದಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಿರುವ ಜಿಲ್ಲಾಡಳಿತ ಕೇರಳ ನಂಬರ್ ಪ್ಲೇಟ್ ಇರುವ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಿನಲ್ಲಿ ವಿಕೇಂಡ್ ಕರ್ಫ್ಯೂ ಜಾರಿ ಮಾಡಿ ಕೊರೋನಾ ಕಟ್ಟಿಹಾಕಲು ಮುಂದಾದ ಜಿಲ್ಲಾಡಳಿತಕ್ಕೆ ವಿಕೇಂಡ್ ನಲ್ಲೇ ಹೆಚ್ಚು ಸೊಂಕು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ತಾಜಾ ಸುದ್ದಿಗಳು