ಸಿಎಂ ನಿವಾಸಕ್ಕೆ ಆಗಮಿಸಿದ ಸಿಂಧೂರಿ – ರಿಪೋರ್ಟ್ ಮಾಡಿ ಎಂದ ಬಿಎಸ್‍ವೈ

ಸಿಎಂ ನಿವಾಸಕ್ಕೆ ಆಗಮಿಸಿದ ಸಿಂಧೂರಿ – ರಿಪೋರ್ಟ್ ಮಾಡಿ ಎಂದ ಬಿಎಸ್‍ವೈ

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಯಾದ ರೋಹಿಣಿ ಸಿಂಧೂರಿ ಅವರು ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಲು ಕಾವೇರಿ ನಿವಾಸಕ್ಕೆ ಆಗಮಿಸಿದ್ದರು.

ವರ್ಗಾವಣೆ ಬೆನ್ನಲ್ಲೇ ರೋಹಿಣಿ ಸಿಂಧೂರಿ ವರ್ಗಾವಣೆಗೆ ತಡೆ ಕೋರಲು ಸಿಎಂ ಭೇಟಿಗಾಗಿ ಆಗಮಿಸಿದ್ದರು. ಇಡೀ ಪ್ರಕರಣದಲ್ಲಿ ತನ್ನಿಂದ ಯಾವುದೇ ತಪ್ಪಾಗಿಲ್ಲ ಎಂದು ಮನವರಿಕೆ ಮಾಡಿಕೊಡಲು ಸಿಂಧೂರಿ ಯತ್ನಿಸಿದ್ದಾರೆ.

ವರ್ಗಾವಣೆ ತಡೆಹಿಡಿಯುವಂತೆ ಸಿಎಂಗೆ ಮನವಿ ಮಾಡಲು ಬಂದಿದ್ದ ಸಿಂಧೂರಿ ಅವರಿಗೆ ಯಾವುದೇ ಕಾರಣಕ್ಕೂ ವರ್ಗಾವಣೆ ತಡೆಹಿಡಿಯಲು ಅಸಾಧ್ಯ ಎಂದು ಸಿಎಂ ಹೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ರೋಹಿಣಿ ಸಿಂಧೂರಿ ನಿರಾಸೆಯಿಂದಲೇ ವಾಪಸ್ಸಾಗಿದ್ದಾರೆ.

ಮಾಜಿ ಸಿಎಂ ಡಿ.ದೇವರಾಜು ಅರಸು ಅವರ 39 ನೇ ಪುಣ್ಯತಿಥಿ ವಿಧಾನಸೌಧದಲ್ಲಿ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ವರ್ಗಾವಣೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಸಿಎಂ, ವರ್ಗಾವಣೆ ಆಗಿತ್ತಲ್ಲ ಅದಕ್ಕೆ ರೋಹಿಣಿ ಸಿಂಧೂರಿ ಬಂದಿದ್ದರು. ಒಮ್ಮೆ ವರ್ಗಾವಣೆ ಮಾಡಿದ್ಮೇಲೆ ಮತ್ತೆ ವಾಪಸ್ ಪಡೆಯೋಕ್ಕಾಗಲ್ಲ. ಬಂದು ರಿಪೋರ್ಟ್ ಮಾಡಿಕೊಳ್ಳಲು ತಿಳಿಸಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಳು