ಕೊಡಗು ಗ್ರಾ.ಪಂ. ಚುನಾವಣೆ ಫಲಿತಾಂಶ: ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಗೆಲುವು; ಅಕ್ಕನನ್ನು ಸೋಲಿಸಿದ ತಂಗಿ!

ಕೊಡಗು ಗ್ರಾ.ಪಂ. ಚುನಾವಣೆ ಫಲಿತಾಂಶ: ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಗೆಲುವು; ಅಕ್ಕನನ್ನು ಸೋಲಿಸಿದ ತಂಗಿ!

ಮಡಿಕೇರಿ: ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ.

ಪಾಲಿಬೆಟ್ಟ ಗ್ರಾಮ ಪಂಚಾಯತ್ ಎಮ್ಮೆಗುಂಡಿ ಕ್ಷೇತ್ರದ ಅಭ್ಯರ್ಥಿ ಪುಲಯಂಡ ಬೋಪಣ್ಣ ಗೆಲುವು ಪಡೆದ ಅಭ್ಯರ್ಥಿ. ಇವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯುಸೂಫ್ ವಿರುದ್ಧ 61 ಮತಗಳ ಅಂತರದಿಂದ ಜಯಿಸಿದ್ದಾರೆ. ಬೋಪಣ್ಣ ಬಿಜೆಪಿ ಬೆಂಬಲಿತ ಅಭ್ಯರ್ಥಿ.

ಜಾತಿ ನಿಂದನೆ ಪ್ರಕರಣದಲ್ಲಿ ಬೋಪಣ್ಣ ನ್ಯಾಯಾಂಗ ಬಂಧನದಲ್ಲಿದ್ದರು. ಖುದ್ದು ನಾಮಪತ್ರ ಸಲ್ಲಿಸಲು ಅವಕಾಶ ಆಗಿರಲಿಲ್ಲ. ತಮ್ಮ ಬೆಂಬಲಿಗರೊಬ್ಬರು ನಾಮಪತ್ರ ಸಲ್ಲಿಸಿದ್ದರು.

ಬಳಿಕ ಜಾಮೀನು ಸಿಕ್ಕಿ, ಎರಡು ದಿನ ಪ್ರಚಾರ ನಡೆಸಿದ್ದರು. ಈ ಹಿಂದೆ ಅವರು 12 ವರ್ಷ ಪಾಲಿಬೆಟ್ಟ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ ಗ್ರಾಮ‌ ಪಂಚಾಯಿತಿಗೆ ರಾಷ್ಟ್ರೀಯ ‌ಪುರಸ್ಕಾರವೂ ಲಭಿಸಿತ್ತು. ಬಿಳಿಗೇರಿ ವಾರ್ಡ್ ನಲ್ಲಿ ಅಕ್ಕನ ವಿರುದ್ಧ ಸ್ಪರ್ಧಿಸಿದ್ದ ತಂಗಿಗೆ ಗೆಲುವು ಲಭ್ಯವಾಗಿದೆ. ಅಕ್ಕ ಸುಮಲತಾ ವಿರುದ್ಧ ಸ್ಪರ್ಧಿಸಿದ್ದ ಸಹೋದರಿ ಬಿ.ಎಸ್. ಪುಷ್ಪಾ 97 ಮತಗಳಿಂದ ಗೆದ್ದಿದ್ದಾರೆ.

ತಾಜಾ ಸುದ್ದಿಗಳು