ಕೊಡಗು ಹೊಸದಾಗಿ 21 ಮಂದಿಯಲ್ಲಿ ಕೋವಿಡ್ ಪತ್ತೆ

ಕೊಡಗು ಹೊಸದಾಗಿ 21 ಮಂದಿಯಲ್ಲಿ ಕೋವಿಡ್ ಪತ್ತೆ

ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ೮ ಗಂಟೆ ವೇಳೆಗೆ ೨೧ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ.
ಮಡಿಕೇರಿ ಚೈನ್ ಗೇಟಿನ ೧೩ ವರ್ಷದ ಬಾಲಕ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಬಾಳಗುಂದ ಗ್ರಾಮ ಮತ್ತು ಅಂಚೆಯ ೫೬ ವರ್ಷದ ಮಹಿಳೆ.
ಸಿದ್ದಾಪುರ ಗುಹ್ಯದ ಬಿಜಿಎಸ್ ಶಾಲೆ ಸಮೀಪದ ೨೧ ವರ್ಷದ ಮಹಿಳೆ.
ಕುಶಾಲನಗರ ಕೂಡಿಗೆಯ ಹಾಸನ ರಸ್ತೆ ವೃತ್ತದ ೨೭ ವರ್ಷದ ಮಹಿಳೆ.
ಮಡಿಕೇರಿ ತಾಳತ್ತಮನೆಯ ಕಾಟಕೇರಿಯ ೪ನೇ ಕ್ರಾಸ್ ನ ೨೯ ವರ್ಷದ ಪುರುಷ.
ಮಡಿಕೇರಿ ಪೆನ್ ಷನ್ ಲೈನಿನ ಟೌನ್ ಹಾಲ್ ಹಿಂಭಾಗದ ೪೭ ವರ್ಷದ ಪುರುಷ ಮತ್ತು ೬೮ ವರ್ಷದ ಮಹಿಳೆ.
ಕುಶಾಲನಗರ ಬಲಮುರಿ ದೇವಾಲಯ ಹಿಂಭಾಗದ ಬಸವೇಶ್ವರ ಬಡಾವಣೆ ೨ನೇ ಬ್ಲಾಕಿನ ೫೫ ವರ್ಷದ ಮಹಿಳೆ.
ಮಡಿಕೇರಿ ಹೊದವಾಡ ಬುಲಿಬಾಣೆಯ ೩೮ ವರ್ಷದ ಪುರುಷ.
ಮಡಿಕೇರಿ ಇಂದಿರಾನಗರ ಅಂಗನವಾಡಿ ಬಳಿಯ ೨೩ ವರ್ಷದ ಮಹಿಳೆ ಮತ್ತು ೫೩ ವರ್ಷದ ಪುರುಷ.
ವಿರಾಜಪೇಟೆ ತಿತಿಮತಿ ಗ್ರಾಮದ ನೊಕ್ಯ ಅಂಚೆಯ ಎಡೆತೊರೆ ಗ್ರಾಮದ ೨೮ ವರ್ಷದ ಮಹಿಳೆ.
ಗೋಣಿಕೊಪ್ಪ ಎಚ್.ಸಿ ಪುರದ ಆರ್.ಎಂ.ಸಿ ಸಮೀಪದ ೩೨ ವರ್ಷದ ಪುರುಷ.
ವಿರಾಜಪೇಟೆ ಗೋಣಿಕೊಪ್ಪದ ಕಳತ್ಮಾಡುವಿನ ಜಿಎಂಪಿ ಶಾಲೆ ಸಮೀಪದ ೪೯ ವರ್ಷದ ಮಹಿಳೆ ಮತ್ತು ೧೭ ವರ್ಷದ ಬಾಲಕಿ.
ಗೋಣಿಕೊಪ್ಪ ಎಚ್.ಸಿ ಪುರದ ಎಂ.ಆರ್.ಎಫ್ ಫ್ಯಾಕ್ಟರಿ ಸಮೀಪದ ೧೦ ತಿಂಗಳ ಹೆಣ್ಣು ಮಗು.
ಗೋಣಿಕೊಪ್ಪ ಎಚ್.ಸಿ ಪುರದ ಪಿಆರ್ ಫರ್ನೀಚರ್ ಸಮೀಪದ ಜೆ.ಬಿ ಕಾಂಪ್ಲೆಕ್ಸಿನ ೪೨ ವರ್ಷದ ಮಹಿಳೆ ಮತ್ತು ೪೫ ವರ್ಷದ ಪುರುಷ.
ಕುಶಾಲನಗರ ಹೆಬ್ಬಾಲೆ ಮುಖ್ಯ ರಸ್ತೆಯ ೫೮ ವರ್ಷದ ಪುರುಷ.
ಕುಶಾಲನಗರ ಬಲಮುರಿ ದೇವಾಲಯ ಬಳಿಯ ೪ನೇ ಬ್ಲಾಕಿನ ೩೦ ವರ್ಷದ ಪುರುಷ ಮತ್ತು ೨೯ ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೨೦೬೩ ಆಗಿದ್ದು, ೧೬೬೧ ಮಂದಿ ಗುಣಮುಖರಾಗಿದ್ದಾರೆ. ೩೭೫ ಸಕ್ರಿಯ ಪ್ರಕರಣಗಳಿದ್ದು, ೨೭ ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ೩೫೪ ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಳು