ಜನೌಷಧ ಬಳಕೆಗೆ ಜನರ ನಿರಾಸಕ್ತಿ

ಜನೌಷಧ ಬಳಕೆಗೆ ಜನರ ನಿರಾಸಕ್ತಿ

ಹಲವರ ನಿರ್ಲಕ್ಷö್ಯದಿಂದ ಅನುಕೂಲತೆ ಇದ್ದರೂ ಹಿಂದೇಟು!

ಪರಮೇಶ್ ವಡೂರು
ಹಾಸನ: ಬಡವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧ ಲಭ್ಯವಾಗಬೇಕು ಎಂಬ ಸದಾಶಯದಿಂದ ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಗಳಲ್ಲೂ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆದಿದೆ. ಆದರೆ ಜನೌಷಧಿ ಕೇಂದ್ರಗಳಿಗೆ ತೆರಳಿ ಔಷಧಿ ಖರೀದಿಸಲು ಜನರು ನಿರಾಶಕ್ತಿ ತೋರುತ್ತಿದ್ದಾರೆ.
ಕೇಂದ್ರ ಸರ್ಕಾರದ ಔಷಧ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟಿರುವ ಪ್ರಧಾನ ಮಂತ್ರಿ ಜನೌಷಧ ಕೇಂದ್ರದÀಲ್ಲಿ ಅತ್ಯುತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳು ಮಾರುಕಟ್ಟೆ ದರಕ್ಕಿಂತ ಶೇ.೫೦ ರಿಂದ ಶೇ. ೯೦ರಷ್ಟು ಅಗ್ಗದ ಬೆಲೆಯಲ್ಲಿ ದೊರಕುತ್ತಿವೆ. ಆದರೂ ಈ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಹಾಗೂ ಅರಿವಿನ ಕೊರತೆಯಿಂದಾಗಿ ಜನೌಷಧ ಕೇಂದ್ರಗಳಿಗೆ ತೆರಳದೆ ಖಾಸಗಿ ಮೆಡಿಕಲ್‌ಗಳಿಗೆ ಹೋಗಿ ದುಪ್ಪಟ್ಟು ಹಣ ನೀಡಿ ಔಷಧಿ ಕೊಂಡುಕೊಳ್ಳುವುವುದು ಮುಂದುವರಿದಿದೆ.

