ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರ ನೀಡಿ – ಹೈಕೋರ್ಟ್

ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದವರಿಗೆ 5 ಲಕ್ಷ ಪರಿಹಾರ ನೀಡಿ – ಹೈಕೋರ್ಟ್

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತೆ ಹೊಸ ಸೂಚನೆಯನ್ನು ಸರ್ಕಾರಕ್ಕೆ ನೀಡಿದೆ. ಸಾವನ್ನಪ್ಪಿದ 24 ಜನರ ಪೈಕಿ 13 ಜನರಿಗೆ 5 ಲಕ್ಷ ಪರಿಹಾರವನ್ನು ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ.

ಆಕ್ಸಿಜನ್ ಕೊರತೆಯಾದ ರಾತ್ರಿ ಬೆಳಗ್ಗೆ 13 ಸಾವು ಸಂಭವಿಸಿದೆ. 13 ಮೃತರ ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಿ ನಂತರ ಮೃತಪಟ್ಟ 11 ಜನರಿಗೆ 2 ಲಕ್ಷ ಪರಿಹಾರ ನೀಡಲು ಸೂಚನೆ ನೀಡಿದೆ.

ಆಯೋಗದ ವರದಿ ನಂತರ ಹೆಚ್ಚುವರಿ ಪರಿಹಾರದ ಬಗ್ಗೆ ನಿರ್ಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಳು