ಹಾಸನ: ವ್ಯಕ್ತಿಯ ಕೊಲೆಗೈದು, ಡಿಕ್ಕಿಯಲ್ಲಿಟ್ಟು ಕಾರು ಸಮೇತ ಸುಟ್ಟು ಹಾಕಿದ್ರಾ ದುಷ್ಕರ್ಮಿಗಳು?

ಹಾಸನ: ವ್ಯಕ್ತಿಯ ಕೊಲೆಗೈದು, ಡಿಕ್ಕಿಯಲ್ಲಿಟ್ಟು ಕಾರು ಸಮೇತ ಸುಟ್ಟು ಹಾಕಿದ್ರಾ ದುಷ್ಕರ್ಮಿಗಳು?

ಹಾಸನ: ಕಾರಿನ ಡಿಕ್ಕಿಯಲ್ಲಿ ಸುಟ್ಟು ಕರಕಲಾದ ಮೃತದೇಹವೊಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಹಾಸನ: ಕಾರಿನ ಡಿಕ್ಕಿಯಲ್ಲಿ ಸುಟ್ಟು ಕರಕಲಾದ ಮೃತದೇಹವೊಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಈ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ.ಹೊನ್ನೇನಹಳ್ಳಿ ಬಳಿ ನಡೆದಿದೆ. ಕಾರಿನ ಡಿಕ್ಕಿಯಲ್ಲಿ ಮೃತದೇಹ ಇಟ್ಟು ನಂತರ ಕಾರಿಗೆ ಬೆಂಕಿ ಹಾಕಲಾಗಿದೆ. ಕಾರು ಸಂಪೂರ್ಣ ಸುಟ್ಟು ಹೋಗಿದೆ. ಮೃತದೇಹ ಗುರುತು ಸಿಗದಷ್ಟು ಸುಟ್ಟು ಕರಕಲಾಗಿದೆ.

ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ನಂತರ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇಟ್ಟು, ಕಾರಿಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾಗಿರುವವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಳು