ಮಾಜಿ ಯೋಧನಿಂದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ

ಮಾಜಿ ಯೋಧನಿಂದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ

ಹಾಸನ: ರಸ್ತೆಯಲ್ಲಿ ಜಾನುವಾರು ಕಟ್ಟೋ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಕಲಹ

ಮಾಜಿ ಯೋಧನಿಂದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ

ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆ ಗ್ರಾಮದಲ್ಲಿ ಘಟನೆ

ವಿನೋದಮ್ಮ(45) ರವಿ(55) ದಂಪತಿಗೆ ಗಂಭೀರ ಗಾಯ

ಮಾಜಿ ಯೋಧನ ಮನೆಗೆ ತೆರಳೋ ದಾರಿಯಲ್ಲಿ ಜಾನುವಾರು ಕಟ್ಟುತ್ತಿದ್ದ ರವಿ ದಂಪತಿ

ಇದೇ ವಿಚಾರವಾಗಿ ನಡೆಯುತ್ತಿದ್ದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು

ಎಷ್ಟೇ ಹೇಳಿದ್ರೂ ತಮಗೆ ಅಡ್ಡಿ ಪಡಿಸುತ್ತಿದ್ದಾರೆಂದು ಸಿಟ್ಟಿಗೆದ್ದ ಮಾಜಿ ಸೈನಿಕನಿಂದ ಮಾರಣಾಂತಿಕ ಹಲ್ಲೆ

ಗಾಯಾಳುಗಳಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಾಜಿ ಯೋಧ ಚಂದ್ರಮೂರ್ತಿ(55) ಎಂಬಾತನಿಂದ ಕೃತ್ಯ

ಹಲ್ಲೆ ಸಂಬಂಧ ಚಂದ್ರಮೂರ್ತಿ ಹಾಗೂ ಆತನ ಪತ್ನಿ ಲತಾದೇವಿಯನ್ನ ವಶಕ್ಕೆ ಪಡೆದ ಹಿರೀಸಾವೆ ಪೊಲೀಸರು

ದಂಪತಿಮೇಲೆ‌ ಹಲ್ಲೆ ಮಾಡೋ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮಚ್ಚು ಹಿಡಿದು ಬಂದು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಚ್ಚಿರೋ ದುಷ್ಟ

ತಪ್ಪಿಸಿಕೊಳ್ಳಲು ಯತ್ನಿಸಿದವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ ಮಾಜಿ ಯೋಧನ ಪತ್ನಿ

ನಂತರವ ಮಚ್ಚಿನಿಂದ ಮನಬಂದಂತೆ ಕೊಚ್ಚಿರೋ ಮಾಜಿ ಯೋಧ ಚಂದ್ರಮೂರ್ತಿ

ಕೆಳಗೆ ಉರುಳಿಬಿದ್ದರೂ ಕರುಣೆತೋರದೆ ಅಮಾನವೀಯವಾಗಿ ಹಲ್ಲೆ ನಡೆಸಿರೋ ದಂಪತಿ

ತಾಜಾ ಸುದ್ದಿಗಳು