ಅಕ್ಕ ತಂಗಿಯನ್ನು ಮದುವೆಯಾಗಿದ್ದ ಮುದ್ದಿನ ಗಂಡ ಅರೆಸ್ಟ್

ಅಕ್ಕ ತಂಗಿಯನ್ನು ಮದುವೆಯಾಗಿದ್ದ ಮುದ್ದಿನ ಗಂಡ ಅರೆಸ್ಟ್

ಕೋಲಾರ: ಸಿನಿಮಾ ಸ್ಟೈಲ್‍ನಂತೆ ಒಂದೇ ಮಂಟಪದಲ್ಲಿ ಅಕ್ಕ ಮತ್ತು ತಂಗಿ ಇಬ್ಬರನ್ನು ಮದುವೆಯಾಗಿದ್ದ ಇಬ್ಬರ ಹೆಂಡತಿಯರ ಮುದ್ದಿನ ಗಂಡ ಉಮಾಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ವೇಗಮಡಗು ಗ್ರಾಮದ ಉಮಾಪತಿ ಅಕ್ಕ ತಂಗಿಯರಿಬ್ಬರನ್ನು ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದ. ಮೇ 7 ರಂದು ಸುಪ್ರಿಯಾ ಮತ್ತು ಲಲಿತಾರನ್ನು ಉಮಾಪತಿ ಮದುವೆಯಾಗಿದ್ದ

ಅಕ್ಕ ತಂಗಿಯರನ್ನು ಮದುವೆಯಾದ ಭೂಪನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗತೊಡಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಡಿಸಿ ಸೆಲ್ವಮಣಿ ಅವರ ಆದೇಶದಂತೆ ತನಿಖೆಗೆ ಮುಂದಾಗಿದೆ ಈ ವೇಳೆ ಉಮಾಪತಿಯ ನಿಜ ಬಣ್ಣ ಬಯಲಾಗಿದೆ.

ತನಿಖೆ ವೇಳೆ ತಂಗಿ ಲಲಿತಾ ಅಪ್ರಾಪ್ತೆ ಎನ್ನುವ ವಿಷಯ ತಿಳಿದು ಬಂದಿದೆ. 2005ರಲ್ಲಿ ಜನಿಸಿದ್ದ ಲಲಿತಾಳನ್ನು ಮದುವೆಯಾಗಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡ ಮುಳಬಾಗಲಿನ ನಂಗಲಿ ಪೊಲೀಸರು ಉಮಾಪತಿಯನ್ನು ಬಂಧಿಸಿದ್ದಾರೆ.

ವರ ಉಮಾಪತಿ, 4 ಜನ ಪೋಷಕರು, ಅರ್ಚಕ, ಮದುವೆ ಆಮಂತ್ರಣ ಮುದ್ರಕ ಸೇರಿ ಏಳು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳು