ತಾಯಿ ಕೊರೊನಾಗೆ ಬಲಿಯಾಗ್ತಿದ್ದಂತೇ ಮಗನೂ ಸಾವು!

ತಾಯಿ ಕೊರೊನಾಗೆ ಬಲಿಯಾಗ್ತಿದ್ದಂತೇ ಮಗನೂ ಸಾವು!

ಮಂಡ್ಯ: ಅತ್ತ ತಾಯಿ ಕೊರೊನಾಗೆ ಬಲಿಯಾಗುತ್ತಿದ್ದಂತೆ ಇತ್ತ ಮಗನಿಗೆ ಹೃದಯಾಘಾತವಾದ ಘಟನೆ ಮಂಡ್ಯದ ಸುಭಾಷ್ ನಗರದಲ್ಲಿ ನಡೆದಿದೆ.

ಸುಜಾತ(60) ಕೊರೋನಾದಿಂದ ಆಸ್ಪತ್ರೆಯಲ್ಲಿ ಮೃತ ಪಟ್ಟ ತಾಯಿ. ರಮೇಶ್(38) ಹೃದಯಾಘಾತದಿಂದ ಮನೆಯಲ್ಲಿ ಸಾವನ್ನಪ್ಪಿದ ಮಗ. ತಾಯಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮಗ ಮೃತಪಟ್ಟಿದ್ದಾರೆ.

ಮೇ 07ರಂದು ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಸುಜಾತರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೀಲಾರ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ತಾಯಿಗೆ ಕೋವಿಡ್ ಬಂದ ದಿನದಿಂದ ಮಗ ಮಾನಸಿಕ ಆಘಾತಕೊಳಗಾಗಿದ್ದ. ತಾಯಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮನೆಯಲ್ಲಿದ್ದ ರಮೇಶ್‍ಗೆ ಹೃದಯಾಘಾತವಾಗಿದೆ. ಒಂದೇ ದಿನ ಕುಟುಂಬದ ಇಬ್ಬರ ಸಾವಿನಿಂದ ಕುಟುಂಬ ಕಂಗಾಲಾಗಿದೆ.
ಕೌಟುಂಬಿಕ ಜಗಳದಿಂದ ಹೆಂಡತಿಯಿಂದ ರಮೇಶ್ ಬೇರ್ಪಟ್ಟಿದ್ದರು. ಪತ್ನಿ ಜೊತೆ ವಿಚ್ಛೇದನ ಪಡೆದುಕೊಂಡ ಬಳಿಕ ರಮೇಶ್ ಅವರು ತಮ್ಮ ತಾಯಿ ಜೊತೆ ವಾಸವಿದ್ದರು.

ತಾಜಾ ಸುದ್ದಿಗಳು