ಏನಿದು ಜೆನರಿಕ್ ಔಷಧಿ:
ಜನೌಷಧಿ ಅಥವಾ ಜನೆರಿಕ್ ಔಷಧ ಎಂದು ಕರೆಯುವ ಸರಕಾರದ ಈ ಔಷಧಿ, ಮಾತ್ರೆಗಳು ಕಡಿಮೆ ಬೆಲೆಯಲ್ಲಿ ಶ್ರೇಷ್ಠ ಗುಣಮಟ್ಟವನ್ನು ಹೊಂದಿದ್ದು ಸರಕಾರವೇ ಔಷಧಿ ತಯಾರು ಮಾಡಿ (ಪೇಟೆಂಟ್ ಇಲ್ಲದ) ನೇರವಾಗಿ ಜನೌಷಧಿ ಕೇಂದ್ರಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮೂಲಕ ಔಷಧಿ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಏಕಚಕ್ರಾಧಿಪತ್ಯಕ್ಕೆ ಸೆಡ್ಡು ಹೊಡೆಯಲು ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ.
ಉದಾಹರಣೆಗೆ ಒಂದು ಮಾತ್ರೆಯ ಬೆಲೆ ಮಾರುಕಟ್ಟೆಯಲ್ಲಿ ೧೬ ರೂ.ಇದ್ದರೆ ಜನೌಷಧ ಕೇಂದ್ರದಲ್ಲಿ ಅದೇ ಮಾತ್ರೆ ೪.೮೦ರೂ. ದೊರೆಯಬಹುದು. ಇದು ಇತರೆ ಔಷಧ ಅಂಗಡಿಗಳಲ್ಲಿ ದೊರೆಯುವ ಔಷದಗಳ ಬೆಲೆಗಿಂತ ಕಡಿಮೆ. ಸರ್ಕಾರ ಅಗತ್ಯ ಔಷಧಗಳ ಮೇಲೆ ವ್ಯಾಟ್ ತೆರಿಗೆ ಹಾಗೂ ಎಕ್ಸೆöÊಸ್ ಕರವನ್ನೂ ಅತ್ಯಂತ ಕಡಿಮೆ ದರಕ್ಕೆ ಇಳಿಸಿದೆ. ಹೀಗಾಗಿ ಮತ್ತಷ್ಟು ಕಡಿಮೆ
ಬೆಲೆಗೆ ಜನರಿಕ್ ಮಳಿಗೆಗಳಲ್ಲಿ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳು ಲಭ್ಯವಾಗಲಿವೆ.
ಜಿಲ್ಲೆಯಲ್ಲಿ ೧೫ ಜನೌಷಧ ಕೇಂದ್ರ:
ಪ್ರಧಾನಮAತ್ರಿ ಜನೌಷಧü ಯೋಜನೆ ಜಾರಿ ನಂತರ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ ಸೇರಿದಂತೆ ವಿವಿಧೆಡೆ ೧೫ ಜನೌಷಧ ಮಳಿಗೆ ತೆರೆಯಲಾಗಿದ್ದು, ಎಲ್ಲವೂ ಕಾರ್ಯನಿರ್ವಹಿಸುತ್ತಿವೆ. ಆದರೆ ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಜೆನರಿಕ್ ಔಷಧ ಬಗ್ಗೆ ವೈದ್ಯರ ನಿರ್ಲಕ್ಷö್ಯ:
ಬಡ ಜನರ ಆರೋಗ್ಯ ರಕ್ಷಣೆ ಹಾಗೂ ಕಡಿಮೆ ಬೆಲೆಯಲ್ಲಿ ಔಷಧ ಲಭ್ಯತೆ ಇರುವುದರಿಂದ ಎಲ್ಲಾ ವೈದ್ಯರು ಕಡ್ಡಾಯವಾಗಿ ಜೆನರಿಕ್ ಔಷಧಿಗಳನ್ನೇ ಬಳಸುವಂತೆ ಸೂಚಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ. ಅಲ್ಲದೆ ವೈದ್ಯರು ಜನರಿಕ್ ಔಷಧ ಸೂಚಿಸಲು ನಿರ್ಲಕ್ಷ÷್ಯ ತೋರಿದರೆ ದೂರು ನೀಡಬಹುದಾದ ಅವಕಾಶಗಳನ್ನೂ ಸಹ ಸರ್ಕಾರ ಕಲ್ಪಿಸಿದೆ. ಆದರೂ ಕೆಲ ವೈದ್ಯರು ಜೆನರಿಕ್ ಔಷಧಿಗಳ ಬಗ್ಗೆ ನಿರ್ಲಕ್ಷö್ಯ ಮನೋಭಾವ ಹೊಂದಿದ್ದು ಎಂದಿನAತೆ ಖಾಸಗಿ ಮೆಡಿಕಲ್‌ಗಳಿಗೆ ಹೋಗುವಂತೆ ಸೂಚಿಸುತ್ತಿದ್ದಾರೆ. ವೈದ್ಯರ ಸೂಚನೆಯಂತೆ ರೋಗಿಗಳೂ ಖಾಸಗಿ ಮೆಡಿಕಲ್‌ಗಳಲ್ಲಿ ದುಬಾರಿ ಹಣ ನೀಡಿ ಔಷಧ ಕೊಂಡುಕೊಳ್ಳುತ್ತಿದ್ದಾರೆ.
೫೦೦ ಕ್ಕೂ ಹೆಚ್ಚು ಬಗೆಯ ಔಷಧ ಲಭ್ಯ:
ಜನೌಷಧ ಮಳಿಗೆಗಳಲ್ಲಿ ೫೦೦ಕ್ಕೂ ಅಧಿಕ ಬಗೆಯ ಜನೌಷಧಗಳು ದೊರೆಯುವಂತೆ ಮಾಡಲಾಗಿದೆ ಹಾಗೂ ೧೫೦ ಮಾದರಿಯ ವೈದ್ಯಕೀಯ ಪರಿಕರ ಸಿಗುವಂತೆ ನೋಡಿಕೊಳ್ಳಲಾಗಿದೆ.ಮುಖ್ಯವಾಗಿ ರಕ್ತದೊತ್ತಡ, ಡಯಾಬಿಟೀಸ್, ಹೆಚ್‌ಐವಿ ಏಡ್ಸ್, ಕಿಡ್ನಿ ವೈಫಲ್ಯ, ಕ್ಯಾನ್ಸರ್ ಮತ್ತು ಹೃದಯ ಸಂಬAಧಿ ಕಾಯಿಲೆಗಳ ಔಷಧಿಗಳೂ ಜನೌಷಧÀ ಮಳಿಗೆಗಳಲ್ಲಿ ದೊರಕುವ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ ಕೇವಲ ೧ ರೂಪಾಯಿಗೆ ಸುವಿಧಾ ಹೆಸರಿನಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲಾಗುತ್ತಿದೆ.

