ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಡಿಕೆಶಿ ಅಭಿನಂದನೆ

ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಡಿಕೆಶಿ ಅಭಿನಂದನೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕ್ ದಂಧೆಯನ್ನು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಡಿಕೆಶಿ ಈ ಅಭಿನಂದನೆಯನ್ನು ತಿಳಿಸಿದ್ದಾರೆ.
ಟ್ವೀಟ್ ನಲ್ಲೇನಿದೆ..?
ಬೆಡ್ ಬ್ಲಾಕ್ ದಂಧೆ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾರ ನಿಯಂತ್ರಣದಲ್ಲಿದೆ ಬಿಬಿಎಂಪಿ..!? ಆ ಬಿಜೆಪಿ ಸಚಿವನೇ ನೇರ ಹೊಣೆ ಹೊರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಏನಿದು ಪ್ರಕರಣ..?
ಹೋಂ ಐಸೋಲೇಟ್ ಆಗುವ ವ್ಯಕ್ತಿಗಳಿಗೆ ತಿಳಿಯದಂತೆ ಅವರ ಹೆಸರಿನಲ್ಲಿ ಬೆಡ್ ಮೀಸಲಿರಿಸುವ ಮಹಾದಂಧೆ ಬಯಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿಯ ಕಳ್ಳಾಟವನ್ನ ಬಯಲು ಮಾಡಿದ್ದು, ಸೋಂಕಿತರ ಜೊತೆ ಮಾತನಾಡಿ ಸೀಟ್ ಸಿಕ್ಕಿದೆಯಾ ಅಥವಾ ಇಲ್ಲವಾ ಅನ್ನೋದನ್ನ ಖಚಿತಪಡಿಸಿಕೊಂಡಿದ್ದರು. ಸೋಂಕಿತರ ಕುಟುಂಬಸ್ಥರ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

ಬೆಂಗಳೂರು ದಕ್ಷಿಣ ಭಾಗದಲ್ಲಿ ಬಿಬಿಎಂಪಿಯ ವಾರ್ ರೂಂ ಅಧಿಕಾರಿಗಳೇ ಕೃತಕ ಬೆಡ್ ಅಭಾವ ಸೃಷ್ಟಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೋಂ ಐಸೋಲೇಟ್ ನಲ್ಲಿರುವ ಸೋಂಕಿತನ ಹೆಸರಲ್ಲಿ ಬೆಡ್ ಬುಕ್ ಆದ್ರೆ, ಅದು ಯಾರಿಗೆ ನೀಡಲಾಗುತ್ತೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ. ಮಹಾನಗರ ಬೆಂಗಳೂರಿನಲ್ಲಿ ಕೃತಕ ಬೆಡ್ ಅಭಾವದಿಂದಲೇ ಈ ಹೆಲ್ತ್ ಎಮೆರ್ಜೆನ್ಸಿ ಉಂಟಾಗಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿದೆ.

ತಾಜಾ ಸುದ್ದಿಗಳು