ಆರ್‌ಸಿಬಿ ಡೆಬ್ಯು ಗೆಲುವಿನೊಂದಿಗೆ ಎಲೈಟ್ ಪಟ್ಟಿಗೆ ಕೊಹ್ಲಿ ಸೇರ್ಪಡೆ

ಆರ್‌ಸಿಬಿ ಡೆಬ್ಯು ಗೆಲುವಿನೊಂದಿಗೆ ಎಲೈಟ್ ಪಟ್ಟಿಗೆ ಕೊಹ್ಲಿ ಸೇರ್ಪಡೆ

ದುಬೈ: ಐಪಿಎಲ್ 2020ರ ಆವೃತ್ತಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಗೆಲುವಿನ ನಗೆ ಬೀರಿದ್ದು, ಈ ಗೆಲುವಿನೊಂದಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

ಸನ್‍ರೈಸರ್ಸ್ ಹೈದರಾಬಾದ್‍ನ್ನು 10 ರನ್‍ಗಳಿಂದ ಮಣಿಸಿದ ಬೆಂಗಳೂರು ತಂಡದ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದರೊಂದಿಗೆ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ 50ನೇ ಗೆಲುವು ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಸಿಎಸ್‍ಕೆ ನಾಯಕ ಧೋನಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಸ್ಥಾನ ಪಡೆದಿದ್ದು, ಸದ್ಯ ಈ ಸಾಲಿಗೆ ಕೊಹ್ಲಿಗೆ ಸೇರ್ಪಡೆಯಾಗಿದ್ದಾರೆ.

ಐಪಿಎಲ್‍ನಲ್ಲಿ 105 ಜಯಗಳೊಂದಿಗೆ ಅತಿ ಹೆಚ್ಚು ಗೆಲುವು ಪಡೆದ ತಂಡದ ನಾಯಕರ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಗೆ 2 ಬಾರಿ ಟೈಟಲ್ ಗೆದ್ದು ತಂದಿದ್ದ ಗೌತಮ್ ಗಂಭೀರ್ 71 ಜಯಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 60 ವಿಜಯಗಳೊಂದಿಗೆ ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ.

2011 ರಿಂದ ಬೆಂಗಳೂರು ತಂಡದ ನಾಯಕತ್ವ ವಹಿಸಿರುವ ಕೊಹ್ಲಿ ಇದುವರೆಗೂ 101 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ ನಾಲ್ಕು ಬಾರಿ, ಧೋನಿ ಮೂರು ಬಾರಿ, ಗಂಭಿರ್ ಎರಡು ಬಾರಿ ತಾವು ನಾಯಕತ್ವ ವಹಿಸಿದ ತಂಡಗಳಿಗೆ ಟೈಟಲ್ ಗೆದ್ದು ತಂದಿದ್ದು, ಇದುವರೆಗೂ ಕೊಹ್ಲಿ ಸೇನೆ ಮಾತ್ರ ಕಪ್ ಗೆಲ್ಲಲು ವಿಫಲವಾಗಿದೆ.


ಉಳಿದಂತೆ ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 5 ವಿಕೆಟ್‍ಗೆ 163 ರನ್ ಗಳಿಸಿತ್ತು. ಆರ್ ಸಿಬಿ ಪರ ದೇವದತ್ತ್ 56 ಮತ್ತು ಡಿವಿಲಿಯರ್ಸ್ 51 ರನ್ ಗಳಿಸಿ ಗಮನ ಸೆಳೆದರು. 153 ರನ್‍ಗೆ ಹೈದರಾಬಾದ್ 153 ರನ್ ಗಳಿಗೆ ಆಲೌಟ್ ಆಯಿತು. ಯುಜುವೇಂದ್ರ ಚಾಹಲ್ 3 ವಿಕೆಟ್ ಮತ್ತು ನವದೀಪ್ ಸೈನಿ 2 ವಿಕೆಟ್ ಪಡೆದು ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣರಾದರು.

ಉಳಿದಂತೆ ಇಂದು ಶಾರ್ಜಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೊದಲ ಮ್ಯಾಚ್ ನಡೆಯಲಿದೆ. ರಾಜಸ್ಥಾನಕ್ಕೆ ಈ ಸಿರೀಸ್‍ನಲ್ಲಿ ಮೊದಲ ಪಂದ್ಯವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಸಿಎಸ್‍ಕೆ ಮುಂಬೈ ಇಂಡಿಯನ್ಸ್‍ನ್ನು ಮಣಿಸಿ ಶುಭಾರಂಭ ಮಾಡಿತ್ತು.

ತಾಜಾ ಸುದ್ದಿಗಳು