ಒಂದೇ ದಿನ 90,123 ಮಂದಿಗೆ ಸೋಂಕು

ಒಂದೇ ದಿನ 90,123 ಮಂದಿಗೆ ಸೋಂಕು

ನವದೆಹಲಿ: ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ದಾಟಿದ್ದು, ಒಂದೇ ದಿನ 90,123 ಮಂದಿಗೆ ಮಹಾಮಾರಿಯ ಸೋಂಕು ಅಂಟಿದೆ.

ಕಳೆದ 24 ಗಂಟೆಯಲ್ಲಿ 1,290 ಸೋಂಕಿತರನ್ನ ರಾಕ್ಷಿಸಿ ಕೊರೊನಾ ಬಲಿ ಪಡೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 82,066ಕ್ಕೆ ತಲುಪಿದೆ. ಸದ್ಯ ದೇಶದಲ್ಲಿ 9,95,933 ಸಕ್ರಿಯ ಪ್ರಕರಣಗಳಿದ್ದು, ಗುಣಮುಖ ಪ್ರಮಾಣ ಶೇ.78.28 ರಷ್ಟಿದೆ.

ವಿಶ್ವದಲ್ಲಿ ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದ್ರೆ, ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್, ರಷ್ಯಾ, ಪೆರು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 66,04,156ಕ್ಕೆ ತಲುಪಿದ್ದು, 39,13,264 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ಅಮೆರಿಕಾದಲ್ಲಿ 1,95,765 ಮಂದಿಗೆ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.


ಮಹಾರಾಷ್ಟ್ರ ರಾಜ್ಯದಲ್ಲಿಯೇ 10,97,856 ಪ್ರಕರಣಗಳ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ 20,482 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಉಳಿದಂತೆ ಆಂಧ್ರ ಪ್ರದೇಶ (5,83,925), ತಮಿಳುನಾಡು (5,14,208), ಕರ್ನಾಟಕ (4,75,265) ಮತ್ತು ಉತ್ತರ ಪ್ರದೇಶ (3,24,036) ರಾಜ್ಯಗಳಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿವೆ.

ತಾಜಾ ಸುದ್ದಿಗಳು