ಸುಶಾಂತ್ ಗಾಗಿ ಡ್ರಗ್ಸ್ ಖರೀದಿಸಿದ್ದೆ: ತಪ್ಪೊಪ್ಪಿಕೊಂಡ ರಿಯಾ ಚಕ್ರವರ್ತಿ

ಸುಶಾಂತ್ ಗಾಗಿ ಡ್ರಗ್ಸ್ ಖರೀದಿಸಿದ್ದೆ: ತಪ್ಪೊಪ್ಪಿಕೊಂಡ ರಿಯಾ ಚಕ್ರವರ್ತಿ

ಮುಂಬಯಿ: ಲಿವಿಂಗ್ ಇನ್ ರಿಲೇಷನ್ ಶಿಪ್ ಪಾರ್ಟನರ್ ಸುಶಾಂತ್ ಸಿಂಗ್ ರಜಪೂತ್ ಗಾಗಿ ತಾನು ಡ್ರಗ್ಸ್ ಖರೀದಿಸಿದ್ದಾಗಿ ಜಾಮೀನು ಅರ್ಜಿಯಲ್ಲಿ ರಿಯಾ ಚಕ್ರವರ್ತಿ ತಪ್ಪೊಪ್ಪಿಕೊಂಡಿದ್ದಾರೆ.

ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನಿಗಾಗಿ 2ನೇ ಬಾರಿ ರಿಯಾ ಚಕ್ರವರ್ತಿ ಅರ್ಜಿ ಸಲ್ಲಿಸಿದ್ದಾರೆ. ಸುಶಾಂತ್ ತನ್ನ ಸಿಬ್ಬಂದಿ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ದಿಪೇಶ್ ಸಾವಂತ್ ಡ್ರಗ್ಸ್ ಖರೀದಿಗೆ ಸೂಚಿಸಿದ್ದರು ಎಂದು ತನಿಖಾಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯಲ್ಲಿದೆ.

ನಾನು ಮತ್ತು ಸುಶಾಂತ್ ಡ್ರಗ್ಸ್ ಖರೀದಿಗಾಗಿ ಶೋವಿಕ್ ಚಕ್ರವರ್ತಿಯನ್ನು ಬಳಸಿಕೊಂಡಿದ್ದೆವು ಎಂದು ರಿಯಾ ತಿಳಿಸಿದ್ದಾಳೆ. ಸುಶಾಂತ್ ಸಾವಿಗೂ ಮುನ್ನಾ ಮೂರು ದಿನಗಳ ಹಿಂದೆ ಗಾಂಜಾವನ್ನು ತನ್ನ ರೂಮಿನಲ್ಲಿ ಇಡುವಂತೆ ತಿಳಿಸಿದ್ದರು ಎಂದು ಸುಶಾಂತ್ ಅಡುಗೆ ಸಿಬ್ಬಂದಿ ನೀರಾಜ್ ಅಧಿಕಾರಿಗಳ ಮುಂದೆ ಹೇಳಿದ್ದಾನೆ.

ತಾಜಾ ಸುದ್ದಿಗಳು