ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

ಮೈಸೂರು: ಇಂದು ಬೆಳಗ್ಗೆ ನಿರ್ಮಾಪಕ ಉಮಾಪತಿ ಅವರು ದೊಡ್ಮನೆ ಆಸ್ತಿ ವಿಚಾರವಾಗಿ ತಮ್ಮ ಮಧ್ಯೆ ಇರುವ ಮುನಿಸು ಹೊರ ಹಾಕಿದ ಬೆನ್ನಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಯಾವುದೇ ಕಾರಣಕ್ಕೂ ದೊಡ್ಮನೆ ಹಾಗೂ ನಮಗೂ ಹೋಲಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮರ್ಡರ್ ಮಾಡಿದ್ದೀನಾ ಎಂದು ಪ್ರಶ್ನಿಸಿದರು. ನಾನು ಯಾರ ಪರ ವಿರೋಧ ಮಾತನಾಡಿಲ್ಲ. ನಾನು ಕಷ್ಟಪಟ್ಟು ಮಾಡಿರುವ ಆಸ್ತಿ ಇದು. ಇದರ ಬಗ್ಗೆ ಯಾರದರೂ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಇಂದ್ರಜಿತ್ ಅವರು ಮೊದಲು ಆರೋಪಗಳನ್ನು ಸಾಬೀತುಪಡಿಸಲಿ ಮತ್ತೆ ಮಾತನಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ಇಂಡಸ್ಟ್ರೀ ಯಾರ ಅಪ್ಪನ ಸೊತ್ತು ಅಲ್ಲ. ಕಲೆಗೆ ಬೆಲೆ ಇದ್ದರಷ್ಟೇ ಇಲ್ಲಿ ಇರಬಹುದು ಅಷ್ಟೆ. ತಪ್ಪು ನಾನು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಇಲ್ಲದಿದ್ದರೆ ನಾನ್ಯಾಕೆ ಕೇಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಳು