ಖಾಸಗಿ ಆಸ್ಪತ್ರೆಯ ನೀರಿನ ತೊಟ್ಟಿಯಲ್ಲಿ ಶಿಶು ಶವ ಪತ್ತೆ

ಖಾಸಗಿ ಆಸ್ಪತ್ರೆಯ ನೀರಿನ ತೊಟ್ಟಿಯಲ್ಲಿ ಶಿಶು ಶವ ಪತ್ತೆ

ಚಾಮರಾಜನಗರ: ಖಾಸಗಿ ಆಸ್ಪತ್ರೆಯ ಖಾಲಿ ನೀರಿನ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.

ಅಂದಾಜು 6 ದಿನದ ಗಂಡು ಶಿಶು ಇದಾಗಿದ್ದು, ಕರುಳಬಳ್ಳಿ ಕತ್ತರಿಸದೇ ಹಾಗೆ ಬಿಟ್ಟಿದ್ದು, ಅಂಗವೈಕಲ್ಯ ಹೊತ್ತುಕೊಂಡು ಜನಿಸಿರುವ ಕಾರಣ ಹೆತ್ತವರು ಪ್ಲಾಸ್ಟಿಕ್ ಕವರ್‍ನಲ್ಲಿ ಮಗುವನ್ನು ಹಾಕಿ ಬಿಸಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಆಸ್ಪತ್ರೆ ಸಿಬ್ಬಂದಿ ಶವಾಗಾರದ ಬಳಿ ಹೋದಾಗ ದುರ್ನಾತ ಬರುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರಿನಲ್ಲಿ ಶಿಶು ಶವ ಪತ್ತೆಯಾಗಿದೆ. ಆಸ್ಪತ್ರೆಯಲ್ಲೇ ಹೆರಿಗೆಯಾಗಿದ್ದರೇ ಕರುಳ ಬಳ್ಳಿಯನ್ನು ಕತ್ತರಿಸುತ್ತಿದ್ದರಿಂದ ಆಸ್ಪತ್ರೆಯಲ್ಲಿ ಈ ಮಗು ಹುಟ್ಟಿಲ್ಲ. ಸಿಸಿಟಿವಿ ಪರಿಶೀಲಿಸಲಾಗುತ್ತಿದ್ದು ತನಿಖೆ ನಡೆಸಲಾಗುತ್ತಿದೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳು