ರಾಜರೋಷವಾಗಿ ಗೋಮಾಂಸ ಮಾರಾಟ; ಕಂಡೂ ಕಾಣದಂತಿರುವ ಅಧಿಕಾರಿ ವರ್ಗ

ರಾಜರೋಷವಾಗಿ ಗೋಮಾಂಸ ಮಾರಾಟ; ಕಂಡೂ ಕಾಣದಂತಿರುವ ಅಧಿಕಾರಿ ವರ್ಗ

ಅರಕಲಗೂಡು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸಾಯಿ ಖಾನೆಗಳ ದರ್ಬಾರು ಮುಂದುವರೆದಿದೆ. ರಾಜರೋಷವಾಗಿ ಗೋಮಾಂಸ ಮಾರಾಟ ಮಾಡುವ ಹತ್ತಾರು ಅನಧಿಕೃತ ಮಳಿಗೆಗಳು ನಾಯಿಕೊಡೆಯಂತೆ ತಲೆ ಎತ್ತುತ್ತಿವೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ, ತಾಲೂಕು ಆಡಳಿತ ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಅನಧಿಕೃತ ಕಸಾಯಿ ಖಾನೆ ಪರವಾನಿಗೆ: ಪಟ್ಟಣದ ಸಂತೆಮರೂರು ರಸ್ತೆಯಲ್ಲಿರುವ ಹೌಸಿಂಗ್ ಬೋರ್ಡಿನಲ್ಲಿ ಬಕಾಶ ಎಂಬ ಹಾಸನ ಮೂಲದ ವ್ಯಕ್ತಿಯೊಬ್ಬ ತನ್ನ ವಾಸದ ಮನೆಯಲ್ಲೇ ರಾಜರೋಷವಾಗಿ ಬೆಂಗಳೂರಿನ ಕಸಾಯಿ ಖಾನೆಯ ಪರವಾನಿಗೆಯನ್ನಟ್ಟುಕೊಂಡು ವ್ಯವಹರಿಸುತ್ತಿರುವುದು ಸುಮಾರು ೪ ವರ್ಷಗಳಿಂದ ನಡೆಯುತ್ತಲೆ ಬರುತ್ತಿದೆ. ಇದಲ್ಲದೆ ಪಟ್ಟಣದ ವಾರ್ಡ ನಂ ೩ ರ ಸುಭಾಷ್ ನಗರದಲ್ಲಿ ಬಹುತೇಕ ೧೦ ಕ್ಕೂ ಅಧಿಕ ಅನಧಿಕೃತಕಸಾಯಿ ಖಾನೆಗಳು ಹಲವಾರು ವರ್ಷಗಳಿಂದ ವ್ಯವಹಾರ ನಡೆಸುತ್ತಾ ಬರುತ್ತಿದ್ದು, ಈ ಎಲ್ಲಾ ವ್ಯವಹಾರಸ್ಥರ ಜೊತೆಯಲ್ಲಿ ಪ.ಪಂಚಾಯಿತಿ ಹಾಗೂ ಪೊಲೀಸ್ ಇಲಾಖಾ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕಾಯಿದೆ ಗಾಳಿಗೆ ತೂರಿದರೇ ಅಧಿಕಾರಿಗಳು?: ರಾಜ್ಯ ಸರ್ಕಾರ ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ ತಾಲೂಕಿನ ಅಧಿಕಾರಿಗಳು ಇದಕ್ಕೆ ಸಮ್ಮತಿಸದೆÀ, ಈ ಕಾಯಿದೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂಬ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಪಟ್ಟಣದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿ ಖಾನೆಗಳೇ ಜೀವಂತ ಸಾಕ್ಷಿಯಾಗಿದೆ. ಆದರೆ ಜಿಲ್ಲೆಗೆ ಶನಿವಾರ ಪಶುಸಂಗೋಪನಾ ಸಚಿವ ಪ್ರಭು ವಿ.ಚವ್ಹಾಣ ಭೇಟಿ ನೀಡಿ ಪ್ರತಿ ತಾಲೂಕಿನಲ್ಲಿಯೂ ಎರಡು ಗೋಶಾಲೆಗಳನ್ನ ತೆರೆದು ಗ್ರಾಮ ಸಭೆಗಳಲ್ಲಿ ರೈತರಿಗೆ ಗೋಹತ್ಯೆ ನಿಷೇಧ ಕಾಯಿದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದುರಂತವೆAದರೆ ರೈತನಿಗೆ ಅರಿವು ಮೂಡಿಸುವ ಬದಲು ಸಂಬAಧಿಸಿದ ಇಲಾಖಾ ಧಿಕಾರಿಗಳಿಗೆ ಈ ಬಗ್ಗೆ ಅರಿವು ಮೂಡಿಸಬೇಕೆಂಬುದು ಸಾರ್ವಜನಿಕ ವಲಯದ ಮಾತಾಗಿದೆ.
ಕಸಾಯಿಖಾನೆ ಮುಂದೆ ಜನಸಂದಣಿ: ವಾರ್ಡ ನಂ. ೩ ಸುಭಾಷ್ ನಗರ, ಮತ್ತು ವಾರ್ಡ ನಂ. ೧೪ ಕೆಲ್ಲೂರು ವಾರ್ಡಿಗೆ ಸೇರುವ ಹೌಸಿಂಗ್ ಬೋರ್ಡ್ ಹಾಗೂ ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಎಬಿಎಂ ಹಳ್ಳಿಯಲ್ಲಿ ಅನಧಿಕೃತ ಕಸಾಯಿ ಖಾನೆಗಳು ತಲೆಎತ್ತಿದ್ದು, ಪಟ್ಟಣದ ಹೌಸಿಂಗ್ ಬೋರ್ಡಿನಲ್ಲಿ ಬಾಕಾಶ ಎಂಬ ವ್ಯಕ್ತಿ ಪ್ರತೀ ದಿನ ವ್ಯವಹಾರ ನಡೆಸುತ್ತಿದ್ದಾನೆ.
ಎಬಿಎಂ ಹಳ್ಳಿ ಹಾಗೂ ಸುಭಾಷ್ ನಗರದಲ್ಲಿ ಗೋಮಾಂಸ ಮಾರಾಟ ಭಾನುವಾರ, ಗುರುವಾರ, ಶುಕ್ರವಾರಗಳಂದು ಎಗ್ಗಿಲ್ಲದೆ ನಡೆಯುತ್ತಿವೆ. ಈ ಅಕ್ರಮವನ್ನ ತಡೆಗಟ್ಟಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಏತಕ್ಕೆ ಎಂಬುವುದೇ ತಿಳಿಯುತ್ತಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಪ್ರೋಪೆಷನರಿ ಪಿಎಸ್‌ಐ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ ಈ ಎಲ್ಲಾ ಅಡ್ಡೆಗಳ ಮೇಲೆ ದಾಳಿ ನಡೆಸಿ ಗೋಮಾಂಸಗ ವಶಪಡಿಸಿಕೊಂಡು ಕಸಾಯಿಖಾನೆ ನಡೆಸುತ್ತಿರುವವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು. ಇಂತಹ ಪ್ರಕರಣಗಳು ಮಾಧ್ಯಮಗಳಲ್ಲಿ ಪ್ರಕಟವಾದ ಸಂದರ್ಭಗಳಲ್ಲಿ ದಾಳಿ ನಡೆಸುತ್ತಿರುವುದ ಸಹಜ. ನಂತರದ ದಿನಗಳಲ್ಲಿ ಮತ್ತೆ ಅದೇ ಸ್ಥಳದಲ್ಲಿ ಅದೇ ವ್ಯಕ್ತಿ ವ್ಯವಹಾರ ನಡೆಸುತ್ತಿರುವುದಕ್ಕೆ ಯಾರ ಕುಮ್ಮಕ್ಕಿದೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪ.ಪಂಚಾಯಿತಿ ವ್ಯಾಪ್ತಿಯಲ್ಲಿ ಕಸಾಯಿ ಖಾನೆಗಳು ತಲೆ ಎತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಇದರ ಬಗ್ಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇನೆ
– ಶಿವಕುಮಾರ ಮುಖ್ಯಾಧಿಕಾರಿಗಳು ಪಪಂಚಾಯಿತಿ
************
ಅನಧಿಕೃತ ಕಸಾಯಿಖಾನೆಗಳ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ, ನಾನು ಇತ್ತೀಚೆಗೆ ತಾಲೂಕಿಗೆ ವರ್ಗಾವಣೆಯಾಗಿ ಬಂದಿz್ದೆÃನೆ. ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸಿದ್ದೆ. ಮುಂದಿನ ದಿನಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಕಸಾಯಿಖಾನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ
-ವೈ.ಸತ್ಯನಾರಾಯಣ ಸರ್ಕಲ್ ಇನ್ಸ್ಪೆಕ್ಟರ್ ಅರಕಲಗೂಡು
***********************
ಕಸಾಯಿಖಾನೆ ನನ್ನ ಮನೆಯ ಹಿಂಬದಿಯಲ್ಲಿ ಹಲವಾರು ವರ್ಷಗಳಿಂದ ವಾಸದ ಮನೆಯಲ್ಲೇ ನಡೆಯುತ್ತಿದೆ. ಇದರ ಬಗ್ಗೆ ಪ.ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಗೆ ಹಲವಾರು ಭಾರಿ ದೂರುಗಳನ್ನ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಇದೇ ಪ್ರವೃತ್ತಿಯನ್ನ ಮುಂದುವರೆಸಿದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ.
ನಳರಾಜು, ವಕೀಲರು
**********

ಮುಂಜಾನೆ ೩ ರಿಂದಲೇ ಕಸಾಯಿಖಾನೆ ಆರಂಭ: ಕಸಾಯಿಖಾನೆಯ ಮಾಲೀಕರು ಮುಂಜಾನೆ ೩ ಗಂಟೆಯಿAದಲೇ ಗೋವುಗಳ ಹತ್ಯೆಗೆ ಮುಂದಾಗುತ್ತಾರೆ. ಇದು ಒಂದೆಡೆಯಾದರೆ, ಕಸಾಯಿಖಾನೆಯಿಂದ ಹೊರಬಿಸಾಡುವ ಮೂಳೆಗಳಿಗಾಗಿ ನೂರಾರು ನಾಯಿಗಳು ಮನೆಯ ಸುತ್ತ ಕಚ್ಚಾಡುತ್ತಿರುತ್ತವೆ. ಇವುಗಳ ಭಯದಿಂದ ಮನೆಯಿಂದ ಹೊರಬರಲಾಗದೆ ಮಕ್ಕಳನ್ನ ರಕ್ಷಿಸಿಕೊಳ್ಳುವುದೇ ಹರಸಾಹಸವಾಗಿದೆ. ಇದಿಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಗೂ ಇಲ್ಲಿಂದಲೇ ಗೋಮಾಂಸ ರಫ್ತಾಗುತ್ತಿದೆ ಎಂಬುದು ಜನಸಾಮಾನ್ಯರ ಆರೋಪವಾಗಿದೆ.

ತಾಜಾ ಸುದ್ದಿಗಳು