‘ಮಾಸ್ಟರ್’ ದಾಖಲೆ ಮುರಿದ ಕೆಜಿಎಫ್-2: ರಿಲೀಸ್ ಆದ ಕೆಲವೇ ಗಂಟೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಟೀಸರ್!

‘ಮಾಸ್ಟರ್’ ದಾಖಲೆ ಮುರಿದ ಕೆಜಿಎಫ್-2: ರಿಲೀಸ್ ಆದ ಕೆಲವೇ ಗಂಟೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಟೀಸರ್!

ಬೆಂಗಳೂರು: ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಗುರುವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ.

ವಿಶೇಷವೆಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್ 2 ಸಿನಿಮಾದ ಟೀಸರ್ ಪಡೆದುಕೊಂಡಿದೆ.

ಜನವರಿ 07 ರ ರಾತ್ರಿ 9.30 ಕ್ಕೆ ಬಿಡುಗಡೆಯಾದ ಟೀಸರ್, ಜನವರಿ 08 ರ ಬೆಳಿಗ್ಗೆ 10 ಗಂಟೆ ವೇಳೆಗೆ 2.3 ಮಿಲಿಯನ್ ಅಂದರೆ 23 ಲಕ್ಷ ಲೈಕ್ಸ್ ಪಡೆದುಕೊಂಡಿದೆ.


ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಆ ದಾಖಲೆಯನ್ನು ಕೆಜಿಎಫ್ 2 ಸಿನಿಮಾದ ಟೀಸರ್ ಅಳಿಸಿಹಾಕಿದೆ.
ನವೆಂಬರ್ 14 ರಂದು ಬಿಡುಗಡೆ ಆದ ಮಾಸ್ಟರ್ ಟೀಸರ್ ಈವರೆಗೆ 26 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

ತಾಜಾ ಸುದ್ದಿಗಳು