ಇಂದು ಸಂಜೆ ಸಿಎಂ ಮಹತ್ವದ ಸುದ್ದಿಗೋಷ್ಠಿ

ಇಂದು ಸಂಜೆ ಸಿಎಂ ಮಹತ್ವದ ಸುದ್ದಿಗೋಷ್ಠಿ

ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ಚೈನ್ ಲಿಂಕ್ ಕತ್ತರಿಸುವ ಸಲುವಾಗಿ ರಾಜ್ಯಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಆದರೆ ಈ ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಹತ್ವದ ವಿಷಯವನ್ನು ತಿಳಿಸಲಿದ್ದಾರೆ.

ಹೌದು. ಇಂದು ಸಂಜೆ 5 ಗಂಟೆಗೆ ಬಿಎಸ್‍ವೈ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ತೀವ್ರ ಕುತೂಹಲ ಹುಟ್ಟಿಸಿದೆ. ಯಾಕಂದ್ರೆ ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವ ಮೊದಲೇ ಸಿಎಂ ಸಚಿವರ ಜೊತೆ ಸಭೆ ನಡೆಸುತ್ತಿದ್ದಾರೆ.

ಲಾಕ್ ಡೌನ್ ಮುಗಿಯಲು ಇನ್ನೂ 10 ದಿನ ಬಾಕಿ ಇದೆ. ಈ ಮಧ್ಯೆ ಸಚಿವರ ಜೊತೆ ಮೀಟಿಂಗ್ ಕರೆದಿರುವುದು ಕುತೂಹಲ ಹುಟ್ಟಿಸಿದೆ. ಸಭೆಯಲ್ಲಿ ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೆ..?, ಮತ್ತೆ ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ಕೊಡುತ್ತಾರಾ..? ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಆಟೋ ಟ್ಯಾಕ್ಸಿ, ಚಾಲಕರಿಗೆ ವಿಶೇಷ ಪ್ಯಾಕೇಜ್, ಕಟ್ಟಡ ಕಾರ್ಮಿಕರಿಗೆ ನೆರವು ಅಥವಾ ರೈತರಿಗೆ ಹಣಕಾಸು ನೆರವು ಘೋಷಿಸುತ್ತಾರಾ ಎಂಬ ಪ್ರಶ್ನೆಯೂ ಮೂಡಿದೆ. ಒಟ್ಟಿನಲ್ಲಿ ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ ಸಿಎಂ ಕರೆದಿರುವ ಸುದ್ದಿಗೋಷ್ಠಿ ಕುತೂಹಲ ಹುಟ್ಟಿಸಿದೆ.

ತಾಜಾ ಸುದ್ದಿಗಳು