ಪ್ರತಿಕ್ರಿಯೆ:
ಪ್ರಧಾನ ಮಂತ್ರಿ ಜೆನರಿಕ್ ಔಷಧ ಮಳಿಗೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಔಷಧಿ ದೊರೆಯುತ್ತಿದ್ದರೂ, ಈ ಬಗ್ಗೆ ಅರಿವಿನ ಕೊರತೆಯಿಂದ ಜನರು ಖಾಸಗಿ ಮೆಡಿಕಲ್‌ಗಳಲ್ಲಿ ಹೆಚ್ಚು ಹಣ ನೀಡಿ ಔಷಧಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಸರ್ಕಾರ ಜನೌಷಧ ಕೇಂದ್ರಗಳ ಬಗ್ಗೆ ಸಾರ್ವಜನಿಕರಿಗೆ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
*ದರ್ಶನ್- ಹಾಸನ.

ಡಯಾಬಿಟೀಸ್ ಹಿನ್ನೆಲೆ ವೈದ್ಯರ ಸೂಚನೆ ಮೇರೆಗೆ ನಾನು ಖಾಸಗಿ ಮೆಡಿಕಲ್‌ನಲ್ಲಿ ಪ್ರತಿ ತಿಂಗಳು ಔಷಧ ಕೊಂಡುಕೊಳ್ಳುತ್ತಿದ್ದೆ. ಆದರೆ ಈ ಔಷಧ ಸೇವಿಸಿದರೂ ನನ್ನ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡುಬರದ ಹಿನ್ನೆಲೆ ನನ್ನ ಸ್ನೇಹಿತನ ಸಲಹೆಯಂತೆ ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಔಷಧ ಕೊಂಡುಕೊಳ್ಳುತ್ತಿದ್ದೇನೆ. ಈಗ ಆರೋಗ್ಯವು ಸುಧಾರಿಸುವುದರೊಂದಿಗೆ ನನಗೆ ಹಣ ಉಳಿತಾಯವಾಗುತ್ತಿದೆ.
* ರಾಜೇಗೌಡ, ಹಾಸನ.

ಎಲ್ಲ ವರ್ಗದ ಜನರಿಗೂ ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಔಷಧಿ ಲಭಿಸಲಿ ಎನ್ನುವ ಕಾರಣಕ್ಕೆ ಸರ್ಕಾರ ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ರೋಗಿಗಳು ವೈದ್ಯರ ಸೂಚನೆಯಂತೆ ಮೆಡಿಕಲ್‌ಗಳಿಗೆ ಹೋಗುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದಲೂ ಜನೌಷಧಿ ಬಳಕೆಗೆ ಉತ್ತೇಜನ ನೀಡಲು ಮತ್ತು ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
* ಗಿರೀಶ್, ಸಹಾಯಕ ಔಷಧ ನಿಯಂತ್ರಕ
————–

ತಾಜಾ ಸುದ್ದಿಗಳು