ಚಾಮರಾಜನಗರ; ವೈದ್ಯರ ವಸತಿ ಗೃಹಕ್ಕೆ ನುಗ್ಗಿದ ಚಿರತೆ

ಚಾಮರಾಜನಗರ; ವೈದ್ಯರ ವಸತಿ ಗೃಹಕ್ಕೆ ನುಗ್ಗಿದ ಚಿರತೆ

ಚಾಮರಾಜನಗರ: ಚಾಮರಾಜನಗರದಲ್ಲಿ ವೈದ್ಯರ ವಸತಿ ಗೃಹದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಚಿರತೆ ಓಡಾಡುವ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿರುವ ವೈದ್ಯರ ವಸತಿ ಗೃಹ ಕಟ್ಟಡಕ್ಕೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ. ರಾತ್ರಿ 9.30ರ ಸಮಯದಲ್ಲಿ ಚಿರತೆ ವಸತಿ ಗೃಹದಲ್ಲಿ ಓಡಾಡಿದೆ.

ಕೆಲವರು ಚಿರತೆಯನ್ನು ಕಂಡು ಭಯಪಟ್ಟಿದ್ದಾರೆ. ಯಾರಿಗೂ ತೊಂದರೆ ಮಾಡದ ಚಿರತೆ ಕೆಲವು ಕಡೆ ಓಡಾಡಿ ವಾಪಸ್ ಹೋಗಿದೆ. ಇದೇ ಮೊದಲ ಬಾರಿಗೆ ವಸತಿ ಗೃಹದ ಕಟ್ಟಡದಲ್ಲಿ ಚಿರತೆ ಕಾಣಿಸಿಕೊಂಡಿದೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೆಟ್ಟ-ಗುಡ್ಡದ ಪ್ರದೇಶದಲ್ಲಿದೆ. ಚಿರತೆಗಳು ಸಾಮಾನ್ಯವಾಗಿ ಇಲ್ಲಿ ಓಡಾಡುತ್ತಿರುತ್ತವೆ. ಸಂಸ್ಥೆಯ ಆವರಣದಲ್ಲಿ ಚಿರತೆ ಹಲವು ಬಾರಿ ಕಾಣಿಸಿಕೊಂಡಿದೆ.

ಚಿರತೆ ವೈದ್ಯರ ವಸತಿ ಗೃಹ ಇರುವ ಕಟ್ಟಡದ ಮೊದಲ ಮಹಡಿಗೆ ಹೇಗೆ ಬಂತು? ಎಂಬುದು ಇನ್ನೂ ತಿಳಿದಿಲ್ಲ. ಚಿರತೆಯ ಓಡಾಟ ಮಾತ್ರ ಸಿಸಿಟಿವಿಯಲ್ಲಿ ದಾಖಲಾಗಿದೆ.

ಕರ್ನಾಟಕಕ್ಕೆ 2ನೇ ಸ್ಥಾನ; ಕೇಂದ್ರ ಸರ್ಕಾರದ ಮಾಹಿತಿಯಂತೆ ಮಧ್ಯಪ್ರದೇಶ ರಾಜ್ಯದಲ್ಲಿ 3421 ಚಿರತೆಗಳಿದ್ದು, ರಾಜ್ಯ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದ್ದು, 1783 ಚಿರತೆಗಳಿವೆ. ಮಹಾರಾಷ್ಟ್ರದಲ್ಲಿ 1690 ಚಿರತೆಗಳಿವೆ.

2018ರ ಸಮೀಕ್ಷೆ ವರದಿಯಂತೆ ಭಾರತದಲ್ಲಿ 12,852 ಚಿರತೆಗಳಿವೆ. 2014ರ ಸಮೀಕ್ಷೆಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ 60ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಳು