ಜನ್ಮದಿನದಂದು ಕರ್ನಾಟಕದಲ್ಲಿ ಹಾಕಿರೋ ಫ್ಲೆಕ್ಸ್‌ಗೆ ಸನ್ನಿ ಫಿದಾ..!

ಜನ್ಮದಿನದಂದು ಕರ್ನಾಟಕದಲ್ಲಿ ಹಾಕಿರೋ ಫ್ಲೆಕ್ಸ್‌ಗೆ ಸನ್ನಿ ಫಿದಾ..!

ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಜನ್ಮದಿನದಂದು ಕರ್ನಾಟಕದ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಒಂದನ್ನು ಹಾಕಲಾಗಿತ್ತು. ಈ ಫ್ಲೆಕ್ಸ್‌ಗೆ ನಟಿ ಫಿದಾ ಆಗಿದ್ದಾರೆ.

ಹೌದು. ಮೇ 13ರಂದು ಸನ್ನಿ ಲಿಯೋನ್ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸನ್ನಿಲಿಯೋನ್ ಅವರು ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ನಟನೆ ಮಾತ್ರವಲ್ಲದೆ ಸನ್ನಿ, ಹಲವಾರು ಸಾಮಾಜಿಕ, ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಯ ಜನ್ಮದಿನದಂದು ಕರ್ನಾಟಕದಲ್ಲಿ ಅಭಿಮಾನಿಗಳು ವಿಶೇಷವಾಗಿ ತಮ್ಮ ಅಭಿಮಾನ ಮೆರೆದಿದ್ದಾರೆ.

ಸನ್ನಿ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಹಳ್ಳಿಯೊಂದರ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಹಾಕಲಾಗಿದೆ. ಫ್ಲೆಕ್ಸ್ ನಲ್ಲಿ ನಟಿ ಹಳದಿ ಹಾಗೂ ಕಪ್ಪು ಬಣ್ಣ ಮಿಶ್ರಿತ ಸೀರೆಯಲ್ಲಿ ಮಿಂಚಿದ್ದಾರೆ. ಫೋಟೋದ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಇಂಗ್ಲಿಷ್ ನಲ್ಲಿ ಬರೆದರೆ, ಕೆಳಗೆ ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ ಎಂದು ಬರೆಯಲಾಗಿದೆ. ಈ ಫ್ಲೆಕ್ಸ್ ಗೆ ದೊಡ್ಡ ಹೂವಿನ ಹಾರವೊಂದನ್ನು ಕೂಡ ಹಾಕಲಾಗಿದ್ದು, ಈ ಮೂಲಕ ಅಭಿಮಾನಿಗಳು ಸನ್ನಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಫ್ಲೆಕ್ಸ್ ಎಲ್ಲಿ ಹಾಕಿರುವುದು ಎಂಬುದಾಗಿ ತಿಳಿದುಬಂದಿಲ್ಲ. ಆದರೆ ಫ್ಲೆಕ್ಸ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಟಿಗೂ ತಲುಪಿದೆ. ಹೀಗಾಗಿ ನಟಿ ಕೂಡ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಹಾರ್ಟ್ ಸಿಂಬಲ್ ಹಾಕಿ ಅಭಿಮಾನಿಗಳ ಅಭಿಮಾನಕ್ಕೆ ಫಿದಾ ಆಗಿದ್ದಾರೆ.

ತಾಜಾ ಸುದ್ದಿಗಳು